ETV Bharat / sukhibhava

World Environment Day: ಪ್ರತಿ ವರ್ಷ ಸಮುದ್ರ, ನದಿ, ಕೆರೆ ಸೇರುತ್ತಿದೆ 2 ಸಾವಿರ ಟ್ರಕ್​ ಲೋಡ್​ ಪ್ಲಾಸ್ಟಿಕ್​​ - World Environment Day

ವಿಶ್ವ ಪರಿಸರ ಆಚರಣೆಯ ಈ ದಿನದಂದು ಪ್ಲಾಸ್ಟಿಕ್​ ತ್ಯಾಜ್ಯ ಬಳಕೆ ಮುಕ್ತಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕಿದೆ. ಈ ಬಗ್ಗೆ ವಿಶ್ವ ಸಂಸ್ಥೆ ಕೂಡ ಒತ್ತಿ ಹೇಳಿದೆ.

World Environment Day 2023: Every year, 2 thousand truckloads of plastic enter seas, rivers and lakes.

author img

By

Published : Jun 5, 2023, 11:47 AM IST

ಬೆಂಗಳೂರು​: ವಿಶ್ವದಾದ್ಯಂತ ಒಮ್ಮೆ ಮಾತ್ರ ಬಳಕೆ ಮಾಡಿದ ಸುಮಾರು 400 ಮಿಲಿಯನ್​ ಟನ್​ ಪ್ಲಾಸ್ಟಿಕ್​ ಅನ್ನು ಅಂದರೆ 2000 ಪ್ಲಾಸ್ಟಿಕ್​ ಕಸದ ಟ್ರಕ್ ​ಲೋಡ್​ ಅನ್ನು ನಾವು ನೀರಿಗೆ ಸೇರಿಸುತ್ತಿದ್ದೇವೆ ಎಂದು ವಿಶ್ವ ಸಮಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರ್ರಸ್​ ತಿಳಿಸಿದ್ದಾರೆ. ವಿಶ್ವ ಪರಿಸರ ದಿನಚಾರಣೆ ಹಿನ್ನೆಲೆ ಅವರು ಪರಿಸರದ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ 2000 ಕಸದ ಟ್ರಕ್​ ರಾಶಿಗೆ ಸಮವಾದ ಪ್ಲಾಸ್ಟಿಕ್​ ಅನ್ನು ನಾವು ಸಮುದ್ರ, ನದಿ ಮತ್ತು ಕೆರೆಗಳಿಗೆ ಸೇರಿಸುತ್ತಿದ್ದೇವೆ. ನಾವು ತಿನ್ನುವ ಆಹಾರ, ಕುಡಿಯುವ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್​ಗಳು ಪತ್ತೆಯಾಗುತ್ತಿವೆ. ಅಷ್ಟೇ ಅಲ್ಲದೇ, ನಾವು ಉಸಿರಾಡುವ ಗಾಳಿಯಲ್ಲೀ ಇದೇ ಇದೆ. ಪ್ಲಾಸ್ಟಿಕ್​ ಅನ್ನು ಪಳೆಯುಳಿಕೆಯ ಇಂಧನಗಳಿಂದ ಮಾಡಲಾಗುತ್ತಿದೆ. ನಾವು ಹೆಚ್ಚು ಉತ್ಪಾದನೆ ಮಾಡಿದಂತೆ, ಹೆಚ್ಚು ಪಳೆಯುಳಿಕೆ ಇಂಧನವನ್ನು ನಾವು ಸುಡುತ್ತೇವೆ. ಇದರಿಂದ ಪರಿಸರದ ಬಿಕ್ಕಟ್ಟನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದರು.

ಪರಿಹಾರ ಇದೆ: ವಿಶ್ವಸಂಸ್ಥೆ ಮುಖ್ಯಸ್ಥರ ಪ್ರಕಾರ, ಕಳೆದ ವಾರ 130 ಕ್ಕೂ ಹೆಚ್ಚು ರಾಷ್ಟ್ರಗಳನ್ನು ಒಳಗೊಂಡ ಐದು ದಿನಗಳ ಸಭೆಗಳ ನಂತರ ಕಾನೂನುಬದ್ಧ ಒಪ್ಪಂದ ಸೇರಿದಂತೆ ಪರಿಹಾರಗಳು ಕೈಯಲ್ಲಿವೆ ಎಂದು ತಿಳಿಸಲಾಗಿದೆ. ಇದು ಭರವಸೆಯ ಮೊದಲ ಹೆಜ್ಜೆಯಾಗಿದೆ. ಆದರೆ ನಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಗುಟೆರ್ರಸ್ ಹೇಳಿದರು.

ಹೊಸ ವರದಿ ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (ಯುಎನ್​ಇಪಿ), ಪ್ಲಾಸ್ಟಿಕ್‌ನಿಂದ ಮರುಬಳಕೆ, ಮರುಬಳಕೆ ಮತ್ತು ಪಿವೋಟ್ ಮಾಡಲು ಕಾರ್ಯನಿರ್ವಹಿಸಿದರೆ, 2040 ರ ವೇಳೆಗೆ ಪ್ಲಾಸ್ಟಿಕ್ ಮಾಲಿನ್ಯವನ್ನು 80 ಪ್ರತಿಶತದಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನವು ತಿಳಿಸಿದೆ ಎಂದು ಗುಟೆರ್ರಸ್ ತಿಳಿಸಿದ್ದಾರೆ. ನಾವು ಒಟ್ಟಾಗಿ ಕಾರ್ಯ ನಿರ್ವಹಿಸಬೇಕಿದೆ. ಸರ್ಕಾರ, ಕಂಪನಿಗಳು ಮತ್ತು ಗ್ರಾಹಕರು ಸೇರಿದಂತೆ ನಮ್ಮ ಪ್ಲಾಸ್ಟಿಕ್​ ಬಳಕೆಯನ್ನು ಬಿಟ್ಟು, ಜಿರೋ ತ್ಯಾಜ್ಯಕ್ಕೆ ನಾವು ಮುಂದಾಬೇಕಿದೆ. ಈ ಮೂಲಕ ನಿಜವಾದ ಆರ್ಥಿಕತೆ ರೂಪಿಸಬೇಕಿದೆ. ಒಟ್ಟಾಗಿ ನಾವು ಶುಚಿಗೊಳಿಸಿ, ಆರೋಗ್ಯಯುತ ಮತ್ತು ಸುಸ್ಥಿರ ಭವಿಷ್ಯವನ್ನು ನಮಗಾಗಿ ರೂಪಿಸಬೇಕಿದೆ.

ಐಫೆಲ್​ ಟವರ್​ ಎತ್ತರದ ತ್ಯಾಜ್ಯ: ಪ್ಲಾಸ್ಟಿಕ್​ನಿಂದ ಆಗುವಂತಹ ಹಾನಿಗಳು ನಿಜಕ್ಕೂ ಮನುಕುಲಕ್ಕೆ ಬೆದರಿಕೆಯಂತಿದೆ. ಪ್ರತಿ ವರ್ಷ ಅಂದಾಜು 19-23 ಮಿಲಿಯನ್​ ಟನ್​ಗಳ ತ್ಯಾಜ್ಯ ವಾರ್ಷಿಕವಾಗಿ ಕೆರೆ, ನದಿ ಮತ್ತು ಸಮುದ್ರಕ್ಕೆ ಸೇರುತ್ತಿದೆ. ಇದರ ಎತ್ತರ ಲೆಕ್ಕ ಹಾಕಿದರೆ, 2,200 ಅಡಿ ಎತ್ತರದ ಐಫೆಲ್​ ಟವರ್​​ಗೆ ಸಮವಾಗಿದೆ. ಪ್ರತಿ ವರ್ಷ ಜಾಗತಿಕವಾಗಿ 400 ಮಿಲಿಯನ್​ ಟನ್​ ಪ್ಲಾಸ್ಟಿಕ್​ಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಏಕ ಬಳಕೆ ತ್ಯಾಜ್ಯವಾಗಿದೆ. ಇವುಗಳಲ್ಲಿ ಶೇ 10ರಷ್ಟು ಮಾತ್ರ ಮರುಬಳಕೆ ಆಗುತ್ತಿದೆ.

ವಿಜ್ಞಾನಿಗಳು ಹೇಳುವಂತೆ 5ಎಂಎಂವರೆಗೆ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೋಪ್ಲಾಸ್ಟಿಕ್ ಎಂದು ವ್ಯಾಖ್ಯಾನಿಸುತ್ತಾರೆ. ಇದು ಎಲ್ಲವನ್ನು ಸೇವಿಸಿ, ಉಸಿರಾಡಲು ಅನುಕೂಲ ಮಾಡುತ್ತದೆ. ಪ್ರತಿ ವರ್ಷ ಪ್ರತಿ ವ್ಯಕ್ತಿ 50 ಸಾವಿರ ಪ್ಲಾಸ್ಟಿಕ್​ ಪಾರ್ಟಿಕಲ್ಸ್​​ ಅನ್ನು ಸೇವಿಸುತ್ತಿದ್ದಾನೆ. ಸುಡುವ ಏಕ ಬಳಕೆ ತ್ಯಾಜ್ಯಗಳು ಮಾನವನಿಗೆ, ಜೀವವೈವಿದ್ಯತೆಯ ಆರೋಗ್ಯಕ್ಕೆ ಹಾನಿಕಾರಕ. ಇದು ಜೈವಿಕ ಪರಿಸರ ವ್ಯವಸ್ಥೆಯನ್ನು ಮಾಲಿನ್ಯ ಮಾಡುತ್ತದೆ.

ಸರ್ಕಾರಗಳು, ಕಂಪನಿಗಳು ಮತ್ತು ಇತರೆ ಸ್ಟೇಕ್​ ಹೋಲ್ಡರ್​​ಗಳು ಈ ಸಂಬಂಧ ಪರಿಹಾರಕ್ಕೆ ಪ್ರಕ್ರಿಯೆ ಕಾರ್ಯರೂಪಿಸಬೇಕಿದೆ. ಇದು ವಿಶ್ವ ಪರಿಸರ ದಿನದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಪ್ರಪಂಚದ ಪ್ರತಿಯೊಂದು ಮೂಲೆಯಿಂದ ಪರಿವರ್ತಕ ಕ್ರಿಯೆಯನ್ನು ಸಜ್ಜುಗೊಳಿಸಬೇಕಾಗುತ್ತದೆ.

ಇದನ್ನೂ ಓದಿ: ಜೂ. 5ರಂದು ವಿಶ್ವ ಪರಿಸರ ದಿನ: ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸಲು ಇದು ಸಕಾಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.