ETV Bharat / sukhibhava

ಮುಟ್ಟು ನಿಲ್ಲುವಿಕೆ ಅವಧಿಯಲ್ಲಿ ಮಹಿಳೆಯರಲ್ಲಿ ಹೆಚ್ಚುವ ತೂಕ; ಈ ವಿಚಾರ ಗಮನದಲ್ಲಿರಲಿ! - ಪ್ರಮುಖ ಕಾರಣ ದೇಹದಲ್ಲಿನ ಈಸ್ಟ್ರೋಜನ್​ ಮತ್ತು

Menopause: ಮೆನೋಪಾಸ್​ ಸಮಯದಲ್ಲಿ ತೂಕ ಕಳೆದುಕೊಳ್ಳಲು ಮಹಿಳೆಯರು ಯಾವ ಕ್ರಮ ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ

Weight gain during menopause in women
Weight gain during menopause in women
author img

By ETV Bharat Karnataka Team

Published : Nov 9, 2023, 5:34 PM IST

ಬಹುತೇಕ ಮಹಿಳೆಯರಲ್ಲಿ ಮೆನೋಪಾಸ್​ (ಮುಟ್ಟುವ ನಿಲ್ಲುವ ಅವಧಿ) ಸಮಯದಲ್ಲಿ ತೂಕ ಹೆಚ್ಚಳವಾಗುತ್ತದೆ. ಈ ಸಮಸ್ಯೆಗೆ ಪ್ರಮುಖ ಕಾರಣ ದೇಹದಲ್ಲಿನ ಈಸ್ಟ್ರೋಜನ್​ ಮತ್ತು ಪ್ರೋಗೆಸ್ಟ್ರೊನ್​ ಹಾರ್ಮೋನ್​ಗಳ ಮಟ್ಟ ಇಳಿಕೆಯಾಗುವುದು. ವಯಸ್ಸಾದಂತೆ ಸ್ನಾಯುಗಳ ಬಲ ಕುಗ್ಗುತ್ತದೆ. ದೇಹದಲ್ಲಿನ ಕೊಬ್ಬಿನ ಪ್ರಮಾಣ ಕೂಡ ಹೆಚ್ಚುತ್ತದೆ. ಇದರ ಜೊತೆಗೆ ದೇಹದ ಚಯಾಪ ಚಯ ಕ್ರಿಯೆ ಕೂಡ ಕಡಿಮೆಯಾಗುತ್ತದೆ. ಹೀಗಾಗಿ ದೇಹದ ಕ್ಯಾಲೋರಿ ಕರಗಿಸುವ ಶಕ್ತಿ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ. ಆದಾಗ್ಯೂ ನಿಯಮಿತ ವ್ಯಾಯಾಮದಿಂದ ಈ ತೂಕ ನಿರ್ವಹಣೆ ಸಾಧ್ಯ. ಈ ನಿಟ್ಟಿನಲ್ಲಿ ಮೆನೋಪಾಸ್​ ಸಮಯದಲ್ಲಿ ತೂಕ ಕಳೆದುಕೊಳ್ಳಲು ಯಾವ ಅಂಶವನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ

ಸಮತೋಲಿತ ಆಹಾರ: ಮಹಿಳೆಯರು ಮೆನೋಪಾಸ್​ ಸಮಯದಲ್ಲಿ ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರಗಳು ಪಾಲನೆ ಅವಶ್ಯವಾಗಿದೆ​. ಇದಕ್ಕಾಗಿ ತಾಜಾ ಹಣ್ಣು ಮತ್ತು ತರಕಾರಿಗಳಿಂದ ಕೂಡಿದ ಪೋಷಕಾಂಶ ಸಮೃದ್ಧ ಆಹಾರಗಳ ಸೇವನೆ ಮಾಡುವತ್ತ ಹೆಚ್ಚಿನ ಗಮನವಹಿಸಬೇಕು. ಈ ಸಮಯದಲ್ಲಿ ಮಹಿಳೆಯರು ಹಲವು ಸಮಸ್ಯೆಗೆ ಒಳಗಾಗುವ ಹಿನ್ನೆಲೆ ಈ ಸಂಬಂಧ ತಮ್ಮ ಆಹಾರ ಅಭ್ಯಾಸ ಮತ್ತು ಬದಲಾವಣೆ ಕುರಿತು ತಜ್ಞರಿಂದ ಸಮಾಲೋಚನೆ ಪಡೆಯುವುದು ಕೂಡ ಉತ್ತಮವಾಗಿದೆ.

ವ್ಯಾಯಾಮ: ಈ ಸಮಯದಲ್ಲಿ ವಯೋ ಸಂಬಂಧಿ ಆರೋಗ್ಯ ಸಮಸ್ಯೆಗಳು, ತೂಕ ಹೆಚ್ಚಳ ಸಮಸ್ಯೆಯನ್ನು ಅನೇಕ ಮಂದಿ ಎದುರಿಸುತ್ತಾರೆ. ವಿಶೇಷವಾಗಿ ಮಹಿಳೆಯರು ಮೆನೋಪಾಸ್​ ಸಮಯದಲ್ಲಿ ಅನೇಕ ಆರೋಗ್ಯ ಸಮಸ್ಯೆ ಹೊಂದಿರುತ್ತಾರೆ. ಈ ಹಿನ್ನೆಲೆ ಇದರಿಂದ ಮುಕ್ತಿ ಹೊಂದಲು ಇರುವ ಅವಕಾಶ ಎಂದರೆ ವ್ಯಾಯಾಮವಾಗಿದೆ. ಮನೆಯಲ್ಲಿನ ತಮ್ಮ ದೈನಂದಿನ ಕೆಲಸದ ಹೊರತಾಗಿ ಬೆಳಗ್ಗೆ ಅಥವಾ ಸಂಜೆ ವಾಕಿಂಗ್​ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಇದರ ಜೊತೆಗೆ ಜಿಮ್​ ಅಥವಾ ಇನ್ನಿತರ ಅಗತ್ಯ ವ್ಯಾಯಾಮವನ್ನು ಅನುಸರಿಸಬಹುದು. ಇದರಿಂದ ತೂಕ ಹೆಚ್ಚಳದ ಸಮಸ್ಯೆ ನಿರ್ವಹಣೆ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು

ಒತ್ತಡದಿಂದ ಬಿಡುಗಡೆ: ಮೆನೋಪಾಸ್ ಹಂತದಲ್ಲಿ ಅನೇಕ ಮಂದಿ ಅನೇಕ ರೀತಿಯ ಒತ್ತಡ ಎದುರಿಸುತ್ತಾರೆ. ಇದರಿಂದ ಸರಿಯಾದ ನಿದ್ದೆ ಕೂಡ ಆಗುವುದಿಲ್ಲ. ಪರಿಣಾಮ ತೂಕ ಹೆಚ್ಚಳದಂತಹ ಸಮಸ್ಯೆ ಉಂಟಾಗುತ್ತದೆ. ಇದರಿಂದ ಹೊರ ಬರಲು ಉತ್ತಮ ಮಾರ್ಗ ಎಂದರೆ ಧ್ಯಾನದಂತಹ ಒತ್ತಡ ನಿವಾರಣೆಯಲ್ಲಿ ತೊಡಗುವುದು. ಒತ್ತಡವು ದೇಹಕ್ಕೆ ಅಗತ್ಯವಾದ ಮಾನಸಿಕ ಶಾಂತಿಯನ್ನು ಕಡಿಮೆ ಮಾಡುತ್ತದೆ. ಇದು ಪರೋಕ್ಷವಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಹಿಂಜರಿಕೆ ಬೇಡ: ಮಹಿಳೆಯರು ಅನೆಕ ಬಾರಿ ತಮ್ಮ ಅನೇಕ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರ ಜೊತೆಗೆ ಚರ್ಚಿ ತ್ತಾರೆ. ಮೆನೋಪಸ್​ ಸಮಸ್ಯೆ ವಿಚಾರದಲ್ಲೂ ಅವರು ಮುಕ್ತವಾಗಿ ಚರ್ಚಿಸಬೇಕಿದೆ. ಅಗತ್ಯ ಸಂದರ್ಭದಲ್ಲಿ ಯಾವುದೇ ಅಂಜಿಕೆಯಿಲ್ಲದೆ ಈ ಕುರಿತು ಮಾತನಾಡಿದಾಗ ವೈದ್ಯರು ಈ ಕುರಿತು ಚಿಕಿತ್ಸೆಯ ಸಲಹೆಯನ್ನು ನೀಡುತ್ತಾರೆ. ಹಾರ್ಮೋನ್​ ಬದಲಾವಣೆ ಚಿಕಿತ್ಸೆ ಮತ್ತು ಸಮತೋಲಿತ ಥೆರಪಿಯಂತಹ ಚಿಕಿತ್ಸೆಗಳ ಸಲಹೆ ಮಾಡುತ್ತಾರೆ. ಈ ಚಿಕಿತ್ಸೆಯು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಗು ಹೊಂದುವ ಕನಸಿಗೆ ಅಡ್ಡಿಯಾಗುವುದು ಈ ಜೀವನ ಶೈಲಿ: ಬೇಕಿದೆ ಆರೋಗ್ಯಕರ ಅಭ್ಯಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.