ETV Bharat / sukhibhava

Vitamin D: ವಿಟಮಿನ್​ ಡಿ ಕೊರತೆಯಿಂದ ಮಕ್ಕಳಲ್ಲಿ ಹಲವು ಸಮಸ್ಯೆ

Vitamin D deficiency: ವಿಟಮಿನ್ ಡಿ ಕೊರತೆ ಎಲ್ಲ ವಯಸ್ಸಿನ ಜನರಲ್ಲಿ ಬಹಳ ಸಾಮಾನ್ಯವಾದ ಸಮಸ್ಯೆ. ಒಂದು ವೇಳೆ ಈ ಕೊರತೆ ಹೆಚ್ಚಾದರೆ ಅನೇಕ ರೋಗಗಳಿಗೆ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತದೆ.

vitamin D deficiency in children
vitamin D deficiency in children
author img

By

Published : Aug 10, 2023, 5:07 PM IST

ಪ್ರತಿಯೊಬ್ಬರಿಗೂ ಬೇಕಾದ ಅಗತ್ಯ ಪೋಷಕಾಂಶದಲ್ಲಿ ವಿಟಮಿನ್​ ಡಿ ಒಂದು. ವಿಟಮಿನ್​ ಡಿ ಕೊರತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಕ್ಕಳಲ್ಲಿ ಇದು ಚಯಾಪಚಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಧ್ಯಯನ ಅನುಸಾರ, ಚಯಾಪಚಯನ ಸಮಸ್ಯೆಗೆ ಚಿಕಿತ್ಸೆ ನೀಡದೇ ಹೋದಲ್ಲಿ ಹೃದಯರಕ್ತನಾಳದಂತಹ ಅನೇಕ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ.

ಅಧ್ಯಯನದ ಫಲಿತಾಂಶವನ್ನು ಮೆಟಾಬೊಲಿಟ್ಸ್​ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. 14 ರಿಂದ 18 ವರ್ಷ ವಯೋಮಾನದ 78 ಮಂದಿ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಬಳಿಕ ವಿಟಮಿನ್​ ಡಿ ಸೇವನೆ ಮಾಡುವ ಮತ್ತು ಸೇವನೆ ಮಾಡದಿರುವ ಎರಡು ಗುಂಪುಗಳನ್ನು ರಚಿಸಲಾಗಿದೆ.

ಸಂಶೋಧಕರ ಪ್ರಕಾರ, ಮಾನವನ ದೇಹದಲ್ಲಿ ಅನೇಕ ಪ್ರಕ್ರಿಯೆಗಳ ನಿಯಂತ್ರಣದಲ್ಲಿ ವಿಟಮಿನ್​ ಡಿ ಒಳಗೊಂಡಿದೆ. ಇದು ಕೇವಲ ಮೂಳೆಗಳ ಟಿಶ್ಯೂಗೆ ಮಾತ್ರವಲ್ಲದೇ ಅಡಿಪೊಸ್​ ಟಿಶ್ಯೂ ಸೇರಿದಂತೆ ಹಲವು ಪ್ರಯೋಜನ ಹೊಂದಿದೆ. ವಿಟಮಿನ್​ ಡಿ ಸ್ನಾಯುಕೋಶ ಅಭಿವೃದ್ಧಿ, ಪ್ರತಿರಕ್ಷಣೆಯ ಜೊತೆಗೆ ಮೂಳೆ ವ್ಯವಸ್ಥೆಗೆ ಅತ್ಯಗತ್ಯ.

ವಿಟಿಮಿನ್​ ಡಿ ಕೊರತೆಯು ರೋಗಶಾಸ್ತ್ರೀಯ ಅಸ್ಥಿಪಂಜರದ ಬೆಳವಣಿಗೆಗೆ ಸಂಬಂಧಿಸಿದ ಕೊಮೊರ್ಬಿಡಿಟಿಗಳಗಳೊಂದಿಗೆ ಸಂಬಂಧ ಹೊಂದಿದೆ. ಕಡಿಮೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ವಿಟಮಿನ್​ ಡಿ ಕೊರತೆ ಉಂಟಾಗುತ್ತದೆ. ಆಹಾರದಲ್ಲಿ ಕೊರತೆ ಮತ್ತು ಹೆಪೆಟಿಕ್​ ರೋಗದಿಂದಲೂ ಇದು ಕಡಿಮೆಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ವಿಟಮಿನ್ ಡಿ ಕೊರತೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ಹೆಚ್ಚಿನ ಸಂಖ್ಯೆ ಜನರಲ್ಲಿ ವಿಟಮಿನ್ ಡಿ ಕೊರತೆ ಪ್ರಕರಣಗಳು ಪತ್ತೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಮಕ್ಕಳಲ್ಲಿ ವಿಟಮಿನ್​ ಡಿ ಕೊರತೆ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ಅವರಲ್ಲಿ ಮೆಟಾಬಾಲಿಕ್​ ಸಿಂಡ್ರೋಮ್​ಗೆ ಕಾರಣವಾಗುತ್ತದೆ. ಇದು ಆತಂಕಕಾರಿಯಾಗಿದೆ

ವಿಟಮಿನ್​ ಡಿ ಕೊರತೆ ಸಾಮಾನ್ಯವಾಗಿ ಆಯಾಸ, ಉತ್ತಮ ನಿದ್ರೆ ಕೊರತೆ, ಮೂಳೆ ನೋವು, ಖಿನ್ನತೆ ಅಥವಾ ಬೇಸರ ಭಾವ, ಕೂದಲು ನಷ್ಟ, ಸ್ನಾಯು ದುರ್ಬಲತೆ, ಹಸಿವು ಕಡಿಮೆಯಾಗುವುದು, ಸುಲಭವಾಗಿ ಅನಾರೋಗ್ಯಕ್ಕೆ ಗುರಿಯಾಗುವುದು ಕಂಡುಬರುತ್ತದೆ.

ವಿಟಮಿನ್​ ಡಿ ಹೆಚ್ಚಿಸುವಕ್ಕೆ ಉಪಾಯ: ವಿಟಮಿನ್​ ಡಿ ಯಥೇಚ್ಛವಾಗಿ ಲಭ್ಯವಾಗುವ ಮೂಲ ಎಂದರೆ ಅದು ಸೂರ್ಯನ ಬೆಳಕು. ಪ್ರತಿನಿತ್ಯ ಕನಿಷ್ಟ ಸಮಯವಾದರೂ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಅಗತ್ಯವಾಗಿದೆ. ಇದರ ಹೊರತಾಗಿ, ಫ್ಯಾಟಿ ಫಿಶ್​ ಮತ್ತು ಸಮುದ್ರ ಆಹಾರಗಳನ್ನು ಸೇವಿಸಬಹುದು. ಸಸ್ಯಹಾರಿಗಾಗಿದ್ದರೆ, ವಿಟಮಿನ್​ ಡಿ ಹೆಚ್ಚಿರುವ ಮಶ್ರೂಮ್​ ಸೇವಿಸಬಹುದು. ಇದರ ಹೊರತಾಗಿ ವೈದ್ಯರ ಸಲಹೆ ಮೇರೆಗೆ ವಿಟಮಿನ್​ ಡಿ ಪೂರಕವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ವಾಯು ಮಾಲಿನ್ಯದಿಂದ ಹೆಚ್ಚುತ್ತಿದೆ ಸಿವಿಡಿ ಸಾವು.. ಅಂಗವೈಕಲ್ಯತೆಯ ಅಪಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.