ETV Bharat / sukhibhava

ವಿಶ್ವ ಪೋಲಿಯೊ ದಿನ 2022: ತಾಯಿ, ಮಗುವಿನ ಆರೋಗ್ಯದ ಸಂಕಲ್ಪ ನಮ್ಮದಾಗಲಿ - ಅಕ್ಟೋಬರ್ 24 ರಂದು ವಿಶ್ವ ಪೋಲಿಯೊ ದಿನ

30 ವರ್ಷಗಳ ಹಿಂದೆ ಪೋಲಿಯೊವನ್ನು ಭಾರತದಲ್ಲಿ ಸಾಮಾನ್ಯ ಕಾಯಿಲೆ ಎಂದು ಪರಿಗಣಿಸಲಾಗಿತ್ತು ಎಂಬುದು ಗಮನಾರ್ಹ. ಆದರೆ, ಭಾರತ ಸರ್ಕಾರದ ಪಲ್ಸ್ ಪೋಲಿಯೊ ಅಭಿಯಾನ ಸೇರಿದಂತೆ ಅನೇಕ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ವಿವಿಧ ಅಭಿಯಾನಗಳು ಮತ್ತು ಪ್ರಯತ್ನಗಳ ಕಾರಣದಿಂದ ಮಾರ್ಚ್ 27, 2014 ರಂದು ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಿತು.

ವಿಶ್ವ ಪೋಲಿಯೊ ದಿನ 2022: ತಾಯಿ, ಮಗುವಿನ ಆರೋಗ್ಯದ ಸಂಕಲ್ಪ ನಮ್ಮದಾಗಲಿ
A healthier future for mothers and children: World Polio Day 2022
author img

By

Published : Oct 24, 2022, 2:25 PM IST

ಹೈದರಾಬಾದ್: ವಿಶ್ವದಾದ್ಯಂತ ಪೋಲಿಯೊ ನಿರ್ಮೂಲನೆ ಮತ್ತು ಪೋಲಿಯೊ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 24 ರಂದು ವಿಶ್ವ ಪೋಲಿಯೊ ದಿನವನ್ನು ಆಚರಿಸಲಾಗುತ್ತದೆ.

ಭಾರತವು ಪೋಲಿಯೊ ಮುಕ್ತ ರಾಷ್ಟ್ರವಾಗಿದೆ ಎಂದು ಹೇಳಲಾಗಿದೆ. ಆದರೆ, ಇನ್ನೂ ಕೆಲ ದೇಶಗಳು ಈ ಸಂಕೀರ್ಣ ಕಾಯಿಲೆಯಿಂದ ಸಂಪೂರ್ಣ ಮುಕ್ತವಾಗಿಲ್ಲ. ದಶಕಗಳಿಂದ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪ್ರಪಂಚದ ಬಹುತೇಕ ಎಲ್ಲ ದೇಶಗಳ ಅನೇಕ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ರೋಗವನ್ನು ನಿರ್ಮೂಲನೆ ಮಾಡಲು, ರೋಗದಿಂದ ಪ್ರತಿ ಮಗುವನ್ನು ರಕ್ಷಿಸಲು ಶ್ರಮಿಸುತ್ತಿವೆ. ಮಕ್ಕಳು ಲಸಿಕೆಗಳ ರಕ್ಷಣೆ ಪಡೆಯಲು ಅನೇಕ ಆರೋಗ್ಯ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ನಡೆಸಲಾಗುತ್ತಿದೆ.

ಈ ಅಭಿಯಾನಕ್ಕೆ ನಿರ್ದೇಶನ ನೀಡುವ ಮತ್ತು ಪೋಲಿಯೊ ನಿರ್ಮೂಲನೆ ಮತ್ತು ಪೋಲಿಯೊ ಲಸಿಕೆ ಬಗ್ಗೆ ಜಾಗತಿಕ ವೇದಿಕೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 24 ರಂದು ವಿಶ್ವ ಪೋಲಿಯೊ ದಿನ ಆಚರಿಸಲಾಗುತ್ತದೆ. 2022 ರಲ್ಲಿ, ಈ ದಿನವನ್ನು "ತಾಯಂದಿರು ಮತ್ತು ಮಕ್ಕಳಿಗೆ ಆರೋಗ್ಯಕರ ಭವಿಷ್ಯ" ಎಂಬ ವಿಷಯದ ಮೇಲೆ ಆಚರಿಸಲಾಗುತ್ತಿದೆ.

ಇದೊಂದು ಸಾಮಾನ್ಯ ಕಾಯಿಲೆ ಎಂದೇ ಪರಿಗಣಿಸಲಾಗಿತ್ತು: 30 ವರ್ಷಗಳ ಹಿಂದೆ ಪೋಲಿಯೊವನ್ನು ಭಾರತದಲ್ಲಿ ಸಾಮಾನ್ಯ ಕಾಯಿಲೆ ಎಂದು ಪರಿಗಣಿಸಲಾಗಿತ್ತು ಎಂಬುದು ಗಮನಾರ್ಹ. ಆದರೆ ಭಾರತ ಸರ್ಕಾರದ ಪಲ್ಸ್ ಪೋಲಿಯೊ ಅಭಿಯಾನ ಸೇರಿದಂತೆ ಅನೇಕ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ವಿವಿಧ ಅಭಿಯಾನಗಳು ಮತ್ತು ಪ್ರಯತ್ನಗಳ ಕಾರಣದಿಂದ ಮಾರ್ಚ್ 27, 2014 ರಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಿತು.

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಪೋಲಿಯೊ ನಿರ್ಮೂಲನೆ ಪ್ರಯತ್ನದ ಫಲವಾಗಿ 1995 ರಲ್ಲಿ ಭಾರತದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ಇದರ ಅಡಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಎರಡು ಡೋಸ್ ಪೋಲಿಯೊ ಲಸಿಕೆಯನ್ನು ನೀಡಲಾಯಿತು.

ಯುನಿಸೆಫ್ ಮತ್ತು ರೋಟರಿ ಇಂಟರ್‌ನ್ಯಾಶನಲ್‌ನಂತಹ ಸಂಸ್ಥೆಗಳು ಈ ಅಭಿಯಾನದಲ್ಲಿ ಭಾರತದ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಪ್ರಮುಖ ಪಾತ್ರ ವಹಿಸಿವೆ. ಈಗಲೂ ಭಾರತ ಸರ್ಕಾರದ ಪಲ್ಸ್ ಪೋಲಿಯೋ ಅಭಿಯಾನದಡಿ ಮಕ್ಕಳಿಗೆ ಮನೆ ಮನೆಗೆ ತೆರಳಿ ಪೋಲಿಯೋ ಡೋಸ್ ನೀಡಲಾಗುತ್ತಿದೆ.

ಜೋನಾಸ್​​​​​ ಸಾಲ್ಕ್​ ಜನ್ಮದಿನದ ನಿಮಿತ್ತ ಈ ದಿನ: ರೋಟರಿ ಇಂಟರ್‌ನ್ಯಾಶನಲ್‌ನಿಂದ ಈ ದಿನದ ಆಚರಣೆಯನ್ನು ಆರಂಭಿಸಲಾಯಿತು. ಪೋಲಿಯೊ ಲಸಿಕೆ ಕಂಡುಹಿಡಿದ ವಿಜ್ಞಾನಿ ಜೋನಾಸ್ ಸಾಲ್ಕ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಜೋನಾಸ್ ಸಾಲ್ಕ್ ಮತ್ತು ಅವರ ತಂಡವು 1955 ರಲ್ಲಿ ಪೋಲಿಯೊ ಲಸಿಕೆ ಕಂಡು ಹಿಡಿದರು.

ಪೋಲಿಯೊ ವಾಸ್ತವವಾಗಿ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಅದು ಅಂಗವೈಕಲ್ಯವನ್ನು ಉಂಟುಮಾಡಬಹುದು. ಅಲ್ಲದೆ ಜೀವಕ್ಕೂ ಮಾರಕವಾಗಬಹುದು. ಪೋಲಿಯೊಮೈಲಿಟಿಸ್ ಎಂದೂ ಕರೆಯಲ್ಪಡುವ ಈ ಸಾಂಕ್ರಾಮಿಕ ವೈರಲ್ ಕಾಯಿಲೆಯಲ್ಲಿ, ನರಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಮೂಳೆ, ಮೆದುಳು ಮತ್ತು ಬೆನ್ನುಮೂಳೆ ಹಾನಿಗೊಳಗಾಗಬಹುದು.

ಜೊತೆಗೆ ಪಾರ್ಶ್ವವಾಯು ಮತ್ತು ಉಸಿರಾಟದ ತೊಂದರೆಯಂಥ ಸಮಸ್ಯೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇದು ಸಾವಿಗೆ ಸಹ ಕಾರಣವಾಗುತ್ತದೆ. ಇದು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ ಮತ್ತು ಅವರ ಜೀವನದ ಉದ್ದಕ್ಕೂ ಪರಿಣಾಮ ಬೀರುತ್ತದೆ. ಆದ್ದರಿಂದ ಪೋಲಿಯೊ ತಡೆಗಟ್ಟಲು 0 ರಿಂದ 5 ವರ್ಷದ ಮಕ್ಕಳಿಗೆ ಪೋಲಿಯೊ ಔಷಧ ನೀಡುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಇದು ನೇರ ಸಂಪರ್ಕದ ಮೂಲಕ ಹರಡುತ್ತೆ: ಪೋಲಿಯೊ ವೈರಸ್ ಕಲುಷಿತ ನೀರು ಮತ್ತು ಆಹಾರ, ಸೋಂಕಿತ ಮಲಕ್ಕೆ ಒಡ್ಡಿಕೊಳ್ಳುವುದು, ಸೋಂಕಿತ ವ್ಯಕ್ತಿಯ ಸೀನುವಿಕೆ ಮತ್ತು ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕದ ಮೂಲಕ ಹರಡುತ್ತದೆ. ಈ ವೈರಸ್​ನ ಪ್ರಭಾವದ ಅಡಿಯಲ್ಲಿ ಬಂದ ನಂತರ, ಮೊದಲಿಗೆ ಮಕ್ಕಳ ಸೌಮ್ಯವಾದ ಜ್ವರ ರೋಗಲಕ್ಷಣ ಕಾಣಿಸುತ್ತವೆ.

ಇದು ಸುಮಾರು 10 ದಿನಗಳವರೆಗೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಜ್ವರ, ತಲೆನೋವು, ಆಯಾಸ, ವಾಂತಿ, ಗಂಟಲು ನೋವು, ಕುತ್ತಿಗೆ ನೋವು, ಸ್ನಾಯು ದೌರ್ಬಲ್ಯ, ಮೆನಿಂಜೈಟಿಸ್, ತೋಳು ಅಥವಾ ಕಾಲುಗಳಲ್ಲಿ ನೋವು ಅಥವಾ ಸೆಳೆತ ಮತ್ತು ಬೆನ್ನು ನೋವು ಮುಂತಾದ ರೋಗಲಕ್ಷಣಗಳನ್ನು ಸಹ ಕಾಣಿಸಿಕೊಳ್ಳಬಹುದು.

ನಮ್ಮ ದೇಶವನ್ನು ಪೋಲಿಯೋ ಮುಕ್ತ ದೇಶ ಎಂದು ಕರೆದರೂ ಮುಂದಿನ ಪೀಳಿಗೆಯನ್ನು ಈ ಗಂಭೀರ ಕಾಯಿಲೆಯಿಂದ ಪಾರು ಮಾಡಲು ನಿರಂತರ ಪ್ರಯತ್ನ ಅಗತ್ಯ. ಅದಕ್ಕಾಗಿಯೇ ನಮ್ಮ ದೇಶದಲ್ಲಿ, ಮನೆ, ಅಂಗನವಾಡಿ ಕೇಂದ್ರಗಳು, ದವಾಖಾನೆ ಮತ್ತು ಶಾಲೆ ಸೇರಿದಂತೆ ಎಲ್ಲ ಹತ್ತಿರದ ಸ್ಥಳಗಳಲ್ಲಿ ಸರ್ಕಾರದಿಂದ ಪೋಲಿಯೊ ಡೋಸ್ ಅನ್ನು ಮಕ್ಕಳಿಗೆ ನೀಡಲಾಗುತ್ತದೆ.

ಲಸಿಕೆ ಹಾಕಿಸುವುದು ಸುರಕ್ಷಿತ: ಮಕ್ಕಳನ್ನು ಪೋಲಿಯೊ ಮಾತ್ರವಲ್ಲದೆ ಇತರ ಅನೇಕ ಸಂಕೀರ್ಣ ಕಾಯಿಲೆಗಳಿಂದ ಸುರಕ್ಷಿತವಾಗಿರಿಸಲು ಅವರಿಗೆ ಸಂಪೂರ್ಣವಾಗಿ ಲಸಿಕೆ ನೀಡುವುದು ಬಹಳ ಮುಖ್ಯ. ವಿಶೇಷವಾಗಿ ಪೋಲಿಯೊ ತಡೆಗಟ್ಟಲು, ಚಿಕ್ಕ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ಮತ್ತು ನಿಯಮಿತವಾಗಿ ಪೋಲಿಯೊ ಔಷಧಿಯನ್ನು ನೀಡಬೇಕು. ಗಮನಿಸಬೇಕಾದ ಅಂಶವೆಂದರೆ ಪಲ್ಸ್ ಪೋಲಿಯೊ ಅಭಿಯಾನದ ಅಡಿಯಲ್ಲಿ, ಮಕ್ಕಳಿಗೆ ಐವಿಪಿ ಪ್ರಕಾರ ನಾಲ್ಕು ಡೋಸ್ ನೀಡಲಾಗುತ್ತದೆ. ಇದರಲ್ಲಿ ಪೋಲಿಯೋ ಬೂಸ್ಟರ್ ಅನ್ನು 2 ತಿಂಗಳು, 4 ತಿಂಗಳು, 6 ರಿಂದ 18 ತಿಂಗಳು ಮತ್ತು 4 ರಿಂದ 6 ವರ್ಷಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿ: ಮಗುವನ್ನು ಅಡುಗೆ ಪಾತ್ರೆಯಲ್ಲಿಟ್ಟು ಸುರಕ್ಷಿತವಾಗಿ ಕರೆತಂದು ಪೋಲಿಯೋ ಲಸಿಕೆ ಹಾಕಿಸಿದ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.