ETV Bharat / sukhibhava

ವಿಶ್ವ ಲಸಿಕೆ ಸಪ್ತಾಹ: ರೋಗ, ಸೋಂಕು ರಹಿತ ಉತ್ತಮ ನಾಳೆಗಳಿಗೆ ಅವಶ್ಯವಾಗಿದೆ ಲಸಿಕೆ - ಸಾಂಕ್ರಾಮಿಕತೆ ತಡೆಗಟ್ಟುವಲ್ಲಿ ಲಸಿಕೆ

ಯಾವುದೇ ರೋಗಗಳನ್ನು ತಡೆಗಟ್ಟುವಲ್ಲಿ ಲಸಿಕೆ ಪ್ರಧಾನ. ಆದರೆ, ಅನೇಕರಲ್ಲಿ ಇರುವ ಭಯ, ಅರಿವಿನ ಕೊರತೆಯಿಂದ ಜನರು ಅನೇಕ ಸಮಸ್ಯೆಗಳಿಗೆ ತುತ್ತಾಗುವಂತೆ ಆಗಿದೆ.

World Vaccine Week: For a better tomorrow, vaccination is essential to prevent infection

author img

By

Published : Apr 24, 2023, 1:01 PM IST

ಬೆಂಗಳೂರು​: ಯಾವುದೇ ರೋಗಗಳನ್ನು ತಡೆಗಟ್ಟುವಲ್ಲಿ ಲಸಿಕೆಗಳ ಪಾತ್ರ ಪ್ರಮುಖವಾಗಿದೆ. ಇದೇ ಕಾರಣದಿಂದ ಲಸಿಕೆಗಳನ್ನು ಅವಶ್ಯವಾಗಿ ಪ್ರತಿಯೊಬ್ಬರು ಪಡೆಯಬೇಕು. ಅದರಲ್ಲೂ ಕೋವಿಡ್​ 19 ಸಾಂಕ್ರಾಮಿಕತೆ ತಡೆಗಟ್ಟುವಲ್ಲಿ ಲಸಿಕೆಗಳು ಅತ್ಯಂತ ನಿರ್ಣಯಕ ಪಾತ್ರವಹಿಸಿದರು. ನವಜಾತ ಶಿಶುಗಳಿಂದಲೇ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಲು ಲಸಿಕೆಗಳನ್ನು ನೀಡುವುದು ಅವಶ್ಯವಾಗುತ್ತದೆ. ಇದೇ ಕಾರಣಕ್ಕೆ ಏಪ್ರಿಲ್​ ಕೊನೆಯ ವಾರವನ್ನು ವಿಶ್ವ ಲಸಿಕೆ ಸಪ್ತಾಹವಾಗಿ ಆಚರಿಸುವುದರ ಜೊತೆಗೆ ಲಸಿಕೆಯ ಅಗತ್ಯತೆಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸಿ ಹೇಳಲಾಗುವುದು.

ಲಸಿಕೆಗಳ ಪ್ರಮಾಣ ಕಡಿಮೆಯಾಗುವುದಕ್ಕೆ ಇದರಲ್ಲಿನ ಅರಿವಿನ ಕೊರತೆ ಮತ್ತು ಲಸಿಕೆಗಳ ಭಯ ಮತ್ತು ಲಸಿಕೆಗಳ ಅಲಭ್ಯತೆ ಕಾರಣವಾಗಿದೆ. ಇದೇ ಕಾರಣಕ್ಕೆ ಈ ಕುರಿತು ಜಾಗೃತಿಗೆ ಏಪ್ರಿಲ್​ ಕಡೆಯ ವಾರದಿಂದ ಅಂದರೆ ಏಪ್ರಿಲ್​ 24ರಿಂದ ಏಪ್ರಿಲ್​ 30ರವರೆಗೆ ವಿಶ್ವ ಲಸಿಕೆ ವಾರವಾಗಿ ಆಚರಣೆ ಮಾಡಲಾಗುವುದು.

ಲಸಿಕೆ ಪಡೆಯಲು ಹಿಂದೇಟು: ಯುನಿಸೆಫ್​ ಪ್ರಕಾರ, ಜಗತ್ತಿನ 20 ಮಿಲಿಯನ್​ ಮಕ್ಕಳು ಅನೇಕ ಕಾರಣದಿಂದ ಇಂದು ಲಸಿಕೆ ಪಡೆಯುತ್ತಿಲ್ಲ. ಇದರ ಫಲಿತಾಂಶವಾಗಿ ಅನೇಕ ಜನರು ಇಂದು ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಇದಷ್ಟೇ ಅಲ್ಲ, ಜಗತ್ತನ್ನು ಕಾಡಿದ್ದ ಕೋವಿಡ್​ 19 ತಡೆಯಲು ಲಸಿಕೆ ಅಗತ್ಯ ಎಂದು ಮನವರಿಕೆ ಮಾಡಿದ್ದರು, ದೊಡ್ಡ ಸಂಖ್ಯೆಯ ಮಂದಿ ಗೊಂದಲ ಮತ್ತು ಭಯದಿಂದ ಇದನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು.

ಅನೇಕ ರೋಗ ಸೋಂಕುಗಳನ್ನು ತಡೆಯುವಲ್ಲಿ ಲಸಿಕೆ ಅತ್ಯವಶ್ಯಕವಾಗುತ್ತದೆ. ಆದರೆ, ಅವಶ್ಯವಿರುವ ಅನೇಕ ಲಸಿಕೆಗಳನ್ನು ಅನೇಕ ಕಾರಣಗಳಿಂದ ಮಕ್ಕಳು ಪಡೆಯುತ್ತಿಲ್ಲ. ಇದೇ ಕಾರಣಕ್ಕೆ ಈ ವರ್ಷವನ್ನು ದಿ ಬಿಗ್​ ಕ್ಯಾಚ್​ ಅಪ್​ ಘೋಷವಾಕ್ಯದೊಂದಿಗೆ ಈ ಸಪ್ತಾಹ ನಡೆಸಲಾಗುತ್ತಿದೆ.

ರೋಗದ ಜಾಗ್ರತೆಗೆ ಲಸಿಕೆ ಅಗತ್ಯ: ಅನೇಕ ಮಾರಣಾಂತಿಕ ರೋಗದಿಂದ ಕಾಪಾಡಲು ನವಜಾತ ಶಿಶುಗಳಿಗೆ ಅನೇಕ ವಿಧದ ಲಸಿಕೆಗಳನ್ನು ನೀಡಲಾಗುವುದು. ಜೊತೆಗೆ ಇಂತಹ ಅನೇಕ ರೋಗಗಳಿಗೆ ಒಳಗಾಗದಂತೆ ತಡೆಯಲು ವಯಸ್ಕರಿಗೂ ಲಸಿಕೆಗಳನ್ನು ಪಡೆಯುವಂತೆ ಸಲಹೆ ನೀಡಲಾಗುತ್ತದೆ. ಲಸಿಕೆಗಳ ಪ್ರಯೋಜನ ತಿಳಿಯದೇ ಅನೇಕ ಮಂದಿ ಭಯ ಅಥವಾ ಮತ್ತಿತ್ತರ ಕಾರಣದಿಂದ ಹಿಂದೆ ಸರಿಯುತ್ತಾರೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಅನೇಕ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಘಟನೆಗಳು ವಿಶ್ವರೋಗ ನಿರೋಧಕ ವಾರದಲ್ಲಿ ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಯತ್ನ ನಡೆಸುತ್ತಿದೆ.

ಡಬ್ಲೂಎಚ್​ಒ ವರದಿ: 2023ರಕ್ಕು ವಿಶ್ವ ಆರೋಗ್ಯ ಸಂಸ್ಥೆ, ಸರ್ಕಾರಕ್ಕೆ ಅಗತ್ಯವಾದ ತಾಂತ್ರಿಕ ಬೆಂಬಲ ಮತ್ತು ಮಾಹಿತಿಗಳನ್ನು ನೀಡುವ ಮೂಲಕ ರೋಗ ನಿರೋಧಕ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ. ಈ ಮೂಲಕ ಲಸಿಕೆ ಮತ್ತು ರೋಗ ನಿರೋಧಕತೆ ಕುರಿತು ಒತ್ತು ನೀಡಲಾಗಿದೆ. ಈ ಮೂಲಕ ಜನರನ್ನು ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಸೋಂಕಿನ ವಿರುದ್ಧ ರಕ್ಷಣೆ ಮಾಡಲು ಮುಂದಾಗಿದೆ.

1960ರಲ್ಲೆ ಮೊದಲ ಬಾರಿಗೆ ಲಸಿಕೆ ಕುರಿತು ರಾಷ್ಟ್ರೀಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಐದು ವರ್ಷದೊಳಗೆ ಮಕ್ಕಳಿಗೆ ನೀಡುವ ಲಸಿಕೆಗಳು ಅನೇಕ ಸೋಂಕು ಮತ್ತು ರೋಗದ ವಿರುದ್ಧ ಅವರನ್ನು ಕಾಪಾಡುವಲ್ಲಿ ಪ್ರಮುಖವಾಗಿತ್ತು. ಇದರಿಂದ ಸಾವಿನ ದರದಲ್ಲಿ ಗಮನಾರ್ಹ ಇಳಿಕೆ ಕೂಡ ಕಂಡು ಬಂದವು.

ಪ್ರಸ್ತುತ, ಎಲ್ಲ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಪ್ರಯತ್ನಗಳು, ಜನರಲ್ಲಿ ಅದರಲ್ಲೂ ವಿಶೇಷವಾಗಿ ನವಜಾತ ಶಿಶುಗಳಲ್ಲಿ ಲಸಿಕೆ ಅಗತ್ಯತೆ ಕುರಿತು ಅರಿವು ಮೂಡಿಸುತ್ತಿದೆ. ಭಾರತ ಸರ್ಕಾರ ಕೂಡ ಜಾಗತಿಕ ರೋಗ ನಿರೋಧಕ ಕಾರ್ಯಕ್ರಮ, ಇಂಧ್ರಧನುಷ್​, ಪಲ್ಸ್​ ಪೋಲಿಯೋ ಕಾರ್ಯಕ್ರಮದ ಮೂಲಕ ಲಸಿಕೆಗಳಿಗೆ ಉತ್ತೇಜಿಸುತ್ತಿದೆ.

ಡಬ್ಲ್ಯೂಎಚ್​ಒ ಅನುಸಾರ 2019ರಿಂದ 2021ವರೆಗೆ ಸುಮಾರು 5 ಮಿಲಿಯನ್​ ನವಜಾತ ಶಿಶುಗಳ ಲಸಿಕೆ ಸಂಖ್ಯೆಯನ್ನು ಪಡೆದಿಲ್ಲ. 2019ಕ್ಕೆ ಹೋಲಿಕೆ ಮಾಡಿದರೆ 2022ರಲ್ಲಿ 35 ಲಕ್ಷ ಹೆಣ್ಣುಮಕ್ಕಳು ಲಸಿಕೆಯನ್ನು ಪಡೆದಿಲ್ಲ. ಇದಕ್ಕೆ ಪ್ರಮುಖ ಕಾರಣ ಜನರಲ್ಲಿ ಇರುವ ಅರಿವಿನ ಕೊರತೆ.

ವೈದ್ಯರ ಪ್ರಕಾರ, ಸರಿಯಾದ ಸಮಯದಲ್ಲಿ ಸರಿಯಾದ ಲಸಿಕೆ ಪಡೆಯುವುದು ಮಕಲ್ಕಳ ಸಾವಿನ ಸಂಖ್ಯೆ ಮಾತ್ರವಲ್ಲ ವಯಸ್ಕರ ಜೀವನ ಗುಣಮಟ್ಟವನ್ನು ಅಭಿವೃದ್ಧಿ ಪಡಿಸುತ್ತದೆ. ಮಕ್ಕಳಲ್ಲಿ ವಿಪಿಡಿ, ದೊಡ್ಡವರಲ್ಲಿ ಪೊಲೀಯೊ, ದಿಫ್ತೀರಿಯಾ, ಟೆಟನಸ್​, ಕೋವಿಡ್​ 19ನಂತಹ ಹಲವ ರೋಗ ತಡೆಯುವಲ್ಲಿ ಲಸಿಕೆ ಪ್ರಮುಖ ಪಾತ್ರವಹಿಸುತ್ತದೆ. ಈ ಹಿನ್ನೆಲೆ ಜನರು ಸಮಯಕ್ಕೆ ಸರಿಯಾಗಿ ಲಸಿಕೆ ಪಡೆಯುವುದು ಅವಶ್ಯವಾಗಿದೆ.

ಇದನ್ನೂ ಓದಿ: ನಿಮಿಷದಲ್ಲೇ ಮಂಕಿಪಾಕ್ಸ್​ ರೋಗ ಪತ್ತೆ! ಹೊಸ ವಿಧಾನ ಕಂಡು ಹಿಡಿದ ವಿಜ್ಞಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.