ETV Bharat / sukhibhava

ಮಕ್ಕಳು, ಹಿರಿಯರಲ್ಲಿ ಆರೋಗ್ಯ ಅಪಾಯ ಹೆಚ್ಚಿಸುವ ಚಳಿಗಾಲ: ಮುನ್ನೆಚ್ಚರಿಕೆಗೆ ತಜ್ಞರ ಸಲಹೆ - ಚಳಿಗಾಲದಲ್ಲಿನ ಆರೋಗ್ಯ ಮುನ್ನೆಚ್ಚರಿಕೆ

ಚಳಿಗಾಲದಲ್ಲಿ ದೇಹದ ರಕ್ತನಾಳಗಳ ಸಂಕುಚಿತಗೊಳ್ಳುವ ಸಾಧ್ಯತೆ ಇದೆ. ರಕ್ತನಾಳದಲ್ಲಿ ಸಣ್ಣ ಬ್ಲಾಕ್​ ಇದ್ದರೂ ಅದು ಹೃದಯಾಘಾತ ಅಥವಾ ಪಾರ್ಶ್ವವಾಯುಗೆ ಕಾರಣವಾಗುತ್ತದೆ

winter-may-increase-health-risk-in-elder-people-and-small-children

author img

By ETV Bharat Karnataka Team

Published : Dec 19, 2023, 5:27 PM IST

ಹೈದರಾಬಾದ್​: ಎಲ್ಲೆಡೆ ಚಳಿ ತೀವ್ರತೆ ಹೆಚ್ಚಿದ್ದು, ಎಲ್ಲೆಡೆ ಕಡಿಮೆ ತಾಪಮಾನ ದಾಖಲಾಗಿದೆ. ಈ ಹವಾಮಾನ ಮಕ್ಕಳು ಮತ್ತು ವೈದ್ಯರ ಮೇಲೆ ಪರಿಣಾಮ ಬೀರುವ ಹಿನ್ನಲೆ ವೈದ್ಯರು ಕೂಡ ಎಚ್ಚರಿಕೆ ನೀಡಿದ್ದಾರೆ. ಕಾರಣ ಈ ಹಿರಿಯ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಈ ಹಿನ್ನೆಲೆ 60 ವರ್ಷ ಮೇಲ್ಪಟ್ಟವರು ಹೆಚ್ಚು ಜಾಗ್ರತೆಯಿಂದ ಇರಬೇಕು. ಅದರಲ್ಲೂ ರಕ್ತದೊತ್ತಡ, ಮಧುಮೇಹ ಮುಂತಾದ ದೀರ್ಘಕಾಲದ ಸಮಸ್ಯೆ ಹೊಂದಿರುವವರಿಗೆ ಚಳಿಗಾಲದ ಸೋಂಕು ತಗುಲಿದರೆ ಅವರಿಗೆ ಅನೇಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಚಳಿಗಾಲದಲ್ಲಿ ದೇಹದ ರಕ್ತನಾಳಗಳ ಸಂಕುಚಿತಗೊಳ್ಳುವ ಸಾಧ್ಯತೆ ಇದೆ. ರಕ್ತನಾಳದಲ್ಲಿ ಸಣ್ಣ ಬ್ಲಾಕ್​ ಇದ್ದರೂ ಅದು ಹೃದಯಾಘಾತ ಅಥವಾ ಪಾರ್ಶ್ವವಾಯುಗೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಬಹುತೇಕ ಮಂದಿ ಬೆಳಗಿನ ಜಾಗ ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ. ಈ ಚಳಿ ಜನವರಿ ಮತ್ತು ಫೆಬ್ರವರಿ ವರೆಗೆ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ವಯಸ್ಸಾದವರು ಬೆಳಗಿನ ಹೊತ್ತು ಹೊರಗೆ ಹೋಗುವುದನ್ನು ತಪ್ಪಿಸಬೇಕು ಎನ್ನುತ್ತಾರೆ ಗಾಂಧಿ ಆಸ್ಪತ್ರೆಯ ಸೂಪರಿಟೆಂಡೆಂಟ್​ ಡಾ ರಾಜಾ ರಾವ್​.

ಚಳಿಯಿಂದ ಹೆಚ್ಚು ಸಮಸ್ಯೆಗೆ ಒಳಗಾಗುವವರು ವಯಸ್ಸಾದವರು. ಈ ಅವರಿಯಲ್ಲಿ ಅವರು ವೈರಲ್​ ಸೋಂಕಿಗೆ ಒಳಗಾಗುತ್ತಾರೆ. ಈಗಾಗಲೇ ದೀರ್ಘಕಾಲದ ಶ್ವಾಸಕೋಶ ಸಮಸ್ಯೆ (ಸಿಒಪಿಡಿ), ಬ್ರಾಂಕಯಿಟಿಸ್​​, ನ್ಯೂಮೋನಿಯಾ ಮುಂತಾದ ಸಮಸ್ಯೆ ಹೊಂದಿರುವವರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಅವಧಿಯಲ್ಲಿ ಚರ್ಮವೂ ಶುಷ್ಕಗೊಂಡು ಬಿರಿತದಂತಹ ಸಮಸ್ಯೆ ಅನುಭವಿಸುತ್ತಾರೆ. ಇದು ಕೆರೆತಕ್ಕೆ ಕಾರಣವಾಗಿ ಗಾಯವಾಗುವ ಸಾಧ್ಯತೆ ಇದೆ. ಇದು ಚರ್ಮದ ಸೋಂಕಿಗೂ ಕಾರಣವಾಗುತ್ತದೆ. ಚಳಿ ಹೆಚ್ಚಿದ್ದಾಗ ಮನೆಯಲ್ಲಿದ್ದರೂ ಸ್ವೆಟರ್​​ ಮತ್ತು ಮಂಕಿ ಕ್ಯಾಪ್​ ಧರಿಸುವುದು ಅಗತ್ಯ. ಜೊತೆಗೆ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳಿ. ತಾಜಾತನದಿಂದ ಕೂಡಿದ ಬಿಸಿ ಆಹಾರ ಸೇವಿಸಿ. ಸಿಒಪಿಡಿ ಮತ್ತು ಬ್ರಾಂಕಯಿಟಿಸ್​ ಸಮಸ್ಯೆ ಹೊಂದಿರುವವರು ಧೂಮಪಾನ ಮಾಡಬಾರು. ಬೆಳಗಿನ ವಾಕ್​ ಹೋಗುವವರು ಸೂರ್ಯ ಬಂದ ಬಳಿಕ ಹೋಗುವುದು ಉತ್ತಮ ಈ ಸಮಯದಲ್ಲಿ ಚಳಿ ಎಂದು ವ್ಯಾಯಾಮ ನಿಲ್ಲಿಸಬೇಡಿ ಎಂದು ಸಲಹೆ ನೀಡಿದ್ದಾರೆ

ಮಕ್ಕಳ ಬಗ್ಗೆ ಇರಲಿ ಎಚ್ಚರ: 12 ವರ್ಷದೊಳಗಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಇನ್ನು ಅಭಿವೃದ್ದಿ ಆಗುತ್ತಿರುತ್ತದೆ. ಈ ಚಳಿಗಾಲ ಅವರನ್ನೂ ಕೂಡ ಬಾಧಿಸುತ್ತದೆ. ವೈರಲ್​ ಮತ್ತು ಇತರ ಸೋಂಕು ಎರಡು ರೀತಿಯಲ್ಲಿರುತ್ತದೆ. ಚಳಿ, ಗಂಟಲು ಕೆರೆತ, ಜ್ವರವನ್ನು ಕಾಣಬಹುದು. ಇದು 3-4 ದಿನ ಕಾಡುತ್ತದೆ. ಕೆಲವು ಸಾಮಾನ್ಯ ಲಕ್ಷಣಗಳು ವೈದ್ಯರ ಸೂಚನೆಯೊಂದಿಗೆ ಔಷಧ ತೆಗೆದುಕೊಂಡರೆ ಸಾಕು. ಆದರೆ, ಕೆಲವು ಬಾರಿ ದೀರ್ಘ ಜ್ವರ, ಶೀತ, ಆಲಸ್ಯ ಅಥವಾ ಆಯಾಸಗಳಿದ್ದಾಗ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಹಿರಿಯರು ಪ್ರತಿ ಐದು ವರ್ಷಕ್ಕೆ ಲಸಿಕೆ ಪಡೆಯುವ ಮೂಲಕ ನ್ಯುಮೋನಿಯಾವನ್ನು ತಡೆಯಬಹುದು. ಜ್ವರದ ಲಸಿಕೆಗಳನ್ನು ಪ್ರತಿ ಚಳಿಗಾಲಕ್ಕೆ ಮುನ್ನ ಪಡೆಯುವುದು ಉತ್ತಮ. ಮಕ್ಕಳಿಗೆ ಸರ್ಕಾರ ಸೂಚಿಸಿದ ಅವಧಿಯಲ್ಲಿ ಶಿಫಾರಸು ಮಾಡಿದ ಲಸಿಕೆಗಳನ್ನು ನಿಯಮಿತವಾಗಿ ಪಡೆಯಬೇಕು ಎನ್ನುತ್ತಾರೆ ಸ್ಟಾರ್​ ಆಸ್ಪತ್ರೆಯ ಇಂಟರ್​ನಲ್​ ಮೆಡಿಸಿನ್​ ಸಮಾಲೋಚಕ ಡಾ ಸಂದೀಪ್​ ಗಂಟಾ.

ತೆಲಂಗಾಣದ ಕುಮಾರಂ ಭೀಮ್​ ಅಸಿಫ್​ಬಾದ್​ ಜಿಲ್ಲೆಯ ಸಿರ್​ಪುರ್​ ಭಾರೀ ಚಳಿಗೆ ನಡುಗುತ್ತಿದೆ. ರಾಜ್ಯದಲ್ಲಿ ಭಾನುವಾರ ರಾತ್ರಿ ಕಡಿಮೆ ತಾಪಮಾನ ಅಂದರೆ 10.9 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಕೆರಮೆರಿ, ತಿರ್ಯಾನಿ ಮತ್ತು ಜೈನುರ್​ ಗ್ರಾಮದಲ್ಲಿ ಕನಿಷ್ಠ ತಾಪಮಾನ ಕಂಡು ಬಂದಿದೆ. ಇಲ್ಲಿ ಅಲಿಬಾದ್​ ನಗರ ಪ್ರದೇಶದಲ್ಲಿ 12 ಡಿಗ್ರಿ ದಾಖಲಾದರೆ, ಅದಿಲ್​ಬಾದ್​ ಗ್ರಾಮಾಂತರ ಪ್ರದೇಶ ಜೈನತ್​​, ಭೀಮ್ಪುರ್​​, ಥನ್ಸಿ, ತಲಮಡುಗು, ಬೋದ್​​ ಮತ್ತು ನೆರದಿಗೊಂಡಾದಲ್ಲಿ ನಡುಗುವ ವಾತಾವರಣ ಸೃಷ್ಟಿಯಾಗಿದೆ. ನಿರ್ಮಲಾ ಜಿಲ್ಲೆಯಲ್ಲಿ ಪೆಂಬಿಯಲ್ಲಿ 13.2 ಡಿಗ್ರಿ, ಸಂಗರೆಡ್ಡಿ ಜಿಲ್ಲೆಯ ನ್ಯಲಕಲ್​ನಲ್ಲಿ 13.4 ಮತ್ತು ಸಿರ್ಸಿಲ್ಲಾ ಜಿಲ್ಲೆಯ ವೀರನಪಲ್ಲಿಯಲ್ಲಿ 13.5 ಡಿಗ್ರಿ, ಭುಪಲಪಲ್ಲಿ ಜಿಲ್ಲೆಯ ಮುತ್ತಾರಾದಲ್ಲಿ 13.8 ಡಿಗ್ರಿ ತಾಪಮಾನ ದಾಖಲಾಗಿದೆ.

ಕರ್ನಾಟಕದಲ್ಲೂ ನಿಧಾನವಾಗಿ ಚಳಿ ತೀವ್ರಗೊಳ್ಳುತ್ತಿದೆ. ಹೀಗಾಗಿ ಮಕ್ಕಳು ಮತ್ತು ಹಿರಿಯರು ಮುನ್ನೆಚ್ಚರಿಕೆ ವಹಿಸಬೇಕು.

ಇದನ್ನೂ ಓದಿ: ಚಳಿಗೆ ತತ್ತರಿಸಿದ ಕಣಿವೆ ರಾಜ್ಯ; ಘನೀಕರಿಸುತ್ತಿರುವ ಪೈಪ್​ ನೀರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.