ETV Bharat / sukhibhava

Artificial Intelligence: ಕೃತಕ ಬುದ್ದಿಮತ್ತೆ ಬಗ್ಗೆ ವಿಪರೀತ ಚಿಂತೆಯೇ? ಆತಂಕದಿಂದ ದೂರವಿರುವ ಉಪಾಯಗಳು.. - ಎಐ ತಂತ್ರಜ್ಞಾನ ಭಾರೀ ಅಭಿವೃದ್ಧಿ ಕಾಣುತ್ತಿದ್ದು

ಎಐ ಅಥವಾ ಕೃತಕ ಬುದ್ಧಿಮತ್ತೆ ಕೆಲಸಕ್ಕೆ ಕುತ್ತು ತರುತ್ತದೆ, ಮುಂಬರುವ ವರ್ಷಗಳಲ್ಲಿ ಖಾಸಗಿತನ/ ಸುರಕ್ಷತೆಗೂ ಇದು ಅಪಾಯ ಎಂಬೆಲ್ಲ ಆತಂಕದ ಮಾತುಗಳು ಕೇಳಿಬರುತ್ತಿವೆ.

worried-about-artificial-intelligence-you-are-worried-about-ai

author img

By

Published : Jun 27, 2023, 3:05 PM IST

ಟೋಕಿಯೊ: ಎಐ ತಂತ್ರಜ್ಞಾನ ಭಾರಿ ಅಭಿವೃದ್ಧಿ ಕಾಣುತ್ತಿದೆ. ಟೆಕ್​ ತಜ್ಞರಲ್ಲೇ ಇದು ಬೆರಗು ಮೂಡಿಸುತ್ತಿದೆ. ಹಲವು ಭಾಷೆಗಳಲ್ಲಿ ಥೇಟ್ ಮಾನವನಂತೆ ಮಾತನಾಡುವ, ಸಂಗೀತ ನುಡಿಸುವ ಮತ್ತು ಮೆಡಿಕಲ್​ ಪರೀಕ್ಷೆಯನ್ನೂ ಪಾಸ್​ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಆರೋಗ್ಯ ಕ್ಷೇತ್ರದಲ್ಲಂತೂ ಇನ್ನೂ ಹೆಚ್ಚು ಬೆಳವಣಿಗೆ ಕಾಣುತ್ತಿದೆ. ಎಐನಿಂದ ಅನೇಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ವ್ಯಕ್ತವಾದರೂ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಹೀಗಾಗಿ ಸಹಜವಾಗಿಯೇ ಎಐ ಅನ್ನದ ಬಟ್ಟಲು ಕಿತ್ತುಕೊಳ್ಳುತ್ತದೆ, ಖಾಸಗಿತನ ಅಥವಾ ಸುರಕ್ಷತೂ ಧಕ್ಕೆ ತರುತ್ತದೆ ಎಂಬೆಲ್ಲ ಆತಂಕ ಎದುರಾಗಿದೆ.

ಎಐ ಉತ್ಪನ್ನಗಳಲ್ಲಿ ಕೆಲವು ವಿಷಯಗಳು ಬಳಕೆದಾರರಲ್ಲಿ ನಕಾರಾತ್ಮಕ ಮನೋಭಾವನೆ ಉಂಟುಮಾಡುತ್ತಿದೆ. ಹೊಸ ತಂತ್ರಜ್ಞಾನದ ಕುರಿತು ಈ ರೀತಿಯ ಆತಂಕ ಇದು ಮೊದಲಲ್ಲ. 1980ರ ದಶಕದಲ್ಲೂ ಭೀತಿ ಎದುರಾಗಿತ್ತು. ಕಂಪ್ಯೂಟರ್​ ಉದಯಾರಂಭದಲ್ಲಿ ಕಂಪ್ಯೂಟರ್​ಫೋಬಿಯೊ ಕಾಡಿತ್ತು.

ಇದೇ ರೀತಿ ಹಲವು ಎಐ ಆತಂಕದಂತೆ ಹವಾಮಾನ ಬದಲಾವಣೆಯ ಕುರಿತಾಗಿ ಎಕೋ ಆತಂಕ ಕೂಡ ಯುವ ಜನರಲ್ಲಿ ಹೆಚ್ಚಿದೆ. ಪರಿಸರದ ಅವನತಿ, ಶರವೇಗದ ಡಿಜಿಡಲೈಸೆಷನ್ ಇದಕ್ಕೆ ಕಾರಣ. ಅನೇಕ ಜನರು ಈ ಎರಡೂ ತಮ್ಮ ನಿಯಂತ್ರಣ ಮೀರಿ ಹೋಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಎಐ- ಆತಂಕ ನಮ್ಮ ಜೀವನವನ್ನೇ ಆಳಲು ಸಾಧ್ಯವಿಲ್ಲ. ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಹೆಚ್ಚಿನ ಆತಂಕ ಬೇಡ. ಇದು ವೈದ್ಯಕೀಯ ವಿಷಯಗಳ ನಿರ್ವಹಣೆ ಮಾಡಿದರೂ ಇದರ ಸಕಾರಾತ್ಮಕತೆವನ್ನು ಕಾಣಬೇಕಿದೆ.

ಎಐ ಈಗಾಗಲೇ ಇದೆ ಎಂದೇ ತಿಳಿಯಿರಿ: ಈ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿಯದಿರುವುದು ಕೂಡ ಭಯಕ್ಕೆ ಕಾರಣವಾಗುತ್ತಿದೆ. ಎಐ ಈಗಾಗಲೇ ನಮ್ಮ ಜೀವನದ ಭಾಗವೇ ಎಂಬುದನ್ನು ಮೊದಲು ತಿಳಿಯಬೇಕು. ಉದಾಹರಣೆಗೆ, ಈಗಾಗಲೇ ನಾವು ನಮ್ಮ ಸುತ್ತಮುತ್ತಲ ಪ್ರಖ್ಯಾತ ರೆಸ್ಟೊರೆಂಟ್​​ಗಳ ಬಳಕೆಗೆ ಆ್ಯಪಲ್​ನ ಸಿರಿಯನ್ನೂ (Siri) ಬಳಸುವಂತೆ ಎಐ ಕೂಡ ನಮ್ಮ ಜೀವನದ ಹೊಸ ಭಾಷಾ ಕಲಿಕೆಯ ಭಾಗ. ಗೂಗಲ್​ ಮ್ಯಾಪ್​ನಿಂದ ಹೊಸ ನಗರಕ್ಕೆ ದಾರಿ ಹುಡುಕುವುದಿಲ್ಲವೇ? ಅದರಂತೆ ಇದೂ ಎಂದು ಭಾವಿಸಿದರಾಯಿತು.

ಹೊಸ ಉದ್ಯೋಗದ ಉದ್ದೇಶಕ್ಕೆ ಸಿದ್ದರಾಗಿ: ಆದರೂ, ಮುಂದಿನ ಪೀಳಿಗೆಯಲ್ಲಿ ಎಐ ನಿಜಕ್ಕೂ ಕೆಲವು ಉದ್ಯೋಗಿಗಳ ಮೇಲೆ ಪ್ರಭಾವ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ವಿಶ್ವ ಆರ್ಥಿಕ ವೇದಿಕೆ 2020 ವರದಿ ಅಂದಾಜಿಸುವಂತೆ 2025ರ ಹೊತ್ತಿಗೆ 85 ಮಿಲಿಯನ್​ ಜನರ ಉದ್ಯೋಗವನ್ನು ಇದು ಕಸಿಯಲಿದೆ. 26 ದೇಶಗಳಲ್ಲಿ 97 ಮಿಲಿಯನ್​ ಹೊಸ ಜವಾಬ್ದಾರಿಗಳನ್ನು ಎಐ ಸಮರ್ಥವಾಗಿ ನಿಭಾಯಿಸಲಿದೆ.

ಆದರೆ, ಎಐನ ಸಾಮರ್ಥ್ಯ ವೃದ್ಧಿಸುವುದು ಹೇಗೆ ಎಂಬ ಕುರಿತು ನಿಮ್ಮ ಉದ್ಯೋಗದ ದೃಷ್ಟಿಕೋನ ಇರಬೇಕು. ಎಐ ಹೇಗೆ ನಿಮ್ಮ ಕ್ಷೇತ್ರವನ್ನು ಆಕ್ರಮಿಸುತ್ತಿದೆ. ಇದರಿಂದ ನೀವು ಹೇಗೆ ನಿಮ್ಮ ತಂತ್ರಜ್ಞಾನದ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕಿದೆ ಎಂಬುದಕ್ಕೆ ಈಗಾಗಲೇ ಅನೇಕ ಕೋರ್ಸ್​​ಗಳಿವೆ. ಪ್ರಮುಖವಾಗಿ ಪರಸ್ಪರ ಕೌಶಲ್ಯ ಅಥವಾ ಭಾವನಾತ್ಮಕ ಇಂಟೆಲಿಜೆನ್ಸ್​​ ಕುರಿತು ಗಮನ ಹರಿಸಬೇಕಿದೆ. ಭವಿಷ್ಯದ ಆರೋಗ್ಯವಲಯದ ಉದ್ಯೋಗದಲ್ಲಿ ಡಿಜಿಟಲ್​ ಮತ್ತು ಸಾಫ್ಟ್ ​​ಸ್ಕಿಲ್​ಗಳ ಅವಶ್ಯಕತೆ ಎದುರಾಗಲಿದೆ.

ಅತಿಯಾದಾಗ ಡಿಜಿಟಲ್​ ಸ್ಕ್ರೀನ್​ ಟೈಮ್​ನಿಂದ ಬ್ರೇಕ್​ ಪಡೆಯುವುದು ಕೂಡ ಮುಖ್ಯ. ದೀರ್ಘಕಾಲ ಸ್ಕ್ರೀನ್​ ಮುಂದಿರುವ ಬದಲು ಎಐಗೆ ಪೇಪರ್​ ಹೆಡ್​ಲೈನ್​ ಓದುವಂತೆ ಮಾಡಬಹುದು. ಕೆಲಸೇತರದ ಡಿಜಿಟಲ್​ ಸ್ಕ್ರೀನ್​ ಸಮಯವನ್ನು ಉಳಿಸಿ, ನಿಮ್ಮ ಮೂಡ್​ ಚೆನ್ನಾಗಿರುವಂತೆ ನೋಡಿಕೊಳ್ಳಬಹುದು. ಡಿಜಿಟಕ್​ ಡಿಟಾಕ್ಸ್​ನಂತಹ ಪ್ರಯೋಜನಕಾರಿ ಬೆಂಬಲಿತ ಸಾಧನಗಳು ನಿಮ್ಮ ಸ್ಕ್ರೀನ್​ ಟೈಂ ಕಡಿಮೆ ಮಾಡುತ್ತದೆ.

ಎಐಗಳು ನಿಮ್ಮ ಆಫ್‌ಲೈನ್​ ಸಮಯವನ್ನು ವೃದ್ಧಿಸುತ್ತದೆ. ಉದಾಹರಣೆಗೆ, ನೀವು ಸೈಕಲ್​ನಲ್ಲಿ ಸುರಕ್ಷಿತ ಮಾರ್ಗ ತಲುಪುವ ನಿರ್ದೇಶನವನ್ನು ಎಐಗೆ ಸೆಟ್​ ಮಾಡಲು ಬಿಡಬಹುದು. ಸ್ನೇಹಿತರೊಂದಿಗೆ ಅಡುಗೆ ಮಾಡಲು ರೆಸಿಪಿಯನ್ನು ಚಾಟ್​ ಜಿಪಿಟಿಗೆ ಕೇಳಬಹುದು. ಈ ಮೂಲಕ ಕೊಂಚ ಕ್ಷಣಗಳನ್ನು ಸ್ಕ್ರೀನ್​ನಿಂದ ಬ್ರೇಕ್​ ಪಡೆಯಬಹುದು. ತಂತ್ರಜ್ಞಾನವು ನಿಮ್ಮ ಜೀವನಕ್ಕೆ ನೀಡಬಹುದಾದ ಪ್ರಯೋಜನಗಳ ಬಗ್ಗೆ ಯೋಚಿಸಿದಾಗ ಎಐ-ಆತಂಕ ಕಡಿಮೆ ಮಾಡುವ ಉತ್ತಮ ಮಾರ್ಗವೂ ಆಗುತ್ತದೆ.

ಸದಾ ಅದರ ಬಗ್ಗೆ ಓದಲು ನಿಮ್ಮ ಎಲ್ಲ ಸಮಯವನ್ನು ಕಳೆಯಬಾರದು. ಎಐ ನಿಯಂತ್ರಣದಲ್ಲಿನ ಪ್ರಗತಿಯ ಬಗ್ಗೆ ಮಾಹಿತಿ ನೀಡಲು ಇದು ಸಹಾಯಕ. ಪರಿಸರ ಆತಂಕದ ಬಗ್ಗೆ ಸರ್ಕಾರಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಭಾವಿಸುವುದು ನಿರಾಶಾದಾಯಕ. ಆದರೆ ಎಐ ಆತಂಕ ಹೊಂದಿರುವವರಿಗೆ ಕೆಲವು ಸರ್ಕಾರಗಳು ಅಪಾಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿವೆ ಎಂದು ಭರವಸೆ ನೀಡಬಹುದು. ಸಮಾಜದಲ್ಲಿ ಎಐ ಬಳಕೆಯನ್ನು ನಿಯಂತ್ರಿಸಲು ಯುರೋಪಿಯನ್​ ರಾಷ್ಟ್ರಗಳು ಇದೀಗ ಕರಡು ಕಾನೂನು, ಎಐ ಆಕ್ಟ್ ಅನುಮೋದಿಸಿವೆ.

ಇದನ್ನೂ ಓದಿ: AI ಮಾಡೆಲ್​​ಗಳಿಗೂ ಬರಲಿದೆ ಆ್ಯಪ್ ಸ್ಟೋರ್​: ಇದು OpenAI ಯೋಜನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.