ಹೈದರಾಬಾದ್: ಸೋಡಿಯಂ ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಆದರೆ, ಸೋಡಿಯಂ ಹೆಚ್ಚು ಸೇವನೆಯಿಂದಾಗಿ ಹೃದಯ ರೋಗ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣಗಳು ಹೆಚ್ಚಾಗುವ ಸಂಭವ ಇರುತ್ತದೆ. ಸೋಡಿಯಂನ ಪ್ರಮುಖ ಮೂಲ ಉಪ್ಪಾಗಿದೆ (ಸೋಡಿಯಂ ಕ್ಲೋರೈಡ್). ಇದರ ಜೊತೆಗೆ ಸೋಡಿಯಂ ಗ್ಲುಟಮೆಡ್ ಎಂಬ ವಸ್ತುವನ್ನು ಕೂಡ ಇದು ಹೊಂದಿರುತ್ತದೆ. ಡಬ್ಲ್ಯೂಎಚ್ಒ 'ಸೋಡಿಯಂ ಸೇವನೆ ಕಡಿತದ ಕುರಿತ ಜಾಗತಿಕ ವರದಿ' ಪ್ರಕಾರ, ಜಗತ್ತಿನ ಶೇ 3ರಷ್ಟು ಜನರು ಕಡ್ಡಾಯ ಸೋಡಿಯಂ ಕಡಿತ ನೀತಿಯಿಂದ ರಕ್ಷಿತಗೊಂಡಿದ್ದಾರೆ. ಶೇ 73ರಷ್ಟು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಇದೇ ರೀತಿಯ ನೀತಿಗಳ ಸಂಪೂರ್ಣ ಶ್ರೇಣಿಯ ಅನುಷ್ಠಾನ ನಡೆಸಿಲ್ಲ.
ಈ ಸೋಡಿಯಂ ಸೇವನೆ ಕಡಿತ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಿದರೆ 2030ರ ಹೊತ್ತಿಗೆ ಸುಮಾರು 7 ಮಿಲಿಯನ್ ಜನರ ಜೀವ ಉಳಿಸಬಹುದಾಗಿದೆ. ಇದು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವ ಸಂಖ್ಯೆಯನ್ನು ಕಡಿಮೆ ಮಾಡುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸುವ ಪ್ರಮುಖ ಅಂಶವಾಗಿದೆ. ಆದರೆ, ಇದೀಗ ಕೇವಲ 9 ದೇಶಗಳು ಈ ಸೋಡಿಯಂ ಸೇವನೆ ಕಡಿತದ ಯೋಜನೆಗಳನ್ನು ಶಿಫಾರಸು ಮಾಡಿದೆ. ಅವುಗಳೆಂದರೆ ಬ್ರೆಜಿಲ್, ಚಿಲಿ, ಚೆಸ್ ರಿಪಬ್ಲಿಕ್, ಲಿಧುನಿಯಾ, ಮಲೇಷ್ಯಾ, ಮೆಕ್ಸಿಕೊ, ಸೌದಿ ಅರೇಬಿಯಾ, ಸ್ಪೈನ್ ಮತ್ತು ಉರುಗ್ವೆ.
ಅನಾರೋಗ್ಯಕರ ಡಯಟ್ ಕೂಡ ಸಾವಿಗೆ ಕಾರಣವಾಗುತ್ತದೆ. ಇದರಲ್ಲಿ ಅತಿ ಹೆಚ್ಚಿನ ಸೋಡಿಯಂ ತೆಗೆದುಕೊಳ್ಳುವುದು ಪ್ರಮುಖ ಕಾರಣವಾಗಿದೆ. ವರದಿ ಅನುಸಾರ, ಇನ್ನು ಅನೇಕ ದೆಶಗಳು ಈ ಸೋಡಿಯಂ ಕಡಿತ ನೀತಿಯನ್ನು ಅಳವಡಿಸಿಕೊಳ್ಳಬೇಕಿದೆ. ಸೋಡಿಯಂ ಹೆಚ್ಚಿನ ಸೇವನೆ, ಹೃದಯಾಘಾತ, ಪಾರ್ಶ್ವವಾಯು ಮತ್ತಿತ್ತರ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಸೋಡಿಯಂ ಕಡಿತದ ಬಗ್ಗೆ ಸಮಗ್ರವಾದ ವಿಧಾನವು ಕಡ್ಡಾಯವಾದ ನೀತಿಗಳನ್ನು ಅಳವಡಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಸೋಡಿಯಂಗೆ ಸಂಬಂಧಿಸಿದ ವಿಶ್ವ ಆರೋಗ್ಯ ಸಂಸ್ಥೆ ನಾಲ್ಕು ಉತ್ತಮ ಖರೀದಿ ಮಧ್ಯಸ್ಥಿಕೆಗಳನ್ನು ಒಳಗೊಂಡಿರುತ್ತದೆ, ಇದು ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವಲ್ಲಿ ಹೆಚ್ಚು ಕೊಡುಗೆ ನೀಡುತ್ತದೆ, ಅವುಗಳೆಂದರೆ:
- ಪುನರ್ಸಂಸ್ಕರಣಾ ಆಹಾರಗಳು ಕಡಿಮೆ ಉಪ್ಪನ್ನು ಹೊಂದಿರುತ್ತದೆ. ಜೊತೆಗೆ ತೆಗೆದುಕೊಳ್ಳುವ ಆಹಾರದಲ್ಲಿ ಸೋಡಿಯಂ ಪ್ರಮಾಣದ ಕುರಿತು ಗುರಿ ನಿರ್ಮಾಣ ಮಾಡಬೇಕಿದೆ.
- ಆಸ್ಪತ್ರೆ, ಶಾಲೆ, ಉದ್ಯೋಗ ಸ್ಥಳ ಮತ್ತು ನರ್ಸಿಂಗ್ ಹೋಮ್ಗಳಂತಹ ಸಾರ್ವಜನಿಕ ಅಹಾರ ಸ್ಥಳಗಳಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡುವ ನಿಯಮ ರೂಢಿಸಬೇಕಿದೆ.
- ಸೋಡಿಯಂ ಅಂಶ ಕಡಿಮೆ ಲೇಬಲ್ ಅನ್ನು ಆಹಾರ ಪ್ಯಾಕೇಜ್ಗಳ ಲೇಬಲ್ ಮೇಲೆ ಅಂಟಿಸಬೇಕಿದೆ.
- ಉಪ್ಪು ಅಥವಾ ಸೋಡಿಯಂ ಸೇವನೆ ಕಡಿಮೆ ಮಾಡುವ ಸಂಬಂಧ ಸಾಮಾಜಿಕ ಮಾಧ್ಯಗಳಲ್ಲಿ ಅರಿವು ಮೂಡಿಸಬೇಕಿದೆ.
- ಸಂಸ್ಕರಿಸದ ಆಹಾರಗಳಲ್ಲಿ ಈ ಸೋಡಿಯಂ ಕಡಿತದ ಗುರಿಯನ್ನು ರೂಪಿಸಿಕೊಳ್ಳಲ್ಲಿ ಡಬ್ಲ್ಯೂಎಚ್ಒ ಪ್ರೋತ್ಸಾಹ ನೀಡುತ್ತದೆ. ಈ ಹಿನ್ನೆಲೆ ಡಬ್ಲ್ಯೂಎಚ್ಒ ಜಾಗತಿಕ ಸೋಡಿಯಂ ಬೆಚ್ಮಾರ್ಕ್ ಅಡಿ ಈ ಪಾಲಿಸಿಯನ್ನು ಜಾರಿಗೆ ತಂದಿದೆ. ಸೋಡಿಯಂ ಕಡಿತ ಪಾಲಿಸಿ ಪರಿಣಾಮಕಾರಿಯಾಗಿದೆ.
- ಜಾಗತಿಕವಾಗಿ ದಿನದಲ್ಲಿ ಶೇ 10.8 ಗ್ರಾಂನಷ್ಟು ಸಕಾಸರಿ ಉಪ್ಪನ್ನು ಸೇವಿಸಬೇಕಿದೆ. ಇದು ಡಬ್ಲ್ಯೂಎಚ್ಒ ಶಿಫಾರಸು ಮಾಡುವುದಕ್ಕಿಂತ ದುಪ್ಪಟ್ಟಾಗಿದೆ. ದಿನದಲ್ಲಿ 5 ಗ್ರಾಂ ಅಂದರೆ, ಒಂದು ಟೇಬಲ್ ಸ್ಪೂನ್ ಉಪ್ಪು ಸೇವಿಸಬೇಕು. ಅಧಿಕ ಉಪ್ಪು ಸೇವನೆ ಡಯಟ್ ಮತ್ತು ಪೋಷಕಾಂಶ ಸಂಬಂಧಿತ ಸಾವಿನ ಅಪಾಯ ಹೊಂದಿದೆ. ಅತಿ ಮಟ್ಟದ ಸೇವನೆ ಹೃಯದ ಸಮಸ್ಯೆ ಜೊತೆಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್, ಒಬೆಸಿಟಿ, ಆಸ್ಟಿಪೊರೊಸಿಸ್ ಮತ್ತು ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ.
ಈ ಸೋಡಿಯಂ ಕಡಿತ ನಿಯಮವನ್ನು ಯಾವುದೇ ವಿಳಂಬ ಮಾಡದಂತೆ ಕಾರ್ಯಗತಕ್ಕೆ ತರುವಂತೆ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ಎಲ್ಲಾ ರಾಷ್ಟ್ರದ ಸಮಸ್ಯರಿಗೆ ತಿಳಿಸಿದೆ. ಜೊತೆಗೆ ಆಹಾರ ಉತ್ಪಾದಕರು ಕೂಡ ಈ ಸೋಡಿಯಂ ಅನ್ನು ಕಡಿತಗೊಳಿಸುವ ಗುರಿಯನ್ನು ಹೊಂದಬೇಕು ಎಂದು ಕರೆ ನೀಡಿದೆ.
ಇದನ್ನೂ ಓದಿ: