ETV Bharat / sukhibhava

ದೇಹದ ತೂಕ ಕಡಿಮೆಯಾಗಬೇಕಾ?: ದಿನಚರಿಯಲ್ಲಿ ಈ ಸಲಹೆ ಫಾಲೋ ಮಾಡಿ - ಆಹಾರ ಕ್ರಮ

ಲೌಬರೋ ವಿಶ್ವವಿದ್ಯಾಲಯದ ಸಂಶೋಧಕ ಹೆನ್ರಿಯೆಟ್ಟಾ ಗ್ರಹಾಂ, ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ನಮ್ಮ ದಿನಚರಿಯಲ್ಲಿ ನಾವು ಮಾಡಬಹುದಾದ ಸಣ್ಣ ಬದಲಾವಣೆಗಳನ್ನು ವಿವರಿಸಿದ್ದಾರೆ.

representative image
ಪ್ರಾತಿನಿಧಿಕ ಚಿತ್ರ
author img

By

Published : Jan 20, 2023, 5:49 PM IST

ಲೋಗ್‌ಬರೋ (ಇಂಗ್ಲೆಂಡ್​): ಸಮತೋಲಿತ ಆಹಾರ, ಚಟುವಟಿಕೆ ಮೂಲಕ ದೇಹ ದಂಡಿಸಿ, ತೂಕ ಕಳೆದುಕೊಳ್ಳುವುದು, ನಿಯಂತ್ರಣದಲ್ಲಿ ಇಡುವುದು ತುಂಬಾ ಮುಖ್ಯ. ಕೆಲವು ವೈಜ್ಞಾನಿಕ ನಿಯಮಗಳ ಮೂಲಕ ತೂಕ ನಿಯಂತ್ರಣ ಮತ್ತು ತೂಕ ನಷ್ಟ ಮಾಡಬಹುದು. ತೂಕವನ್ನು ಕಳೆದುಕೊಳ್ಳುವುದು ಹಲವರ ಸಂಕಲ್ಪ. ಆದರೂ ಇದು ನಮ್ಮಲ್ಲಿ ಹೆಚ್ಚಿನವರು ಸಾಧಿಸಲು ಹೆಣಗಾಡುತ್ತಾರೆ. ನಮ್ಮ ತೂಕ ನಿರ್ವಹಿಸುವಾಗ ಉತ್ತಮವಾಗಿ ಕಾರ್ಯನಿರ್ವಹಿಸುವ ಒಂದು ತಂತ್ರವೆಂದರೆ ಸಣ್ಣ ಬದಲಾವಣೆಯ ವಿಧಾನ.

ಸಣ್ಣ ಬದಲಾವಣೆ ಉಪಯುಕ್ತ: ತಮ್ಮ ತೂಕವನ್ನು ಕಡಿಮೆ ಮಾಡ ಬಯಸುವ ಹೆಚ್ಚಿನ ಜನರು ತಮ್ಮ ಆಹಾರ ಅಥವಾ ದೈಹಿಕ ಚಟುವಟಿಕೆಯ ಅಭ್ಯಾಸಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವ ಮೂಲಕ ಪ್ರಾರಂಭಿಸುತ್ತಾರೆ. ಆದರೆ, ದೊಡ್ಡ ಬದಲಾವಣೆಗಳು ಕಾಲಾನಂತರದಲ್ಲಿ ಉಳಿಸಿಕೊಳ್ಳಲು ಕಷ್ಟವಾಗಬಹುದು. ಏಕೆಂದರೆ ಅವರಿಗೆ ಹೆಚ್ಚಿನ ಮಟ್ಟದ ಪ್ರೇರಣೆ ಅಗತ್ಯವಿರುತ್ತದೆ. ಇಲ್ಲಿ ಸಣ್ಣ ಬದಲಾವಣೆಯ ವಿಧಾನವು ಉಪಯುಕ್ತವಾಗಿದೆ.

ಈ ತೂಕ ನಿರ್ವಹಣಾ ತಂತ್ರದಲ್ಲಿ ಜನರು ತಿನ್ನುವ ಕ್ಯಾಲೊರಿಗಳನ್ನು ಕಡಿಮೆ ಮಾಡಬೇಕು. ಸಣ್ಣ ಬದಲಾವಣೆಗಳನ್ನು ಮಾಡುವಾಗ ನಾವು ವಿಫಲಗೊಳ್ಳುವ ಸಾಧ್ಯತೆ ಕಡಿಮೆ. ಅಷ್ಟೇ ಅಲ್ಲ ಇದು ಕಾಲಾನಂತರದಲ್ಲಿ ದೊಡ್ಡದನ್ನು ಮಾಡಲು ನಮ್ಮನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಸಣ್ಣ ಬದಲಾವಣೆ ವಿಧಾನವು ಜನರು ತಮ್ಮ ತೂಕವನ್ನು ನಿರ್ವಹಿಸಲು ಸಹಾಯ ಮಾಡುವ ಪರಿಣಾಮಕಾರಿ ತಂತ್ರವಾಗಿದೆ. ಅವುಗಳು ಹೀಗಿವೆ..

ಆಹಾರದ ಮೇಲೆ ನಿಗಾವಹಿಸಿ: ಕೇವಲ ವ್ಯಾಯಾಮ ಮತ್ತು ಆಹಾರದತ್ತ ನೀವು ಹೆಚ್ಚು ಗಮನಹರಿಸಿ. ಫಿಟ್ನೆಸ್​​​ಗಾಗಿ ಮೊದಲು ಬೆಳಗ್ಗೆ ಬೇಗ ಏಳುವುದು, ಡಯಟ್, ವಾಕಿಂಗ್, ವ್ಯಾಯಾಮ, ರನ್ನಿಂಗ್ ಮಾಡುವುದು ತುಂಬಾ ಮುಖ್ಯ. ಇದು ನಿಮ್ಮ ತೂಕ ಕಡಿಮೆ ಮಾಡಲು ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿ. ಪರಿಣಾಮಕಾರಿ ತೂಕ ನಿರ್ವಹಣೆ ಮತ್ತು ತೂಕ ನಷ್ಟಕ್ಕೆ ಮೊದಲು ಮಾಡಬೇಕಾದ ಕೆಲಸ ಅಂದ್ರೆ ಹೆಚ್ಚುವರಿ ಕೊಬ್ಬಿನ ಶೇಖರಣೆ ತಡೆಯುವುದು. ಇದು ತೂಕ ನಷ್ಟದ ಜೊತೆಗೆ ಆರೋಗ್ಯಕರ ದೇಹ ಮತ್ತು ಸಂಯೋಜನೆಯ ನಿರ್ವಹಣೆ ಉತ್ತೇಜಿಸುತ್ತದೆ. ಆರೋಗ್ಯಕರ ದೇಹದ ತೂಕ ಕಾಪಾಡಲು ಅಧಿಕ ತೂಕಕ್ಕೆ ಕಾರಣವಾಗುವ ಅಂಶಗಳತ್ತ ಮೊದಲು ಗಮನಹರಿಸಬೇಕು.

ದೈಹಿಕ ಚಟುವಟಿಕೆಗೆ ಪ್ರಾಮುಖ್ಯತೆ: ತೂಕ ನಷ್ಟಕ್ಕೆ ಮೊದಲು ನಿಯಮಿತ ವ್ಯಾಯಾಮ ಮಾಡುವುದು ಮುಖ್ಯ. ದೈಹಿಕ ಚಟುವಟಿಕೆಯು ವೇಗವಾಗಿ ಕಡಿಮೆ ಅವಧಿಯಲ್ಲಿ ತೂಕ ಇಳಿಕೆಗೆ ಸಹಕಾರಿ. ಏರೋಬಿಕ್ ವ್ಯಾಯಾಮದಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ಉತ್ತಮ ಕೊಲೆಸ್ಟ್ರಾಲ್ ಉಂಟಾಗುತ್ತದೆ. ದಿನದಲ್ಲಿ ಹೆಚ್ಚುವರಿ 20-30 ನಿಮಿಷಗಳ ನಡೆಯುವುದು ಸಹ ಉತ್ತಮ.

ಆಹಾರ ಕ್ರಮ: ತೂಕ ಕಳೆದುಕೊಳ್ಳಲು ಮತ್ತು ನಿಯಂತ್ರಿಸಲು ಕರಿದ, ಜಂಕ್ ಫುಡ್, ಬೇಕರಿ, ಸಕ್ಕರೆ, ಮೈದಾ, ಸೋಡಾ ಪದಾರ್ಥ ತಿನ್ನುವುದು ತಪ್ಪಿಸಿ. ಹಣ್ಣು, ತರಕಾರಿ, ಕೊಬ್ಬು ರಹಿತ ಡೈರಿ ಉತ್ಪನ್ನ, ಕಡಿಮೆ ಶಕ್ತಿಯ ಸಾಂದ್ರತೆ ಆಹಾರ ಮತ್ತು ಹೆಚ್ಚಿನ ಪೌಷ್ಟಿಕಾಂಶ ಪದಾರ್ಥ, ಪೌಷ್ಟಿಕ ಆಹಾರ ಸೇವಿಸಿ. ತೂಕ ನಷ್ಟಕ್ಕೆ ನಿಮ್ಮ ದಿನಚರಿಯನ್ನು ಉತ್ತಮವಾಗಿ ಬದಲಾಯಿಸಿ. ಇದು ಉತ್ತಮ ಫಲಿತಾಂಶ ನೀಡುತ್ತದೆ.

ವ್ಯಾಯಾಮ: ಏರೋಬಿಕ್ ವ್ಯಾಯಾಮ ತೂಕ ನಿರ್ವಹಣೆಗೆ ಉತ್ತಮ ಆಯ್ಕೆ ಆಗಿದೆ. ಏರೋಬಿಕ್ ವ್ಯಾಯಾಮದ ಜೊತೆಗೆ ಶಕ್ತಿ ತರಬೇತಿ ಮತ್ತು ಪ್ರತಿರೋಧ ವ್ಯಾಯಾಮ ಮಾಡುವುದು ಮುಖ್ಯ. ಇದು ಸ್ನಾಯುಗಳನ್ನು ನಿರ್ಮಿಸುತ್ತದೆ. ತೂಕ ನಷ್ಟ ಹಾಗೂ ದೇಹದ ಚಯಾಪಚಯ ದರ ಹೆಚ್ಚುತ್ತದೆ.

ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಹೆರಿಗೆ ರಜೆ ಘೋಷಿಸಿದ ಕೇರಳ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.