ಭಾರಿ ಮಳೆ: ಬಾದಾಮಿ ಗುಹಾಲಯ ಎದುರು ಕೆರೆಯಂತಾದ ರಸ್ತೆ.. ವಿಡಿಯೋ - ಅಗಸ್ತ್ಯ ತೀರ್ಥ ಹೊಂಡ
🎬 Watch Now: Feature Video

ಬಾಗಲಕೋಟೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಾದಾಮಿಯ ಐತಿಹಾಸಿಕ ಗುಹಾಲಯ ಅಕ್ಕಪಕ್ಕದ ರಸ್ತೆ ಕೆರೆಯಂತಾಗಿದೆ. ಐತಿಹಾಸಿಕ ಅಗಸ್ತ್ಯ ತೀರ್ಥ ಹೊಂಡ ತುಂಬಿ ಹರಿಯುತ್ತಿರುವ ಪರಿಣಾಮ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಆಗಿರುವಂತಹ ಗುಹಾಲಯ ಮುಂದೆ ನೀರು ನದಿಯಂತೆ ಹರಿದು ಹೋಗುತ್ತಿದೆ. ಇದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಪರದಾಡುವಂತಹ ಸ್ಥಿತಿ ನಿರ್ಮಾಣ ವಾಗಿದೆ.
Last Updated : Feb 3, 2023, 8:27 PM IST