ಕಳೆದೊಂದು ದಶಕದಿಂದ ಜಾಗತಿಕವಾಗಿ ಪ್ರಾಣಿಗಳಿಂದ ಹರಡುವ ಸೋಂಕಿನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಪ್ರತಿ ವರ್ಷ ಪ್ರಾಣಿಗಳಿಂದ ಹರಡುವ ರೋಗಗಳಿಂದ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಪ್ರಾಣಿಗಳ ಸೋಂಕಿನ ವಿಧಗಳು ವೇಗವಾಗಿ ಹರಡುತ್ತಿದ್ದು, ಇದು ಜಾಗತಿಕ ಆರೋಗ್ಯ ಭದ್ರತೆಯ ಗಂಭೀರ ಕಾಳಜಿಯ ವಿಷಯವಾಗಿದೆ.
ಝೂನೋಟಿಕ್ ಸೋಂಕು ಪ್ರಾಣಿಗಳಿಂದ ಮಾನವನಿಗೆ ಹರಡುತ್ತದೆ. ಕೆಲವು ಸಂದರ್ಭದಲ್ಲಿ ಮಾನವನಿಂದ ಕೆಲವು ಸೋಂಕುಗಳು ಪ್ರಾಣಿಗಳಿಗೂ ಹರಡಬಲ್ಲದು. ಅಂತಹ ಪರಿಸ್ಥಿತಿಯನ್ನು ರಿವರ್ಸ್ ಜೂನೊಸೆನ್ಸ್ ಎಂದು ಕರೆಯಲಾಗುತ್ತದೆ. ಝೋನಾಟಿಕ್ ಸೋಂಕುಗಳು ಮಾನವನಿಗೆ ನೇರ ಅಥವಾ ಪರೋಕ್ಷವಾಗಿ ಪ್ರಾಣಿಗಳ ಲಾಲಾರಸ, ರಕ್ತ, ಮೂತ್ರ ಅಥವಾ ದೇಹದ ಇತರೆ ದ್ರವದಿಂದ ಹರಡಬಹುದು. ವೆಕ್ಟರ್ ರೋಗಗಳು ಕೂಡ ಇದೇ ರೀತಿ ಸೊಳ್ಳೆ ಅಥವಾ ಚಿಗಟಗಳಿಂದ ಬರುತ್ತದೆ.
ಈ ದಿನದ ಪ್ರಮುಖ ಉದ್ದೇಶ: ಝೂನೋಟಿಕ್ ರೋಗಗಳಿಗೆ ಬ್ಯಾಕ್ಟೀರಿಯಾ, ವೈರಸ್, ಫಂಗಿಗಳು ಕಾರಣವಾಗಹುದು. ಕೆಲವು ವೇಳೆ ಇದು ಗಂಭೀರ ಸ್ವರೂಪ ಪಡೆಯುತ್ತದೆ. ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಪ್ರಸ್ತುತ 200 ಝೋನಾಟಿಕ್ ಸೋಂಕುಗಳು ಜಾಗತಿಕವಾಗಿವೆ. ಪ್ರಾಣಿ ಆಧಾರಿತ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸಲು ಜುಲೈ 6ರಂದು ವಿಶ್ವ ಝೋನಾಟಿಕ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಈ ದಿನವನ್ನು ಒಂದು ಜಗತ್ತು, ಒಂದು ಆರೋಗ್ಯ, ಪ್ರಾಣಿ ಸೋಂಕು ತಡೆಗಟ್ಟುವಿಕೆ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
2020ರಲ್ಲಿ "ಮುಂದಿನ ಸೋಂಕನ್ನು ತಡೆಗಟ್ಟುವಿಕೆ: ಝೋನಾಡಿಕ್ ರೋಗಳು ಮತ್ತು ಇದರ ರೂಪಾಂತರವನ್ನು ಹೇಗೆ ತಡೆಯುವುದು" ಎಂಬ ವಿಷಯಾಧಾರಿತ ವರದಿಯನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗಿತ್ತು. ವರದಿಯಲ್ಲಿ ಶೇ 60ರಷ್ಟು ಪ್ರಾಣಿಸೋಂಕು ರೋಗಗಳಿವೆ ಎಂದು ತಿಳಿಸಲಾಗಿದೆ. ಆದರೆ, ಶೇ 75ರಷ್ಟು ಪ್ರಾಣಿ ಸೋಂಕಿನ ರೋಗವನ್ನು ಪತ್ತೆ ಮಾಡಬೇಕಿದೆ ಎಂದು ಹೇಳಿದೆ. ಪ್ರತಿ ವರ್ಷ ಜಾಗತಿಕವಾಗಿ ವಿಶೇಷವಾಗಿ ಕೆಳ ಮಧ್ಯಮ ಆದಾಯದ ದೇಶದಲ್ಲಿ ಒಂದು ಮಿಲಿಯನ್ ಜನರು ಇಂತಹ ಪ್ರಾಣಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ.
ಸಾಂಕ್ರಾಮಿಕತೆಯ ಎಚ್ಚರಿಕೆ: ಪ್ರಾಣಿ ಆಧಾರಿತ ರೋಗಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲೇಬೇಕು. ಇಲ್ಲದೇ ಇದ್ರೆ, ಕೋವಿಡ್ 19ನಂತಹ ಮತ್ತೊಂದು ಸಾಂಕ್ರಾಮಿಕವನ್ನು ಭವಿಷ್ಯದಲ್ಲಿ ಜಗತ್ತು ಎದುರಿಸಬೇಕಾಗುತ್ತದೆ. ಝೂನೋಟಿಕ್ ಕಾಯಿಲೆಗಳು ಹರಡಲು ಕಾರಣವಾದ ಕಾರಣಗಳನ್ನು ಸಹ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ .ಈ ಕಾರಣಗಳಲ್ಲಿ ಪ್ರಾಣಿಗಳ ಪ್ರೋಟೀನ್‌ಗೆ ಹೆಚ್ಚುತ್ತಿರುವ ಬೇಡಿಕೆ, ಹೆಚ್ಚಿದ ತೀವ್ರವಾದ ಮತ್ತು ಸಮರ್ಥನೀಯವಲ್ಲದ ಕೃಷಿ, ವನ್ಯಜೀವಿಗಳ ಹೆಚ್ಚಿದ ಬಳಕೆ, ಸಮರ್ಥನೀಯವಲ್ಲದ ಬಳಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗ, ಆಹಾರ ಪೂರೈಕೆ ಸರಪಳಿಗಳಲ್ಲಿನ ಬದಲಾವಣೆಗಳು ಮತ್ತು ಹವಾಮಾನ ಬದಲಾವಣೆಯ ಬಿಕ್ಕಟ್ಟು ಸೇರಿವೆ.
2022ರ ವಿಶ್ವ ಅರಣ್ಯ ವರದಿಯಲ್ಲಿ ಭಾರತ ಮತ್ತು ಚೀನಾ ಇಂತಹ ಹೊಸ ಝೋನಾಟಿಕ್ ರೋಗಗಳು ಹರಡುವ ಹಾಟ್ಸ್ಪಾಟ್ ಆಗಲಿದೆ ಎಂದು ತಿಳಿಸಲಾಗಿದೆ. ಅತಿ ಹೆಚ್ಚು ಜನಸಾಂದ್ರತೆ ಇರುವ ಏಷ್ಯಾ ಮತ್ತು ಆಫ್ರಿಕಾದಲ್ಲೂ ಕೂಡ ಇಂತಹ ಸೋಂಕಿನ ಅಪಾಯ ಹೆಚ್ಚು ಎಂದು ಎಚ್ಚರಿಸಲಾಗಿದೆ. ಬಹುತೇಕ ದೇಶಗಳು ಆಫ್ರಿಕಾ ಖಂಡದಲ್ಲಿದ್ದು, ಎಬೋಲಾ ಸೇರಿದಂತೆ ಇತರೆ ಪ್ರಾಣಿ ಆಧಾರಿತ ಸೋಂಕು ಮತ್ತು ಸಾಂಕ್ರಾಮಿಕತೆಗೆ ಸಾಕ್ಷಿಯಾಗಿದೆ.
ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ಪ್ರತಿಕ್ರಿಯಿಸಲು ಸಂಶೋಧನೆ ಮತ್ತು ಸನ್ನದ್ಧತೆಯನ್ನು ಉತ್ತೇಜಿಸುವ ಗುರಿಯನ್ನು ಈ ದಿನ ಹೊಂದಿದೆ. ಮಾನವ ಮತ್ತು ಪ್ರಾಣಿಗಳ ಆರೋಗ್ಯ ಕ್ಷೇತ್ರ ಮತ್ತು ಪರಿಸರ ವಲಯಗಳ ನಡುವಿನ ಸಹಕಾರವನ್ನು ಉತ್ತೇಜಿಸುವುದು. ಜಾಗೃತಿ ಅಭಿಯಾನಗಳು, ಶೈಕ್ಷಣಿಕ ಚಟುವಟಿಕೆಗಳು ಮತ್ತು ವಿವಿಧ ಕಾರ್ಯಕ್ರಮಗಳನ್ನು ವಿಶ್ವಾದ್ಯಂತ ಸರ್ಕಾರ ಮತ್ತು ಸರ್ಕಾರೇತರ ಆರೋಗ್ಯ ಸಂಸ್ಥೆಗಳು ಮತ್ತು ಪಶುವೈದ್ಯ ಸಂಘಗಳು ಆಯೋಜಿಸುತ್ತವೆ.
ಇದನ್ನೂ ಓದಿ: ಕೋವಿಡ್ 19 ಸಾವು ಮತ್ತು ಗಂಭೀರತೆಯಿಂದ ಪಾರಾಗಲು ಗರ್ಭಾವಸ್ಥೆಯಲ್ಲಿ ಲಸಿಕೆ ಪಡೆಯುವುದು ಅವಶ್ಯ; ಅಧ್ಯಯನ