ETV Bharat / sukhibhava

ವಿಶ್ವ ಶ್ರವಣ ದಿನ: ಹುಟ್ಟು ಕಿವುಡುತನದ ಬಗ್ಗೆ ಬೇಕಿದೆ ಜಾಗೃತಿ.. - ಓಎಇ ಪರೀಕ್ಷೆ ಕಡ್ಡಾಯ

ವಿಶ್ವ ಆರೋಗ್ಯ ಸಂಸ್ಥೆ ಕಿವುಡುತನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್​ 3ರಂದು ವಿಶ್ವ ಶ್ರವಣ ದಿನವನ್ನಾಗಿ ಘೋಷಣೆ ಮಾಡಿದೆ.

World Hearing Day
ವಿಶ್ವ ಶ್ರವಣ ದಿನ
author img

By

Published : Mar 3, 2023, 8:19 PM IST

ಮನುಷ್ಯನ ದೇಹದಲ್ಲಿ ಯಾವುದೇ ಒಂದು ಅಂಗ ಕೆಲಸ ಮಾಡದಿದ್ದರೂ ಆತ ವಿಕಲಾಂಗ. ದೇಹದ ಅಂಗಗಳು ಸರಿಯಾಗಿ ಕೆಲಸವುದು ಎಷ್ಟು ಮುಖ್ಯ ಎನ್ನುವುದು ಅದು ಊನವಾಗಿದ್ದಾಗಲೇ ಅರಿವಾಗೋದು. ಮಾರ್ಚ್​ 3 ಅಂದರೆ ವಿಶ್ವ ಶ್ರವಣ ದಿನ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಾದ್ಯಂತ ಕಿವುಡುತನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್​ 3 ರಂದು ವಿಶ್ವ ಶ್ರವಣ ದಿನವನ್ನಾಗಿ ಘೋಷಿಸಿದೆ.

ಒಂದು ವಯಸ್ಕರಲ್ಲಿ ವಯಸ್ಸಾಗುತ್ತಿದ್ದಂತೆ ಕಿವುಡುತನ ಅಂದರೆ ಕಿವಿ ಕೇಳಿಸದೇ ಇರುವ ಸಮಸ್ಯೆ ಹೆಚ್ಚಾಗಬಹುದು. ಇನ್ನೊಂದು ಹುಟ್ಟು ಕಿವುಡುತನ ಅಂದರೆ ಮಗು ಹುಟ್ಟುತ್ತಲೇ ಶ್ರವಣಶಕ್ತಿಯನ್ನು ಕಳೆದುಕೊಂಡೇ ಭೂಮಿಗೆ ಬರುತ್ತದೆ. ಹುಟ್ಟು ಕಿವುಡತನವನ್ನು ಮಕ್ಕಳಲ್ಲಿ ಕಂಡು ಹಿಡಿಯುವುದು ಪೋಷಕರ ಬಹುಮುಖ್ಯ ಕರ್ತವ್ಯ. ಯಾಕೆಂದರೆ ಮಕ್ಕಳ ಲಾಲನೆ ಪಾಲನೆಯ ಖುಷಿಯಲ್ಲಿ ಶ್ರವಣ ಸಮಸ್ಯೆಯ ಬಗ್ಗೆ ಅರಿವಾಗೋದು ಕಡಿಮೆ. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಹಲವಾರು ಶಸ್ತ್ರಚಿಕಿತ್ಸೆಗಳು ಬಂದಿವೆ. ಚಿಕಿತ್ಸೆ ಮೂಲಕ ಮಕ್ಕಳ ಶ್ರವಣ ಸಮಸ್ಯೆಯನ್ನು ಬಗೆಹರಿಸುವ ಸೌಲಭ್ಯ ನಮ್ಮಲ್ಲಿದೆ.

ಇಂದು ವಿಶ್ವ ಶ್ರವ ದಿನದ ಹಿನ್ನೆಲೆ, ನವಜಾತ ಶಿಶುಗಳಲ್ಲಿ, ಮಕ್ಕಳಲ್ಲಿ ಶ್ರವಣದೋಷವಿದ್ದರೆ ಅವುಗಳ ಲಕ್ಷಣಗಳೇನು? ಆಧುನಿತ ವೈದ್ಯಕೀಯ ತಂತ್ರಜ್ಞಾನದಿಂದ ಅವುಗಳನ್ನು ಯಾವ ರೀತಿ ಗುಣಪಡಿಸಬಹುದು ಎಂಬುದರ ವಿವರವಾದ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ.ಮಗು ಹುಟ್ಟಿದ ತಕ್ಷಣ ಮಗುವಿಗೆ ಶ್ರವಣ ದೋಷವಿದೆಯೇ ಎಂಬುದು ಸ್ವತಃ ತಾಯಿಗೂ ಗೊತ್ತಾಗುವುದಿಲ್ಲ. ಹುಟ್ಟು ಕಿವುಡುತನದ ಕಲ್ಪನೆಯೂ ಅವರಿಗಿರುವುದಿಲ್ಲ. ಇದರಲ್ಲಿ ಕೆಲವೊಂದು ಮಕ್ಕಳಿಗೆ ಸಂಪೂರ್ಣ ಕಿವುಡುತನವಿದ್ದರೆ ಇನ್ನೂ ಕೆಲವು ಮಕ್ಕಳಿಗೆ ಶ್ರವಣಶಕ್ತಿ ಕಡಿಮೆ ಇರುತ್ತದೆ. ಮಕ್ಕಳಲ್ಲಿ ಈ ಸಮಸ್ಯೆ ಇರುವುದನ್ನು ವೈದ್ಯರು ಮತ್ತೆ ಹಚ್ಚಿ ಹೇಳಿದರೂ ಹೆಚ್ಚಿನ ಪೋಷಕರು ಆ ಮಸ್ಯೆಗೆ ಚಿಕಿತ್ಸೆ ಕೊಡಿಸಲು ಆಸಕ್ತರಾಗಿರುತ್ತಾರೆ.

ಕುಕ್ಕರ್​ ವಿಶಲ್​ಗೆ ಮಗುವಿನ ಪ್ರತಿಕ್ರಿಯೆ ಇಲ್ಲವೇ.. ಹುಷಾರು: ಹುಟ್ಟು ಕಿವುಡುತನದ ಮೊದಲ ಹಾಗೂ ದೊಡ್ಡ ಲಕ್ಷಣವೆಂದರೆ ನವಜಾತ ಶಿಶುಗಳು ಸಾಮಾನ್ಯವಾಗಿ ಕರೆ, ಬಾಗಿಲು ಶಬ್ಧಕ್ಕೆ ಪ್ರತಿಕ್ರಿಯಿಸುತ್ತಾರೆ. ಕುಕ್ಕರ್​ ವಿಶಲ್​ ಶಬ್ಧಕ್ಕೆ ಭಯಭೀತರಾಗುತ್ತಾರೆ. ಆದರೆ, ಕಿವುಡುತನವಿದ್ದರೆ ಕುಕ್ಕರ್​ನ ವಿಶಲ್​ ಶಬ್ಧಕ್ಕೂ ಪ್ರತಿಕ್ರಿಯಿಸದೇ ನೀರಸವಾಗಿರುತ್ತಾರೆ. ಮಕ್ಕಳು ಮಾತನಾಡುವುದಕ್ಕೆ ಕಲಿಯಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಅದು ಪ್ರಕೃತಿ ನಿಯಮ. ಸುತ್ತಮುತ್ತಲಿನ ವಸ್ತುಗಳಿಗೆ, ವ್ಯಕ್ತಿಗಳಿಗೆ, ಘಟನೆಗಳಿಗೆ ಪ್ರತಿಕ್ರಿಯಿಸುತ್ತಾ ಮಾತನಾಡಲು ಪ್ರಾರಂಭಿಸುತ್ತಾರೆ. ಆದರೆ, ಕೇಳುವುದು ಹುಟ್ಟಿನಿಂದಲೇ ಪ್ರಾರಂಭವಾಗಿರುತ್ತದೆ. ಹಾಗಾಗಿ ನವಜಾತ ಶಿಶುವಾಗಿರುವಾಗಲೇ ಕಿವುಡುತನದ ಸಮಸ್ಯೆ ಇದೆಯೇ ಎಂಬುದನ್ನು ಪತ್ತೆ ಹಚ್ಚುವುದು ಮುಖ್ಯ. ಯಾಕೆಂದರೆ ಮಕ್ಕಳಿಗೆ 5 ವರ್ಷ ಕಳೆದರೆ ಈ ಶ್ರವಣಶಕ್ತಿಯನ್ನು ಮರಳಿ ತರುವುದು ಅಸಾಧ್ಯ. ಆದ್ದರಿಂದ ಪ್ರತಿ ನವಜಾತ ಶಿಶುವನ್ನು ಓಎಇ (Otoacoustic Emissions test) ಪರೀಕ್ಷೆಗೆ ಒಳಪಡಿಸುವುದು ಬಹಳ ಮುಖ್ಯ.

ಓಎಇ ಪರೀಕ್ಷೆ ಕಡ್ಡಾಯಗೊಳಿಸಿರುವ ರಾಜಸ್ಥಾನ ಮತ್ತು ಕೇರಳ ಸರ್ಕಾರ: ಜನ್ಮಜಾತ ಮಕ್ಕಳಿಗೆ ಸಂಬಂಧಿಸಿದ ಈ ಕಿವುಡುತನದ ಬಗ್ಗೆ ರಾಜಸ್ಥಾನ ಸರ್ಕಾರ ಮತ್ತು ಕೇರಳ ಸರ್ಕಾರ ತೀವ್ರ ಕಾಳಜಿ ತೋರಿಸಿದೆ. ಈ ರಾಜ್ಯಗಳಲ್ಲಿ ಜನಿಸಿದ ಪ್ರತಿ ಮಗುವಿನ OAE ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಏಕೆಂದರೆ ಹುಟ್ಟಿನಿಂದಲೇ, ಈ ಸಣ್ಣ ಪರೀಕ್ಷೆಯು ಮಗುವಿನ ಕಿವಿಯ ಕೇಳುವ ಸಾಮರ್ಥ್ಯವನ್ನು ಕಂಡು ಹಿಡಿಯುತ್ತದೆ. ಕೇಳುವ ಸಾಮರ್ಥ್ಯದಲ್ಲಿ ಯಾವುದೇ ಕೊರತೆಯಿದೆ ಅದನ್ನು ಗುಣಪಡಿಸಬಹುದು ಎಂಬುದು ಅವರ ಆಶಯ.

ಉತ್ತರಾಖಂಡದ ಡೆಹ್ರಾಡೂನ್​ ಮ್ಯಾಕ್ಸ್​ ಆಸ್ಪತ್ರೆಯ ವೈದ್ಯ ಇರಾಮ್​ ಖಾನ್​ ಎನ್ನುವವರು ತಮ್ಮ ಆಸ್ಪತ್ರೆಯಲ್ಲಿ ನಜಿಸಿದ ಎಲ್ಲಾ ನವಜಾತ ಶಿಶುಗಳಿಗೆ ಓಎಇ ಪರೀಕ್ಷೆ ನಡೆಸುತ್ತಾರೆ. ಆದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪರೀಕ್ಷೆಯನ್ನು ನಡೆಸಬೇಕು ಎನ್ನುವ ಯಾವುದೇ ಮಾರ್ಗಸೂಚಿ ಇಲ್ಲ. ತಮ್ಮ ಸ್ವಯಂ ಕಾಳಜಿಯಿಂದ ಇರಾಮ್​ ಖಾನ್​ ಈ ಪರೀಕ್ಷೆ ನಡೆಸುತ್ತಿದ್ದಾರೆ. ಉಳಿದ ಆಸ್ಪತ್ರೆಗಳನ್ನೂ ಹುಟ್ಟಿ ಪ್ರತಿ ನವಜಾತ ಶಿಸುಗಳಿಗೂ ಈ ಪರೀಕ್ಷೆ ನಡೆಸುವುದು ಮುಖ್ಯ ಎಂದು ಅವರೇ ಸಲಹೆಯನ್ನೂ ನೀಡುತ್ತಾರೆ. ಆದ್ದರಿಂದ ಹುಟ್ಟು ಕಿವುಡುತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಅದರಿಂದ ಮಗು ಬಳಲುತ್ತಿರುವುದು ಶೀಘ್ರವೇ ಪತ್ತೆ ಹಚ್ಚಿದಲ್ಲಿ ಮಗುವಿನ ಭವಿಷ್ಯವನ್ನೇ ಬದಲಾಯಿಸಬಹುದು.

ಮಗುವಿನ ಕಿವುಡುತನಕ್ಕೆ 5 ವರ್ಷದ ಒಳಗೆ ಮಾತ್ರ ಚಿಕಿತ್ಸೆ ಸಾಧ್ಯ: ವೈದ್ಯಕೀಯ ವಿಜ್ಞಾನ ಮುಂದುವರಿದಿದ್ದು, ಮಕ್ಕಳಲ್ಲಿ ಹುಟ್ಟು ಕಿವುಡುತನವಿದ್ದರೆ ಅದನ್ನು ಕಾಕ್ಲಿಯರ್​ ಇಂಪ್ಲಾಂಟ್​ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಆದರೆ, ಈ ಚಿಕಿತ್ಸೆಯನ್ನು ಮಕ್ಕಳಿಗೆ ಐದು ವರ್ಷ ತುಂಬುವುದರೊಳಗೆ ಮಾಡಬೇಕಾಗುತ್ತದೆ. ಈ ಹಿಂದೆ ಕಾಕ್ಲಿಯರ್​ ಇಂಪ್ಲಾಂಟ್​ ಶಸ್ತ್ರಚಿಕಿತ್ಸೆಯನ್ನು 3 ವರ್ಷದ ಒಳಗೆ ನಡೆಸಬೇಕಿತ್ತು. ಆದರೆ, ಕೇಂದ್ರ ಸರ್ಕಾರ 5 ವರ್ಷದ ವರೆಗೆ ನಡೆಸಲು ಅವಕಾಶವನ್ನು ನೀಡಿದೆ ಎನ್ನುತ್ತಾರೆ ಇರಾಮ್​.

ದುಬಾರಿ ವೆಚ್ಚದ ಕಾಕ್ಲಿಯರ್​ ಇಂಪ್ಲಾಂಟ್​ ಶಸ್ತ್ರಚಿಕಿತ್ಸೆ: ಕಾಕ್ಲಿಯರ್​ ಇಂಪ್ಲಾಂಟ್​ ಶಸ್ತ್ರಚಿಕಿತ್ಸೆ ವೆಚ್ಚ 6 ಲಕ್ಷಕ್ಕಿಂತ ಹೆಚ್ಚು. ಆದರೆ ಕೇಂದ್ರ ಸರ್ಕಾರದ ಎಡಿಐಪಿ ಯೋಜನೆಯಡಿಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಬಡ ಮಕ್ಕಳಿಗೆ ಉಚಿತವಾಗಿ ಮಾಡಬಹುದು. ಕೆಲವು ಎನ್​ಜಿಓಗಳು ಮಕ್ಕಳಿಗೆ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತವೆ ಎಂದು ಡಾ. ಖಾನ್ ಹೇಳುತ್ತಾರೆ.

ಖಾಸಗಿ ಸಂಸ್ಥೆಗಳೊಂದಿಗೆ ಸರ್ಕಾರದ ಸಹಕಾರವೂ ಅಗತ್ಯ: ಈ ರೋಗದ ಬಗ್ಗೆ, ರೋಗಲಕ್ಷಣಗಳ ಬಗ್ಗೆ, ಪರೀಕ್ಷೆ ಮಅಡಿ ಪತ್ತೆ ಹಚ್ಚಲಾಗುತ್ತದೆ ಎನ್ನುವುದರ ಬಗ್ಗೆ ಮತ್ತು ಚಿಕಿತ್ಸೆಯ ಬಗ್ಗೆ ದೇಶದ ಹಲವು ರಾಜ್ಯಗಳ ಜನರಿಗೆ ಅರಿವು ಇಲ್ಲ. ಹಾಗಾಗಿ ಅದೆಷ್ಟೋ ಕುಟುಂಬಗಳು ಮಕ್ಕಳಿಗೆ ಕಿವುಡುತನ ಇರುವುದರ ಬಗ್ಗೆ ಅರಿವಿಲ್ಲದೇ ಚಿಕಿತ್ಸೆ ಕೊಡಿಸುವುದಿಲ್ಲ. 5 ವರ್ಷಗಳ ನಂತರ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಆ ಹೊತ್ತಿಗೆ ತಡವಾಗಿರುತ್ತದೆ. ಆದ್ದರಿಂದ, ಜನರು ಈ ರೋಗದ ಬಗ್ಗೆ ಜಾಗೃತರಾಗಬೇಕಿದೆ. ಡಾಕ್ಟರ್ ಇರಾಮ್ ಖಾನ್ ಅವರು ತಮ್ಮ ವೈಯಕ್ತಿಕ ಪ್ರಯತ್ನಗಳಿಂದ ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಒಎಇ ಪರೀಕ್ಷೆ ತುಂಬಾ ಅಗ್ಗವಾಗಿರುವುದು ಮಾತ್ರವಲ್ಲದೆ ಎಲ್ಲಿ ಬೇಕಾದರೂ ಮಾಡಿಸಬಹುದು.

ಶ್ರವಣಶಕ್ತಿ ಮೇಲೆ ಆಧುನಿಕ ಸಾಧನಗಳ ಪ್ರಭಾವ: ತಂತ್ರಜ್ಞಾನ ತುಂಬಿದ ಇಂದಿನ ಆಧುನಿಕ ಯುಗದಲ್ಲಿ ಅನೇಕ ಎಲೆಕ್ಟ್ರಾನಿಕ್ ಸಾಧನಗಳು ನಮ್ಮ ದಿನಚರಿಯಲ್ಲಿ ಮೊದಲಿಗಿಂತ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಂಡಿವೆ. ವಿಶೇಷವಾಗಿ ಬ್ಲೂಟೂತ್‌ನಂತಹ ಸಾಧನಗಳು ದಿನದ 24 ಗಂಟೆಯೂ ನಮ್ಮ ಕಿವಿಗೆ ಅಂಟಿಕೊಂಡಿರುತ್ತದೆ. ಸತತ ಹಲವಾರು ಗಂಟೆಗಳ ಕಾಲ ಅವುಗಳನ್ನು ನಮ್ಮ ಕಿವಿಯಲ್ಲಿ ಇಡುವುದು ಹಾನಿಕಾರಕವಾಗಿದೆ. ವಿಶೇಷವಾಗಿ ಆ ಸಾಧನವು ಬ್ಲೂಟೂತ್‌ಗೆ ಸಂಪರ್ಕ ಹೊಂದಿದ್ದರೆ, ವಿಕಿರಣವನ್ನು ಒಳಗೊಂಡಿರುವ ಪ್ರತಿಯೊಂದು ಸಾಧನವು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ ಎಂದು ಎಂಟ್ ಸ್ಪೆಷಲಿಸ್ಟ್ ಡಾ. ಇರಾಮ್ ಖಾನ್ ಹೇಳುತ್ತಾರೆ.

ಬ್ಲೂಟೂತ್ -ಶಕ್ತಿಯ ಹೆಡ್‌ಫೋನ್‌ಗಳು ಮತ್ತು ಇಯರ್‌ಬಡ್‌ಗಳು ನಮ್ಮ ದೇಹದೊಂದಿಗೆ ಬ್ಲೂಟೂತ್ ಮೂಲಕ ಮಾತ್ರ ಸಂಪರ್ಕದಲ್ಲಿರುತ್ತವೆ. ಮೊಬೈಲ್ ಫೋನ್ ಅನ್ನು ಹೆಚ್ಚು ಹೊತ್ತು ಕಿವಿಯಲ್ಲಿ ಇಟ್ಟುಕೊಳ್ಳುವುದು ನಮ್ಮ ಕಿವಿಗೆ ಹಾನಿಕಾರಕವಾಗಿದೆ. ಬ್ಲೂಟೂತ್‌ಗೆ ಸಂಬಂಧಿಸಿದ ಹೆಡ್‌ಫೋನ್‌ಗಳಿಗಿಂತ ನಮ್ಮ ಕಿವಿಯಿಂದ ಮೊಬೈಲ್‌ಗೆ ವೈರ್​ ಸಂಪರ್ಕ ಹೊಂದಿದ ಹೆಡ್‌ಫೋನ್‌ಗಳು ಉತ್ತಮವಾಗಿವೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ ಎನ್ನುತ್ತಾರೆ ಇರಾಮ್​.

ಇದನ್ನೂ ಓದಿ: ಮಧ್ಯ ಕರ್ನಾಟಕದಲ್ಲಿ‌ ಪ್ರಥಮ ಬಾರಿಗೆ ಯಶಸ್ವಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.