ETV Bharat / sukhibhava

ಸಾವಿನ ಅಪಾಯ ತಪ್ಪಿಸಲು ನಡಿಗೆ ಪರಿಣಾಮಕಾರಿ: ನಿತ್ಯ 3,967 ಹೆಜ್ಜೆಗಳನ್ನು ಹಾಕಿ, ಆರೋಗ್ಯವಾಗಿರಿ! - ಸಾವಿನ ಅಪಾಯವನ್ನು ತಪ್ಪಿಸಬಹುದು

ನಡಿಗೆ ಕೇವಲ ದೇಹವನ್ನು ಮಾತ್ರ ಆರೋಗ್ಯವಾಗಿ ಇರಿಸುವುದಿಲ್ಲ. ಬದಲಿಗೆ ಹೃದಯ ರಕ್ತನಾಳ ಸೇರಿದಂತೆ ಇತರ ಸಂಬಂಧಿತ ಸಾವಿನ ಅಪಾಯಗಳನ್ನು ತಪ್ಪಿಸುತ್ತದೆ.

Walking is effective in avoiding the risk of death; Walk 3,967 steps a day

author img

By

Published : Aug 10, 2023, 11:19 AM IST

ವದೆಹಲಿ: ದಿನಕ್ಕೆ ಕನಿಷ್ಠ ಪಕ್ಷ 3,967 ಹೆಜ್ಜೆಗಳಷ್ಟು ನಡಿಗೆ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಯಾವುದೇ ರೀತಿಯ ಸಾವಿನ ಅಪಾಯವನ್ನು ತಪ್ಪಿಸಬಹುದು. ನಿತ್ಯ 2,337 ನಡಿಗೆ ನಡೆಯುವುದರಿಂದ ಹೃದಯ ಮತ್ತು ಹೃದಯ ರಕ್ತನಾಳದ ಸಾವಿನ ಅಪಾಯವನ್ನು ತಪ್ಪಿಸುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಈ ಹೊಸ ವಿಶ್ಲೇಷಣೆಗಾಗಿ ಜಗತ್ತಿನಾದ್ಯಂತ 17 ವಿಭಿನ್ನ ಅಧ್ಯಯನಗಳನ್ನು ನಡೆಸಲಾಗಿದೆ. ಇದರಲ್ಲಿ 2,26,889 ಜನರು ಭಾಗಿಯಾಗಿದ್ದಾರೆ. ಇವರಲ್ಲಿ ಕೇವಲ ವಾಕಿಂಗ್​ ಮಾತ್ರವೇ ಆರೋಗ್ಯ ಪ್ರಯೋಜನವನ್ನು ತೋರಿಸಿದೆ.

ಯುರೋಪಿಯನ್​ ಜರ್ನಲ್​ ಆಫ್​ ಪ್ರಿವೆಂಟಿವ್​ ಕಾರ್ಡಿಯಾಲಜಿ ಜರ್ನಲ್​ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ 500 ರಿಂದ 1000 ಹೆಚ್ಚುವರಿ ನಡಿಗೆ ಮಾಡುವುದರಿಂದ ಇತರ ಯಾವುದೇ ಕಾರಣ ಅಥವಾ ಹೃದಯ ರಕ್ತನಾಳ ಸಮಸ್ಯೆಯಿಂದ ಸಾವನ್ನಪ್ಪುವ ಅಪಾಯವನ್ನು ಗಮನಾರ್ಹವಾಗಿ ತಪ್ಪಿಸಬಹುದು ಎಂದು ಅಧ್ಯಯನ ತಿಳಿಸಿದೆ.

ದಿನಕ್ಕೆ 1000 ನಡಿಗೆಯು ಯಾವುದೇ ಕಾರಣದಿಂದ ಸಾವನ್ನಪ್ಪುವ ಅಪಾಯವನ್ನು ಶೇ 15ರಷ್ಟು ಕಡಿಮೆ ಮಾಡುವ ಸಾಧ್ಯತೆ ಇದೆ. ಈ ನಡಿಗೆಯನ್ನು 500ಕ್ಕೆ ಹೆಚ್ಚಿಸಿದಾಗ ಹೃದಯರಕ್ತನಾಳ ಸಮಸ್ಯೆಯಿಂದ ಸಾವನ್ನಪ್ಪುವ ಅಪಾಯವನ್ನು ಶೇ 7ರಷ್ಟು ಕಡಿಮೆ ಮಾಡುವುದರೊಂದಿಗೆ ಸಂಬಂಧ ಹೊಂದಿದೆ ಎಂಬುದು ಅಧ್ಯಯನದ ವೇಳೆ ತಿಳಿದು ಬಂದಿದೆ.

ಇದಕ್ಕಿಂತ ಹೆಚ್ಚಾಗಿ, ಜನರು ದಿನಕ್ಕೆ 20 ಸಾವಿರ ನಡಿಗೆಯನ್ನು ನಡೆಯುವುದರಿಂದ ಅವರ ಆರೋಗ್ಯ ಪ್ರಯೋಜನಗಳು ನಿರಂತರವಾಗಿ ಹೆಚ್ಚುತ್ತದೆ. ಇದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.

ಈ ಅಧ್ಯಯನವೂ ಪುರುಷ ಮತ್ತು ಸ್ತ್ರೀಯರಿಬ್ಬರಿಗೂ ಯಾವುದೇ ವಯಸ್ಸಿನ ಮಿತಿ ಇಲ್ಲದೇ ಅನ್ವಯವಾಗುತ್ತದೆ. ಅವರು ಯಾವುದೇ ತಾಪಮಾನ, ಉಪ ಧ್ರವ ಪ್ರದೇಶ ಅಥವಾ ಮಿಶ್ರಿತ ಪರಿಸರದಲ್ಲಿ ವಾಸವಾಗಿದ್ದರೂ ಅವರು ಪ್ರಯೋಜನವನ್ನು ಪಡೆಯುತ್ತಾರೆ ಎಂದು ಪೋಲಾಂಡ್​ನ ಲೊಡ್ಜ್​ ಮೆಡಿಕಲ್​ ಯುನಿವರ್ಸಿಟಿಯ ಹೃದಯತಜ್ಞ ಪ್ರೋ ಮಾಸಿಜ್ ಬನಾಚ್ ತಿಳಿಸಿದ್ದಾರೆ.

ಜೊತೆಗೆ, ನಮ್ಮ ವಿಶ್ಲೇಷಣೆಯು, ಯಾವುದೇ ಕಾರಣದಿಂದ ಸಾವಿನ ಅಪಾಯವನ್ನು ಕಡಿಮೆ ಮಾಡಲು ದಿನಕ್ಕೆ 4 ಸಾವಿರ ಹೆಜ್ಜೆಗಳನ್ನು ನಡೆಯಬೇಕು ಎಂಬುದನ್ನು ಸೂಚಿಸುತ್ತದೆ. ಇದು ಹೃದಯರಕ್ತನಾಳದ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ. ಈ ಅಧ್ಯಯನವು ಜಾಗತಿಕ ಜನಸಂಖ್ಯೆಯಲ್ಲಿ ದೈಹಿಕ ಚಟುವಟಿಕೆಯ ಪರಿಣಾಮದ ಕೊರತೆಯನ್ನು ತೋರಿಸಿದೆ.

ಕಡಿಮೆ ಆದಾಯ ಹೊಂದಿರುವ ದೇಶಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯದ ದೇಶಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಸಾಕಷ್ಟು ಪ್ರಮಾಣದ ದೈಹಿಕ ಚಟುವಟಿಕೆ ಕೈಗೊಳ್ಳುವುದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ದತ್ತಾಂಶದ ಪ್ರಕಾರ, ಸಾಕಷ್ಟು ಪ್ರಮಾಣದ ದೈಹಿಕ ಕೊರತೆಯು ಜಾಗತಿಕ ಸಾವಿನ ಕಾರಣದಲ್ಲಿ ನಾಲ್ಕನೇ ಸ್ಥಾನ ಹೊಂದಿದ್ದು, ದೈಹಿಕ ಚಟುವಟಿಕೆ ಕೊರತೆಯಿಂದಾಗಿ ವಾರ್ಷಿಕವಾಗಿ 3.2 ಮಿಲಿಯನ್​ ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಅಧ್ಯಯನವನ್ನು ಸರಾಸರಿ 7 ವರ್ಷಗಳ ಕಾಲ ಭಾಗಿದಾರರ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಸರಾಸರಿ ಮಹಿಳಾ ಭಾಗಿದಾರರ ವಯಸ್ಸು 64 ಆಗಿದ್ದು, ಶೇ 49ರಷ್ಟು ಮಹಿಳೆಯರು ಭಾಗಿಯಾಗಿದ್ದಾರೆ.

ವಯಸ್ಕರಲ್ಲಿ ದಿನಕ್ಕೆ 6000 ದಿಂದ 10,000 ನಡಿಗೆಯನ್ನು ನಡೆಯುವುದರಿಂದ ಶೇ 42ರಷ್ಟು ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು. ಯುವ ಜನತೆಯಯ ದಿನಕ್ಕೆ 7000 ದಿಂದ 13000 ನಡಿಗೆಯನ್ನು ನಡೆಯುವುದರಿಂದ ಶೇ 49ರಷ್ಟು ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ.

ಇದನ್ನೂ ಓದಿ: ಪ್ರತಿದಿನ ಕನಿಷ್ಠ 20 ನಿಮಿಷ ವಾಕ್ ಮಾಡಿ: ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.