ETV Bharat / sukhibhava

ಮಹಿಳೆಯರು ಬೆಳಗ್ಗೆ, ಪುರುಷರು ಸಂಜೆ ವ್ಯಾಯಾಮ ಮಾಡಬೇಕು: ಯಾಕೆ ಅಂತೀರಾ? - ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ

ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂದು ಸಾಂಪ್ರದಾಯಿಕವಾಗಿ ಹೇಳಲಾಗುತ್ತದೆ. ಒಂದು ಅಧ್ಯಯನದ ಪ್ರಕಾರ ವ್ಯಾಯಾಮದ ಪರಿಣಾಮಕಾರಿತ್ವವು ಲಿಂಗದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.

ಮಹಿಳೆಯರು ಬೆಳಿಗ್ಗೆ, ಪುರುಷರು ಸಂಜೆ ವ್ಯಾಯಾಮ ಮಾಡಬೇಕು: ಅಧ್ಯಯನ

author img

By

Published : Jun 2, 2022, 7:26 PM IST

ನಾವು ನಮ್ಮ ದೈನಂದಿನ ಜೀವನದಲ್ಲಿ ವ್ಯಾಯಾಮವನ್ನು ಮಾಡಿಕೊಂಡು ಬಂದರೆ ದೇಹವನ್ನು ಬಲಿಷ್ಠವಾಗಿ ಆರೋಗ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯ. ಅಂತೆಯೇ ಯಾವ ಸಮಯದಲ್ಲಿ ಯಾರು ಎಷ್ಟು ವ್ಯಾಯಾಮ ಮಾಡಿದರೆ ದೇಹಕ್ಕೆ ಶಕ್ತಿ ಬರುತ್ತದೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗಿದೆ.

ಫ್ರಾಂಟಿಯರ್ಸ್ ಇನ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನವು, ಮಹಿಳೆಯರು ಬೆಳಗ್ಗೆ ಸಮಯದಲ್ಲಿ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಹಾಗೆ ಪುರುಷರಿಗೆ ಸೂಕ್ತ ಸಮಯ ಸಂಜೆ ಎಂದು ಕಂಡುಕೊಳ್ಳಲಾಗಿದೆ. ಮಹಿಳೆಯರಿಗೆ ಅವರ ಒಟ್ಟು ದೇಹದ ಕೊಬ್ಬು, ಕಿಬ್ಬೊಟ್ಟೆಯ ಮತ್ತು ಸೊಂಟದ ಕೊಬ್ಬು ಹಾಗೂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಸುಧಾರಣೆಗಳು ಬೆಳಿಗ್ಗೆ ವ್ಯಾಯಾಮ ಮಾಡುವ ಮಹಿಳೆಯರಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ. ಇದಕ್ಕೆ ವಿರುದ್ಧವಾಗಿ ಪುರುಷರಲ್ಲಿ ಸಂಜೆಯ ವ್ಯಾಯಾಮವು ಹೆಚ್​ಡಿಎಲ್​ ಕೊಲೆಸ್ಟ್ರಾಲ್, ರಕ್ತದೊತ್ತಡ, ಉಸಿರಾಟದ ಏರಿಳಿತ ಮತ್ತು ಕಾರ್ಬೋಹೈಡ್ರೇಟ್ ಆಕ್ಸಿಡೀಕರಣದ ಒಟ್ಟು ಅನುಪಾತದಲ್ಲಿ ಇಳಿಕೆಯನ್ನು ತೋರಿಸಿದೆ.

ಹಾಗಾದ್ರೆ ಮಹಿಳೆಯರು ಸಂಜೆ ವ್ಯಾಯಾಮ ಮಾಡಿದ್ರೆ ಏನಾಗುತ್ತದೆ ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಮಹಿಳೆಯರಲ್ಲಿ ಸಂಜೆಯ ವ್ಯಾಯಾಮವು ದೇಹದ ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮನಸ್ಥಿತಿ ಮತ್ತು ಪೌಷ್ಟಿಕಾಂಶದ ಅತ್ಯಾಧಿಕತೆಯನ್ನು ಇದು ಸುಧಾರಿಸುತ್ತದೆ ಎಂದು ನ್ಯೂಯಾರ್ಕ್‌ನ ಸ್ಕಿಡ್‌ಮೋರ್ ಕಾಲೇಜಿನ ಆರೋಗ್ಯ ಮತ್ತು ಮಾನವ ಶರೀರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ. ಡಾ. ಪೌಲ್ ಜೆ ಆರ್ಸಿಯೆರೊ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗೆ ಬೆಳಗಿನ ವ್ಯಾಯಾಮಕ್ಕೆ ಹೋಲಿಸಿದರೆ ಹೆಚ್ಚು ಪುರುಷರ ಕೊಬ್ಬನ್ನು ಸಂಜೆ ವ್ಯಾಯಾಮದಲ್ಲಿ ಸುಡಬಹುದಂತೆ. ಈ ಅಧ್ಯಯನಕ್ಕಾಗಿ ತಂಡವು 30 ಮಹಿಳೆಯರು ಮತ್ತು 26 ಪುರುಷರನ್ನು ಬಳಸಿಕೊಂಡಿದೆ. ಎಲ್ಲರೂ 25 ರಿಂದ 55 ವರ್ಷ ವಯಸ್ಸಿನವರಾಗಿದ್ದರು. ಆರೋಗ್ಯವಂತರು, ಹೆಚ್ಚು ಕ್ರಿಯಾಶೀಲರು, ಧೂಮಪಾನಿಗಳಲ್ಲದವರು ಮತ್ತು ಸಾಮಾನ್ಯ ತೂಕ ಹೊಂದಿರುವವರು ಇವರಾಗಿದ್ದರು.

ಬೆಳಗ್ಗೆ ಅಥವಾ ಸಂಜೆಯ ವ್ಯಾಯಾಮ ಎನ್ನುವುದನ್ನು ಲೆಕ್ಕಿಸದೇ ಈ ಪ್ರಯೋಗದ ಅವಧಿಯಲ್ಲಿ ಭಾಗವಹಿಸಿದವರ ಒಟ್ಟಾರೆ ಆರೋಗ್ಯ ಮತ್ತು ಕಾರ್ಯಕ್ಷಮತೆ ಸುಧಾರಣೆ ಆಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದರೂ ಈ ಅಧ್ಯಯನದಲ್ಲಿ ಬೆಳಗ್ಗೆ ಹಾಗೂ ಸಂಜೆಯ ಸಮಯದ ವ್ಯಾಯಾಮವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ನಮ್ಮ ಅಧ್ಯಯನವು ಕಾರ್ಡಿಯೋಮೆಟಾಬಾಲಿಕ್ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಬೆಳಗ್ಗೆ ಮತ್ತು ಸಂಜೆ ಮಲ್ಟಿಮೋಡಲ್ ವ್ಯಾಯಾಮದ ಪ್ರಯೋಜನಗಳನ್ನು ಸ್ಪಷ್ಟವಾಗಿ ತೋರಿಸಿದೆ. ಜೊತೆಗೆ ಮಹಿಳೆಯರು ಮತ್ತು ಪುರುಷರಲ್ಲಿ ದೈಹಿಕ ಕಾರ್ಯಕ್ಷಮತೆಯ ಫಲಿತಾಂಶಗಳನ್ನು ಇದರಿಂದ ಕಂಡುಕೊಳ್ಳಲಾಗಿದೆ ಎಂದು ಆರ್ಸಿಯೆರೊ ಹೇಳಿದ್ದಾರೆ.

ನಿರ್ಣಾಯಕ ಸಮಯದ ವ್ಯಾಯಾಮ ದೈಹಿಕ ಕಾರ್ಯಕ್ಷಮತೆ, ದೇಹ ಸಂಯೋಜನೆ, ಕಾರ್ಡಿಯೋಮೆಟಾಬಾಲಿಕ್ ಆರೋಗ್ಯ ಮತ್ತು ಮನಸ್ಥಿತಿಯಲ್ಲಿನ ಸುಧಾರಣೆಗಳ ಶಕ್ತಿಯನ್ನು ನಿರ್ಧರಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ. ನಮ್ಮ ಸಂಶೋಧನೆಗಳ ಆಧಾರದ ಮೇಲೆ ಹೊಟ್ಟೆಯ ಕೊಬ್ಬು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಆಸಕ್ತಿ ಹೊಂದಿರುವ ಮಹಿಳೆಯರು ಬೆಳಗಿನ ವ್ಯಾಯಾಮವನ್ನು ಪರಿಗಣಿಸಬೇಕು. ದೇಹದ ಸ್ನಾಯುವಿನ ಶಕ್ತಿ, ಸಹಿಷ್ಣುತೆಯನ್ನು ಪಡೆಯಲು ಆಸಕ್ತಿ ಹೊಂದಿರುವ ಮಹಿಳೆಯರು ಸಂಜೆಯ ವ್ಯಾಯಾಮವನ್ನು ಪರಿಗಣಿಸಬೇಕು ಎಂದು ಆರ್ಸಿಯೆರೊ ಸಲಹೆ ನೀಡಿದ್ದಾರೆ.

ಇದಕ್ಕೆ ವಿರುದ್ಧವಾಗಿ ಹೃದಯ ಮತ್ತು ಚಯಾಪಚಯ ಆರೋಗ್ಯವನ್ನು ಸುಧಾರಿಸಲು ಆಸಕ್ತಿ ಹೊಂದಿರುವ ಪುರುಷರಿಗೆ ಸಂಜೆಯ ವ್ಯಾಯಾಮ ಸೂಕ್ತವಾಗಿದೆ, ಜೊತೆಗೆ ಭಾವನಾತ್ಮಕ ಯೋಗಕ್ಷೇಮ ಇದರಲ್ಲಿ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಟ್ಟೆ ನೋವೆಂದು ಜಿಲ್ಲಾಸ್ಪತ್ರೆಗೆ ಬಂದು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.