ETV Bharat / sukhibhava

ಇಂದು ವಿಶ್ವ ಫಾರ್ಮಸಿಸ್ಟ್ಸ್‌ ದಿನ: ಔಷಧಿ ತಯಾರಕರ ಕೊಡುಗೆಗೆ ನಮೋ ನಮಃ - ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಔಷಧಿಕಾರರು

World Pharmacists Day 2023: ಇಂದು ವಿಶ್ವ ಫಾರ್ಮಸಿಸ್ಟ್ ದಿನ. ‘ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಔಷಧಿಕಾರರು’ ಎಂಬ ವಿಷಯದ ಕುರಿತು ಅಂತರರಾಷ್ಟ್ರೀಯ ವೈಜ್ಞಾನಿಕ ವೆಬಿನಾರ್ ಆಯೋಜಿಸಲಾಗಿದೆ. ಫಾರ್ಮಾಸಿಸ್ಟ್ ಫೆಡರೇಶನ್‌ನ ವೈಜ್ಞಾನಿಕ ವಿಭಾಗ ಸಂಜೆ 4 ರಿಂದ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಶ್ವ ಔಷಧಿಕಾರರ ದಿನವು ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯದ ಅನ್ವೇಷಣೆಯಲ್ಲಿ ಔಷಧಿಕಾರರ ಮಹತ್ವದ ಪಾತ್ರದ ಮೇಲೆ ಬೆಳಕು ಚೆಲ್ಲುತ್ತದೆ.

World Pharmacists Day 2023  Thanking contributions of pharmacists  World Pharmacists Day is observed on September 25  Pharmacy Strengthening Health Systems  ಔಷಧಿಕಾರರ ಕೊಡುಗೆ  ಉಜ್ವಲ ಭವಿಷ್ಯದ ಅನ್ವೇಷಣೆ  ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಔಷಧಿಕಾರರು  ಫಾರ್ಮಸಿಸ್ಟ್‌ ದಿನ ಆಚರಣೆ
ಔಷಧಿಕಾರರ ಕೊಡುಗೆಗೆ ನಮೋ ನಮಃ
author img

By ETV Bharat Karnataka Team

Published : Sep 25, 2023, 7:30 AM IST

ನವದೆಹಲಿ: ವೈದ್ಯಕೀಯ ವಿಜ್ಞಾನ ಕ್ಷೇತ್ರಕ್ಕೆ ಔಷಧಿಕಾರರ ಅಪಾರ ಕೊಡುಗೆಗಳ ಸ್ಮರಣೆಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವಾದ್ಯಂತ ವಿಶ್ವ ಫಾರ್ಮಾಸಿಸ್ಟ್ ದಿನವೆಂದು ಆಚರಿಸಲಾಗುತ್ತದೆ. ಜೀವರಕ್ಷಕ ಔಷಧಿಗಳ ಸೃಷ್ಟಿಕರ್ತರು ಮತ್ತು ಅನ್ವೇಷಕರು, ವೈದ್ಯಕೀಯ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಸಶಕ್ತಗೊಳಿಸುವ ಫಾರ್ಮಸಿಸ್ಟ್‌ಗಳಿಗೆ ಅರ್ಹ ಗೌರವ ಸಲ್ಲಿಸುವುದೇ ಈ ದಿನದ ಉದ್ದೇಶ.

ಆರೋಗ್ಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್ ಪಾತ್ರ: ವಿಶ್ವ ಫಾರ್ಮಸಿಸ್ಟ್ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ಆಚರಿಸಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ 2009ರಿಂದ ಈ ದಿನವನ್ನು ಆಚರಿಸುತ್ತಾ ಬರುತ್ತಿದೆ.

ಈ ವರ್ಷ ವಿಶ್ವ ಫಾರ್ಮಸಿಸ್ಟ್‌ಗಳ ದಿನವನ್ನು ‘ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಔಷಧಿಕಾರರು’ (Pharmacists strengthening health systems) ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಬಲಪಡಿಸುವ ವಿಷಯಗಳಲ್ಲಿ ಔಷಧಿಕಾರರು ಮತ್ತು ಫಾರ್ಮಸಿ ವೃತ್ತಿಪರರು ವಹಿಸುವ ಪ್ರಮುಖ ಪಾತ್ರವನ್ನು ಈ ಕಾರ್ಯಕ್ರಮ ಒತ್ತಿ ಹೇಳುತ್ತದೆ.

ಆಚರಣೆಯ ಇತಿಹಾಸ: ವಿಶ್ವ ಔಷಧಿಕಾರರ ದಿನವನ್ನು ಸೆಪ್ಟೆಂಬರ್ 25 ರಂದು 2009 ರಲ್ಲಿ ಇಂಟರ್ನ್ಯಾಷನಲ್ ಫಾರ್ಮಾಸ್ಯುಟಿಕಲ್ ಫೆಡರೇಶನ್ (ಎಫ್‌ಐಪಿ) ಪ್ರಾರಂಭಿಸಿತು. ಇದರ ಜನನವು 1912 ರ ಸೆಪ್ಟೆಂಬರ್ 25 ರಂದು ಇಂಟರ್ನ್ಯಾಷನಲ್ ಫಾರ್ಮಾಸ್ಯುಟಿಕಲ್ ಫೆಡರೇಶನ್ ರಚನೆಯೊಂದಿಗೆ ಹೊಂದಿಕೆಯಾಗಿದೆ. ಇಂಥದ್ದೊಂದು ದಿನವನ್ನು ಸ್ಥಾಪಿಸುವ ಹಿಂದಿನ ಉದ್ದೇಶ ಔಷಧಿ ಶೋಧನೆ, ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಔಷಧಿಕಾರರ ಕೊಡುಗೆಗಳನ್ನು ಅಂತಿಮವಾಗಿ ಸಾರ್ವಜನಿಕರಿಗೆ ಪ್ರವೇಶಿಸುವಂತೆ ಮಾಡುವುದು ಮತ್ತು ವೈದ್ಯಕೀಯ ಸಮುದಾಯದಲ್ಲಿ ಅವರ ಸಮರ್ಪಣಾ ಭಾವ ಮತ್ತು ಅಮೂಲ್ಯವಾದ ಪಾತ್ರಕ್ಕಾಗಿ ಅಭಿಮಾನ ಬೆಳೆಸುವುದೇ ಆಗಿದೆ.

ಎಫ್​ಐಪಿ ಎಂದರೇನು?: ಇಂಟರ್ನ್ಯಾಷನಲ್ ಫಾರ್ಮಾಸ್ಯುಟಿಕಲ್ ಫೆಡರೇಶನ್ (FIP). ಇದು ಔಷಧಾಲಯ, ಔಷಧೀಯ ವಿಜ್ಞಾನ ಮತ್ತು ಔಷಧೀಯ ಶಿಕ್ಷಣಕ್ಕಾಗಿ ಜಾಗತಿಕ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಫೆಡರೇಶನ್ 152 ರಾಷ್ಟ್ರೀಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ವೈಯಕ್ತಿಕ ಸದಸ್ಯರನ್ನು ಒಳಗೊಂಡಿರುವ ವಿಶಾಲವಾದ ಜಾಲವನ್ನು ಏಕೀಕರಿಸುತ್ತದೆ. ಇದು ಔಷಧಿಕಾರರು, ಔಷಧೀಯ ವಿಜ್ಞಾನಿಗಳು ಮತ್ತು ಔಷಧೀಯ ಶಿಕ್ಷಣತಜ್ಞರು ಸೇರಿದಂತೆ ನಾಲ್ಕು ಮಿಲಿಯನ್ ವೃತ್ತಿಪರರನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಅವರ ಪ್ರಯತ್ನಗಳ ಜಾಗತಿಕ ಪರಿಣಾಮವನ್ನು ವರ್ಧಿಸುತ್ತದೆ.

ಔಷಧಿಕಾರರ ಕೆಲಸವೇನು?: ವೈದ್ಯಕೀಯವು ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಔಷಧಿಕಾರರ ನಿರ್ಣಾಯಕ ಕೊಡುಗೆಯನ್ನು ಸ್ಮರಿಸುವುದು ಬಹಳ ಮುಖ್ಯ. ಔಷಧಿಕಾರರನ್ನು ಸಾಮಾನ್ಯವಾಗಿ ರಸಾಯನಶಾಸ್ತ್ರಜ್ಞರು ಎಂದು ಕರೆಯುತ್ತಾರೆ. ಔಷಧಗಳನ್ನು ವಿತರಿಸುವ ಸಾಂಪ್ರದಾಯಿಕ ಚಿತ್ರಣವನ್ನೂ ಮೀರಿ ಹಿರಿದಾದ ಪಾತ್ರಗಳನ್ನು ಒಳಗೊಳ್ಳುತ್ತಾರೆ. ಫಾರ್ಮಸಿ ಕೌಂಟರ್‌ಗಳಾಚೆಗೆ ಔಷಧಿಕಾರರು ಸಾಮಾನ್ಯ ಕಾಯಿಲೆಗಳಿಗೆ ಔಷಧಿಗಳ ಕುರಿತು ಅಗತ್ಯ ಸಲಹೆಗಳನ್ನು ನೀಡುತ್ತಾರೆ. ಅಷ್ಟೇ ಅಲ್ಲ, ವ್ಯಾಕ್ಸಿನೇಷನ್ ಆಡಳಿತದಂತಹ ಪ್ರಮುಖ ಕಾರ್ಯಗಳಲ್ಲಿಯೂ ತೊಡಗುತ್ತಾರೆ. ಔಷಧೀಯ ಕಂಪನಿಗಳು ಔಷಧಿಕಾರರ ಒಳಗೊಳ್ಳುವಿಕೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ. ಏಕೆಂದರೆ ಅವರು ಅನಿವಾರ್ಯ ಸಂಶೋಧನೆಗಳನ್ನು ನಡೆಸುತ್ತಾರೆ. ವೈವಿಧ್ಯಮಯ ಕಾಯಿಲೆಗಳನ್ನು ಎದುರಿಸಲು ಹೊಸ ಔಷಧಿಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ. ಔಷಧಿಗಳ ಕಟ್ಟುನಿಟ್ಟಾದ ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುತ್ತಾರೆ. ಈ ಮುಖೇನ ಔಷಧ ತಜ್ಞರಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುತ್ತಾರೆ.

ಇದನ್ನೂ ಓದಿ: ಸ್ವಯಂ ನಿರೋಧಕ ರೋಗ ಚಿಕಿತ್ಸೆಯಲ್ಲಿ ಶುಂಠಿ ಪೂರಕ ಬಳಸಿದ್ರೆ ಅದ್ಭುತ ಪ್ರಯೋಜನ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.