ETV Bharat / sukhibhava

ಹಲವು ಅನಾರೋಗ್ಯಕ್ಕೆ ಒಂದೇ ಔಷಧ ವಿನೆಗರ್.. ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತೇ? - ವಿನೆಗರ್ ಪ್ರಯೋಜನಗಳು

ಜೀರ್ಣಕ್ರಿಯೆ ಸರಾಗವಾಗಿ ನಡೆದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ. ವಿನೆಗರ್ ಜೀರ್ಣ ಸಮಸ್ಯೆಗಳನ್ನು ಸಹ ಕಡಿಮೆ ಮಾಡುವುದು ಕಂಡು ಬಂದಿದೆ. ನೀವು ಅಜೀರ್ಣ, ಮಲಬದ್ಧತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಅನುಭವಿಸುತ್ತಿದ್ದರೆ, ಒಂದು ಲೋಟಕ್ಕೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಮತ್ತು ಕುಡಿಯಿರಿ. ಶೀಘ್ರದಲ್ಲೇ ಸಮಸ್ಯೆ ದೂರವಾಗುತ್ತದೆ.

ವಿನೆಗರ್
Vinegar
author img

By

Published : Aug 16, 2022, 12:08 PM IST

Updated : Aug 16, 2022, 12:14 PM IST

ಮುಖದ ಮೇಲಿನ ಮೊಡವೆ ಹೋಗುತ್ತಿಲ್ಲವೆ? ಪಿಸಿಓಎಸ್​ ಸಮಸ್ಯೆ ಕಾಡುತ್ತಿದೆಯೆ? ತೂಕ ಇಳಿಸಲು ದಾರಿ ಕಾಣದಾಗಿದೆಯೆ? ಇದೆಲ್ಲದಕ್ಕೂ ಪರಿಹಾರ ನಿಮ್ಮ ಅಡುಗೆ ಮನೆಯಲ್ಲಿದೆ. ಅದೇನೆಂದು ಗೊತ್ತಾ..? ಅದುವೇ ಆ್ಯಪಲ್ ಸೈಡರ್ ವಿನೆಗರ್. ಯಾವೆಲ್ಲ ಸಮಸ್ಯೆಗಳಿಗೆ ಆ್ಯಪಲ್ ಸೈಡರ್ ವಿನೆಗರ್ ಬಳಸಬಹುದು ಎಂಬ ಬಗ್ಗೆ ಇಲ್ಲಿದೆ ಒಂದಿಷ್ಟು ಮುಖ್ಯವಾದ ಮಾಹಿತಿ. ನೀವು ತಿಳಿದುಕೊಳ್ಳಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.

  • ನೀವು ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ನಿತ್ಯ ಬೆಳಗ್ಗೆ ಒಂದು ಲೋಟ ಬೆಚ್ಚಗಿನ ನೀರನ್ನು ಸ್ವಲ್ಪ ಆ್ಯಪಲ್ ಸೈಡರ್ ವಿನೆಗರ್ ಜೊತೆಗೆ ಕುಡಿಯಿರಿ. ಇದು ಹಾರ್ಮೋನ್ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ ಮತ್ತು ನಿಯಮಿತವಾಗಿ ಮುಟ್ಟಾಗಲು ಸಹಾಯ ಮಾಡುತ್ತದೆ. ಆ್ಯಪಲ್ ಸೈಡರ್ ವಿನೆಗರ್ ಋತುಬಂಧ ಮತ್ತು ಪ್ರೀ ಮೆನ್​ಸ್ಟ್ರುವಲ್ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
  • ತೂಕವನ್ನು ಕಳೆದುಕೊಳ್ಳಬೇಕೇ? ಇದಕ್ಕಾಗಿ ಆ್ಯಪಲ್ ಸೈಡರ್ ವಿನೆಗರ್ ಬಳಸಿ ಎನ್ನುತ್ತಾರೆ ತಜ್ಞರು. ತೂಕ ಇಳಿಸುವಲ್ಲಿ ಆ್ಯಪಲ್ ಸೈಡರ್ ವಿನೆಗರ್​ನ ಸಕಾರಾತ್ಮಕ ಪಾತ್ರವನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಈ ವಿನೆಗರ್ ಅನ್ನು ಆಹಾರ ಅಥವಾ ನೀರಿನೊಂದಿಗೆ ಸೇವಿಸಿದರೆ ದೀರ್ಘಕಾಲ ಹಸಿವಾಗುವುದಿಲ್ಲ. ಹೀಗಾಗಿ ಇದು ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆ ಕಡಿಮೆ ಮಾಡಿ, ತೂಕ ನಷ್ಟಕ್ಕೆ ಕಾರಣವಾಗುತ್ತದೆ.
  • ಒಣ ಚರ್ಮ ಮತ್ತು ಎಕ್ಜೀಮಾ ಸಮಸ್ಯೆ ಇರುವವರಿಗೆ ವಿನೆಗರ್ ಉತ್ತಮ ಪರಿಹಾರವಾಗಿದೆ. ಇದು ಮೊಡವೆಗಳ ವಿರುದ್ಧವೂ ಹೋರಾಡುತ್ತದೆ.
  • ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅದಕ್ಕಾಗಿಯೇ ಇದನ್ನು ಆಹಾರ ಸಂಗ್ರಹಣೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಪ್ರತಿದಿನ ವಿನೆಗರ್ ಸೇವಿಸಿದರೆ ಅದು ದೇಹದಲ್ಲಿನ ರೋಗಾಣುಗಳ ವಿರುದ್ಧ ಹೋರಾಡುತ್ತದೆ ಮತ್ತು ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ವಿನೆಗರ್ ಚರ್ಮದ ಸಮಸ್ಯೆಗಳನ್ನು ದೂರವಿಡುತ್ತದೆ.
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಮಧುಮೇಹಿಗಳು ಇದನ್ನು ಪ್ರತಿದಿನ ಸೇವಿಸುತ್ತಾರೆ.
  • ಜೀರ್ಣಕ್ರಿಯೆ ಸರಾಗವಾಗಿ ನಡೆದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ. ವಿನೆಗರ್ ಜೀರ್ಣ ಸಮಸ್ಯೆಗಳನ್ನು ಸಹ ಕಡಿಮೆ ಮಾಡುವುದು ಕಂಡು ಬಂದಿದೆ. ನೀವು ಅಜೀರ್ಣ, ಮಲಬದ್ಧತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಒಂದು ಲೋಟಕ್ಕೆ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಮತ್ತು ಕುಡಿಯಿರಿ. ಶೀಘ್ರದಲ್ಲೇ ಸಮಸ್ಯೆ ದೂರವಾಗುತ್ತದೆ.
  • ನಿತ್ಯ ಬೆಳಗ್ಗೆ 1-2 ಚಮಚ ಆ್ಯಪಲ್ ಸೈಡರ್ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸುವುದನ್ನು ರೂಢಿ ಮಾಡಿಕೊಳ್ಳಿ. ವಿನೆಗರ್​ಗಳ ಪೈಕಿ ಸಾವಯವ ವಿನೆಗರ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಆದ್ದರಿಂದ ವಿನೆಗರ್ ಖರೀದಿಸುವ ಮುನ್ನ ಅದು ಸಾವಯವ ಆಗಿದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸಿ.

ಇದನ್ನು ಓದಿ: ವಾರಕ್ಕೊಮ್ಮೆ ಅಥವಾ ಪ್ರತಿದಿನ ಜಿಮ್ ವರ್ಕೌಟ್.. ಯಾವುದು ಬೆಸ್ಟ್?

Last Updated : Aug 16, 2022, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.