ಲಖನೌ: ಅಪರೂಪದ ಮತ್ತು ತೀವ್ರತರದ ರಕ್ತದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿರುವ ಪ್ರಕರಣ ನಡೆದಿದ್ದು, ಇವರಿಗೆ ಇಲ್ಲಿನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧಿಕಾರಿಗಳು ಸಹಾಯ ಮಾಡಿದ್ದಾರೆ.
ಮಗು ಆಗುವುದಕ್ಕೆ ಸಾಧ್ಯ ಇಲ್ಲ ಎಂಬಂತಹ ಪರಿಸ್ಥಿತಿಯಲ್ಲಿದ್ದ ಮಹಿಳೆ ಇದೀಗ ತಾಯಿಯಾಗಿ ಹೊಸ ಜೀವನ ಕಂಡು ಕೊಂಡಿದ್ದಾರೆ. ಮಹಿಳೆಯು ಅಪರೂಪದ ರಕ್ತ ಕಾಯಿಲೆಯಾಗಿದ್ದ ಪ್ಯಾರೋಕ್ಸಿಮಲ್ ನೊಕ್ಟುರ್ನಲ್ ಹಿಮೋಗ್ಲೋಬಿನ್ (ಪಿಎನ್ಎಚ್) ರೋಗದಿಂದ ಬಳಲುತ್ತಿದ್ದರು. ಇದೊಂದು ಅಪರೂಪದಲ್ಲಿ ಅಪರೂಪ ಪ್ರಕರಣವಾಗಿದ್ದು, 10 ಲಕ್ಷದಲ್ಲಿ 10 ಮಂದಿ ತುತ್ತಾಗಬಹುದು. ಇಂತಹ ಪರಿಸ್ಥಿತಿಯಲ್ಲಿದ್ದ ರೋಗಿಯ ಪ್ರತಿರೋಧಕ ವ್ಯವಸ್ಥೆಯು ದಾಳಿಗೆ ಒಳಗಾಗಿರುತ್ತದೆ ಮತ್ತು ಅವರ ಕೆಂಪು ರಕ್ತ ಕಣ ಮತ್ತು ಪ್ಲೆಟ್ಲೆಟ್ಗಳು ದಾಳಿಗೆ ಒಳಗಾಗಿರುತ್ತವೆ.
ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯು ಅಧಿಕ ಮಟ್ಟದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕ್ಲಾಟ್ಗಳು ಶ್ವಾಸಕೋಶ, ಹೃದಯ ಅಥವಾ ಮಿದುಳಿಗೆ ಸಂಬಂವಿಸಿ, ರೋಗಿ ಸಾವಿನ ಅಪಾಯ ಎದುರಿಸಬಹುದು. ಇಂತಹ ಪರಿಸ್ಥಿತಿ ಹೊಂದಿರುವ ಮಹಿಳಾ ರೋಗಿಗಳು ಗರ್ಭವತಿ ಆದಾಗ ಕ್ಲಾಟ್ಗಳು ರೋಗಿಯ ದೇಹದೊಳಗೆ ಸಾಗಿ ಆಮ್ಲಜನಕದ ಪೂರೈಕೆಗೆ ಅಡೆತಡೆ ಉಂಟಾಗಬಹುದು. ಇದು ತಾಯಿ ಮತ್ತು ಮಗುವಿನ ಸಾವಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಇವರಲ್ಲಿ ತಾಯ್ತನ ಸವಾಲುದಾಯಕ ಆಗಿರುತ್ತದೆ. ಒಂದು ವೇಳೆ ಇಂತಹ ಪರಿಸ್ಥಿತಿಯಲ್ಲೂ ಅವರು ಗರ್ಭವತಿ ಆಗಿ ಯಶಸ್ವಿಯಾಗಿ ಹೆರಿಗೆಯಾಗಿರುವುದು ಬಲು ಅಪರೂಪ ಪ್ರಕರಣವಾಗಿದೆ ಎಂದು ಸಂಸ್ಥೆಯ ಹೆಮಟಾಲೊಜಿ ಸಿಬ್ಬಂದಿ ಡಾ ಸಂಜೀವ್ ತಿಳಿಸಿದ್ದಾರೆ.
ಈ ರೀತಿಯ ನೂರಾರು ಪ್ರಕರಣಗಳು ಜಗತ್ತಿನಾದ್ಯಂತ ದಾಖಲಾಗಿದೆ. ನಮ್ಮ ಕೇಂದ್ರದಲ್ಲಿ ಇದೇ ಮೊದಲ ಬಾರಿ ಈ ರೀತಿ ಯಶಸ್ವಿ ಚಿಕಿತ್ಸೆ ನಡೆಸಲಾಗಿದೆ ಎಂದು ಸಂಸ್ಥೆಯ ಹೆಮಟೋಲಾಜಿ ಮುಖ್ಯಸ್ಥರಾಗಿರುವ ಪ್ರೊ ರಾಜೇಶ್ ಕಶ್ಯಪ್ ತಿಳಿಸಿದ್ದಾರೆ.
ಇನ್ನು ಈ ರೋಗಿಯು 2021ರಿಂದಲೂ ದೀರ್ಘಕಾಲದ ರಕ್ತ ಹೀನತೆ ಮತ್ತು ಜಾಂಡೀಸ್ ಹೊಂದಿದ್ದರು. ಈ ಪ್ರಕರಣದಲ್ಲಿ ಅಪಾಯ ಇದೆ ಎಂಬ ಅರಿವು ಇದ್ದರೂ ಮಹಿಳೆ ತಾಯಿಯಾಗುವ ಯೋಜನೆ ಹೊಂದಿದ್ದರು. ಆಕೆ ದೇಹಕ್ಕೆ ಅಗತ್ಯವಾದ ಔಷಧಗಳನ್ನು ನೀಡುವ ಮೂಲ ಅವರನ್ನು ಸಜ್ಜುಗೊಳಿಸಲಾಯಿತು. ಈ ವೇಳೆ ಅವರಿಗೆ ಕಡಿಮೆ ಮಟ್ಟದ ಸ್ಟಿರಿಯೋಡ್ ಮತ್ತು ಪರಿಣಾಮಕಾರಿ ನಿರ್ವಹಣೆಯಿಂದಿಗೆ ಮಾರ್ಚ್ 2023ರಂದು ಮಹಿಳೆ ಗರ್ಭವತಿ ಆದಳು. ನವೆಂಬರ್ನಲ್ಲಿ ಮಹಿಳೆ 2.8 ಕಿ.ಗ್ರಾಂ ತೂಕದ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ದಂಪತಿಗಳಲ್ಲಿ ಒಬ್ಬರಿಗೆ ಬಿಪಿ ಇದ್ದರೂ ಮತ್ತೊಬ್ಬರು ವಹಿಸಬೇಕು ಎಚ್ಚರಿಕೆ; ಕಾರಣ ಇದು