ETV Bharat / sukhibhava

ಜನರಲ್ಲಿ 'ವಿಟಮಿನ್ ಡಿ' ಕೊರತೆ ಹೆಚ್ಚಳ.. ನಿಷ್ಕಾಳಜಿ ತೋರಿದರೆ ಅಪಾಯ ಕಟ್ಟಿಟ್ಟಬುತ್ತಿ - ವಿಟಮಿನ್ ಡಿ ಕೊರತೆ ಪರಿಣಾಮ

ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಕೊರತೆ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಕಾಳಜಿ ವಹಿಸಬೇಕಿದೆ.

Vitamin D deficiency cases increased
ವಿಟಮಿನ್ ಡಿ ಕೊರತೆ ಪ್ರಕರಣಗಳು ಹೆಚ್ಚಳ
author img

By

Published : Nov 20, 2022, 9:25 PM IST

Updated : Nov 30, 2022, 12:54 PM IST

ವಿಟಮಿನ್ ಡಿ ಒಂದು ಪ್ರಮುಖ ಪೋಷಕಾಂಶವಾಗಿದ್ದು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲವಾಗಿ, ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಸೂರ್ಯನ ಕಿರಣ 'ವಿಟಮಿನ್ ಡಿ' ಯ ಪ್ರಮುಖ ಮೂಲ. ಬಿಸಿಲಿಗೆ ಮೈಯೊಡ್ಡಿದರೆ ಸಾಕು, ಬೇಕಾದಷ್ಟು ವಿಟಮಿನ್ ಡಿ ನಿಮಗೆ ಸಿಗುತ್ತದೆ. ಇಷ್ಟಾದರೂ ಬಹುತೇಕರು ಇದರ ಕೊರತೆಯಿಂದ ಬಳಲುತ್ತಿದ್ದಾರೆ. ವಿಟಮಿನ್ ಡಿ ಕಡಿಮೆಯಾದಷ್ಟೂ ಅಕಾಲಿಕ ಮರಣದ ಅಪಾಯ ಹೆಚ್ಚಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿದೆ.

ದೇಹದಲ್ಲಿ ವಿಟಮಿನ್ ಡಿ ಕೊರತೆಯನ್ನು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಲಾಗಿದ್ದರೂ ಇದು ಪ್ರಪಂಚದಾದ್ಯಂತ ಎಲ್ಲಾ ವಯಸ್ಸಿನ ಜನರಲ್ಲಿ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಹಾರ ಕ್ರಮ, ಜೀವನಶೈಲಿ ಬದಲಾವಣೆ ಮತ್ತು ಇತರೆ ಕಾರಣಗಳಿಂದಾಗಿ, ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಜನರಲ್ಲಿ ಇತರೆ ಸಮಸ್ಯೆಗಳ ಉದ್ಭವಕ್ಕೆ ಪ್ರಚೋದಿಸುತ್ತದೆ. ಕೋವಿಡ್ -19 ಸೋಂಕು ಈ ಪ್ರಕರಣಗಳನ್ನು ಹೆಚ್ಚಿಸಿದೆ. ಇನ್ನೂ ವಿಟಮಿನ್​ ಡಿ ಕಡಿಮೆ ಇರುವವರಿಗೆ ಕೋವಿಡ್​ ಬೇಗ ತಗುಲಿದೆ. ಮತ್ತು ವಿಟಮಿನ್​ ಡಿ ಕೊರತೆಯಿಂದ ಉಂಟಾಗುವ ರೋಗಗಳು, ಸಮಸ್ಯೆಗಳು ಇನ್ನಷ್ಟು ಹೆಚ್ಚಿವೆ. ಸಂಶೋಧನೆಯ ಪ್ರಕಾರ, ಕೋವಿಡ್-19ರ ಅಡ್ಡ ಪರಿಣಾಮವಾಗಿ ವಿಟಮಿನ್ ಡಿ ಕೊರತೆಯು ಪ್ರಮುಖವಾಗಿ ಕಂಡುಬರುತ್ತದೆ ಎಂದು ದೃಢಪಡಿಸಲಾಗಿದೆ.

ಸಾಮಾನ್ಯವಾಗಿ, ಮೂಳೆಗಳನ್ನು ಆರೋಗ್ಯವಾಗಿಡಲು ವಿಟಮಿನ್ ಡಿ ದೇಹಕ್ಕೆ ಅತ್ಯಗತ್ಯ ಎಂದು ಜನರು ಭಾವಿಸುತ್ತಾರೆ. ಹೌದು, ಮೂಳೆಗಳನ್ನು ಆರೋಗ್ಯಕರವಾಗಿಡುವಲ್ಲಿ ಇದು ನಿಜವಾಗಿಯೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದರೆ ವಿಟಮಿನ್ ಡಿ ಯ ಅಗತ್ಯತೆ ಮತ್ತು ಪ್ರಯೋಜನಗಳು ಕೇವಲ ಮೂಳೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದರ ಹೊರತಾಗಿ, ದೇಹದ ಬೆಳವಣಿಗೆ, ರೋಗಗಳಿಂದ ರಕ್ಷಣೆ ಮತ್ತು ಅನೇಕ ದೈಹಿಕ ವ್ಯವಸ್ಥೆಗಳ ಸುಗಮ ಕಾರ್ಯನಿರ್ವಹಣೆಗೆ ಸರಿಯಾದ ಪ್ರಮಾಣದ ವಿಟಮಿನ್ ಡಿ ಅನ್ನು ಹೊಂದಿರುವುದು ಬಹಳ ಮುಖ್ಯ. ಅದರೆ ದೇಹದಲ್ಲಿ ಈ ಪೋಷಕಾಂಶ ಕೊರತೆಯಾದರೆ ದೈಹಿಕವಾಗಿ ಮಾತ್ರವಲ್ಲದೇ ಅನೇಕ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಸಂಶೋಧನೆ ತಿಳಿಸಿದೆ.

ವಿಟಮಿನ್ ಡಿ ಯ ಭಾಗಶಃ ಕೊರತೆಯು ಎಲ್ಲಾ ವಯಸ್ಸಿನ ಜನರಲ್ಲಿ ಬಹಳ ಸಾಮಾನ್ಯವಾದ ಸಮಸ್ಯೆಯಾಗಿದ್ದರೂ ಕೂಡ ಒಂದು ವೇಳೆ ಈ ಕೊರತೆಯು ಹೆಚ್ಚಾದರೆ ಇದು ಅನೇಕ ರೋಗಗಳಿಗೆ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪ್ರಸ್ತುತ ಹೆಚ್ಚಿನ ಸಂಖ್ಯೆ ಜನರಲ್ಲಿ ವಿಟಮಿನ್ ಡಿ ಕೊರತೆ ಪ್ರಕರಣಗಳು ಪತ್ತೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಕೋವಿಡ್ ಸೋಂಕಿನಿಂದ ಬಳಲಿದ, ಸದ್ಯ ಬಳಲುತ್ತಿರುವ ಜನರಲ್ಲಿ ವಿಟಮಿನ್ ಡಿ ತೀವ್ರ ಕೊರತೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

2020ರಲ್ಲಿ, ಷಿಕಾಗೊ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯಲ್ಲಿ ಒದಗಿಸಿದ ಮಾಹಿತಿಯ ಪ್ರಕಾರ, ವಿಟಮಿನ್ ಡಿ ಕೊರತೆಯಿರುವ ಸುಮಾರು ಶೇ. 20ರಷ್ಟು ಜನರಲ್ಲಿ ಕೋವಿಡ್​ ಪತ್ತೆಯಾಗಿದೆ. ದೇಹದಲ್ಲಿನ ವಿಟಮಿನ್ ಡಿ ಕೊರತೆಯು ಜನರು ಕೊರೊನಾ ಸೋಂಕಿಗೆ ಗುರಿಯಾಗಲು ಕಾರಣವಾಗಬಹುದು ಎಂದು ಮತ್ತೊಂದು ಸಂಶೋಧನೆಯಲ್ಲಿ ದೃಢಪಡಿಸಲಾಗಿದೆ.

ಕೆಲ ಮಾಹಿತಿಯ ಪ್ರಕಾರ, ಕೋವಿಡ್​ ಅವಧಿಯ ಮೊದಲು ಸುಮಾರು 40 ಪ್ರತಿಶತದಷ್ಟು ವಿಟಮಿನ್ ಡಿ ಕೊರತೆಯ ಪ್ರಕರಣಗಳು ಜನರಲ್ಲಿ ವರದಿಯಾಗುತ್ತಿದ್ದವು. ಈಗ ಈ ಸಂಖ್ಯೆಯು ಶೇ.90ಕ್ಕಿಂತ ಹೆಚ್ಚಾಗಿದೆ. ದೇಹದಲ್ಲಿ ವಿಟಮಿನ್ ಡಿ ಯ ಅತಿಯಾದ ಕೊರತೆಯು ಕೋವಿಡ್ -19 ಸೋಂಕು ಬೇಗ ವಕ್ಕರಿಸಲು ಕಾರಣವಾಗಿದೆ.

ಲಕ್ನೋದ ಮೂಳೆ ವೈದ್ಯ ಡಾ ರಶೀದ್ ಖಾನ್ ಈ ಬಗ್ಗೆ ಮಾಹಿತಿ ನೀಡಿದ್ದು, ಕೋವಿಡ್​ನಿಂದ ಬಳಲಿದ ಅನೇಕ ಜನರು ಇಮ್ಯುನೊಮಾಡ್ಯುಲೇಷನ್ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಹೇಳಿದ್ದಾರೆ. ಅವರ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಸೋಂಕಿನ ಪರಿಣಾಮದಿಂದಾಗಿ, ಜನರು ಅನೇಕ ರೀತಿಯ ನೋವು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಹಾರದಿಂದ ಪೋಷಕಾಂಶಗಳನ್ನು ದೇಹ ಸರಿಯಾಗಿ ಹೀರಿಕೊಳ್ಳುತ್ತಿಲ್ಲ. ಅದರ ಪರಿಣಾಮಗಳು ಅವರ ದೇಹದ ಮೇಲೆ ಗೋಚರಿಸುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಯುವತಿಯರಲ್ಲಿ ಹೆಚ್ಚುತ್ತಿದೆ ಕನ್ಯತ್ವ ಮರಳಿ ಪಡೆಯುವ ಆಸೆ: ಇದಕ್ಕಾಗಿ ಲೇಸರ್​ ಶಸ್ತ್ರಚಿಕಿತ್ಸೆ

ವಿಟಮಿನ್ ಡಿಯು ಕ್ಯಾಲ್ಸಿಯಂ, ಫಾಸ್ಫೇಟ್ ಮತ್ತು ಮೆಗ್ನೀಸಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳಂತಹ ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಮ್ಮ ಮೂಳೆಗಳು ಮತ್ತು ಸ್ನಾಯುಗಳು ಬಲವಾಗಿರುವುದು ಮಾತ್ರವಲ್ಲದೇ ಹೃದಯ, ಮೂತ್ರಪಿಂಡಗಳು ಮತ್ತು ದೇಹದ ಇತರೆ ಅನೇಕ ಭಾಗಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ, ದೇಹದಲ್ಲಿನ ಅನೇಕ ಹಾರ್ಮೋನುಗಳ ಕಾರ್ಯಗಳನ್ನು ನಿಯಂತ್ರಿಸಲು ಇದು ಸಹಕಾರಿ. ಆದರೆ ವಿಟಮಿನ್ ಡಿ ಅಂಶವೇ ಕಡಿಮೆ ಆದರೆ ಅನೇಕ ಸಮಸ್ಯೆ ಉದ್ಭವಿಸುತ್ತದೆ ಎಂದಿದ್ದಾರೆ.

2021ರಲ್ಲಿ ಮೆಡಿಕಲ್ ಜರ್ನಲ್ ನೇಚರ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಭಾರತ, ಅಫ್ಘಾನಿಸ್ತಾನ ಮತ್ತು ಟುನೀಶಿಯಾದಂತಹ ದೇಶಗಳಲ್ಲಿ, ಸುಮಾರು ಶೇ.20ರಷ್ಟು ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆ ಸಮಯದಲ್ಲಿ (2021ರಲ್ಲಿ) ಭಾರತದಲ್ಲಿ ಸುಮಾರು 49 ಕೋಟಿ ಜನರು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದರು ಎಂದು ಉಲ್ಲೇಖಿಸಲಾಗಿದೆ. ವಿಟಮಿನ್ ಡಿ ಕೊರತೆಯ ಸಾಮಾನ್ಯ ಲಕ್ಷಣಗಳ ಬಗ್ಗೆ ಡಾ. ರಶೀದ್ ಈ ಕೆಳಗಿನಂತೆ ವಿವರಿಸಿದ್ದಾರೆ.

  • ನಿರಂತರ ಆಯಾಸ ಮತ್ತು ಆಲಸ್ಯ.
  • ಮೂಳೆ, ಬೆನ್ನು ಮತ್ತು ಕೀಲುಗಳಲ್ಲಿ ನೋವು.
  • ಕೂದಲು ಉದುರುವಿಕೆ ಮತ್ತು ಕೂಡಲು ಒಡೆಯುವಿಕೆ.
  • ಮನಸ್ಥಿತಿ ಬದಲಾಗುವಿಕೆ.
  • ಅತಿಯಾದ ಒತ್ತಡ.
  • ದುರ್ಬಲ ರೋಗನಿರೋಧಕ ಶಕ್ತಿ.
  • ಯಾವುದೇ ಗಾಯಗಳು ಶೀಘ್ರ ವಾಸಿಯಾಗದಿರುವುದು ಇತ್ಯಾದಿ.

ಇದನ್ನೂ ಓದಿ: ವಿಟಮಿನ್ ಡಿ ಕೊರತೆಯಿಂದ ಅಕಾಲಿಕ ಮರಣ? ಹೌದೆನ್ನುತ್ತಾರೆ ಸಂಶೋಧಕರು!

ಈ ರೋಗಲಕ್ಷಣಗಳು ತುಂಬಾ ಸಾಮಾನ್ಯವಾಗಿರುವುದರಿಂದ ಅಂದರೆ ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವುದರಿಂದ ಹೆಚ್ಚಿನ ಜನರು ಆರಂಭಿಕ ಹಂತಗಳಲ್ಲಿ ಅವುಗಳ ಬಗ್ಗೆ ಯಾವುದೇ ಗಮನವನ್ನು ನೀಡುವುದಿಲ್ಲ. ಆದರೆ ದೇಹದಲ್ಲಿ ವಿಟಮಿನ್ ಡಿ ಕೊರತೆಯು ಅಧಿಕವಾಗಿದ್ದರೆ ಈ ರೋಗಲಕ್ಷಣಗಳ ತೀವ್ರತೆಯು ಹೆಚ್ಚು ಗೋಚರಿಸುತ್ತದೆ. ಅದೇ ಸಮಯದಲ್ಲಿ, ಅನೇಕ ಇತರೆ ಕಾಯಿಲೆಗಳು ಸಹ ಆರಂಭವಾಗುತ್ತದೆ. ದೇಹದಲ್ಲಿನ ವಿಟಮಿನ್ ಡಿ ಕೊರತೆಯು ಸಾಮಾನ್ಯವಾಗಿ ನರದೌರ್ಬಲ್ಯ, ಹೃದಯ ಮತ್ತು ಕ್ಯಾನ್ಸರ್ ಕಾಯಿಲೆಗಳಿಗೆ ಕಾರಣವಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದರ ಕೊರತೆಯಿಂದಾಗಿ ಗರ್ಭಾವಸ್ಥೆಯಲ್ಲಿ ಹಲವು ಬಾರಿ ತೊಡಕುಗಳು ಉಂಟಾಗಬಹುದು ಮತ್ತು ಭ್ರೂಣದ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು ಎಂದು ಡಾ. ರಶೀದ್ ತಿಳಿಸಿದ್ದಾರೆ.

Last Updated : Nov 30, 2022, 12:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.