ETV Bharat / sukhibhava

ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಏರಿಕೆ ಕಾಣುತ್ತಿದೆ ಕೋವಿಡ್​; ಮುಂಜಾಗ್ರತೆಗೆ WHO ಕರೆ - ಜಾಗತಿಕ ಕೋವಿಡ್​ ಪ್ರಕರಣ

Rising Covid cases: ಇತ್ತೀಚಿಗೆ ಅನೇಕ ಕಾರಣದಿಂದಾಗಿ ಶ್ವಾಸಕೋಶದ ಸೋಂಕಿನಲ್ಲಿ ಏರಿಕೆ ಕಂಡಿದೆ. ಕೇವಲ ಕೋವಿಡ್​ 19 ಮಾತ್ರವಲ್ಲದೆ, ಇನ್ನಿತರ ಸೋಂಕು ಮತ್ತು ಬ್ಯಾಕ್ಟೀರಿಯಾಗಳು ಕಾಡುತ್ತಿವೆ.

who-expert-urged-strong-surveillance-and-sequence-sharing-of-covid-19

author img

By ETV Bharat Karnataka Team

Published : Dec 19, 2023, 11:37 AM IST

ನವದೆಹಲಿ: ಕೇರಳದಲ್ಲಿ ಓಮಿಕ್ರಾನ್​​ ಉಪತಳಿಯಾಗಿರುವ ಜೆಎನ್​.1 ಭಾರತದಲ್ಲಿ ಪತ್ತೆಯಾಗುವ ಜೊತೆಗೆ ದೇಶದೆಲ್ಲೆಡೆ ಕೋವಿಡ್​ 19 ಪ್ರಕರಣಗಳ ಏರಿಕೆ ಕೂಡ ಕಂಡು ಬಂದಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ರಾಜ್ಯಗಳಿಗೆ ಸಲಹಾ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚಿಸಿದೆ.

ಭಾರತದಲ್ಲಿ ಮಾತ್ರವಲ್ಲದೇ, ಜಾಗತಿಕ ಮಟ್ಟದಲ್ಲೂ ಕೋವಿಡ್​ 19 ಪ್ರಕರಣಗಳ ಏರಿಕೆ ಕಂಡು ಬಂದಿದೆ. ಹೀಗಾಗಿ ದೇಶಗಳು ಮುಂಜಾಗ್ರತೆ ಜೊತೆಗೆ ಈ ತಳಿಗಳ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಜಾಗತಿಕ ಮಟ್ಟದಲ್ಲಿ ಪ್ರಸ್ತುತ ಎಕ್ಸ್​ಬಿಬಿ ಮತ್ತು ಜೆಎನ್​.1ನಂತಹ ತಳಿಗಳ ಪ್ರಕರಣದಲ್ಲಿ ಶೇ 68ರಷ್ಟು ಏರಿಕೆ ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​ 19 ತಾಂತ್ರಿಕ ಅಧಿಕಾರಿ ಮರಿಯಾ ವಾನ್​ ಕೆರ್ಕೋವ್​​ ವಿಡಿಯೋ ಸಂದೇಶವನ್ನು ಎಕ್ಸ್​​ನಲ್ಲಿ ಪ್ರಕಟಿಸಿದ್ದಾರೆ.

ಡಬ್ಲ್ಯೂಎಚ್​ಒ ನಿರಂತರವಾಗಿ ಪರಿಸ್ಥಿತಿಯ ಅವಲೋಕನವನ್ನು ಮುಂದುವರೆಸಿದೆ. ಚಳಿಗಾಲದ ರಜೆ ದಿನಗಳಲ್ಲಿ ನಿಮ್ಮ ಕುಟುಂಬಗಳು ಮತ್ತು ಸ್ನೇಹಿತರನ್ನು ಸುರಕ್ಷಿತವಾಗಿರಿಸಲು ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ.

ಪ್ರಸರಣಕ್ಕೆ ಪೂರಕ ವಾತಾವರಣ: ಇತ್ತೀಚಿಗೆ ಅನೇಕ ಕಾರಣದಿಂದಾಗಿ ಶ್ವಾಸಕೋಶದ ಸೋಂಕಿನಲ್ಲಿ ಏರಿಕೆ ಕಂಡಿದೆ. ಕೇವಲ ಕೋವಿಡ್​ 19 ವೈರಸ್​ ಮಾತ್ರ ಕಾಣುತ್ತಿಲ್ಲ. ಇನ್ಫ್ಲುಯೆಂಜಾ ಸೇರಿದಂತೆ ಮತರ ಸೋಂಕು ಮತ್ತು ಬ್ಯಾಕ್ಟೀರಿಯಾಗಳು ಸಹ ಜನರನ್ನು ಕಾಡುತ್ತಿವೆ. ನಾವು ಚಳಿಗಾಲವನ್ನು ಪ್ರವೇಶಿಸುತ್ತಿದ್ದೇವೆ. ಜೊತೆಗೆ ರಜೆಗಳು ಆರಂಭವಾಗಿದ್ದು, ಜನರು ಒಟ್ಟಿಗೆ ಸೇರಲು ಆರಂಭಿಸಿದ್ದಾರೆ. ಜನರು ಮನೆಯೊಳಗೆ ಒಟ್ಟಿಗೆ ಸೇರುತ್ತಾರೆ. ಅಲ್ಲಿ ಒಂದು ವೇಳೆ ಗಾಳಿಯಾಡಲು ಪೂರಕ ವಾತಾವರಣ ಇಲ್ಲದೇ ಹೋದಾಗ ರೋಗಗಳು ಜನರಿಗೆ ಹರಡುವ ಸಾಮರ್ಥ್ಯ ಹೆಚ್ಚಿರುತ್ತದೆ.

ಸದ್ಯ ಕೋವಿಡ್​ 19 ಪ್ರಕರಣಗಳು ಪ್ರಸ್ತುತ ಏರಿಕೆ ಕಾಣುತ್ತಿವೆ. ಇದರಲ್ಲಿ ಸಾರ್ಸ್​​ ಕೋವ್​ 2 ವೈರಸ್​ ಸೇರಿದಂತೆ ಇದು ಎಲ್ಲಾ ದೇಶಗಳಲ್ಲಿ ಬದಲಾವಣೆ ಮತ್ತು ಪ್ರಸರಣೆ ಹೊಂದಿದೆ. ಕೆಲವು ದೇಶದಲ್ಲಿ ಎಕ್ಸ್​ಬಿಬಿ ವಂಶವಾಹಿ ಪತ್ತೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಈ ತಳಿ ಶೇ 68ರಷ್ಟು ಏರಿಕೆ ಕಂಡಿದೆ. ಮತ್ತೊಂದು ಗುಂಪಿನಲ್ಲಿ ಜೆಎನ್​.1 ಎಂದು ಪರಿಚಿತವಾಗಿರುವ ಬಿಎ.2.86 ಪ್ರಕರಣಗಳು ಏರಿಕೆ ಕಂಡಿದ್ದು, ಇದು ಲಕ್ಷಣರಹಿತವಾಗಿದೆ.

ಈ ಹಿನ್ನೆಲೆ ನಿಮ್ಮನ್ನು ನೀವು ಸೋಂಕಿನಿಂದ ಸುರಕ್ಷಿತವಾಗಿಟ್ಟುಕೊಳ್ಳಿ. ಒಂದು ವೇಳೆ ಸೋಂಕು ಹೊಂದಿಲ್ಲ ಎಂದರೆ ಆರೋಗ್ಯ ಕಾಳಜಿ ಮುಂದುವರೆಸಿ, ನಿಯಮಿತ ಲಸಿಕೆ ಪಡೆಯಿರಿ. ಈ ಮೂಲಕ ಸೋಂಕನ್ನು ತಡೆಗಟ್ಟಬಹುದು ಎಂದಿದ್ದಾರೆ.

ಸಿಂಗಾಪೂರ್​ನಲ್ಲಿ ಕೂಡ ಕೋವಿಡ್​ 19 ಪ್ರಕರಣಗಳ ಏರಿಕೆ ಕಾಣುತ್ತಿರುವ ಹಿನ್ನೆಲೆ ಸಾರ್ವಜನಿಕ ಜನನಿಬಿಡ ಸ್ಥಳದಲ್ಲಿ ವಿಶೇಷವಾಗಿ ಒಳಾಂಗಣಗಳಲ್ಲಿ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ ಎಂದು ಸಿಂಗಾಪೂರ್​ ಆರೋಗ್ಯ ಸಚಿವರು ತಿಳಿಸಿದ್ದಾರೆ. ಅಲ್ಲದೇ ಪ್ರವಾಸಿಗರು ಕೂಡ ವಿಮಾನ ನಿಲ್ದಾಣ ಸೇರಿದಂತೆ ಜನನಬಿಡ ಪ್ರದೇಶದಲ್ಲಿ ಮಾಸ್ಕ್​ ಧರಿಸುವ ಸೂಚನೆ ಅನುಸರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: JN.1 ತಳಿ ಮೇಲೆ ಕಣ್ಗಾವಲಿಡಿ, ಕೋವಿಡ್​ ಏರಿಕೆ ಕಾಣದಂತೆ ಜಾಗ್ರತೆ ವಹಿಸಿ; ರಾಜ್ಯಗಳಿಗೆ ಕೇಂದ್ರದ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.