ನಡಿಗೆ (ವಾಕಿಂಗ್) ಸದಾ ಆರೋಗ್ಯಕ್ಕೆ ಪ್ರಯೋಜನಕಾರಿ. ವ್ಯಾಯಮ ಅಥವಾ ಇನ್ನಿತರ ದೈಹಿಕ ಚಟುವಟಿಕೆಯನ್ನು ಜೀವನಶೈಲಿಯಲ್ಲಿ ರೂಢಿಸಿಕೊಳ್ಳಲು ಸಾಧ್ಯವಾಗದಿದ್ದರೂ ದಿನನಿತ್ಯ ನಡಿಗೆಯನ್ನು ರೂಢಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಪ್ರಯೋಜನ ಪಡೆಯಬಹುದು. ನಡಿಗೆಯಿಂದ ಹೃದಯ ಸೇರಿದಂತೆ ಒಟ್ಟಾರೆ ಆರೋಗ್ಯದ ಮೇಲೆ ಹೆಚ್ಚಿನ ಅನುಕೂಲ ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿದೆ.
ಇದೀಗ ಹೊಸ ಅಧ್ಯಯನವೊಂದು ನಡಿಗೆಯು ಮಿದುಳಿನ ನೆಟ್ವರ್ಕ್ನ ಸಂಪರ್ಕವನ್ನು ಬಲಗೊಳಿಸಬಹುದು ಎಂದಿದೆ. ಇದು ಅಲ್ಝೈಮರ್ನಂತಹ ಸಮಸ್ಯೆ ಹೊಂದಿರುವವರಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ. ಈಗಾಗಲೇ ಅಲ್ಝೈಮರ್ ರೋಗಕ್ಕೆ ವ್ಯಾಯಾಮ ಹೇಗೆ ಪ್ರಯೋಜನ ಹೊಂದಿದೆ ಎಂಬ ಅಧ್ಯಯನದ ಆಧಾರಕ್ಕೆ ಇದು ಇನ್ನಷ್ಟು ಪುಷ್ಠಿ ನೀಡಲಿದೆ ಎಂದು ಸಂಶೋಧನೆ ತೋರಿಸಿದೆ.
ಈ ಕುರಿತು ಜರ್ನಲ್ ಫಾರ್ ಅಲ್ಝೈಮರ್ ಡೀಸಿಸ್ ರಿಪೋರ್ಟ್ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕಾಗಿ ಸಾಮಾನ್ಯ ಮಿದುಳು ಸಾಮರ್ಥ್ಯ ಹೊಂದಿರುವ ವಯಸ್ಕರನ್ನು ಸುಧಾರಿತ ಅಲ್ಝೈಮರ್ ಲಕ್ಷಣಗಳನ್ನು ಹೊಂದಿರುವ ಅಂದರೆ, ಸ್ಮರಣ ಶಕ್ತಿ, ಗ್ರಹಿಸುವಿಕೆ ಮತ್ತು ತೀರ್ಮಾನ ಕೈಗೊಳ್ಳುವಲ್ಲಿ ಕೊಂಚ ಹಿನ್ನಡೆ ಅನುಭವಿಸುವವರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಹೋಲಿಕೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ಮಿದುಳಿನ ನೆಟ್ವರ್ಕ್ಗಳು ಕೆಲವು ನಿರ್ದಿಷ್ಟ ಸಮಯದ ಬಳಿಕ ಜನರಲ್ಲಿ ಸುಧಾರಣೆ ಕಂಡಿದೆ ಎಂದು ತಿಳಿಸಿದ್ದಾರೆ ಮುಖ್ಯ ತನಿಖೆದಾರರಾದ ಮೆರಿಲ್ಯಾಂಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನ ಪ್ರೋ ಜೆ ಕ್ಯಾರ್ಸನ್ ಸ್ಮಿತ್.
ಅರಿವಿನ ಕಾರ್ಯಾಚರಣೆ: ಮಿದುಳಿನ ನೆಟ್ವರ್ಕ್ ಸಂಪರ್ಕ ತಪ್ಪಿದವರಲ್ಲಿ ನಾವು ನೆನಪನ್ನು ಹೊಂದಿರುವ ಬಗ್ಗೆ ಸ್ಪಷ್ಟವಾಗಿ ಪತ್ತೆಯಾಗಿದೆ. ಸಂಪರ್ಕವನ್ನು ಕಳೆದುಕೊಂಡವರಲ್ಲಿ ನಾವು ಈ ವ್ಯಾಯಾಮದ ತರಬೇತಿಯನ್ನು ಪ್ರದರ್ಶನ ನಡೆಸಿದ್ದೇವೆ ಎಂದಿದ್ದಾರೆ ಸ್ಮಿತ್. ನಡಿಗೆ ಹೇಗೆ ಸೆರೆಬ್ರೆಲ್ ರಕ್ತ ಪರಿಚಲನೆಯನ್ನು ಕಡಿಮೆ ಮಾಡುತ್ತದೆ. ವಯಸ್ಕರಲ್ಲಿ ಸುಧಾರಿತ ಅರಿವಿನ ಸಮಸ್ಯೆ ಹೊಂದಿರುವವರಲ್ಲಿ ಮಿದುಳಿನ ಕಾರ್ಯಾಚರಣೆ ಹೇಗೆ ಅಭಿವೃದ್ಧಿ ಹೊಂದಿದೆ ಎಂಬು ಅಂಶವನ್ನು ಸ್ಮಿತ್ ಹಿಂದಿನ ಸಂಶೋಧನೆಯಲ್ಲಿ ಅಧ್ಯಯನ ಅಭಿವೃದ್ಧಿಪಡಿಸಿದೆ. ಈ ಅಧ್ಯಯನಕ್ಕೆ 71ರಿಂದ 85 ವರ್ಷದ 31 ಭಾಗಿದಾರರನ್ನು ಒಳಪಡಿಸಲಾಗಿದೆ. ವಾರದಲ್ಲಿ ನಾಲ್ಕು ದಿನದಂತೆ 12 ವಾರಗಳ ಕಾಲ ಅವರ ಮೇಲ್ವಿಚಾರಣೆ ನಡೆಸಲಾಗಿದೆ.
ವ್ಯಾಯಾಮಕ್ಕಿಂತ ಮೊದಲು ಮತ್ತು ನಂತರ ಸಂಶೋಧಕರು ಭಾಗಿದಾರರಿಗೆ ಸಣ್ಣ ಕಥೆಯನ್ನು ಓದಿ ಅದನ್ನು ಮಾಹಿತಿಗಳ ಎಲ್ಲ ಸಾಧ್ಯತೆಗಳನ್ನು ಜೋರಾಗಿ ಪುನಾರಾವರ್ತಿಸಿದ್ದಾರೆ. ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಐಎಂಆರ್ಐ ಕಾರ್ಯಾಚಾರಣೆ ಒಳಗಾದವರಲ್ಲಿ ಮಿದುಳಿನ ಸಂಪರ್ಕ ಮತ್ತು ಅರಿವಿನ ಕಾರ್ಯಾಚರಣೆ ನಿಯಂತ್ರಣವನ್ನು ಮಾಪನ ನಡೆಸಲಾಗಿದೆ. 12 ವಾರಗಳ ಅಧ್ಯಯನ ನಂತರ ಅವರನ್ನು ಪರಿಶೀಲಿಸಿದಾಗ ಅವರ ಮಿದುಳಿನ ಸಾಮರ್ಥ್ಯದಲ್ಲಿ ಬದಲಾವಣೆ ಮತ್ತು ಒಗ್ಗಿಗೊಳ್ಳುವುದನ್ನು ಕಾಣಬಹುದಾಗಿದೆ. ನಡಿಗೆ ವ್ಯಾಯಾಮಗಳು ಸುಧಾರಿತ ಅರಿವಿನ ಸಮಸ್ಯೆ ಹೊಂದಿರುವವರಲ್ಲಿ ಮಿದುಳಿನ ಸಂಪರ್ಕವನ್ನು ಸ್ಥಿರಗೊಳಿಸಲು ಅಥವಾ ತಡೆಗಟ್ಟಲು ಸಹಾಯ ಮಾಡುತ್ತದೆ ಎಂಬುದು ಅಧ್ಯಯನ ಫಲಿತಾಂಶ ತಿಳಿಸಿದೆ.
ಇದನ್ನೂ ಓದಿ: ಬಲು ಅಪರೂಪದ ಮಾನಸಿಕ ಅಸ್ವಸ್ಥತೆಗಳಿವು..: ಈ ರೋಗಿಗಳಿಗೆ ಬೇಕು ಸೂಕ್ತ ಚಿಕಿತ್ಸೆ