ಕ್ಯಾನ್ಬೆರ್ರಾ (ಆಸ್ಟ್ರೇಲಿಯಾ): ಪರೀಕ್ಷೆಗೆ ಇನ್ನೇನು ವಾರ ಉಳಿದಿದೆ ಎಂದಾಗ ವಿದ್ಯಾರ್ಥಿಗಳಲ್ಲಿ ಆತಂಕ ಮೂಡುವುದು ಸಹಜ. ಈ ಆತಂಕ ನಿವಾರಣೆಗೆ ವಿದ್ಯಾರ್ಥಿಗಳು ತಮ್ಮ ಡಯಟ್ನಲ್ಲಿ ವಾಲ್ನಟ್ ಸೇರಿಸುವುದು ಒಳ್ಳೆಯದು ಎಂಬುದನ್ನು ಇತ್ತೀಚಿಗಿನ ಕ್ಲಿನಿಕಲ್ ಸಂಶೋಧನೆಯೊಂದು ತಿಳಿಸಿದೆ. ಪದವಿ ಪೂರ್ವ ವಿದ್ಯಾರ್ಥಿಗಳು ಅಧ್ಯಯನ ಸಮಯದಲ್ಲಿ ವಾಲ್ನಟ್ ಸೇವನೆಯು ಅವರ ಮಾನಸಿಕ ಆರೋಗ್ಯ ಮತ್ತು ಸಾಮಾನ್ಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂಬುದು ತಿಳಿದು ಬಂದಿದೆ.
ಜರ್ನಲ್ ನ್ಯೂಟ್ರಿಷಿಯನ್ನಲ್ಲಿ ಪ್ರಕಟವಾದ ಸೌತ್ ಆಸ್ಟ್ರೇಲಿಯಾ ಯುನಿವರ್ಸಿಟಿ ಅಧ್ಯಯನ ಅನಸಾರ, ವಾಲ್ನಟ್ ಕರುಳಿನ ಆರೋಗ್ಯ ಮತ್ತು ಅಧ್ಯಯನದ ಒತ್ತಡ ಹಾಗೂ ನಕಾರಾತ್ಮಕತೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಮಹಿಳೆಯರ ಮೇಲೆ ಇದು ಹೆಚ್ಚಿನ ಪರಿಣಾಮ ಹೊಂದಿದೆ. ವಾಲ್ನಟ್ ಮೆದುಳಿನ ಸಕ್ತಿ ಅಭಿವೃದ್ಧಿ ಮತ್ತು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ ಎಂಬುದನ್ನು ಮುಖ್ಯ ಸಂಶೋಧಕರು ತಿಳಿಸಿದ್ದಾರೆ.
ಅಧ್ಯಯನದ ವೇಳೆ ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡವನ್ನು ಎದುರಿಸುತ್ತಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪರೀಕ್ಷೆಯ ಈ ಸಮಯ ಅವರಿಗೆ ಮೌಲ್ಯಯುತವಾಗಿದೆ ಎನ್ನುತ್ತಾರೆ ಹರ್ಸೆಲ್ಮನನ್. ಈ ಅಧ್ಯಯನಕ್ಕಾಗಿ 80 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 13 ವಾರ ಕಾರ ಮೂರು ಹಂತದಲ್ಲಿ ಪರೀಕ್ಷೆ ನಡೆಸಲಾಗಿದೆ.
ಪ್ರತಿನಿತ್ಯ ಅರ್ಧ ಕಪ್ ವಾಲ್ನಟ್ ಸೇವಿವಸುವವರಲ್ಲಿ ಮಾಸಿಕ ಆರೋಗ್ಯ ಅಭಿವೃದ್ದಿ ಕಾಣಬಹುದಾಗಿದೆ. ಜೊತೆಗೆ ಮೆಟಾಬಾಲಿಕ್ ಬಯೋಮಾರ್ಕರ್‌ಗಳ ಅಭಿವೃದ್ಧಿ ಹಾಗೂ ದೀರ್ಘಕಾಲದ ಉತ್ತಮ ಗುಣಮಟ್ಟದ ನಿದ್ದೆಯನ್ನು ಕಾಣಬಹುದಾಗಿದೆ. ವಾಲ್ನಟ್ ಸೇವಿಸದ ಗುಂಪಿನಲ್ಲಿ ಒತ್ತಡ ಹಾಗೂ ಪರೀಕ್ಷೆಯ ಖಿನ್ನತೆ ಮಟ್ಟ ಹೆಚ್ಚಿದೆ.
ವಾಲ್ನಟ್ನಲ್ಲಿ ಒಮೆಗಾ-3 ಪ್ಯಾಟಿ ಆ್ಯಸಿಡ್, ಆ್ಯಂಟಿಅಕ್ಸಿಡೆಂಟ್ ಜೊತೆಗೆ ಮೆಲಟೊನಿನ್ ಇರುತ್ತದೆ. ಪೊಲಿಫನೊಲ್ಸ್, ವಿಟಮಿನ್ ಇ ಅಂಶಗಳು ಮಿದುಳು ಮತ್ತು ಕರುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಕನಿಷ್ಠ 75 ಪ್ರತಿಶತದಷ್ಟು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು 24 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ ಎಂದಿದ್ದಾರೆ.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಮಾನಸಿಕ ಅಸ್ವಸ್ಥತೆ ಸಾಮಾನ್ಯವಾಗಿದ್ದು, ಇದು ಅನೇಕ ಪರಿಣಾಮಕ್ಕೆ ಕಾರಣವಾಗುತ್ತಿದೆ. ಒತ್ತಡದ ಅವಧಿಯಲ್ಲಿ ವಾಲ್ನಟ್ ಸೇವಿಸುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ವಾಲ್ನಟ್ ಅನ್ನು ರುಚಿಕರ ತಿನಿಸುಗಳ ರೂಪದಲ್ಲೂ ಸೇವಿಸಬಹುದಾಗಿದೆ ಎನ್ನುತ್ತಾರೆ ಅಸೋಸಿಯೇಟ್ ಫ್ರೊ ಬೊಬ್ರೊವಸ್ಕಯ.
ಇದನ್ನೂ ಓದಿ: ವಾಹ್, ಚಹಾ! ದೇಶಿ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು?