ವಾಷಿಂಗ್ಟನ್: ಕಳಪೆ ಕಲಿಕಾ ಕೌಶಲ್ಯ ಹೊಂದಿರುವ ಮಕ್ಕಳು ಇ-ಮೇಲ್ ಸ್ಕ್ಯಾಮ್ನಂತಹ ವಂಚನೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ರಕ್ಷಣೆ ಅಗತ್ಯವಾಗಿದೆ ಎಂದು ಅಂತರರಾಷ್ಟ್ರೀಯ ಅಧ್ಯಯನ ಎಜುಕೇಷನ್ ಸ್ಟಡಿಯಲ್ಲಿ ಪ್ರಕಟಿಸಲಾಗಿದೆ.
15 ವರ್ಷದ ವಯೋಮಿತಿಯ 1,70,000 ವಿದ್ಯಾರ್ಥಿಗಳನ್ನು ಅಧ್ಯಯನ ಆಧಾರದ ಮೇಲೆ ಸಂಶೋಧನೆಗೆ ಒಳಪಡಿಸಲಾಗಿದೆ. ಕಡಿಮೆ ಆದಾಯದ ಕುಟುಂಬ ಅಥವಾ ವಂಚಿತ ಪ್ರದೇಶದಲ್ಲಿ ಐವರಲ್ಲಿ ಒಬ್ಬರು ಇಂಥ ವಂಚನೆಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ತೋರಿಸಿದೆ. ಇ-ಮೇಲ್ ಸ್ಕ್ಯಾಮ್‌ಗಳು ಜನರ ಗುರುತು ಮರೆ ಮಾಡಿ, ಹಣಕಾಸಿನ ವಂಚನೆಯ ಅಪಾಯಕ್ಕೆ ಯುವ ಜನರನ್ನು ದೂಡುತ್ತಿದೆ. ಡಿಜಿಟಲ್ ವಂಚನೆ ಬಗ್ಗೆ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು ಕಡಿಮೆ ಅಪಾಯ ಹೊಂದಿದ್ದಾರೆ. ಇ-ಮೇಲ್ ಆನ್ಲೈನ್ ಸ್ಕ್ಯಾಮ್ ಸೇರಿದಂತೆ ಆನ್ಲೈನ್ ಅಪಾಯವನ್ನು ಹೇಗೆ ಪತ್ತೆ ಮಾಡಬೇಕು ಎಂಬ ಕುರಿತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಶಾಲಾ ಮಕ್ಕಳಿಗೆ ನೀಡಬೇಕು ಎಂದು ಲೇಖಕ ಪ್ರೋ ಜಾನ್ ಜೆರ್ರಿಮ್ ತಿಳಿಸಿದ್ದಾರೆ. ಸಾಮಾಜಿಕ-ಆರ್ಥಿಕತೆ ಅನಾನುಕೂಲತೆಯ ಗುಂಪು ಇಂತಹ ಸ್ಕ್ಯಾಮ್ ಅಪಾಯವನ್ನು ಹೆಚ್ಚು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಹದಿಹರೆಯವರಿಗೆ ಇಂತಹ ಸ್ಕ್ಯಾಮ್‌ಗಳ ಕುರಿತು ತರಗತಿಗಳಲ್ಲಿ ಹೇಳಿಕೊಡುವ ಮೂಲಕ ಅವರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸಬೇಕಿದೆ. ಅಲ್ಲದೇ ಈ ಸಂಬಂಧ ಯುವ ಜನತೆಗೆ ಆನ್ಲೈನ್ ಜಗತ್ತಿನ ಸಂಕೀರ್ಣತೆ ಮತ್ತು ಅಪಾಯದ ಹೆಚ್ಚಳ ಕುರಿತು ಅರಿವು ಮೂಡಿಸಬೇಕಿದೆ.
ದುರ್ಬಲ ಗುಂಪುಗಳು ಇಂತಹ ಡಿಜಿಟಲ್ ಅಪಾಯಕ್ಕೆ ಒಳಗಾಗುತ್ತಿರುವುದು ಸತ್ಯ. ಪ್ರತಿನಿತ್ಯ 3 ಬಿಲಿಯನ್ ಸ್ಪಾಮ್ ಇ-ಮೇಲ್ ಕಳುಹಿಸುವ ಮೂಲಕ ಅವರನ್ನು ವಂಚನೆಯ ಬಲೆಗೆ ಬೀಳಿಸಲಾಗುತ್ತಿದೆ. ಇ-ಮೇಲ್ ಮೂಲಕ ಕಳುಹಿಸಲಾಗುವ ಲಿಂಕ್ ಮೂಲಕ ಅವರನ್ನು ಅಪಾಯಕ್ಕೆ ಒಡ್ಡಲಾಗುವುದು. ಈ ಅಪರಾಧಕ್ಕೆ ಹೆಚ್ಚು ಯಾರು ಒಳಗಾಗುತ್ತಾರೆ ಎಂದಾಗ ವಯಸ್ಸಾದವರ ಮೇಲೆ ಹೆಚ್ಚಿನ ಗಮನವನ್ನು ಸಂಶೋಧನೆ ತೋರಿಸಿದೆ.
ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಆ್ಯಂಡ್ ಡೆವಲಪ್‌ಮೆಂಟ್ (ಒಇಸಿಡಿ) ನಡೆಸುತ್ತಿರುವ ತ್ರೈವಾರ್ಷಿಕ ಸಮೀಕ್ಷೆಯಾದ 2018ರ ಇಂಟರ್‌ನ್ಯಾಷನಲ್ ಅಸೆಸ್‌ಮೆಂಟ್ ಪ್ರೋಗ್ರಾಂನಲ್ಲಿ (ಪಿಐಎಸ್‌ಎ) ಭಾಗವಹಿಸಿದ 176,186 ಮಕ್ಕಳನ್ನು ಈ ಅಧ್ಯಯನದ ದತ್ತಾಂಶವನ್ನು ಇದು ಹೊಂದಿದೆ.
ಅಧ್ಯಯನದ ಫಲಿತಾಂಶದಲ್ಲಿ ಜಪಾನಿನ ಯುವಜನತೆ ಈ ರೀತಿಯ ಅಪಾಯಕ್ಕೆ ಒಳಗಾಗುವುದು ಶೇ 4 ಎಂದು ತೋರಿಸಿದೆ. ಮೆಕ್ಸಿಕೋದಲ್ಲಿ ಶೇ.30ರಷ್ಟು ಮತ್ತು ಚಿಲಿಯಲ್ಲಿ ಶೇ.27 ಮಂದಿ ಇ-ಮೇಲ್ ಸ್ಕ್ಯಾಮ್‌ಗೆ ಒಳಗಾಗಿರುವುದನ್ನು ತೋರಿಸಿದೆ. ವಿದ್ಯಾರ್ಥಿಗಳು ಈ ರೀತಿಯ ಫಿಶಿಂಗ್ ಇ-ಮೇಲ್ಗಳ ಅಪಾಯದ ಕುರಿತು ಶಾಲೆಗಳಿಂದ ಸೂಚನೆ ಪಡೆದಾಗ ಇಂಥ ಅಪಾಯಕ್ಕೆ ಒಳಗಾಗುವುದು ಕಡಿಮೆ ಎಂದು ಅಧ್ಯಯನ ಹೇಳುತ್ತದೆ. (ಎಎನ್ಐ)
ಇದನ್ನೂ ಓದಿ: ಹೆಲ್ತ್ ಟ್ರ್ಯಾಕಿಂಗ್‌ಗೆ ಬಂತು ಸ್ಮಾರ್ಟ್ ಉಂಗುರ! ಇದು ಬೆಂಗಳೂರಿನ ಸಂಸ್ಥೆಯ ಆವಿಷ್ಕಾರ