ETV Bharat / sukhibhava

ಫಿಟ್ & ಯಂಗ್ ಆಗಿದ್ರೂ ಏಕೆ ಜನ ಹೃದಯಾಘಾತಕ್ಕೆ ಒಳಗಾಗುತ್ತಾರೆ? - ಹೃದಯ ಸಂಬಂಧಿ ಕಾಯಿಲೆ

ಫಿಟ್ & ಯಂಗ್ ಆಗಿದ್ರೂ ಏಕೆ ಜನರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂಬ ಪ್ರಶ್ನೆಗೆ ಆರೋಗ್ಯ ತಜ್ಞರು ನೀಡಿದ ಉತ್ತರಗಳು ಇಲ್ಲಿವೆ.

Why Do Young, Fit People Suffer Heart Attacks?
ಫಿಟ್ & ಯಂಗ್ ಆಗಿದ್ರೂ ಏಕೆ ಜನ ಹೃದಯಾಘಾತಕ್ಕೆ ಒಳಗಾಗುತ್ತಾರೆ
author img

By

Published : Sep 4, 2021, 4:49 PM IST

Updated : Oct 29, 2021, 5:12 PM IST

ಫಿಟ್ನೆಸ್, ವ್ಯಾಯಾಮ ಮತ್ತು ಧ್ಯಾನಕ್ಕೆ ಒತ್ತು ನೀಡಿ ಸದೃಢ ದೇಹ ಹೊಂದಿದ್ದ ಕಿರುತರೆ ಹಾಗೂ ಚಲನಚಿತ್ರ ನಟ ಸಿದ್ಧಾರ್ಥ್ ಶುಕ್ಲಾ (40) ಹೃದಯಾಘಾತದಿಂದಾಗಿ ಗುರುವಾರ ಇಹಲೋಕ ತ್ಯಜಿಸಿದರು. 'ಬಾಲಿಕಾ ವಧು' ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದು, ಹಿಂದಿಯ ಬಿಗ್​ಬಾಸ್​ ಸೀಸನ್​-13 ವಿಜೇತರಾಗಿದ್ದ ಶುಕ್ಲಾರ ಅಕಾಲಿಕ ಮರಣ ಎಲ್ಲರಿಗೂ ಆಘಾತ ನೀಡಿದೆ. ಫಿಟ್ & ಯಂಗ್ ಆಗಿದ್ರೂ ಏಕೆ ಜನರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಗೊತ್ತಾ? ಅದಕ್ಕೆ ಕಾರಣಗಳು ಇಲ್ಲಿವೆ ನೋಡಿ.

ಸಾಮಾನ್ಯವಾಗಿ ಸ್ಥೂಲಕಾಯತೆ, ಆರೋಗ್ಯ ಶೈಲಿ, ಜಡ ಜೀವನಶೈಲಿ ಮತ್ತು ವೃದ್ಧಾಪ್ಯವು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಿವೆ. ಆದರೆ, ಹೆಚ್ಚಿನ ಕೆಲಸದ ಒತ್ತಡ, ಹೆಚ್ಚೆಚ್ಚು ವರ್ಕ್​ ಔಟ್ ಮಾಡುವುದು ಹಾಗೂ ಈಗ ಕೋವಿಡ್​ ಕೂಡ ಹೃದಯ ಸಂಬಂಧಿ ಅಪಾಯಗಳನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ನಟ, ಬಿಗ್​​ ಬಾಸ್​ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ..!

ಒತ್ತಡವೇ ಪ್ರಮುಖ ಕಾರಣ

ವ್ಯಕ್ತಿಯ, ಅದರಲ್ಲಿಯೂ ಯುವಜನರ ಜೀವನಶೈಲಿಯ ಬಗ್ಗೆ ಸಂಪೂರ್ಣ ಒಳನೋಟವನ್ನು ಹೊಂದಲು ಎಂದಿಗೂ ನಮಗೆ ಸಾಧ್ಯವಿಲ್ಲ. ಆದರೆ, ಯುವಕರು ಅಧಿಕ ಒತ್ತಡವಿರುವಲ್ಲಿ ಕೆಲಸ ಮಾಡುತ್ತಿದ್ದು, ಒತ್ತಡವನ್ನು ಎದುರಿಸಲು ಅಹಿತಕರ ಜೀವನಶೈಲಿ ಅಳವಡಿಸಿಕೊಂಡಿದ್ದಾರೆ. ಉದ್ಯೋಗ ಎಷ್ಟು ಮುಖ್ಯವೋ, ಜೀವನಶೈಲಿಯ ಸಮತೋಲನ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಹೇಳುತ್ತಾರೆ ದೆಹಲಿಯ ಧರ್ಮಶಿಲಾ ನಾರಾಯಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಮತ್ತು ಹೃದಯ ತಜ್ಞ ಡಾ. ಆನಂದ್ ಕುಮಾರ್ ಪಾಂಡೆ.

ವ್ಯಾಯಾಮ

ಆಧುನಿಕ ಜೀವನಶೈಲಿ ಪಾಲಿಸುವ ಯುವಕರು ಜಂಕ್​ ಫುಡ್​ಗಳನ್ನು ತಿಂದು, ಬೊಜ್ಜು ಬರಿಸಿಕೊಂಡು ಅದನ್ನು ಕಡಿಮೆ ಮಾಡಲು ಹಿಗ್ಗಾಮುಗ್ಗಾ ವ್ಯಾಯಾಮ ಮಾಡುತ್ತಾರೆ. ಅಧಿಕ ಮಟ್ಟದ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ನಿರ್ಬಂಧಗಳನ್ನು ಉಂಟು ಮಾಡಬಹುದು. ಈ ವೇಳೆ ಮಾಡುವ ಹೆಚ್ಚು ವ್ಯಾಯಾಮ ರಕ್ತನಾಳಗಳ ಮೇಲೆ ಒತ್ತಡ ಹೇರುತ್ತದೆ. ಹೀಗಾಗಿ, ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದೂ ಕೂಡ ಹೃದಯಾಘಾತಕ್ಕೆ ಕಾರಣವಾಗಬಹುದು.

ನಿರ್ಲಕ್ಷ್ಯ

ಇನ್ನು, ಕೆಲವರು ದೇಹದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ವೈದ್ಯಕೀಯ ತಪಾಸಣೆಗೆ ಒಳಪಡುವುದಿಲ್ಲ. ಅವರ ದೇಹದಲ್ಲಿ ಏನಾಗುತ್ತಿದೆ ಎಂಬ ಕಲ್ಪನೆಯೇ ಅವರಿಗೆ ಇರುವುದಿಲ್ಲ. ಹೀಗಾಗಿ, ತಮ್ಮದೇ ನಿರ್ಲಕ್ಷ್ಯದಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಇದನ್ನೂ ಓದಿ: 40ರ ಹರೆಯದ ನಂತರ ಮಹಿಳೆಯರ ಆಹಾರ ಪದ್ಧತಿ ಹೇಗಿರಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ..

ಕೋವಿಡ್

ಕೊರೊನಾದಿಂದ ಗುಣಮುಖರಾದ ಮೇಲೂ ಹೃದಯದ ಆರೋಗ್ಯದ ಮೇಲೆ ಸೋಂಕು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ಅಸಹಜ ಪ್ರತಿಕಾಯ ಪ್ರತಿಕ್ರಿಯೆಯು ಕೋವಿಡ್ ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಬಹುದು. ಇದರ ಪರಿಣಾಮವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಉಂಟಾಗಬಹುದು ಎಂದು ಇತ್ತೀಚಿನ ಅಧ್ಯಯನ ಬಹಿರಂಗ ಪಡಿಸಿದೆ. ಅಲ್ಲದೇ ಈಗಾಗಲೇ ಹೃದಯ ರೋಗಿಗಳಾಗಿರುವವರ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ಅನುವಂಶಿಯತೆ

ನಿಮ್ಮ ತಂದೆ-ತಾಯಿ ಅಥವಾ ನಿಮ್ಮ ಹತ್ತಿರದ ಕುಟುಂಬಸ್ಥರು ಹೃದಯ ಸಂಬಂಧಿ ಇತಿಹಾಸವನ್ನು ಹೊಂದಿದ್ದರೆ ಇದೂ ಕೂಡ ಕಾರಣವಾಗಲಿದೆ. ಒಂದೇ ವೇಳೆ ನಿಮ್ಮ ಸಹೋದರ 35ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರೆ, ನಿಮಗೆ 25 ವರ್ಷ ದಾಟುತ್ತಿದ್ದಂತೆ ನೀವೂ ಕೂಡ ವೈದ್ಯಕೀಯ ತಪಾಸಣೆಗೆ ಆಗಾಗ ಒಳಪಡುವುದು ಒಳಿತು ಎನ್ನುತ್ತಾರೆ ವೈದ್ಯರು.

Last Updated : Oct 29, 2021, 5:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.