ಗದಗಕ್ಕೆ ನಟ ಶಿವಣ್ಣ ಭೇಟಿ: ಏಣಿ ಹತ್ತುವಾಗ ಜಾರಿದ ಕಾಲು! - sandalwood news
🎬 Watch Now: Feature Video
ಗದಗ: ಇಲ್ಲಿನ ಮಹಾಲಕ್ಷ್ಮೀ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಿರ್ದೇಶಕ ಹರ್ಷಾ ಮಾಸ್ಟರ್ ಮತ್ತು ವೇದ ಚಿತ್ರದ ನಾಯಕಿಯರಿಗೆ ಅಭಿಮಾನಿಗಳು ಸ್ವಾಗತ ಕೋರಿದರು. ಅಭಿಮಾನಿಗಳು ಶಿವಣ್ಣನ ಸೆಲ್ಫಿಗೆ ಮುಗಿಬಿದ್ದಿದ್ದರಿಂದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಇದೇ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲು ಕಟ್ಟಡದ ಮೇಲೆ ಹೋಗಲು ಏಣಿ ಹತ್ತುವಾಗ ಶಿವಣ್ಣನ ಕಾಲು ಜಾರಿತು. ಅಂಗರಕ್ಷಕರು, ಅಭಿಮಾನಿಗಳು ಅವರನ್ನು ಹಿಡಿದು ಕೆಳಗೆ ಬೀಳದಂತೆ ನೋಡಿಕೊಂಡರು.
Last Updated : Feb 3, 2023, 8:38 PM IST