ETV Bharat / sukhibhava

ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಋತುಚಕ್ರದ ಬಗ್ಗೆ ಮುಜುಗರ ಬೇಡ, ಶುಚಿತ್ವ ಇರಲಿ

ವಿಜ್ಞಾನ ತಂತ್ರಜ್ಞಾನ ವಿಷಯದಲ್ಲಿ ಜಗತ್ತು ಅಭಿವೃದ್ಧಿ ಕಂಡರೂ ಮಹಿಳೆಯರ ನೈಸರ್ಗಿಕವಾದ ಋತುಚಕ್ರದ ಕಾಳಜಿ, ಶುಚಿತ್ವದ ಬಗ್ಗೆ ಅರಿವಿನ ಕೊರತೆ ಹೊಂದಿದೆ.

author img

By

Published : May 25, 2023, 2:31 PM IST

World Menstrual Hygiene Day 2023: Don't be embarrassed about menstruation, be clean

ಬೆಂಗಳೂರು: ತಂತ್ರಜ್ಞಾನದಲ್ಲಿ ದಾಪುಗಾಲು ಇಡುತ್ತಿರುವ ನಾವು ಇಂದಿಗೂ ಮಹಿಳೆಯರ ಋತುಚಕ್ರದ ಕಟ್ಟುಪಾಡಿಗೆ ಒಳಗಾಗಿದ್ದೇವೆ. ಈ ಬಗ್ಗೆ ಇಂದಿಗೂ ಇದನ್ನು ದೇಹದ ನೈಸರ್ಗಿಕ ಚಟುವಟಿಕೆ ಎಂಬುದನ್ನು ಮರೆತು ಕಳಂಕ ಎಂಬ ರೀತಿಯಲ್ಲಿ ಕಾಣುತ್ತಿದ್ದೇವೆ. ಜಗತ್ತಿನ ಅನೇಕ ಅಬಿವೃದ್ಧಿಶೀಲ ರಾಷ್ಟ್ರಗಳು ಈ ಮನೋಭಾವದಿಂದ ಹೊರ ಬಂದಿಲ್ಲ ಎಂಬುದು ದುಃಖದ ಸಂಗತಿ.

ಸಾಂಪ್ರದಾಯಿಕ ಮನಸ್ಥಿತಿ ಹೊಂದಿರುವ ಪುರುಷ ಮತ್ತು ಮಹಿಳೆಯರಿಗೆ ಈ ವಿಚಾರದ ಕುರಿತು ಸಾರ್ವಜನಿಕವಾಗಿ ಮಾತನಾಡುವುದು ದೊಡ್ಡ ಕಷ್ಟವಾಗಿದೆ. ಜೊತೆಗೆ ಈ ಋತುಚಕ್ರದ ಶುಚಿತ್ವಕ್ಕೆ ಕಾಳಜಿ ಬಗ್ಗೆ ನಿರ್ಲಕ್ಷ್ಯ ಹೊಂದಲಾಗಿದೆ. ಈ ಹಳೆಯ ಚಿಂತನೆಗಳಲ್ಲಿ ಬದಲಾವಣೆ ತಂದು, ಜನರಿಗೆ ಈ ಋತುಚಕ್ರದ ವಿಚಾರ ಕುರಿತು ಸರಿಯಾದ ಮಾಹಿತಿ ಮತ್ತು ಅರಿವು ಮೂಡಿಸುವ ಪ್ರಯತ್ನವಾಗಬೇಕಿದೆ. ಇದೇ ಕಾರಣಕ್ಕೆ ಮೇ 28ನ್ನು ವಿಶ್ವ ಋತುಚಕ್ರ ನೈರ್ಮಲ್ಯ ದಿನವಾಗಿ ಪರಿಗಣಿಸಲಾಗಿದೆ.

ವಿಶ್ವ ಋತುಚಕದ್ರ ನೈರ್ಮಲ್ಯ ದಿನದ ಮೂಲಕ ಮಹಿಳೆಯರು, ಯುವತಿಯರಿಗೆ ಋತು ಚಕ್ರದ ನೈರ್ಮಲ್ಯ ಮತ್ತು ಸುರಕ್ಷತೆ ಬಗ್ಗೆ ತಿಳಿ ಹೇಳುವ ಪ್ರಯತ್ನ ನಡೆಸಲಾಗುವುದು. ಇದು ಅವರ ಉತ್ತಮ ಆರೋಗ್ಯ ಹೊಂದಲು ಅಗತ್ಯವಾಗಿದೆ. 2013 ರಲ್ಲಿ ವಾಷ್​ ಯುನೈಟೆಡ್​ ಎಂಬ ಜರ್ಮನ್​ ಮೂಲದ ಎನ್​ಜಿಒವೊಂದು ಈ ದಿನದ ಸ್ಥಾಪನೆ ಮುಂದಾಯಿತು. ಮೊದಲ ಬಾರಿಗೆ ಮೇ 28 2014ರಂದು ಈ ದಿನವನ್ನು ಆಚರಣೆಗೆ ತರಲಾಯಿತು. 2023 ರಲ್ಲಿ ಅಂದರೆ ಈ ವರ್ಷ ಈ ವಿಶ್ವ ಋತುಚಕ್ರ ನೈರ್ಮಲ್ಯ ದಿನವನ್ನು '2030 ರ ವೇಳೆಗೆ ಋತುಚಕ್ರವು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವುದು' ಎಂಬ ಘೋಷವಾಕ್ಯದ ಮೂಲಕ ಆಚರಣೆ ಮಾಡಲಾಗುತ್ತಿದೆ.

ಇನ್ನು 28 ನೇ ದಿನಾಂಕವನ್ನೇ ವಿಶ್ವ ಋತುಚಕ್ರ ನೈರ್ಮಲ್ಯ ದಿನಕ್ಕೆ ಆರಿಸಲಾಯಿತು ಎಂಬುದರ ಬಗ್ಗೆ ಕೂಡ ಒಂದು ಕುತೂಹಲದ ಸಂಗತಿ ಇದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಈ ಋತುಚಕ್ರದ ಅವಧಿಯನ್ನು 28 ದಿನಗಳಿಗೆ ಪ್ರತಿ ತಿಂಗಳು ಲೆಕ್ಕ ಹಾಕಲಾಗುವುದು. ಈ ಹಿನ್ನಲೆ 28ನೇ ಸಂಖ್ಯೆಗೂ ಇದಕ್ಕೂ ವಿಶೇಷ ಸಂಬಂಧವಿದೆ. ಇನ್ನು ಮಹಿಳೆಯರ ಋತುಚಕ್ರದ ದಿನಗಳಲ್ಲಿ ನೈರ್ಮಲ್ಯದ ಕೊರತೆಗಳು ಕೂಡ ಕಾಡುವುದರಿಂದ ಅನೇಕ ಗಂಭೀರ ಆರೋಗ್ಯ ಸಮಸ್ಯೆಗೆ ಕೂಡ ಕಾರಣವಾಗುತ್ತದೆ. ಈ ಹಿನ್ನಲೆ ಅವರಿಗೆ ಋತುಚಕ್ರದ ಸಮಯದ ನೈರ್ಮಲ್ಯ ಕುರಿತು ಅರಿವು ಮೂಡಿಸುವ ಯತ್ನ ಆಗಬೇಕಿದೆ. ಜೊತೆಗೆ ಅವರಿಗೆ ಉತ್ತಮ ಋತುಚಕ್ರದ ನೈರ್ಮಲ್ಯ ಉತ್ಪನ್ನಗಳನ್ನು ಬಳಕೆ ಹೆಚ್ಚಿಸುವ ಮತ್ತು ನೈರ್ಮಲ್ಯದ ಸೌಲಭ್ಯವನ್ನು ಅಭಿವೃದ್ಧಿ ಮಾಡುವ ಕಾರ್ಯ ನಡೆಸಬೇಕಿದೆ.

ಈ ದಿನದಂದು ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಈ ಋತುಚಕ್ರದ ಬಗ್ಗೆ ಇರುವ ಮೌನ ಮುರಿದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಜೊತೆಗೆ ಆರೋಗ್ಯ ಮತ್ತು ನೈರ್ಮಲ್ಯದ ವಿಷಯದ ಸುತ್ತಲಿನ ನಕಾರಾತ್ಮಕ ಸಾಮಾಜಿಕ ಕಟ್ಟುಪಾಡುಗಳಲ್ಲಿ ಬದಲಾವಣೆಯನ್ನು ತರಲು ಮುಂದಾಗಬೇಕಿದೆ. ವಿವಿಧ ಸಂಘಟನೆಗಳು, ಸಾಮಾಜಿಕ ಸಂಸ್ಥೆಗಳು ಈ ಕುರಿತು ಮಹಿಳೆಯರು ಮತ್ತು ಯುವತಿಯರಿಗೆ ಮಾತ್ರವಲ್ಲದೇ, ಪುರುಷರಿಗೂ ಅರಿವು ಮೂಡಿಸುವ ಯತ್ನ ನಡೆಸಬೇಕಿದೆ.

ಇದನ್ನೂ ಓದಿ: ಋತುಚಕ್ರದ ಸಮಸ್ಯೆಗೆ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ; ಸಮಸ್ಯೆ ಕಾರಣವಾದಿತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.