ತುಮಕೂರಿನಲ್ಲಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್ - ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ
🎬 Watch Now: Feature Video

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯೂರು ಸಮೀಪ ರಸ್ತೆ ಮೇಲೆ ಹರಿಯುತ್ತಿದ್ದ ನೀರಿನ ನಡುವೆ ಬೈಕಿನಲ್ಲಿ ಹೋಗಲು ಯತ್ನಿಸಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಇದೇ ಮಾರ್ಗದಲ್ಲಿ ತನ್ನ ತಾಯಿಯನ್ನು ಶಿವಣ್ಣ ಎಂಬುವರು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ನೀರಿನ ರಭಸಕ್ಕೆ ರಸ್ತೆ ಮಧ್ಯೆ ಬೈಕ್ ನಿಂತಿತ್ತು. ಇದರಿಂದ ಶಿವಣ್ಣ ಗಾಬರಿಗೊಂಡಿದ್ದರು. ಹೀಗಾಗಿ ಅವರನ್ನು ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ಪಾರು ಮಾಡಿದ್ದಾರೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ನೀರಿನ ರಭಸಕ್ಕೆ ಬೈಕನ್ನು ಬಚಾವ್ ಮಾಡಲು ಸಾಧ್ಯವಾಗಿಲ್ಲ.
Last Updated : Feb 3, 2023, 8:27 PM IST