ETV Bharat / sukhibhava

ಸಂಭೋಗದ ವೇಳೆ ಎಚ್ಚರ ತಪ್ಪಿದರೆ 'ಜನನಾಂಗದ ಹರ್ಪಿಸ್' ಅಪಾಯ: ಏನಿದು? - Symptoms Of Genital Herpes

ಜನನಾಂಗದ ಹರ್ಪಿಸ್ ಒಂದು ಲೈಂಗಿಕವಾಗಿ ಹರಡುವ ರೋಗ (STD). ಇದನ್ನು ಗುಣಪಡಿಸಲು ಯಾವುದೇ ಚಿಕಿತ್ಸೆಯಿಲ್ಲ. ಆದರೆ, ಅದರ ಲಕ್ಷಣಗಳನ್ನು ಕೆಲವು ಔಷಧಿಗಳ ಸಹಾಯದಿಂದಲೂ, ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ನಿರ್ವಹಿಸಬಹುದು. ಈ ಬಗ್ಗೆ ಹೆಚ್ಚು ವಿವರವಾಗಿ ತಜ್ಞರು ಇಲ್ಲಿ ವಿವರಿಸಿದ್ದಾರೆ.

Genital Herpes
'ಜನನಾಂಗದ ಹರ್ಪಿಸ್
author img

By

Published : Sep 26, 2021, 6:13 PM IST

ಲೈಂಗಿಕತೆ ಎಂಬುದೊಂದು ನೈಸರ್ಗಿಕ ಕ್ರಿಯೆ. ಇದನ್ನು ವಯಸ್ಕರು ಬಯಸುತ್ತಾರೆ. ಆದರೆ, ಇದಕ್ಕೂ ಮುನ್ನ ಕೆಲವು ಆರೋಗ್ಯಕರ ಕ್ರಮಗಳನ್ನು ಅನುಸರಿಸುವುದು ಬಹಳ ಸೂಕ್ತ. ಇಲ್ಲದಿದ್ದರೆ ಹಲವಾರು ಸೋಂಕುಗಳು ಹರಡಬಹುದು. ಈ ದಿನ ನಿಮಗೆ ಇಂತಹದ್ದೇ ಒಂದು ಸೋಂಕಿನ ಬಗ್ಗೆ ತಿಳಿಸಿಕೊಡುತ್ತೇವೆ.

ಜನನಾಂಗದ ಹರ್ಪಿಸ್ ಒಂದು ಲೈಂಗಿಕವಾಗಿ ಹರಡುವ ರೋಗ (STD). ಇದನ್ನು ಗುಣಪಡಿಸಲು ಯಾವುದೇ ಚಿಕಿತ್ಸೆಯಿಲ್ಲ. ಆದರೆ, ಅದರ ಲಕ್ಷಣಗಳನ್ನು ಕೆಲವು ಔಷಧಿಗಳ ಸಹಾಯದಿಂದಲೂ, ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ನಿರ್ವಹಿಸಬಹುದು. ಈ ಬಗ್ಗೆ ಹೆಚ್ಚು ವಿವರವಾಗಿ ಅರ್ಥಮಾಡಿಕೊಳ್ಳಲು ಈಟಿವಿ ಭಾರತ್ ಸುಖಿಭವ ತಂಡ ಕಯಾ ಕ್ಲಿನಿಕ್ ಇಂಡಿಯಾದ ವೈದ್ಯಕೀಯ ಮುಖ್ಯಸ್ಥ ಡಾ. ಸುಶಾಂತ್ ಶೆಟ್ಟಿ ಅವರೊಂದಿಗೆ ಮಾತನಾಡಿತು. ಈ ವೇಳೆ ಅವರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು.

'ಜನನಾಂಗದ ಹರ್ಪಿಸ್' ಎಂದರೇನು?

ಹರ್ಪಿಸ್ ಎಂಬುದು ಚರ್ಮದ ಮೇಲೆ ಗುಳ್ಳೆಗಳು/ಹುಣ್ಣುಗಳ ರೂಪದಲ್ಲಿ ಕಾಣಿಸಿಕೊಳ್ಳುವ ರಿಂಗ್ವರ್ಮ್​ ರೀತಿಯದ್ದೊಂದು ರೂಪ. ಇದನ್ನು ಸಾಮಾನ್ಯವಾಗಿ ಬ್ಯಾಕ್ಟೀರಿಯಾದಿಂದ ಹರಡುವ ಚರ್ಮದ ಸೋಂಕು ಎಂತಲೂ ಪರಿಗಣಿಸಲಾಗುತ್ತದೆ. ಏಕೆಂದರೆ, ಇದು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್​ನಿಂದ ಉಂಟಾಗುತ್ತದೆ.

ಈ ಹರ್ಪಿಸ್ ಅನ್ನು ಸಾಂಕ್ರಾಮಿಕವೆಂದು ಪರಿಗಣಿಸಲಾಗುತ್ತದೆ. ಹರ್ಪಿಸ್ ರೋಗ ಸೋಂಕಿತ ವ್ಯಕ್ತಿಯ ಬಾಧಿತ ಪ್ರದೇಶವಾಗಿರುತ್ತದೆ. ಅವರ ಬಟ್ಟೆ ಅಥವಾ ಅವರು ಹಿಂದೆ ಮುಟ್ಟಿದ ಯಾವುದೇ ಇತರ ವಸ್ತುಗಳನ್ನು ಸ್ಪರ್ಶಿಸಿದರೆ ಮಾತ್ರ ಸೋಂಕು ಹರಡಬಲ್ಲದು. ಹಾಗೆಯೇ ಜನನಾಂಗದ ಹರ್ಪಿಸ್ ರೋಗ ಹೊಂದಿರುವ ವ್ಯಕ್ತಿ ಜೊತೆ ಲೈಂಗಿಕ ಸಂಭೋಗ ನಡೆಸಿದರೆ ಅವರಿಗೂ ಖಾಯಿಲೆ ಹರಡುತ್ತದೆ. ಈ ರೋಗದ ಪರಿಣಾಮಗಳನ್ನು ಪುರುಷರು ಮತ್ತು ಮಹಿಳೆಯರ ಜನನಾಂಗಗಳ ಚರ್ಮದ ಮೇಲೆ ಕಾಣಬಹುದು ಎಂದು ಡಾ.ಶೆಟ್ಟಿ ವಿವರಿಸುತ್ತಾರೆ.

ಈ ಸೋಂಕು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಒಮ್ಮೆ ಸೋಂಕು ದೇಹ ಪ್ರವೇಶಿಸಿದ ನಂತರ ಸೋಂಕು ಶಾಶ್ವತವಾಗಿ ಅಲ್ಲಿ ವಾಸಿಸುತ್ತದೆ ಎಂದು ಡಾ.ಶೆಟ್ಟಿ ಎಚ್ಚರಿಸುತ್ತಾರೆ.

ಜನನಾಂಗದ ಹರ್ಪಿಸ್​ನ ಲಕ್ಷಣಗಳೇನು?

ಸಾಮಾನ್ಯವಾಗಿ ಸೋಂಕಿನ ಆರಂಭಿಕ ಹಂತಗಳಲ್ಲಿ ಜನರು ಅದರ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಏಕೆಂದರೆ, ಆ ಸಮಯದಲ್ಲಿ ಅದರ ಲಕ್ಷಣಗಳು ಅಷ್ಟು ತೀವ್ರವಾಗಿ ಕಾಣದು. ಕಾಲನಂತರದಲ್ಲಿ ಜನನಾಂಗಗಳ ಸುತ್ತ ತುರಿಕೆ ಅಥವಾ ನೋವಿನ ದದ್ದು, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೇ, ಕೆಲವೊಮ್ಮೆ ಜ್ವರ, ಮೂತ್ರ ವಿಸರ್ಜನೆಯ ನೋವು, ಜನನಾಂಗಗಳಲ್ಲಿ ಊತ ಅಥವಾ ಕೆಂಪಾಗುವುದು, ತಲೆನೋವು ಮತ್ತು ಆಯಾಸದಂತಹ ಲಕ್ಷಣಗಳು ವ್ಯಕ್ತಿಯಲ್ಲಿ ಕಾಣಿಸಿಕೊಳ್ಳಲು ಆರಂಭವಾಗುತ್ತವೆ.

ಇದು ಲೈಂಗಿಕ ಸಂಭೋಗದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ನಂತರ ಇದು ಅವರ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಡಾ. ಶೆಟ್ಟಿ ಹೇಳುತ್ತಾರೆ. ಆದ್ದರಿಂದ, ಸೋಂಕಿನಿಂದ ಬಳಲುತ್ತಿರುವವರು ಲೈಂಗಿಕ ಸಂಪರ್ಕವನ್ನು ತಪ್ಪಿಸಬೇಕು ಎಂಬ ಸಲಹೆ ಅವರದ್ದು.

ಅಲ್ಲದೆ, ರೋಗದ ಲಕ್ಷಣಗಳು ಕಡಿಮೆಯಾದ ನಂತರವೂ ಲೈಂಗಿಕ ಸಂಭೋಗದ ಸಮಯದಲ್ಲಿ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಂಭೋಗದ ಸಮಯದಲ್ಲಿ ಜನರು ಗುದ ಸಂಭೋಗ ಮತ್ತು ಲೈಂಗಿಕ ಆಟಿಕೆಗಳ ಬಳಕೆಯನ್ನು ತಪ್ಪಿಸಬೇಕು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: ಕೂದಲು ಉದುರುವಿಕೆ ತಡೆಗಟ್ಟಲು ಇಲ್ಲಿದೆ ಸರಳ ಪರಿಹಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.