ಬೆಂಗಳೂರು: ನರಹುಲಿ ಅಥವಾ ನರೂಲಿ (warts) ಎಂಬ ಚರ್ಮ ಸಮಸ್ಯೆ ಅನೇಕರನ್ನು ಕಾಡುತ್ತದೆ. ಮುಖದ ಅಂದವನ್ನು ಹಾಳು ಮಾಡುವ ಈ ನರಹುಲಿಗಳು ಕೆಂಪಾಗಿ, ಕೆಲವೊಮ್ಮೆ ರಕ್ತಸ್ರಾವಕ್ಕೆ ಕಾರಣವಾಗಬಹುದು. ಇನ್ನು ಈ ನರಹುಲಿಗಳು ವ್ಯಕ್ತಿಗಳ ಕೈ ಅಥವಾ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಈ ಚರ್ಮದ ಬೆಳವಣಿಗೆ ಅಹಿತಕರ ಅನುಭವವನ್ನು ಉಂಟು ಮಾಡುತ್ತದೆ. ಇದರ ಹೊರತಾಗಿ ದೇಹದ ಅನೇಕ ಭಾಗಗಳಲ್ಲಿ ಕೂಡ ಈ ಸಮಸ್ಯೆ ಕಾಡುತ್ತದೆ. ಇನ್ನು ಈ ಸಮಸ್ಯೆಗೆ ಪ್ರಮುಖ ಕಾರಣ ಹ್ಯೂಮನ್ ಪಾಪಿಲೊಮನೊ ವೈರಸ್ (ಎಚ್ಪಿವಿ) ಆಗಿದೆ. ಇದೊಂದು ಸೋಂಕು ಆಗಿದ್ದು, 150ಕ್ಕೂ ಹೆಚ್ಚು ವೈರಸ್ ಮೇಕಪ್ಗಳು ಈ ವರ್ಗದಲ್ಲಿ ಬರುತ್ತದೆ.
ಇನ್ನು ಈ ಎಸ್ಡಿಟಿ, ಎಸ್ಟಿಐ, ಎಚ್ಪಿವಿಗಳಿ ಲೈಂಗಿಕತೆ ಅಥವಾ ಇನ್ನಿತರ ವರ್ಗಾವಣೆಯಿಂದಲೂ ಆಗುತ್ತದೆ. ಈ ವೈರಸ್ ಹೊಂದಿರುವ ವ್ಯಕ್ತಿಯೊಂದಿಗಿನ ಲೈಂಗಿಕ ಸಂಬಂಧದಿಂದ ಇದು ದೇಹಕ್ಕೆ ಹರಡುತ್ತದೆ. ಕಾಸ್ಮೋಟೊಲಾಜಿಸ್ಟ್ ಡಾ ಕರುಣಾ ಮಲ್ಹೋತ್ರಾ ತಿಳಿಸುವಂತೆ, ಈ ನರಹುಲಿ, ಗುಳ್ಳೆ ಮತ್ತು ಸ್ಕಿನ್ ಟ್ಯಾಗ್ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ಈ ಮೂರು ವಿಶಿಷ್ಟ ಗುಣವನ್ನು ಹೊಂದಿದ್ದು, ಇದರ ಕಾರಣ ಕೂಡ ಬೇರೆಯಾಗಿದೆ.
ಹೇಗೆ ಹರಡುತ್ತದೆ: ಈ ನರಹುಲಿಗಳಿ ಸಾಮಾನ್ಯವಾಗಿ ಚರ್ಮದ ಸಂಪರ್ಕದಿಂದ ಬರುತ್ತದೆ. ಕೈ ಕುಲುಕುವುದು, ಒಬ್ಬರ ಟವೆಲ್, ಶೂಗಳನ್ನು ಮತ್ತೊಬ್ಬರು ಬಳಕೆ ಮಾಡುವುದರಿಂದ ಕೂಡ ಬರುವ ಸಾಧ್ಯತೆ ಇದೆ. ಇನ್ನು ಈ ನರಹುಲಿಗಳು ಸಾಮಾನ್ಯವಾಗಿ ಒಬ್ಬರಿಂದ ಒಬ್ಬರಿಗೆ ಬರುವ ಹಿನ್ನಲೆ ಈ ಬಗ್ಗೆ ಕಾಳಜಿವಹಿಸುವುದು ಅಗತ್ಯವಾಗಿದೆ.
ಯಾರಿಗೆ ಅಪಾಯ?: ಸೂಕ್ಷ್ಮ ಅಥವಾ ಹಾನಿ ಅಥವಾ ತೇವಾಂಶ ಚರ್ಮಗಳು ಈ ಸೋಂಕಿಗೆ ಬೇಗ ಒಳಗಾಗುತ್ತದೆ. ಇದರ ಹೊರತಾಗಿ ದುರ್ಬಲ ರೋಗ ನಿರೋಧಕ ಶಕ್ತಿ, ದೀರ್ಘಕಾಲ ಒತ್ತಡ, ಹಾರ್ಮೋನ್ ಏರಿಳಿತ, ಹೊರಾಂಗಿಣ ಪರಿಣಾಮ ಅಂದರೆ ರಾಸಾಯನಿಕ ಮಾಲಿನ್ಯ, ಜಂಕ್ ಆಹಾರ ಸೇವಿಸುವವರು ಈ ಸಮಸ್ಯೆಗೆ ಒಳಗಾಗುವ ಆತಂಕ ಹೊಂದಿರುತ್ತಾರೆ.
ಮುನ್ನೆಚ್ಚರಿಕೆ: ಈ ನರಹುಲಿ ಸಮಸ್ಯೆ ಕಾಡದಂತೆ ತೆಗೆದುಕೊಳ್ಳುವ ಮೊದಲ ಎಚ್ಚರಿಕೆ ಎಂದರೆ ಈ ವೈರಸ್ ಸೋಂಕಿಗೆ ಒಳಗಾಗದಂತೆ ಕಾಪಾಡಿಕೊಳ್ಳುವುದು. ಯಾವುದೇ ವಸ್ತುಗಳನ್ನು ಮುಟ್ಟುವ ಮೊದಲು ಚೆನ್ನಾಗಿ ಕೈ ತೊಳೆಯಬೇಕು. ಶೂ ಅಥವಾ ಟವೆಲ್, ಬಟ್ಟೆ ಸೇರಿದಂತೆ ಇನ್ನಿತರ ಬಟ್ಟೆಗಳನ್ನು ಬೇರೆಯವರಿಗೆ ನೀಡಬೇಡಿ. ಸದಾ ಉಗುರು ಕಚ್ಚುವುದು ಮಾಡಬೇಡಿ
ಚಿಕಿತ್ಸೆ: ಕೆಲವು ನರಹುಲಿಗಳಿಗೆ ಚಿಕಿತ್ಸೆ ಇಲ್ಲ. ಇದು ಸ್ವತಃ ಹೋಗಬಹುದು ಕೆಲವು ರಕ್ತ ಸೋರಿ ನೋವಿಗೆ ಕಾರಣವಾಗುತ್ತದೆ. ಈ ವೇಳೆ ಚರ್ಮ ತಜ್ಞರ ಭೇಟಿಯಾಗುವುದು ಉತ್ತಮ. ರಾಸಾಯನಿಕ ಚಿಕಿತ್ಸೆಗಳನ್ನು ಆಸಿಡ್, ಆಲ್ಕೈಸ್ ಅಥವಾ ಸಲಿಷೈಲಿಕ್ ಆಸಿಡ್ ಹೊಂದಿರುವ ಚಿಕಿತ್ಸೆಗಳು ಇದರ ನಿವಾರಣೆಗೆ ಪ್ರಯೋಜನ ನೀಡುತ್ತದೆ. ಇತ್ತೀಚಿನ ದಿನದಲ್ಲಿ ಇದರ ನಿವಾರಣೆ ಲೇಸರ್ ಚಿಕಿತ್ಸೆ ಲಭ್ಯವಿದೆ, ಇದು ಶೀಘ್ರದಲ್ಲಿ, ಕಡಿಮೆ ನೋವಿನಲ್ಲಿ ಇದನ್ನು ತೆಗೆದು ಹಾಕುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲೂ ಮುಖದ ಅಂದ ಕಾಪಾಡಲು ಈ ಐದು ವಸ್ತು ಬಳಸಿ