ETV Bharat / sukhibhava

ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್: ವಿಶ್ವಸಂಸ್ಥೆ ಕಳವಳ

author img

By ETV Bharat Karnataka Team

Published : Nov 10, 2023, 2:31 PM IST

ಹೊರಾಂಗಣ ಚಟುವಟಿಕೆಯಲ್ಲಿ ತೊಡಗುವ ಕಾರ್ಮಿಕರಲ್ಲಿ ಚರ್ಮದ ಕ್ಯಾನ್ಸರ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಡಬ್ಲ್ಯೂಎಚ್​ಒ ಮತ್ತು ಐಎಲ್​ಒ ಆಗ್ರಹಿಸಿದೆ.

Working under the sun is leading to non-melanoma skin cancer

ಜೀನಿವಾ: ಸೂರ್ಯನಿಗೆ ನೇರವಾಗಿ ಮೈಯೊಡ್ಡಿ ಕೆಲಸ ಮಾಡುವ ಪ್ರತಿ ಮೂರರಲ್ಲಿ ಒಬ್ಬರು ಮೆಲೊನೊಮಾ ಚರ್ಮದ ಕ್ಯಾನ್ಸರ್​​ಗೆ ಬಲಿಯಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್​ಒ) ಜಂಟಿಯಾಗಿ ಅಂದಾಜಿಸಿದೆ.

ಜರ್ನಲ್​ ಎನ್ವರಿನಾಮೆಂಟ್​ ಇಂಟರ್​ನ್ಯಾಷನಲ್​​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುವವಲ್ಲಿ ಮೆಲೊನೊಮ ಹೊರತಾದ ಚರ್ಮದ ಕ್ಯಾನ್ಸರ್​​ ಹೆಚ್ಚಳದ ಅಪಾಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇಂತಹ ಕೆಲಸದ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ರಕ್ಷಣೆಗೆ ತುರ್ತು ಕ್ರಮ ನಡೆಸಬೇಕಿದೆ ಎಂದು ತಿಳಿಸಿದೆ.

ಸುಮಾರು 1.6 ಬಿಲಿಯನ್​ ಮಂದಿ (15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು) ಸೂರ್ಯನ ನೇರಳಾತೀತ ಕಿರಣಗಳಿಗೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ಈ ಕಿರಣಕ್ಕೆ ಒಳಗಾಗುವಿಕೆ ಸಂಖ್ಯೆ ಹೆಚ್ಚಿದೆ. ಇದೇ ವರ್ಷ 183 ದೇಶದದಲ್ಲಿ ಈ ಮೆಲನೊಮ ಹೊರತಾದ ಚರ್ಮದ ಕ್ಯಾನ್ಸರ್​​ನಿಂದಾಗಿ 18,960 ಮಂದಿ ಸಾವನ್ನಪ್ಪಿದ್ದಾರೆ. 2000ದಲ್ಲಿ ಈ ಸಾವಿನ ಸಂಖ್ಯೆ 10,088 ಇತ್ತು. ಅಂದರೆ ಶೇ 88ರಷ್ಟು ಅಧಿಕವಾಗಿದೆ ಎಂದು ವರದಿ ತಿಳಿಸಿದೆ.

ಜಾಗತಿಕವಾಗಿ ಕ್ಯಾನ್ಸರ್​ ಸಾವಿನಲ್ಲಿ ಸೂರ್ಯನ ನೇರಳಾತೀತ ಕಿರಣದ ಕ್ಯಾನ್ಸರ್​ ಪ್ರಕರಣಗಳ ಕೊಡುಗೆ ಮೂರನೇ ಸ್ಥಾನದಲ್ಲಿದೆ. ಕೆಲಸದ ಸ್ಥಳಗಳಲ್ಲಿ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆಗೆ ಯಾವುದೇ ಸುರಕ್ಷತೆ ಇಲ್ಲದೇ ಇರುವುದು ಚರ್ಮದ ಕ್ಯಾನ್ಸರ್​ ಅಭಿವೃದ್ಧಿಗೆ ಕಾರಣವಾಗುತ್ತಿದೆ ಎಂದು ಡಬ್ಲ್ಯೂಎಚ್​ಒ ಪ್ರಧಾನ ನಿರ್ದೇಶಕ ಟೆಡ್ರೋಸ್​ ಅಡೊನೊಮ್​​ ಗೇಬ್ರಿಯಸ್​​ ಹೇಳಿದ್ದಾರೆ.

ಸೂರ್ಯನ ಕಿರಣಗಳು ಪ್ರಖರವಾಗಿರುವ ಹೊತ್ತಿನಲ್ಲಿ ಹೊರಾಂಗಣ ಕೆಲಸದ ಸಮಯದಲ್ಲಿ ಹೆಚ್ಚಿನ ಹಾನಿಯಾಗದಂತೆ ರಕ್ಷಣೆ ಮಾಡಲು ಕ್ರಮ ನಡೆಸಬೇಕಿದೆ ಎಂದು ಡಬ್ಲ್ಯೂಎಚ್​ಒ ಕರೆ ನೀಡಿದೆ. ದೀರ್ಘಕಾಲ ನೇರಳಾತೀತದಂತಹ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಕೆಲಸ ಮಾಡುವುದರಿಂದ ವರ್ಷಗಳ ನಂತರದಲ್ಲಿ ಅಥವಾ ದಶಕಗಳ ಬಳಿಕ ಚರ್ಮದ ಕ್ಯಾನ್ಸರ್​ ಉಲ್ಬಣಿಸಬಹುದು. ಈ ಹಿನ್ನೆಲೆಯಲ್ಲಿ ಕೆಲಸಗಾರರು ತಮ್ಮ ಆರಂಭದ ದಿನಗಳಿಂದ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಮಾಡಬೇಕಿದೆ.

ಸರ್ಕಾರಗಳು ಈ ಸಂಬಂಧ ನಿಯಮ ಮತ್ತು ನೀತಿಗಳನ್ನು ಜಾರಿಗೆ ತರಬೇಕು. ಹೊರಾಂಗಣ ಕೆಲಸದಲ್ಲಿ ತೊಡಗಿರುವವರ ರಕ್ಷಣೆ ನೆರಳು ಕಲ್ಪಿಸುವ, ಕೆಲಸದ ಅವಧಿ ಬದಲಾಯಿಸುವ, ಮಧ್ಯಾಹ್ನದ ಅವಧಿ ಕೆಲಸದಂತಹ ಸಮಯಗಳನ್ನು ಬದಲಾವಣೆ ಮಾಡಬಹುದು. ಅಲ್ಲದೇ ಕೆಲಸಗಾರರಿಗೆ ಸೂರ್ಯನ ಕಿರಣಗಳು ಬೀರುವ ಪ್ರಭಾವ ಹಿನ್ನೆಲೆಯಲ್ಲಿ ಮತ್ತು ಈ ಸಂಬಂಧ ನಡೆಸಬಹುದಾದ ಮುನ್ನೆಚ್ಚರಿಕೆ ಕ್ರಮಗಳಾದ ದೊಡ್ಡದಾದ ಟೋಪಿ, ಉದ್ದ ಪ್ಯಾಂಟ್​ ಮತ್ತು ಕೈ ತುಂಬ ತೋಳಿನ ಉಡುಪು ಧರಿಸುವಂತೆ ಸೂಚನೆ ಸೇರಿದಂತೆ ವೈಯಕ್ತಿಕ ಸುರಕ್ಷತಾ ದಿರಿಸು, ಸಾಧನಗಳು ಮತ್ತು ಈ ಕುರಿತು ಶಿಕ್ಷಣ, ತರಬೇತಿ ನೀಡಬೇಕಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳು ತಿಳಿಸಿವೆ.

ಸುರಕ್ಷತಾ ಮತ್ತು ಆರೋಗ್ಯಕರ ಕೆಲಸದ ವಾತಾವರಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಇದೇ ವೇಳೆ ಐಎಲ್​ಒ ಪ್ರಧಾನ ನಿರ್ದೇಶ ಗಿಲ್ಬರ್ಟ್​ ಎಫ್​ ಹೌಗಬೊ ಹೇಳಿದರು. (ಐಎಎನ್​ಎಸ್​)

ಇದನ್ನೂ ಓದಿ: 2022ರಲ್ಲಿ ಜಾಗತಿಕವಾಗಿ 7.5 ಮಿಲಿಯನ್ ಜನರಲ್ಲಿ ಕ್ಷಯ ರೋಗ ಪತ್ತೆ: WHO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.