ಜಾಗತಿಕವಾಗಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಯೋಗಾಭ್ಯಾಸದ ಮೂಲಕ ಯೋಗದಿಂದ ಹೇಗೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯಬಹುದು ಎಂಬ ಕುರಿತಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಯೋಗ ಕಾರ್ಯಕ್ರಮ, ವರ್ಕ್ಶಾಪ್, ಟಾಕ್ಸ್ ಮತ್ತು ಸಂಸ್ಕೃತಿ ಪ್ರದರ್ಶನಗಳು ಜಾಗತ್ತಿನೆಲ್ಲೆಡೆ ನಡೆಯುತ್ತವೆ.
ಯೋಗವು ದೇಹದ ಅಂಗಾಂಗದ ಸರಾಗ ಚಲನೆ, ಬಲ ಮತ್ತು ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಆಸನಗಳು ಕೀಲಿನ ಸಾಮರ್ಥ್ಯ ಹೆಚ್ಚಿಸಿ, ಸ್ನಾಯುವನ್ನು ಬಲಗೊಳಿಸುತ್ತದೆ. ನಿಯಮಿತ ಯೋಗಾಭ್ಯಾಸ ನಿಮ್ಮ ನಿದ್ದೆಯನ್ನು ಉತ್ತಮಗೊಳಿಸುತ್ತದೆ. ಇದು ಸಕಾರಾತ್ಮಕ ಚಿಂತನೆಗೆ ಪ್ರೋತ್ಸಾಹ ನೀಡಿ, ಒತ್ತಡ ತಗ್ಗಿಸುತ್ತದೆ. ಸ್ವಯಂ ಅರಿವು ಹೆಚ್ಚಿಸುತ್ತದೆ. ಮನೆಯಲ್ಲಿ ಸುಲಭವಾಗಿ ಮಾಡುವ ಈ ಯೋಗಾಭ್ಯಾಸಗಳು ನಿಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಒಟ್ಟಾರೆ ಯೋಗಕ್ಷೇಮದ ಪರಿಣಾಮ ಬೀರುತ್ತದೆ.
1. ಸುಖಾಸನ: ಸುಲಭವಾಗಿ ಮಾಡುವ ಆಸನವಿದು. ಆರಾಮದಾಯ ಭಂಗಿ. ಚಕ್ಕಳ ಬಕ್ಕಳ ಹಾಕಿ ಕುಳಿತು ಆರಾಮದಾಯಕವಾಗಿ ಧ್ಯಾನ ಮಾಡುವುದು. ಉಸಿರಾಟದ ವ್ಯಾಯಾಮ ಅಭ್ಯಾಸ ಮಾಡುವ ಜೊತೆಗೆ ಲಘು ಸ್ಟ್ರೆಚ್ಗಳನ್ನು ಮಾಡಲಾಗುವುದು. ಇದರಿಂದ ಮನಸು ವಿಶ್ರಮಿಸುತ್ತದೆ. ಬೆನ್ನು ನೋವು ನಿವಾರಣೆ ಆಗಿ, ಒಟ್ಟಾರೆ ಭಂಗಿ ದೇಹದ ಅಭಿವೃದ್ಧಿಗೆ ಸಹಾಯಕ.
2. ಅನುಲೋಮ, ವಿಲೋಮ: ಉಸಿರಾಟದ ತಂತ್ರ. ದೇಹದ ಶಕ್ತಿ ಸಂಚಲನಕ್ಕೆ ಸಹಾಯಕ. ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಉಸಿರಾಟದ ಸಾಮರ್ಥ್ಯ ಹೆಚ್ಚಾಗುತ್ತದೆ. ಆಮ್ಲಜನಕ ಸೇವನೆ ಪ್ರಮಾಣ ಜಾಸ್ತಿಯಾಗುತ್ತದೆ. ದೇಹದ ವಿಷ ಶಕ್ತಿ ಹೋಗಲಾಡಿಸುತ್ತದೆ. ವಿಶ್ರಾಂತಿ ಮನಸ್ಥಿತಿ ಹೆಚ್ಚಿಸಿ, ಮಾನಸಿಕ ಸ್ಪಷ್ಟತೆ ಮತ್ತು ದೃಷ್ಟಿ ಹೆಚ್ಚುತ್ತದೆ. ಉಸಿರಾಟ ಮತ್ತು ಅಸ್ತಮಾ ಸಮಸ್ಯೆ ಹೋಗಲಾಡಿಸುತ್ತದೆ.
3. ಬಾಲಾಸನ: ಬಾಲಾಸನ ಅಥವಾ ಮಕ್ಕಳ ಭಂಗಿ ಕೂಡ ಹೆಚ್ಚಿನ ಲಾಭ ನೀಡುತ್ತದೆ. ಹಿಮ್ಮಡಿ ಹಿಂದೆ ಹಾಕಿ ಸೊಂಟವನ್ನು ಮುಂದೆ ಚಾಚಿ ಮಗುವಿನಂತೆ ಮಂದಜಕ್ಕೆ ಬಾಗಿ ಮಲಗುವುದು. ಸೊಂಟ, ತೊಡೆ, ಪಾದವನ್ನು ಸ್ಟ್ರೆಚ್ ಮಾಡುವ ಮೂಲಕ ಸ್ನಾಯು ಅಭಿವೃದ್ಧಿ ಆಗುತ್ತದೆ. ಇದು ದೀರ್ಘಕಾಲದ ಯಾವುದೇ ದೈಹಿಕ ಚಟುವಟಿಕೆ ಇಲ್ಲದೇ ಕೂರುವುದರಿಂದ ಸ್ನಾಯುಗಳು ಬಿಗಿತನಗೊಂಡಿರುತ್ತದೆ. ಈ ಆಸನಾಭ್ಯಾಸದಿಂದ ದೇಹದ ಶಕ್ತಿಯನ್ನು ಪುನರ್ಸ್ಥಾಪಿಸಬಹುದು.
4. ಭುಜಂಗಾಸನ: ಕೊಬ್ರಾದ ಭಂಗಿ ಎಂದು ಪರಿಚಿತರಾಗಿರುವ ಭುಜಂಗಾಸನ ಕೂಡ ಬೆನ್ನು ಮೂಳೆ ಸರಾಗ ಚಲನೆ ಮತ್ತು ಬಲ ಹೆಚ್ಚಿಸಲು ಕಾರಣವಾಗಿದೆ. ಬೆನ್ನು ಮೂಳೆ ಸ್ನಾಯು ಮತ್ತು ರಕ್ತದ ಪರಿಚಲನೆ ಸರಾಗವಾಗುವಂತೆ ಮಾಡುತ್ತದೆ. ವಿಶೇಷವಾಗಿ, ಬೆನ್ನುಹುರಿ ಪ್ರದೇಶ ಮತ್ತು ಮರು ಉತ್ಪಾದನೆ ಅಂಗಾಂಶಗಳಿಗೆ ಪ್ರಯೋಜನವಾಗುತ್ತದೆ. ಉಸಿರಾಟವೂ ಕೂಡ ಇದರಿಂದ ಅಭಿವೃದ್ಧಿ ಆಗುತ್ತದೆ.
5. ಶವಾಸನ: ಆಳವಾದ ವಿಶ್ರಾಂತಿ ಮತ್ತು ಪುನರುಜ್ಜೀವನವನ್ನು ನೀಡುತ್ತದೆ ಈ ಆಸನ. ಮ್ಯಾಟ್ ಮೇಲೆ ಎಲ್ಲ ಅಂಗಾಂಗಗಳನ್ನು ಸಡಿಲಗೊಳಿಸಿ, ಆರಾಮದಾಯಕಗೊಳಿಸಿ ಮಲಗುವುದರಿಂದ ದೇಹಕ್ಕೆ ವಿಶ್ರಾಂತಿ ದೊರಕುತ್ತದೆ. ಇದು ಸಂಪೂರ್ಣ ವಿಶ್ರಾಂತಿ ನೀಡುವ ಜೊತೆಗೆ ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: International Yoga Day 2023: ನಿಮ್ಮನ್ನು ಆರೋಗ್ಯವಾಗಿ, ಫಿಟ್ ಆಗಿಡಲು ಸಹಾಯ ಮಾಡುತ್ತವೆ ಈ 5 ಆಸನಗಳು!