ನವದೆಹಲಿ: ಈ ಶತಮಾನದಲ್ಲಿ ಬಹು ಕಷ್ಟ ಕಾಲ ಎಂದರೆ ಅದು ಕೋವಿಡ್ 19 ಸಮಯ ಎಂದರೆ ತಪ್ಪಾಗಲಾರದು. ಜಾಗತಿಕವಾಗಿ ಎಲ್ಲ ಮಾನವ ಜೀವಿಗಳಿಗೆ ಸಂಕಷ್ಟ ತಂದೊಡ್ಡಿದ ಕೊರೊನಾ ಸೋಂಕು ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕತೆ ಮೇಲೆ ಕೂಡ ಪರಿಣಾಮ ಬೀರಿತು. ಸೋಂಕಿನ ಭೀತಿ ಹಿನ್ನೆಲೆ ಸಾಮಾಜಿಕ ಸಂಪರ್ಕ ಕಳೆದುಕೊಂಡು ಪ್ರತ್ಯೇಕವಾಗಿ ಜೀವಿಸುವಂತೆ ಆಯಿತು. ಆರೋಗ್ಯ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರಿದ ಈ ಸೋಂಕಿಗೆ ಜಗತ್ತಿನ ವಿಜ್ಞಾನಿಗಳ ಶ್ರಮದಿಂದ ಲಸಿಕೆ ಲಭ್ಯವಾಗಿ, ಕೊಂಚ ನಿಟ್ಟುಸಿರು ಬಿಡುವಂತೆ ಆಯಿತು. ಆದರೆ, ಕೋವಿಡ್ 19ನ ದೀರ್ಘ ಕಾಲದ ಪರಿಣಾಮಗಳು ಇಂದಿಗೂ ಪರಿಣಾಮ ಬೀರುತ್ತಲೇ ಇದೆ.
ಮೂರು ವರ್ಷ ಕಳೆದರೂ ಕೋವಿಡ್ ಸೋಂಕಿನ ಉಪತಳಿಗಳು ಭಾದಿಸುತ್ತಿವೆ. ಇದರ ಪರಿಣಾಮವಾಗಿ ಇತ್ತೀಚೆಗೆ ಇನ್ಫ್ಲುಯೆಂಜಾ ವೈರಸ್ಗೆ ಭೀತಿ ಕಾಡಿತು. ಎಚ್3ಎನ್2 ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಸೂಚನೆ ನೀಡಿತು. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವರದಿ ಅನುಸಾರ 2010ರಲ್ಲಿ ಸ್ವೆನ್ ಮೊದಲು ಕಾಣಿಸಿತು. 2012ರಲ್ಲಿ 12 ಜನರು ಇದರ ಸೋಂಕಿಗೆ ತುತ್ತಾದರು. ಇದೇ ವರ್ಷ ಹಲವು ಎಚ್3 ಎನ್2 ಸೋಂಕು ಕಾಣಿಸಿಕೊಂಡಿತು. ಈ ಸೋಂಕು ಶ್ವಾಸಕೋಶ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ ದೀರ್ಘ ಕಾಲದ ಕೆಮ್ಮು ಕಾಣಿಸಿಕೊಂಡಿತು. ಇದಾದ ಬಳಿಕ ಜಗತ್ತನ್ನು ಕಾಡಿದ್ದು, ಕೋವಿಡ್ 19 ಸೋಂಕು.
ಆರೋಗ್ಯ ಕಾಳಜಿಗೆ ಒತ್ತು: ಇದರಿಂದಾಗಿ ಸಾಮಾಜಿಕ ಪ್ರತ್ಯೇಕಿಕರಣ, ಮಸ್ಕ್ ಧಾರಣೆ, ಸಂಪರ್ಕ ಕಡಿತದ ಜೊತೆಗೆ ಜನರು ಆರೋಗ್ಯದ ಕಾಳಜಿಗೆ ಮುಂದಾದರು. ಜನರು ವಿಟಮಿನ್, ಮಿನರಲ್ಸ್ಗಳಿಗೆ ಒತ್ತು ನೀಡುವ ಮೂಲಕ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾದರು. ಈಗಲೂ ಕೂಡ ಜನರು ಸೋಂಕಿನ ವಿರುದ್ಧ ರಕ್ಷಣೆಗೆ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳಿಸಲು ಒತ್ತು ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಡಯಟರಿ ಸಪ್ಲಿಮೆಂಟ್ಸ್ಗಳಿಗೆ ಬೇಡಿಕೆ ಹೆಚ್ಚಿದೆ. ಭಾರತದಲ್ಲೂ ಇಂತಹ ಡಯಟರಿ ಪೂರಕಗಳ ಮಾರುಕಟ್ಟೆ ವಿಸ್ತರಿಸಿದ್ದು, 2022ರಲ್ಲಿ 436.5 ಬಿಲಿಯನ್ ಬೆಳವಣಿಗೆ ಕಂಡಿದೆ. ಈ ಮಾರುಕಟ್ಟೆ 2028ರವೆಗೆ 958.1 ಬಿಲಿಯನ್ವರೆಗೆ ವಿಸ್ತರಿಸಲಿದೆ ಎಂದು ಅಂದಾಜಿಸಲಾಗಿದೆ.
ಇಮ್ಯೂನಿಟಿ ಬೂಸ್ಟರ್ಗಳು: ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡಲು ಅನೇಕ ಮಾರ್ಗಗಳಿವೆ. ಭಾರತದಲ್ಲಿ ನ್ಯೂಟ್ರಾಸ್ಯುಟಿಕಲ್ಸ್ನಲ್ಲಿ ಹೆಚ್ಚಳ ಕಂಡು ಬಂದಿದೆ. ಅದರಲ್ಲೂ ರೋಗ ನಿರೋಧಕ ವ್ಯವಸ್ಥೆ ವೃದ್ಧಿಗೆ ಬಂದರೆ ಇದು ಪ್ರಮುಖ ವಾಗುತ್ತದೆ. ಇದರಲ್ಲಿ ಪೈಥೊಕೆಮಿಕಲ್ಸ್, ಆ್ಯಂಟಿಆಕ್ಸಿಡೆಂಟ್, ಅಮಿನೊ ಆಸಿಡ್, ಫ್ಯಾಟಿ ಆಸಿಡ್ ಮತ್ತು ಪ್ರೊಬಯೋಟಿಕ್ಸ್ ಮತ್ತಿತ್ತರ ಅಂಶಗಳಿವೆ.
ಸೆಲೆನಿಯಂ: ಸೆಲೆನಿಯಂ ಕೂಡ ಮತ್ತೊಂದು ಪೂರಕವಾಗಿದೆ. ಇದರಲ್ಲಿ ವಿಟಮಿನ್ ಸಿ, ಡಿ ಮತ್ತು ಜಿಂಕ್ ಜೊತೆಗೆ ಪೋಷಕಾಂಶಗಳಿವೆ. ಇದರಲ್ಲಿನ ವಿಟಮಿನ್ ಡಿ ದೈಹಿಕ ರಕ್ಷಣೆ ಒದಗಿಸಲಿದೆ. ಹರ್ಬ್ಸ್ (ಗಿಡ ಮೂಲಿಕೆ), ಸಂಸ್ಕರಿಸಿದ ಆಹಾರ, ಪಾನೀಯ ಡಯಟ್ ಮತ್ತು ಪೋಷಕಾಂಶಗಳು ರೋಗ ನಿರೋಧಕ ಶಕ್ತಿ ಹೊಂದುವ ಮೂಲಕ ಸೋಂಕು ತಡೆಯುವಲ್ಲಿ ಸಹಕಾರಿಯಾಗಿದೆ. ಸೆಲೆನಿಯಂ ಸೈಟೊಟೊಕ್ಸಿಕ್ ಎಫೆಕ್ಟೊರ್ ಕೋಶದ ಮೇಲೆ ಪರಿಣಾಮ ಬೀರುತ್ತದೆ.
ಡಿ3 ಪೂರಕ: ಜಗತ್ತಿನಾದ್ಯಂತ ಮತ್ತೊಂದು ಪೂರಕ ಆಹಾರವಾಗಿದೆ. ಡಿ3 ಕೂಡ ಇಮ್ಯೂನ್ ಬೂಸ್ಟರ್ ಆಗಿ ಕೆಲಸ ಮಾಡಲಿದ್ದು, ಆರೋಗ್ಯಯುತ ಮೂಳೆ ಮತ್ತು ಸ್ನಾಯುಗಳ ವೃದ್ಧಿಗೆ ಪ್ರಮುಖ್ಯತೆ ನೀಡುತ್ತದೆ. ಪೂರಕಗಳು ಮತ್ತು ನ್ಯೂಟ್ರಾಸ್ಯುಟಿಕಲ್ಸ್ಗಳು ಕೊಬ್ಬುಯುಕ್ತ ಮೀನಿನ ಮಾಂಸ ಆಥವಾ ಮೀನಿನ ಯಕೃತ್ ಎಣ್ಣೆಯಿಂದ ಮಾಡಿರುತ್ತದೆ. ಇದು ಅನೇಕ ವಿಧದ ಪೂರಕಗಳಲ್ಲಿ ಕೂಡ ಲಭ್ಯವಾಗುತ್ತದೆ. ಉದಾಹರಣೆ ಪೌಡರ್, ಮೃದು ಜೆಲ್ ಮಾತ್ರೆ, ಕರಗಬಲ್ಲ ಮಾತ್ರೆಗಳ ರೂಪದಲ್ಲಿ.
ಆಧುನಿಕ ದಿನದ ನ್ಯೂಟ್ರಾಸ್ಯುಟಿಕಲ್ಸ್ ಉತ್ಪಾದಕರು ಹೆಚ್ಚು ಕ್ರಿಯಾತ್ಮಕವಾಗಿದ್ದಾರೆ. ನೀರಿನ ಜೊತೆಗೆ ಸುಲಭವಾಗಿ ಸೇವಿಸಬಹುದು. ಈ ಪೂರಕಗಳು ಹಲವು ವಿಧಗಳಲ್ಲಿ ಲಭ್ಯವಾಗುತ್ತಿದ್ದು, ಯಾರು ಬೇಕಾದರೂ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪಡೆಯಬಹುದಾಗಿದೆ.
ದೇಹದ ರಕ್ಷಣ ವ್ಯವಸ್ಥೆ: ಫಾರ್ಮಾಸ್ಯೂಟಿಕಲ್ಸ್ ಮತ್ತು ನ್ಯೂಟ್ರಾಸ್ಯುಟಿಕಲ್ಸ್ ಮಾತ್ರ ವೈರಸ್ ವಿರುದ್ಧ ಹೋರಾಡುವ ಮಾರ್ಗವಲ್ಲ. ದೈನಂದಿನ ಡಯಟರಿಯನ್ನು ಶಿಫಾರಸು ಮಾಡಲಾಗಿದೆ. ವಿಶೇಷವಾಗಿ ಈ ಪೂರಕಗಳು ಡಯಟ್ ಸಮತೂಗಿಸಲು ಪ್ರಮುಖವಾಗಿತ್ತದೆ.
ಇದನ್ನೂ ಓದಿ: ದೇಹದ ಶಕ್ತಿ ಕುಂದಿಸುತ್ತದೆ ಸಾಮಾಜಿಕ ಪ್ರತ್ಯೇಕಿಕರಣ