ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ 11 ವರ್ಷದ ಬಾಲಕ ಸಾವು.. - Etv bharat Kannada
🎬 Watch Now: Feature Video
ಮೊಗ (ಪಂಜಾಬ್): ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಲವೀಶ್ (11) ಮೃತ ಬಾಲಕ. ಜ.15 ರಂದು ಸಂಜೆ ವೇಳೆ ಮನೆಯ ಮೇಲೆ ಹಾದು ಹೋಗಿದ್ದ ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಲವೀಶ್ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಸ್ಥಳೀಯ ಆಸ್ಪತ್ರೆಗೆ ಲವೀಶ್ನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 13 ದಿನಗಳಿಂದ ಜೀವನ್ಮರಣದ ಹೋರಾಟ ನಡೆಸಿದ ಬಾಲಕ ಇಂದು ಕೊನೆಯುಸಿರೆಳೆದಿದ್ದಾನೆ.
ಘಟನೆ ಕುರಿತು ವಿದ್ಯುತ್ ಸರಬರಾಜು ಇಲಾಖೆ ಮತ್ತು ಆಡಳಿತದ ವಿರುದ್ದ ಜನರು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಬಗ್ಗೆ ಉಪ ಮೇಯರ್ ಅಶೋಕ್ ಧಮಿಜ ಎಂಬುವವರು ಕೂಡ ಪ್ರತಿಕ್ರಿಯೆ ನೀಡಿದ್ದು, ಮನೆಯ ಮೇಲೆ ಹಾದು ಹೋಗಿರುವ ಹೈವೋಲ್ಟೇಜ್ ತಂತಿಗಳ ಬಗ್ಗೆ ಜಾಗ್ರತೆ ವಹಿಸುವಂತೆ ಅನೇಕ ಬಾರಿ ಜಿಲ್ಲಾಡಳಿತ ಮತ್ತು ವಿದ್ಯುತ್ ಇಲಾಖೆಗೆ ಪತ್ರೆ ಬರೆದಿದ್ದೇನೆ ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇವುಗಳ ನಿರ್ಲಕ್ಷದಿಂದ ಇಂದು ಲವೀಶ್ ಎನ್ನುವ ಬಾಲಕ ಬಲಿಯಾಗಿದ್ದಾನೆ. ಇನ್ನಾದರೂ ವಿದ್ಯುತ್ ಇಲಾಖೆ ಎಚ್ಚೆತ್ತುಕೊಂಡು ಕೂಡಲೇ ಇದಕ್ಕೆ ಪರಿಹಾರ ಕಂಡುಕೊಂಡು ಮುಂದಾಗುವಂತಹ ಅನಾಹುತಗಳನ್ನು ತಡೆಯಬೇಕು ಎಂದು ತಿಳಿಸಿದರು. ಇನ್ನು ಇಂದು ಸ್ಥಳೀಯ ಮುಕ್ತಿಧಾಮದಲ್ಲಿ ಬಾಲಕನ ಅಂತ್ಯಕ್ರಿಯೆ ಮಾಡಲಾಯಿತು.
ಇದನ್ನೂ ಓದಿ: ಗಣರಾಜ್ಯೋತ್ಸವದಂದೇ 17 ಪಾಕಿಸ್ತಾನಿ ಕೈದಿಗಳ ಬಿಡುಗಡೆ