ನವದೆಹಲಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಾಲಿನ ಬೆಲೆ ಸಾಕಷ್ಟು ಹೆಚ್ಚಾಗಿದ್ದರೂ, ದೆಹಲಿ ಮತ್ತು ಎನ್ಸಿಆರ್ ವಲಯದಲ್ಲಿ ಹಾಲಿನ ಗುಣಮಟ್ಟ ಮಾತ್ರ ಕಳಪೆಯಾಗಿ ಮುಂದುವರೆದಿರುವುದು ಕಂಡು ಬರುತ್ತಿದೆ. ಹಾಲಿನ ಬಗ್ಗೆ ಗ್ರಾಹಕರ ಅಭಿಪ್ರಾಯ ತಿಳಿಯಲು ಆನ್ಲೈನ್ ಕಮ್ಯುನಿಟಿ ಪ್ಲ್ಯಾಟ್ಫಾರ್ಮ್ ಲೋಕಲ್ ಸರ್ಕಲ್ಸ್ (Local Circles) ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವ್ಯಾಪಕ ಸಮೀಕ್ಷೆಯೊಂದನ್ನು ನಡೆಸಿದೆ. ಮನೆಗಳಲ್ಲಿ ಹಾಲಿನ ಬಳಕೆ ಪ್ರಮಾಣ, ಗ್ರಾಹಕರ ಆದ್ಯತೆಗಳು, ತಾಜಾತನ ಮತ್ತು ಗುಣಮಟ್ಟದ ಸಮಸ್ಯೆಗಳನ್ನು ತಿಳಿಯಲು ಈ ಸಮೀಕ್ಷೆ ನಡೆಸಲಾಗಿದೆ.
ಹಾಲಿನ ಬಳಕೆಯ ಬಗ್ಗೆ ಗ್ರಾಹಕರಿಗೆ ಪ್ರಶ್ನೆಗಳನ್ನು ಹಾಕಲಾಯಿತು. ಅಲ್ಲದೇ ತಮಗೆ ಹಾಲು ಯಾವೆಲ್ಲ ರೀತಿಯಲ್ಲಿ ಅಂದರೆ ಯಾರ್ಯಾರ ಮೂಲಕ, ಎಲ್ಲೆಲ್ಲಿಂದ ಬರುತ್ತದೆ ಎಂಬುದನ್ನು ಹಾಲು ಮಾರುವ ವ್ಯಕ್ತಿಗೆ ಪ್ರಶ್ನಿಸುವಂತೆ ಗ್ರಾಹಕರಿಗೆ ಉತ್ತೇಜಿಸಲಾಯಿತು. ಗ್ರಾಹಕರ ಸ್ವಹಿತಾಸಕ್ತಿಗಾಗಿ ಮತ್ತು ಸಮೀಕ್ಷೆಗಾಗಿ ಸತ್ಯ ಆಧರಿತ ಮಾಹಿತಿಗಳನ್ನು ಪಡೆಯಲು ಗ್ರಾಹಕರಿಗೆ ಈ ರೀತಿ ಹೇಳಲಾಗಿತ್ತು.
ಹಾಲಿನ ಗುಣಮಟ್ಟ ಮತ್ತು ಶುದ್ಧತೆಯ ಬಗ್ಗೆ ಗ್ರಾಹಕರು ಸತತವಾಗಿ ತಕರಾರು ಮಾಡುತ್ತಿರುವುದು ಆದ್ಯತೆಯ ವಿಷಯವಾಗಿತ್ತು. ಅಲ್ಲದೇ ಹಾಲು ಕಲಬೆರಕೆಯ ಬಗ್ಗೆಯೂ ಹಲವಾರು ದೂರುಗಳಿದ್ದವು. ಸಮೀಕ್ಷೆಯಲ್ಲಿ ಭಾಗಿಯಾದ 9356 ಜನರ ಪೈಕಿ, ಮೂವರಲ್ಲಿ ಇಬ್ಬರು ತಾವು ಸೇವಿಸುವ ಹಾಲು ಶುದ್ಧವಾಗಿಲ್ಲ ಎಂದು ಹೇಳಿದರೆ, ಮೂವರಲ್ಲಿ ಕೇವಲ ಒಬ್ಬರು ಮಾತ್ರ ತಾವು ಶುದ್ಧವಾದ ಆಕಳು, ಎಮ್ಮೆಯ ಹಾಲನ್ನು ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಮೂವರಲ್ಲಿ ಇಬ್ಬರು ಜನರ ಪೈಕಿ ಶೇ 21 ರಷ್ಟು ಜನ ತಾವು ತರುತ್ತಿರುವ ಹಾಲಿನಲ್ಲಿ ಸಾಕಷ್ಟು ನೀರಿದೆ ಮತ್ತು ಅದರಲ್ಲಿ ಫ್ಯಾಟ್, ಮಿಲ್ಕ್ ಪೌಡರ್ ಸೇರಿಸಲಾಗಿದೆ ಎಂದಿದ್ದಾರೆ. ಇನ್ನು ತಮ್ಮ ಹಾಲು ನೀರಿನಿಂದ ತೆಳುವಾಗಿದೆ ಎಂದು ಅದರಲ್ಲಿ ಶೇ 17 ರಷ್ಟು ಜನ ತಿಳಿಸಿದ್ದಾರೆ.
ಹಾಲಿನ ಗುಣಮಟ್ಟದ ಬಗ್ಗೆ ಅನಿಶ್ಚಿತತೆ: ಇದಲ್ಲದೇ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 8 ರಷ್ಟು ಜನರು ತಾವು ಸೇವಿಸುವ ಹಾಲಿನ ಗುಣಮಟ್ಟದ ಬಗ್ಗೆ ಅನಿಶ್ಚಿತತರಾಗಿದ್ದಾರೆ. ಟೋನ್ಡ್ ಮತ್ತು ಡಬಲ್ ಟೋನ್ಡ್ ಹಾಲಿನಲ್ಲಿ ಕೆನೆರಹಿತ ಹಾಲಿನ ಪುಡಿ ಇರುತ್ತದೆ ಎಂದು ಅನೇಕ ಗ್ರಾಹಕರು ಅರ್ಥಮಾಡಿಕೊಂಡಿರುವುದು ವಿಶೇಷ. ಅಲ್ಲದೇ, ಸಮುದಾಯದ ಚರ್ಚೆಗಳಲ್ಲಿ, ಹಾಲಿನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕೆಲವು ಸಂದರ್ಭಗಳಲ್ಲಿ ಹಾಲಿಗೆ ಬಾಹ್ಯ ಕೊಬ್ಬನ್ನು ಸೇರಿಸುವ ಬಗ್ಗೆ ಜನ ಕಳವಳ ವ್ಯಕ್ತಪಡಿಸಿದರು.
ಅದೇ ರೀತಿ, ಒಂದು ಕುಟುಂಬವು ಪ್ರತಿದಿನ ಎಷ್ಟು ಲೀಟರ್ ಹಾಲನ್ನು ಸೇವಿಸುತ್ತದೆ ಎಂದು ಕೇಳಿದಾಗ, ದೆಹಲಿ - ಎನ್‌ಸಿಆರ್‌ನಲ್ಲಿ ಶೇ 58 ರಷ್ಟು ಕುಟುಂಬಗಳು ತಾವು ದಿನಕ್ಕೆ 1.5 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಹಾಲು ಖರೀದಿಸುತ್ತೇವೆ ಎಂದು ತಿಳಿಸಿದರು. ಪ್ರಶ್ನೆಗಳಿಗೆ ಬಂದ ಒಟ್ಟು 9230 ಉತ್ತರಗಳ ಪೈಕಿ ಶೇ 37 ರಷ್ಟು ಜನ ತಾವು ಪ್ರತಿದಿನ 1.5 ಲೀಟರ್ ಅಥವಾ 2 ಲೀಟರ್ಗೂ ಹೆಚ್ಚು ಹಾಲು ಖರೀದಿಸುತ್ತೇವೆ ಎಂದಿದ್ದಾರೆ.
ಶೇ 11 ರಷ್ಟು ಜನರ 2.5 ರಿಂದ 3 ಲೀಟರ್, ಶೇ 10 ರಷ್ಟು ಜನ 3 ಲೀಟರ್‌ಗಿಂತ ಹೆಚ್ಚು ಹಾಲು ಖರೀದಿಸುತ್ತಾರೆ. ಮತ್ತೊಂದೆಡೆ ಶೇ 28 ರಷ್ಟು ಕುಟುಂಬಗಳು 1 ಲೀಟರ್ ಮತ್ತು ಶೇ 14 ರಷ್ಟು ಕುಟುಂಬಗಳು ಅರ್ಧ ಲೀಟರ್ ಹಾಲು ಮಾತ್ರ ಸೇವಿಸುತ್ತಾರೆ.
ಒಂದೂವರೆಯಿಂದ 2 ಲೀಟರ್ ಹಾಲು ಬಳಕೆ: ಪ್ರಶ್ನೆಗೆ ಸ್ವೀಕರಿಸಿದ 9,230 ಪ್ರತಿಕ್ರಿಯೆಗಳಲ್ಲಿ, 37 ಪ್ರತಿಶತ ಕುಟುಂಬಗಳು ತಾವು ಪ್ರತಿದಿನ 1.5-2 ಲೀಟರ್ ಹಾಲನ್ನು ಸೇವಿಸುತ್ತೇವೆ ಎಂದು ಹಂಚಿಕೊಂಡಿದ್ದಾರೆ; 11 ರಷ್ಟು ಜನರು 2.5 ರಿಂದ 3 ಲೀಟರ್ಗಳನ್ನು ಸೇವಿಸುತ್ತಾರೆ; ಮತ್ತು ಶೇಕಡಾ 10 ರಷ್ಟು ಜನರು 3 ಲೀಟರ್‌ಗಿಂತ ಹೆಚ್ಚು ಸೇವಿಸುತ್ತಾರೆ. ಮತ್ತೊಂದೆಡೆ, 28 ಪ್ರತಿಶತ ಕುಟುಂಬಗಳು 1 ಲೀಟರ್ ಮತ್ತು 14 ಪ್ರತಿಶತದಷ್ಟು ಜನರು ಅರ್ಧ ಲೀಟರ್ ಮಾತ್ರ ಸೇವಿಸುತ್ತಾರೆ ಎಂದು ಸೂಚಿಸಿದ್ದಾರೆ.
ಅಂದರೆ ದೆಹಲಿ ಎನ್ಸಿಆರ್ ವಲಯದ ಪ್ರತಿ ಮೂರು ಕುಟುಂಬಗಳ ಪೈಕಿ ಸುಮಾರು ಒಂದು ಕುಟುಂಬವು ಪ್ರತಿದಿನ ಅರ್ಧದಿಂದ ಒಂದು ಲೀಟರ್ ಹಾಲು ಮಾತ್ರ ಬಳಸುತ್ತವೆ. ತಮ್ಮ ಮನೆಗೆ ಬರುವ ಹಾಲು ಸುಮಾರು 200 ರಿಂದ 500 ಕಿಮೀ ದೂರದಿಂದ ಬರುತ್ತದೆ ಎಂದು ಶೇ 48 ರಷ್ಟು ಅಂದರೆ 9008 ಜನ ಹೇಳಿದ್ದಾರೆ. ಅದೇ ರೀತಿ ತಮಗೆ ಹಾಲು 500 ರಿಂದ 1000 ಕಿಮೀ ದೂರದಿಂದ ಬರುತ್ತದೆ ಎಂದು ಶೇ 47 ರಷ್ಟು ಜನ ಹೇಳಿದ್ದಾರೆ.
ಇದನ್ನೂ ಓದಿ: ಮನ್ಮುಲ್ ಹಾಲು ಕಲಬೆರಕೆ ಪ್ರಕರಣ ಸಿಐಡಿಗೆ ವರ್ಗಾವಣೆ