ETV Bharat / sukhibhava

ವಿಶ್ವ ಆರೋಗ್ಯ ದಿನ 2023: ಎಲ್ಲರಿಗೂ ಆರೋಗ್ಯ ಈ ವರ್ಷದ ಘೋಷವಾಕ್ಯ - ಆರೋಗ್ಯವೊಂದು ಇದ್ದರೆ ಏನಾದರೂ ಸಾಧಿಸಬಹುದು

ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷದಿಂದ ಪ್ರತಿ ವರ್ಷ ಏಪ್ರಿಲ್​ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಜಗತ್ತಿನ ಪ್ರತಿಯೊಬ್ಬರ ಆರೋಗ್ಯ ಕಾಳಜಿಗೆ ಒತ್ತು ನೀಡಲಾಗುತ್ತಿದೆ.

world-health-day-2023-health-for-all-is-this-years-slogan

author img

By

Published : Apr 7, 2023, 11:54 AM IST

ಬೆಂಗಳೂರು: ಆರೋಗ್ಯವೇ ಭಾಗ್ಯ ಎಂಬ ಮಾತು ಸರ್ವಕಾಲಿಕ ಸತ್ಯ. ಆರೋಗ್ಯವೊಂದಿದ್ದರೆ ಏನಾದರೂ ಸಾಧಿಸಬಹುದು. ಇದೇ ಕಾರಣಕ್ಕೆ ಪ್ರತಿಯೊಬ್ಬರು ಆರೋಗ್ಯಕ್ಕೆ ಒತ್ತು ನೀಡಬೇಕು. ಇದೇ ಕಾರಣಕ್ಕೆ ಏಪ್ರಿಲ್​ 7ರಂದು ಜಗತ್ತಿನಾದ್ಯಂತ ಜಾಗತಿಕ ಆರೋಗ್ಯ ದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮದ ಕಾಳಜಿ ಕುರಿತು ಅರಿವು ಮೂಡಿಸಲಾಗುವುದು.

1948ರಲ್ಲಿ ಸ್ಥಾಪನೆಯಾದ ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ಕಾಳಜಿಗೆ ಉತ್ತೇಜಿಸುವುದರ ಜೊತೆಗೆ ದುರ್ಬಲರಿಗೆ ಸೇವೆ ನೀಡಲು ಮತ್ತು ಜಗತ್ತನ್ನು ಆರೋಗ್ಯಯುತವಾಗಿ ಸುರಕ್ಷಿತವಾಗಿರಿಸುವ ಉದ್ದೇಶ ಹೊಂದಿದೆ. ಈ ಮೂಲಕ ಜಗತ್ತಿನ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಮತ್ತು ಜೀವನ ಶೈಲಿ ಹೊಂದುವಂತೆ ಒತ್ತು ನೀಡುತ್ತದೆ. 1950ರಲ್ಲಿ ಏಪ್ರಿಲ್​ 7ರಂದು ಮೊದಲ ಬಾರಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಈ ವೇಳೆ, ಆರೋಗ್ಯಯುತ ಜೀವನ ಮತ್ತು ಯೋಗಕ್ಷೇಮಕ್ಕೆ ಪ್ರೋತ್ಸಾಹಿಸಲಾಯಿತು.

ಜನರು ಉತ್ತಮ ಜೀವನ ಮಟ್ಟ ನಿರ್ವಹಿಸಲು ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಮಾಹಿತಿ ನೀಡುವ ಉದ್ದೇಶದಿಂದ ವಿಶ್ವ ಆರೋಗ್ಯ ದಿನ ಆಚರಿಸಲಾಗುವುದು. ಈ ದಿನ ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ದಿನವನ್ನು ಗುರುತಿಸುತ್ತದೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಜಾಗತಿಕ ಆರೋಗ್ಯ ಮತ್ತಯ ಯೋಗಕ್ಷೇಮದ ಪ್ರಚಾರ ಮಾಡುವ ಮೂಲಕ ಜಗತ್ತನ್ನು ಸೆಳೆಯುವುದಾಗಿದೆ. ಈ ದಿನ ಸಾರ್ವಜನಿಕ ಆರೋಗ್ಯ ಕುರಿತು ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು.

2023ರಲ್ಲಿ ವಿಶ್ವ ಆರೋಗ್ಯ ದಿನವನ್ನು ಎಲ್ಲರಿಗೂ ಆರೋಗ್ಯ ಎಂಬ ಘೋಷವಾಕ್ಯದ ಮೂಲಕ ಆಚರಿಸಲಾಗುತ್ತಿದೆ. ಆರೋಗ್ಯಕರ ಜೀವನದ ಮಹತ್ವದ ಕುರಿತು ಜನರಿಗೆ ಶಿಕ್ಷಣ ನೀಡಲು ವಿವಿಧ ಸಂಸ್ಥೆಗಳು ಶೈಕ್ಷಣಿಕ ಅಭಿಯಾನಗಳು ಮತ್ತು ಕಾರ್ಯಾಗಾರಗಳನ್ನು ನಡೆಸುತ್ತವೆ. ಆರೋಗ್ಯಕರ ಜೀವನ ಮತ್ತು ರೋಗಮುಕ್ತ ಸಮಾಜದ ಮಹತ್ವವನ್ನು ಜನರಿಗೆ ತಿಳಿಸಲು ಸರ್ಕಾರಿ ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣೆಗಳನ್ನು ನೀಡುತ್ತವೆ.

ವಿಶ್ವ ಆರೋಗ್ಯ ಸಂಸ್ಥೆಯ 75 ನೇ ವಾರ್ಷಿಕೋತ್ಸವದ ವರ್ಷವು ಕಳೆದ ಏಳು ದಶಕಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಿದ ಸಾರ್ವಜನಿಕ ಆರೋಗ್ಯದ ಯಶಸ್ಸನ್ನು ಹಿಂತಿರುಗಿ ನೋಡಲು ಒಂದು ಅವಕಾಶವಾಗಿದೆ. ಇಂದು ಮತ್ತು ನಾಳಿನ ಆರೋಗ್ಯ ಸವಾಲುಗಳನ್ನು ಎದುರಿಸಲು ಕ್ರಮವನ್ನು ಪ್ರೇರೇಪಿಸಲು ಇದು ಒಂದು ಅವಕಾಶವಾಗಿದೆ. ಇಂದು ನಾವು ಎದುರಿಸುತ್ತಿರುವ ಸವಾಲುಗಳು 1948 ರಲ್ಲಿದ್ದಕ್ಕಿಂತ ಬಹಳ ಭಿನ್ನವಾಗಿವೆ, ಆದರೆ ನಮ್ಮ ದೃಷ್ಟಿ ಬದಲಾಗದೆ ಉಳಿದಿದೆ. ಪ್ರತಿಯೊಬ್ಬರಿಗೆ ಅತ್ಯುನ್ನತ ಗುಣಮಟ್ಟದ ಆರೋಗ್ಯ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ

ವಿಶ್ವ ಆರೋಗ್ಯ ದಿನದ ನಿಮಿತ್ತ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ , ಜಗತ್ತನ್ನು ಆರೋಗ್ಯಕರವಾಗಿಸಲು ಶ್ರಮಿಸುತ್ತಿರುವ ಎಲ್ಲ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ದೇಶದ ಜನರಿಗೆ ಗುಣಮಟ್ಟದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೆಲಸ ಮಾಡುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಇದನ್ನೂ ಓದಿ: WHO ವಾರ್ನಿಂಗ್: ಹವಾಮಾನ ಬದಲಾವಣೆಯಿಂದ ಡೆಂಘೀ, ಚಿಕೂನ್‌ಗುನ್ಯಾ ಹೆಚ್ಚಳ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.