ಬೆಂಗಳೂರು: ಓರಲ್ ರಿಹೈಡ್ರೇಷನ್ ಸಲ್ಯೂಷನ್ (ಮೌಖಿಕ ಪುನರ್ಜಲೀಕರಣ ಪರಿಹಾರ) ನ ಪ್ರಾಮುಖ್ಯತೆ ಮತ್ತು ಅದರ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗತಿಕವಾಗಿ ಪ್ರತಿವರ್ಷ ಜುಲೈ 29 ಅನ್ನು ವಿಶ್ವ ಒಆರ್ಎಸ್ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಅನೇಕ ಅಭಿವೃದ್ಧಿ ದೇಶದಲ್ಲಿ ಶಿಶು ಮತ್ತು ಮಕ್ಕಳ ಸಾವಿಗೆ ಪ್ರಮುಖ ಕಾರಣದಲ್ಲಿ ಅತಿಸಾರವೂ ಒಂದಾಗಿದೆ.
ವಿಶ್ವ ಆರೋಗ್ಯ ಸಂಘಟನೆ ಪ್ರಕಾರ, ಐದು ವರ್ಷದ ಶಿಶುಗಳ ಸಾವಿನ ಪ್ರಮಾಣದಲ್ಲಿ ಎರಡನೇ ಪ್ರಮುಖ ಕಾರಣ ಅತಿಸಾರ ಆಗಿದೆ. ವಿಶ್ವ ಒಆರ್ಎಸ್ ದಿನದ ಪ್ರಮುಖ ಉದ್ದೇಶ ಕೇವಲ ಅತಿಸಾರದ ಪ್ರಕರಣದಲ್ಲಿ ಮಾತ್ರ ಒಆರ್ಎಸ್ ಮಹತ್ವ ನೀಡದೇ, ಇದನ್ನು ನೀರಿನಿಂದ ನಿರ್ಜಲೀಕರಣಗೊಂಡವರಿಗೂ ಇದು ಅವಶ್ಯಕವಾಗಿದೆ ಎಂದು ಸಾರಿ ಹೇಳುವುದಾಗಿದೆ.
ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಪ್ರಕಾರ, ಒಆರ್ಎಸ್ ಎಂದರೆ ಓರಲ್ ರಿಹೈಡ್ರೇಷನ್ ಸಲ್ಯೂಷನ್/ ಸಾಲ್ಟ್. ಇದನ್ನು ದೇಹದಲ್ಲಿ ಉಂಟಾಗುವ ಎಲೆಕ್ಟ್ರೊಲೈಟ್ ಕೊರತೆ ನಿವಾರಣೆಗೆ ಬಳಕೆ ಮಾಡಲಾಗುವುದು. ಇದು ಜನರಲ್ಲಿ ಆಗುವ ಅತಿಸಾರಕ್ಕೆ ಕಡಿಮೆ ವೆಚ್ಚದಲ್ಲಿ ನೀಡುವ ಚಿಕಿತ್ಸೆಯಾಗಿದೆ. ಮಕ್ಕಳಲ್ಲಿ ವಾಂತಿ ಮತ್ತು ಅತಿಸಾರ ಉಂಟಾದಾಗ ಒಆರ್ಎಸ್ ಮಿಕ್ಸ್ ಅನ್ನು ಶುದ್ದ ಅಥವಾ ಬಿಸಿ ನೀರಿಗೆ ಹಾಕಿ ನೀಡುವುದರಿಂದ ದೇಹದಲ್ಲಿನ ನೀರಿನ ಪ್ರಮಾಣದ ಸ್ಥಿರತೆ ಕಾಪಾಡಿಕೊಳ್ಳಬಹುದು. ಒಆರ್ಎಸ್ ಸಲ್ಯೂಷನ್, ದೇಹದಲ್ಲಿ ಸೋಡಿಯಂ ಜೊತೆಗೆ ಗ್ಲುಕೋಸ್ ಅನ್ನು ಹೆಚ್ಚಿಸಿ, ದೇಹವನ್ನು ರಕ್ಷಿಸುತ್ತದೆ.
ನಿರ್ಜಲೀಕರಣದಿಂದ ಸಾವು: ಒಆರ್ಎಸ್ ಅತಿಸಾರ ಮತ್ತು ನಿರ್ಜಲೀಕರಣಕ್ಕೆ ಉತ್ತಮ ಚಿಕಿತ್ಸಾಕ ಪರಿಣಾಮವಾಗಿದೆ. ಇದು ಮೂರು ರೀತಿಯ ಉಪ್ಪನ್ನು ಹೊಂದಿರುತ್ತದೆ. ಅವು ಎಂದರೆ ಸೋಡಿಯಂ ಕ್ಲೋರಿಯಡ್ ಅಥವಾ ಕಾಮನ್ ಉಪ್ಪು, ಟ್ರಿಸೊಡಿಯಂ ಸಿಟ್ರೆಟ್ ಮತ್ತು ಪೊಟಾಶಿಯಂ ಕ್ಲೊರೈಡ್ ಇರುತ್ತದೆ. ಅತಿಸಾರದಿಂದ ಬಳಲುವ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಒಆರ್ಎಸ್ ಅಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪರಿಗಣಿಸಿದೆ. ಸಂಶೋಧನೆ ಪ್ರಕಾರ, ಪ್ರತಿ ವರ್ಷ ಭಾರತದ 15 ಲಕ್ಷ ಜನರು ನಿರ್ಜಲೀಕರಣದಿಂದ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರೆಲ್ಲರ ರಕ್ಷಣೆ ಬರುವುದು ಇದೇ ಓಆರ್ಎಸ್.
ಒಆರ್ಎಸ್ ಪ್ಯಾಕೆಟ್ಗಳು ಎಲ್ಲ ಆಸ್ಪತ್ರೆ ಮತ್ತು ಫಾರ್ಮಸಿಗಳಲ್ಲಿ ಲಭ್ಯವಿದೆ. ತುರ್ತು ಪರಿಸ್ಥಿತಿಯಲ್ಲಿ ಒಆರ್ಎಸ್ ಪ್ಯಾಕೆಟ್ ಲಭ್ಯವಿಲ್ಲ ಎಂದರೆ, ಮನೆಯಲ್ಲಿಯೇ ಇದನ್ನು ತಯಾರಿಸಬಹುದು. 30 ಗ್ರಾಂ ಅಥವಾ 6 ಟೀ ಸ್ಪೂನ್ ಸಕ್ಕರೆ, ಅರ್ಧ ಟೀ ಸ್ಪೂನ್ ಉಪ್ಪು ಅನ್ನು ಒಂದು ಲೀಟರ್ ಶುದ್ದ ನೀಋಇಗೆ ಬೆರಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಸಲ್ಯೂಷನ್ ಅನ್ನು ಮಕ್ಕಳಿಗೆ ಮಧ್ಯ ಮಧ್ಯೆ ನೀಡುತ್ತಿರಿ.
ಈ ರೀತಿ ನೀಡಿ: ಎರಡು ವರ್ಷದ ಕೆಳಗಿನ ಮಕ್ಕಳಿಗೆ ಅತಿಸಾರದ ಸಮಯದಲ್ಲಿ ದಿನದಕ್ಕೆ 60 ರಿಂದ 125 ಎಂಎಲ್ ಒಆರ್ಎಸ್ ಅನ್ನು ನೀಡಬೇಕು. ಎರಡು ವರ್ಷದ ಮೇಲ್ಪಟ್ಟ ಮಕ್ಕಳಿಗೆ 250 ಮಿಲಿ ಲೀ ನೀಡಬೇಕು. 12 ಮತ್ತು ಅದಕ್ಕಿಂತ ಮೇಲಿನ ಮಕ್ಕಳಿಗೆ 250 ಎಂಎಲ್ನಿಂದ 400 ಎಮ್ಎಲ್ ವರೆಗೆ ನೀಡಬೇಕು. ಒಆರ್ಎಸ್ ನೀಡುವ ಮುನ್ನ ಈ ಅಂಶ ಗಮನದಲ್ಲಿರಲಿ.
- ಅತಿಸಾರ ಸಮಯದಲ್ಲಿ ಪ್ರತಿ ಬಾರಿ ಭೇದಿಯಾದಾಗ 50ರಿಂದ 100 ಎಂಎಲ್ ಡೋಸ್ನ ಒಆರ್ಎಸ್ ನೀಡಬೇಕು.
- ಹೊಟ್ಟೆ ಕೆಟ್ಟಾಗ ಅಥವಾ ವಾಂತಿಯಾದಾಗ ಇದನ್ನು ದೊಡ್ಡ ಪ್ರಮಾಣದಲ್ಲಿ ಒಟ್ಟಿಗೆ ನೀಡಬೇಕು. ಒಆರ್ಎಸ್ ಅನ್ನು ದೊಡ್ಡ ಗ್ಲಾಸ್ ಬದಲು ಸಣ್ಣ ಪ್ರಮಾಣದಲ್ಲಿ ನೀಡಬೇಕು.
- ಜ್ವರ, ಮೂತ್ರ ಕಡಿಮೆ ಅಥವಾ ಹೊಟ್ಟೆ ಕೆಟ್ಟಾಗ ತಕ್ಷಣಕ್ಕೆ ವೈದ್ಯರ ಭೇಟಿಯಾಗಿದೆ.
- ಒಆರ್ಎಸ್ ರುಚಿ ಹಿಡಿಸದೇ ಇದ್ದರೆ, ಅದರ ಬೇರೆ ಫ್ಲೆವರ್ ಅನ್ನು ಬಳಕೆ ಮಾಡಿ. ಆದರೆ, ಇದರ ಫಾರ್ಮೂಲಾ ವಿಶ್ವ ಆರೋಗ್ಯ ಸಂಘಟನೆ ಅನುಸಾರದಂತೆ ಇರುವುದು ಅವಶ್ಯ.
- ಮಕ್ಕಳು ಮಾತ್ರವಲ್ಲದೇ, ವಯಸ್ಕರು ಕೂಡ ನಿರ್ಜಲೀಕರಣಗೊಂಡಾಗ ಒಆರ್ಎಸ್ ಅನ್ನು ಬಳಕೆ ಮಾಡಬಹುದು. ಈ ಹಿನ್ನಲೆ ಒಆರ್ಎಸ್ ಎಲ್ಲಾ ಔಷಧಿ ಅಂಗಡಿಯಲ್ಲಿ ಲಭ್ಯವಿದೆ. ಇದು ಅನೇಕರ ಜೀವ ಉಳಿಸುವ ಸಹಾಯ ಮಾಡುತ್ತದೆ.
ಇದನ್ನೂ ಓದಿ: Rainy Day Care: ಮಳೆಗಾಲದ ಅವಶ್ಯಕತೆಗಳಿವು..; ಸೌಂದರ್ಯ, ಆರೈಕೆ ವಿಷಯದಲ್ಲಿ ಬೇಡ ರಾಜಿ