ETV Bharat / sukhibhava

ಝೀಕಾ ವೈರಸ್ : ರೋಗ ಹರಡಲು ಕಾರಣ, ತಡೆಗಟ್ಟುವ ಕ್ರಮಗಳೇನು? - Zika Virus

ಭಾರತದಲ್ಲಿ ಈಗಾಗಲೇ ಹಲವಾರು ಝೀಕಾ ವೈರಸ್​ ಪ್ರಕರಣಗಳು ಪತ್ತೆಯಾಗಿವೆ. ಇದೀಗ ರಾಜ್ಯದಲ್ಲಿ ಮೊದಲ ಪ್ರಕರಣ ವರದಿಯಾಗಿದೆ. ಐದು ವರ್ಷದ ಬಾಲಕಿಯಲ್ಲಿ ಈ ಸೋಂಕು ಕಂಡುಬಂದಿದೆ. ಈ ಹಿನ್ನೆಲೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವ ಕೆ. ಸುಧಾಕರ್ ಸಲಹೆ ನೀಡಿದ್ದಾರೆ.

Zika Virus
ಝೀಕಾ ವೈರಸ್
author img

By

Published : Dec 14, 2022, 2:01 PM IST

ಹೈದರಾಬಾದ್: ಸಾಂಕ್ರಾಮಿಕ ರೋಗವೆಂಬುದು ಕಳೆದ ಎರಡು ವರ್ಷಗಳಿಂದ ಪ್ರಪಂಚದಾದ್ಯಂತ ಭೀತಿಯನ್ನು ಸೃಷ್ಟಿಸುತ್ತಿದೆ. ಕೋವಿಡ್ 19 ಮತ್ತು ಅದರ ವಿಭಿನ್ನ ರೂಪಾಂತರಗಳಿಂದ ಅನೇಕ ಜನರು ತಮ್ಮ ಜೀವಗಳನ್ನು ಅಥವಾ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಇದೀಗ ಕೊರೊನಾ ವೈರಸ್ ನಂತರ, ಝೀಕಾ ವೈರಸ್ ಪ್ರಪಂಚದಾದ್ಯಂತ ಪುನರಾಗಮನ ಮಾಡುತ್ತಿರುವಂತೆ ಕಾಣುತ್ತಿದೆ.

ಭಾರತದಲ್ಲಿ ಈಗಾಗಲೇ ಹಲವಾರು ಝೀಕಾ ವೈರಸ್​ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ ಮೊದಲ ಪ್ರಕರಣ ವರದಿಯಾಗಿದೆ. ಐದು ವರ್ಷದ ಬಾಲಕಿಯಲ್ಲಿ ಈ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವ ಕೆ. ಸುಧಾಕರ್ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಇದು ಮೊದಲ ಪ್ರಕರಣವಾಗಿದೆ. ವೈರಸ್​ನನ್ನು ಎದುರಿಸಲು ಆರೋಗ್ಯ ಇಲಾಖೆ ಸಂಪೂರ್ಣ ಸುಸಜ್ಜಿತವಾಗಿದೆ ಮತ್ತು ಸನ್ನದ್ಧವಾಗಿದೆ. ಅಲ್ಲದೇ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ರೋಗ ಹೇಗೆ ಹರಡುತ್ತದೆ?: ಝೀಕಾ ವೈರಸ್ ಸೋಂಕು ಹಗಲಿನಲ್ಲಿ ಸಕ್ರಿಯವಾಗಿರುವ ಈಡಿಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೋಂಕುಗಳನ್ನು ಹರಡಲು ಕಾರಣವಾಗಿದೆ. WHO ಪ್ರಕಾರ, ಈ ವೈರಸ್ ಅನ್ನು ಮೊದಲು 1947 ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು. ಝೀಕಾ ವೈರಸ್ ಸೊಳ್ಳೆ ಕಡಿತ, ಲೈಂಗಿಕ ಸಂಭೋಗ ಮತ್ತು ರಕ್ತ ವರ್ಗಾವಣೆಯ ಮೂಲಕ ಹರಡುತ್ತದೆ. ಇದು ಗರ್ಭಿಣಿಯರಲ್ಲಿ ಭ್ರೂಣಕ್ಕೂ ಹರಡಬಹುದು.

ಝೀಕಾ ವೈರಸ್‌ನ ಲಕ್ಷಣಗಳು: ತೀವ್ರ ಜ್ವರ, ಕೀಲು ನೋವು, ಸ್ನಾಯು ನೋವು, ತಲೆನೋವು ಮತ್ತು ವಾಂತಿ. ಗರ್ಭಿಣಿಯರಿಗೆ ಝೀಕಾ ವೈರಸ್ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಗರ್ಭಿಣಿ ಮಹಿಳೆಯ ಭ್ರೂಣಕ್ಕೆ ವೈರಸ್ ಹರಡಿದರೆ, ಅದು ಹುಟ್ಟುವ ಮಗುವಿನ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ.

ಇದನ್ನೂ ಓದಿ: ರಾಯಚೂರಲ್ಲಿ ಝೀಕಾ ವೈರಸ್​ ಆತಂಕ; ಕಟ್ಟೆಚ್ಚರ ಕ್ರಮಕ್ಕೆ ಮುಂದಾದ ಆರೋಗ್ಯಾಧಿಕಾರಿಗಳು

ಭಾರತದಲ್ಲಿ, 2017 ರಲ್ಲಿ ಗುಜರಾತ್‌ನಲ್ಲಿ ಮೂರು ಮತ್ತು ತಮಿಳುನಾಡಿನಲ್ಲಿ ಒಂದು ಪ್ರಕರಣ ವರದಿಯಾಗಿದೆ. ಸೆಪ್ಟೆಂಬರ್ 2018 ರಲ್ಲಿ ಒಂದು ಪ್ರಕರಣ ದೃಢಪಟ್ಟಿದೆ ಮತ್ತು ದೇಶದಲ್ಲಿ ಮೊದಲ ಝೀಕಾ ವೈರಸ್ ಪ್ರಕರಣವು ರಾಜಸ್ಥಾನದ ಜೈಪುರದಲ್ಲಿ ವರದಿಯಾಗಿದೆ. ನಂತರ ವೈರಸ್ ದೇಶದ ಇತರ ರಾಜ್ಯಗಳಿಗೆ ಹರಡಿದೆ.

ಸೋಂಕಿಗೆ ತುತ್ತಾದರೆ ಏನು ಮಾಡಬೇಕು?: ಝೀಕಾ ವೈರಸ್ ಸೋಂಕು ಅಥವಾ ಅದಕ್ಕೆ ಸಂಬಂಧಿಸಿದ ರೋಗಗಳಿಗೆ ಸಾಮಾನ್ಯವಾಗಿ ಯಾವುದೇ ಚಿಕಿತ್ಸೆ ಇರುವುದಿಲ್ಲ. ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಜ್ವರ, ದದ್ದು ಅಥವಾ ಸಂಧಿವಾತದಂತಹ ರೋಗಲಕ್ಷಣಗಳನ್ನು ಹೊಂದಿರುವ ಜನರು ವಿಶ್ರಾಂತಿ ಪಡೆಯಬೇಕು. ಸಾಕಷ್ಟು ದ್ರವ ಆಹಾರವನ್ನು ಸೇವಿಸಬೇಕು. ತಲೆ ನೋವು ಮತ್ತು ಜ್ವರಕ್ಕೆ ಸರಳ ಬಾಹ್ಯ ಔಷಧಿಗಳೊಂದಿಗೆ ಚಿಕಿತ್ಸೆ ನೀಡಬೇಕು. ಮೇಲಿನ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.