ಟೊರೊಂಟೋ( ಕೆನಡಾ): ನೆನಪಿನ ಶಕ್ತಿ ಕಳೆದು ಕೊಳ್ಳುವ ಡೆಮನ್ಶಿಯಾವನ್ನು ತಡೆಯುವಲ್ಲಿ ವಿಟಮಿನ್ ಡಿ ಪೂರಕಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಕೆನಡಾದ ಯುನಿವರ್ಸಿಟಿ ಆಫ್ ಕಲ್ಗಾರಿ ಮತ್ತು ಇಂಗ್ಲೆಂಡ್ನ ಯುನಿವರ್ಸಿಟಿ ಆಫ್ ಎಕ್ಸಿಟರ್ ಸಂಶೋಧನೆ ನಡೆಸಿದೆ. ಅಮೆರಿಕದ ನ್ಯಾಷನಲ್ ಅಲ್ಜಮೈರಾ ಕೊರ್ಡಿನೇಟಿಂಗ್ ಸೆಂಟರ್ನ 12, 388 ಭಾಗಿದಾರರಲ್ಲಿ ಡೆಮೆನ್ಶಿಯ ಮತ್ತು ವಿಟಮಿನ್ ಡಿ ಪೂರಕಗಳ ಸಂಬಂಧ ವಿಶೇಷ ಅಧ್ಯಯನವನ್ನ ನಡೆಸಲಾಗಿದೆ.
ಸರಾಸರಿ ವಯಸ್ಸು 71 ವಯಸ್ಸಿನವರು ಇದರಲ್ಲಿ ಭಾಗಿಯಾಗಿದ್ದು, ಅಧ್ಯಯನದ ವೇಳೆ ಅವರಲ್ಲಿ ಯಾವುದೇ ಡೆಮನ್ಶಿಯಾ ಸಮಸ್ಯೆ ಕಂಡು ಬಂದಿರಲಿಲ್ಲ. ವಿಟಮಿನ್ ಡಿ ಸೇವನೆಯಿಂದ ಡೆಮನ್ಶಿಯಾದಿಂದ ಮುಕ್ತವಾಗಿ ಬದುಕ ಬಹುದಾಗಿದೆ. ಜೊತೆಗೆ ಪೂರಕಗಳನ್ನು ತೆಗೆದುಕೊಂಡ ಗುಂಪಿನಲ್ಲಿ 40 ಪ್ರತಿಶತದಷ್ಟು ಕಡಿಮೆ ಡೆಮನ್ಶಿಯ ರೋಗ ನಿರ್ಣಯ ಕಂಡು ಬಂದಿದೆ ಎಂದು ಅಧ್ಯಯನ ತಿಳಿಸಿದೆ.
ಮೆದುಳಿನ ಮೇಲೆ ವಿಟಮಿನ್ ಡಿ ಪರಿಣಾಮ: ವಿಟಮಿನ್ ಡಿ ಮೆದುಳಿನಲ್ಲಿ ಕೆಲವು ಪರಿಣಾಮಗಳನ್ನು ಹೊಂದಿದೆ. ಇದು ನೆನಪಿನ ಶಕ್ತಿ ಮೇಲೆ ಬೀರುವ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಸಂಶೋಧನೆಯು ಸಂಘರ್ಷದ ಫಲಿತಾಂಶಗಳನ್ನು ನೀಡಿದೆ ಎಂದು ಕ್ಯಾಲ್ಗರಿ ವಿಶ್ವವಿದ್ಯಾಲಯ ಮತ್ತು ಎಕ್ಸೆಟರ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜಹಿನೂರ್ ಇಸ್ಮಾಯಿಲ್ ತಿಳಿಸಿದ್ದಾರೆ.
ನಿರ್ದಿಷ್ಟವಾಗಿ ವಿಟಮಿನ್ ಡಿ ಪೂರೈಕೆಗೆ ಗುರಿಯಾಗಬಹುದಾದ ಗುಂಪುಗಳಿಗೆ ಪ್ರಮುಖವಾಗಿ ಈ ಅಧ್ಯಯನ ಗಮನ ಹರಿಸಿದೆ. ನೆನಪಿನ ಶಕ್ತಿ ನಷ್ಟವಾಗಲು ಪ್ರಾರಂಭವಾಗುವ ಮೊದಲು, ಈ ಹಿಂದಿನ ಪೂರಕವೂ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದು ಸೂಚಿಸಲು ಸಾಕ್ಷಿ ಕಂಡುಕೊಂಡಿದ್ದೇವೆ. ವಿಟಮಿನ್ ಡಿ ಎಲ್ಲ ಗುಂಪಿನವರಿಗೆ ಪರಿಣಾಮಕಾರಿಯಾಗಿದೆ. ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರಲ್ಲಿ ಈ ಸಂಶೋಧನೆ ಗಮನಾರ್ಹ ಪರಿಣಾಮ ಉಂಟು ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.
ಹೆಚ್ಚಿನ ಡೆಮನ್ಸಿಯ ಸಂಬಂಧ ಹೊಂದಿರುವ ಸಾಧಾರಣ ಅರಿವಿನ ಸಮಸ್ಯೆ ಹೊಂದಿರುವವರಿಗಿಂತ ಸಾಮಾನ್ಯ ಅರಿವಿನ ಸಮಸ್ಯೆ ಹೊಂದಿರುವವರಲ್ಲಿ ವಿಟಮಿನ್ ಡಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದನ್ನು ಅಧ್ಯಯನದ ವೇಳೆ ಪತ್ತೆ ಹಚ್ಚಲಾಗಿದೆ. APOEe4 ವಂಶವಾಹಿ ಹೊಂದಿರದ ಜನರಲ್ಲಿ ವಿಟಮಿನ್ ಡಿ ಪರಿಣಾಮಗಳು ಗಣನೀಯವಾಗಿ ಹೆಚ್ಚಿವೆ. ವಾಹಕವಲ್ಲದವರಿಗೆ ಹೋಲಿಸಿದರೆ ಆಲ್ಜೈಮರ್ ಡೆಮನ್ಶಿಯ ಹೆಚ್ಚಿನ ಅಪಾಯವನ್ನು ಹೊಂದಿರುವುದನ್ನ ಅಧ್ಯಯನದ ವೇಳೆ ಪತ್ತೆ ಹಚ್ಚಲಾಗಿದೆ.
APOEe4 ಜೀನ್ ಕರುಳಿನಿಂದ ವಿಟಮಿನ್ ಡಿ ಅನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ. ಇದು ವಿಟಮಿನ್ ಡಿ ಪೂರಕ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಕಡಿಮೆ ಮಟ್ಟದ ವಿಟಮಿನ್ ಡಿ ಹೆಚ್ಚಿನ ಬುದ್ಧಿಮಾಂದ್ಯತೆಯ ಅಪಾಯಕ್ಕೆ ಸಂಬಂಧಿಸಿದೆ ಎಂದು ಹಿಂದಿನ ಸಂಶೋಧನೆಯು ಕಂಡುಹಿಡಿದಿದೆ ಎಂದು ಅಧ್ಯಯನವು ಹೇಳಿದೆ.
ವಿಟಮಿನ್ ಡಿ ಮೆದುಳಿನಲ್ಲಿ ಅಮಿಲಾಯ್ಡ್ ಅನ್ನು ತೆರವುಗೊಳಿಸುವಲ್ಲಿ ತೊಡಗಿಸಿಕೊಂಡಿದೆ. ಡೆಮನ್ಶಿಯ ಬೆಳವಣಿಗೆಯಲ್ಲಿ ಒಳಗೊಂಡಿರುವ ಮತ್ತೊಂದು ಪ್ರೊಟೀನ್ ಟೌ ರಚನೆಯ ವಿರುದ್ಧ ಮೆದುಳನ್ನು ರಕ್ಷಿಸಲು ವಿಟಮಿನ್ ಡಿ ಸಹಾಯವನ್ನು ಮಾಡುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ.
ಇದನ್ನೂ ಓದಿ: ದಂತಪಂಕ್ತಿ ಸಾಧನ ನುಂಗಿದ ಸೂರತ್ ವ್ಯಕ್ತಿ: ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು