ETV Bharat / sukhibhava

ಮಹಿಳೆಯರನ್ನು ಕಾಡುವ ಹೃದಯ ಸಂಬಂಧಿ ಅಪಾಯ; ಮುನ್ನೆಚ್ಚರಿಕೆ ಅವಶ್ಯ - ಪುರಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ

ಮಹಿಳೆಯರು ತಮ್ಮ ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತೆ ವಹಿಸಬೇಕಿದೆ ಎಂಬ ಸಲಹೆಯನ್ನು ನೀಡಿದ್ದಾರೆ.

women-take-precaution-on-heart-problem
women-take-precaution-on-heart-problem
author img

By ETV Bharat Karnataka Team

Published : Nov 22, 2023, 3:42 PM IST

ಹೈದ್ರಾಬಾದ್​: ಅನೇಕ ಮಂದಿ ಹೃದಯದ ಸಮಸ್ಯೆಗಳು ಕೇವಲ ಪುರುಷರಲ್ಲಿ ಕಂಡು ಬರುತ್ತದೆ ಎಂದು ಯೋಚಿಸುತ್ತಾರೆ. ಆದರೆ, ಅಧ್ಯಯನಗಳ ಪ್ರಕಾರ, ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತಿವೆ. ಇದಕ್ಕೆ ಪ್ರಮುಖ ಕಾರಣ ಜೀವನಶೈಲಿ ಬದಲಾವಣೆ ಮತ್ತು ಆಹಾರವಾಗಿದೆ. ಮಹಿಳೆಯರು ತಮ್ಮ ಹೃದಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲವು ಮುಂಜಾಗ್ರತೆ ವಹಿಸಬೇಕಿದೆ ಎಂಬ ಸಲಹೆಯನ್ನು ನೀಡಲಾಗಿದೆ.

ಹದಿ ವಯಸ್ಸಿನವರಲ್ಲಿ ಅಧಿಕ ತಿನ್ನುವಿಕೆ ಅಭ್ಯಾಸ ಮತ್ತು ದೈಹಿಕ ಚಟುವಟಿಕೆ ಕೊರತೆಯುವ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಇದು ನಿಧಾನವಾಗಿ ಋತುಚಕ್ರದ ಸಮಸ್ಯೆ, ಪಿಸಿಒಡಿ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಮತೋಲಿತ ಆಹಾರ ಆಭ್ಯಾಸಗಳನ್ನು ಆರಂಭದಿಂದ ರೂಢಿಸಿಕೊಳ್ಳುವ ಮೂಲಕ ಆರೋಗ್ಯಕ್ಕೆ ಗಮನ ನೀಡಬಹುದು. ಜೊತೆಗೆ ಕನಿಷ್ಠ ಅರ್ಧಗಂಟೆ ಕ್ರೀಡೆ, ಡ್ಯಾನ್ಸ್​ ಅಥವಾ ಮನೆಯಲ್ಲಿಯೇ ವ್ಯಾಯಾಮದಂತಹ ದೈಹಿಕ ಚಟುವಟಿಕೆ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅವಶ್ಯ. ಹೀಗಿದ್ದಾಗ ಮಾತ್ರವೇ ನೀವು ಅಪಾಯದಿಂದ ಪಾರಾಗಲು ಸಾಧ್ಯ.

ಅನೇಕ ಮಹಿಳೆಯರು ಕಚೇರಿ ಮತ್ತು ಮನೆಯ ಕೆಲಸದ ನಿರ್ವಹಣೆಯ ಎರಡು ಜವಾಬ್ದಾರಿಯಲ್ಲಿ ಬ್ಯುಸಿಯಾಗಿರುತ್ತಾರೆ. ಈ ಕೆಲಸಗಳ ನಿರ್ವಹಿಸುವ ಒತ್ತಡದಿಂದ ಬೆಳಗಿನ ಹೊತ್ತು ತಿಂಡಿಯನ್ನು ತಿನ್ನುವುದಿಲ್ಲ. ಒಂದು ವೇಳೆ ತಿಂದರೂ ಅದರಲ್ಲಿ ಸರಿಯಾಗಿ ಪೋಷಣೆ ಇರುವುದಿಲ್ಲ. ಇದರಿಂದ ಈ ಹಸಿವು ಮಧ್ಯಾಹ್ನದ ಊಟದ ಮೇಲೆ ಬೀರುತ್ತದೆ. ಹೆಚ್ಚಾಗಿ ಊಟ ಸೇವನೆ ಮಾಡುವಂತೆ ಆಗುತ್ತದೆ. ಈ ಅಭ್ಯಾಸವೂ ಕ್ಯಾಲೋರಿ ಹೆಚ್ಚಳಕ್ಕೆ ಕಾರಣವಾಗಲಿದ್ದು, ಅಧಿಕ ತೂಕವೂ ಹೃದಯಕ್ಕೆ ಭಾರವಾಗುತ್ತದೆ.

ಬದಲಾದ ಕೆಲಸದ ಶೈಲಿ ಮತ್ತು ಕೌಟುಂಬಿಕ ಜವಾಬ್ದಾರಿಗಳು ಅನೇಕ ಮಂದಿಯಲ್ಲಿ ಆಡುಗೆ ಮಾಡುವ ತಾಳ್ಮೆ ಇಲ್ಲದಂತೆ ಮಾಡುತ್ತದೆ. ಇದು ರೆಡಿ ಟು ಇಟ್​ ಜಂಕ್​ ಫುಡ್​ ಸೇವನೆಗೆ ಒತ್ತಾಯಿಸುತ್ತದೆ. ಪ್ಯಾಕೇಜ್​ ಫುಡ್​​ ಮತ್ತು ತಕ್ಷಣಕ್ಕೆ ಸಿಗುವ ಆಹಾರ ಸೇವನೆ ಹೆಚ್ಚುತ್ತದೆ. ಇದರಲ್ಲಿನ ಪ್ರಿಸರ್ವೆಟಿವ್ಸ್​​, ಎಣ್ಣೆ ಮತ್ತು ಇತರೆ ಅಂಶಗಳು ಕೊಲೆಸ್ಟ್ರಾಲ್​​​ಗೆ ಕಾರಣವಾಗುತ್ತದೆ. ಇದು ಹೃದಯ ಆರೋಗ್ಯಕ್ಕೆ ಹಾನಿ ತರುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದರೆ ಹೆಚ್ಚಾಗಿ ಹಸಿರು ಸೊಪ್ಪು ಮತ್ತು ತರಕಾರಿಗಳ ಸೇವನೆಯನ್ನು ಮಾಡಬೇಕು. ವಿಟಮಿನ್​ ಜೊತೆ ನೀರಿನ ಪ್ರಮಾಣವೂ ದೇಹಕ್ಕೆ ಅವಶ್ಯಕವಾಗಿದೆ. ಇದರ ಫಲಿತಾಂಶದಿಂದ ಮೆಟಾಬಾಲಿಸಂ ಹೆಚ್ಚುತ್ತದೆ. ಅಲ್ಲದೇ ಇದು ದೇಹಕ್ಕೆ ಅವಶ್ಯವಾದ ಫೈಬರ್​ ಅನ್ನು ನೀಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಹೃದಯದ ಆರೋಗ್ಯ ಕಾಪಾಡಬೇಕು ಎಂದರೆ ದಿನಕ್ಕೆ ಕನಿಷ್ಠ 40 ನಿಮಿಷ ವ್ಯಾಯಾಮ ಮಾಡಿ. ಇದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಈಗಾಗಲೇ ನೀವು ವ್ಯಾಯಾಮ ಮಾಡುತ್ತಿದ್ದೀರಿ ಎಂದರೆ ಅದರಲ್ಲಿ ಕಾರ್ಡಿಯೋ ವ್ಯಾಯಾಮವನ್ನು ಸೇರಿಸಿ.

ಇದನ್ನೂ ಓದಿ: 'ವಿಪರೀತ ವ್ಯಾಯಾಮ ಚಟುವಟಿಕೆ ಬೇಡ': ಗಂಭೀರ ಕೋವಿಡ್​ ಸಮಸ್ಯೆಗಳಿಂದ ಚೇತರಿಸಿಕೊಂಡವರಿಗೆ ವೈದ್ಯರ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.