ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದ ಸಂಶೋಧನೆಯೊಂದರ ಪ್ರಕಾರ ಅನೇಕ ರೋಗಗಳಿಗೆ ಕಾರಣವಾಗುವ ಈಡಿಸ್ ಈಜಿಪ್ಟಿ ಸೊಳ್ಳೆ ಸೇರಿದಂತೆ ಅನೇಕ ಅಪಾಯಕಾರಿ ಸೊಳ್ಳೆಗಳು ನಾವು ಹೊರ ಹಾಕುವ ಕಾರ್ಬನ್ ಡೈಆಕ್ಸೈಡ್ ಅನ್ನು ಪತ್ತೆ ಹಚ್ಚಿದ ನಂತರ ಕೆಂಪು, ಕಿತ್ತಳೆ, ಕಪ್ಪು ಮತ್ತು ಸಯಾನ್ ಸೇರಿದಂತೆ ನಿರ್ದಿಷ್ಟ ಬಣ್ಣಗಳ ಕಡೆಗೆ ಹಾರುತ್ತದೆ. ಆದರೆ, ಆ ಸೊಳ್ಳೆಗಳು ಹಸಿರು, ನೇರಳೆ, ನೀಲಿ ಮತ್ತು ಬಿಳಿಯಂತಹ ಇತರ ಬಣ್ಣಗಳನ್ನು ನಿರ್ಲಕ್ಷಿಸುತ್ತವೆ.
ವಾಸನೆ ಜತೆಗೆ ಬಣ್ಣ ಗಮನಿಸುವ ಸೊಳ್ಳೆಗಳು : ಈ ಸಂಶೋಧನೆಯು ಸೊಳ್ಳೆಗಳು ಹೇಗೆ ತಮ್ಮ ಅತಿಥಿಗಳನ್ನು ಕಂಡುಕೊಳ್ಳುತ್ತವೆ ಎಂಬುದನ್ನು ವಿವರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ನಂಬಿದ್ದಾರೆ. ಏಕೆಂದರೆ, ಮಾನವರ ಚರ್ಮವು ಒಟ್ಟಾರೆ ವರ್ಣದ್ರವ್ಯವನ್ನು ಲೆಕ್ಕಿಸದೇ, ಅವರ ಕಣ್ಣುಗಳಿಗೆ ಬಲವಾದ ಕೆಂಪು - ಕಿತ್ತಳೆ ಬಣ್ಣದ ಸಿಗ್ನಲ್ ಅನ್ನು ಹೊರಸೂಸುತ್ತದೆ.
ಸೊಳ್ಳೆಗಳು ಕಚ್ಚಲು ವಾಸನೆಯನ್ನು ಬಳಸುತ್ತವೆ. ಯಾವಾಗ ನಮ್ಮ ಉಸಿರಾಟದಿಂದ ಅವು ಕಾರ್ಬನ್ ಡೈಆಕ್ಸೈಡ್ನಂತಹ ನಿರ್ದಿಷ್ಟ ಅಂಶಗಳನ್ನು ವಾಸನೆ ಮಾಡುತ್ತವೋ ಆಗ ಆ ವಾಸನೆಯ ನಿರ್ದಿಷ್ಟ ಬಣ್ಣಗಳು ಮತ್ತು ಇತರ ದೃಶ್ಯ ಮಾದರಿಗಳನ್ನು ಸ್ಕ್ಯಾನ್ ಮಾಡಲು ಕಣ್ಣುಗಳನ್ನು ಉತ್ತೇಜಿಸುತ್ತದೆ ಎಂದು ಜೀವಶಾಸ್ತ್ರದ ಪ್ರಾಧ್ಯಾಪಕ, ಹಿರಿಯ ಲೇಖಕ ಜೆಫ್ರಿ ರಿಫೆಲ್ ಹೇಳುತ್ತಾರೆ.
ಇದನ್ನೂ ಓದಿ: ರನ್ನಿಂಗ್ ಮಾಡುವಾಗ ಆಗುವ ಗಾಯಗಳನ್ನು ತಪ್ಪಿಸಲು ಹೀಗೆ ಮಾಡಿ..
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಸೊಳ್ಳೆಯ ವಾಸನೆಯ ಪ್ರಜ್ಞೆಯು ದೃಶ್ಯ ಸೂಚನೆಗಳ ಮೇಲೆ ಡಿಪೆಂಡ್ ಆಗಿದ್ದು, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತದೆ. ಯಾವ ಬಣ್ಣಗಳು ಹಸಿದ ಸೊಳ್ಳೆಗಳನ್ನು ಆಕರ್ಷಿಸುತ್ತವೆ ಮತ್ತು ಯಾವ ಬಣ್ಣಗಳು ಆಕರ್ಷಿಸುವುದಿಲ್ಲ ಎಂಬುದನ್ನು ನೀವಿಲ್ಲಿ ತಿಳಿದುಕೊಳ್ಳಲೇಬೇಕು.
ಮುಖ್ಯವಾಗಿ ಕೆಂಪು ಬಣ್ಣ: ಸೊಳ್ಳೆಗಳನ್ನು ಆಕರ್ಷಿಸುವ ಮೂರು ಪ್ರಮುಖ ಸೂಚನೆಗಳೆಂದರೆ ಉಸಿರು, ಬೆವರು ಮತ್ತು ಚರ್ಮದ ಉಷ್ಣತೆ. ಈ ಅಧ್ಯಯನದಲ್ಲಿ ಸಂಶೋಧಕರು ನಾಲ್ಕನೇ ಕ್ಯೂ ಅನ್ನು ಕಂಡು ಕೊಂಡಿದ್ದಾರೆ. ಅದುವೇ ಬಣ್ಣ. ಕೆಂಪು ಬಣ್ಣವು ನಿಮ್ಮ ಬಟ್ಟೆಗಳ ಮೇಲೆ ಮಾತ್ರವಲ್ಲದೇ ಪ್ರತಿಯೊಬ್ಬರ ಚರ್ಮದಲ್ಲಿಯೂ ಕಂಡು ಬರುತ್ತದೆ.
ನಿಮ್ಮ ಚರ್ಮದ ಛಾಯೆಯು ಅಪ್ರಸ್ತುತವಾಗುತ್ತದೆ, ಅನೇಕರು ಕೆಂಪು ಬಣ್ಣವನ್ನು ಹೊಂದಿರುತ್ತಾರೆ. ಇಂತವರು ಹಾಗೂ ಜೊತೆಗೆ ಇತರರು ಕೂಡ ಕೆಂಪು ಬಣ್ಣವನ್ನು ಹೊಂದಿಕೆಯಾಗುವ ಬಣ್ಣಗಳ ಬಟ್ಟೆಗಳನ್ನು ಧರಿಸದಿದ್ದರೆ ಸೊಳ್ಳೆ ಕಡಿತದಿಂದ ಪಾರಾಗುವ ಒಂದು ಮಾರ್ಗ ಎಂದು ಈ ಸಂಶೋಧಕರು ಹೇಳುತ್ತಾರೆ.
ಈ ಬಣ್ಣದ ಬಟ್ಟೆ ಧರಿಸಿ: ಇನ್ನು ಸಂಶೋಧಕರು ನಡೆಸಿದ ಪ್ರಯೋಗದಲ್ಲಿ ಕೆಂಪು ಬಣ್ಣ ಸೇರಿದಂತೆ ಕಿತ್ತಳೆ, ಕಪ್ಪು ಮತ್ತು ಸಯಾನ್ ಬಣ್ಣಗಳ ಕಡೆಗೆ ಹಾರುವುದನ್ನು ಹಾಗೂ ಹಸಿರು, ನೇರಳೆ, ನೀಲಿ ಮತ್ತು ಬಿಳಿಯಂತಹ ಇತರ ಬಣ್ಣಗಳನ್ನು ನಿರ್ಲಕ್ಷಿಸುವುದನ್ನು ಗಮನಿಸಿದ್ದಾರೆ. ಹೀಗಾಗಿ, ನಮ್ಮ ಉಡುಪು ಕೂಡ ಹಸಿರು, ನೇರಳೆ, ನೀಲಿ ಮತ್ತು ಬಿಳಿ ಬಣ್ಣದ್ದಾಗಿದ್ದರೆ ಸೊಳ್ಳೆಯಿಂದ ಕಚ್ಚಿಸಿಕೊಳ್ಳುವುದರಿಂದ ಪಾರಾಗಬಹುದಾಗಿದೆ.