ಸ್ಕಿಜೋಪ್ರಿನಿಯಾ ಮತ್ತು ಬೈಪ್ಲೊರ್ ಸಮಸ್ಯೆಯಂತಹ ಅನೇಕ ಮಾನಸಿಕ ಅಸ್ವಸ್ಥತೆಯನ್ನು ಅನೇಕ ಮಂದಿ ಅನುಭವಿಸುತ್ತಿರುತ್ತಾರೆ. ಆದರೆ, ಇದಕ್ಕಿಂತ ಕೆಲವೊಂದು ಮಾನಸಿಕ ಅಸ್ವಸ್ಥತೆಗಳು ತುಂಬಾ ಅಪರೂಪವಾಗಿವೆ. ಅಂತಹ ಐದು ಅಪರೂಪದ ವಿಚಿತ್ರ ಮಾನಸಿಕ ಅಸ್ವಸ್ಥತೆಯ ಪರಿಚಯ ಇಲ್ಲಿದೆ.
ಫ್ರೆಗೊಲಿ ಅಸ್ವಸ್ಥತೆ: ಒಬ್ಬ ವ್ಯಕ್ತಿಯಲ್ಲಿ 'ಅನೇಕ ವ್ಯಕ್ತಿಗಳು' ಇರುತ್ತಾರೆ. ಅವರು ತಮ್ಮ ಇರುವಿಕೆಯನ್ನು ಬದಲಾಯಿಸುತ್ತಾರೆ ಎಂದು ನಂಬುವ ಮಾನಸಿಕ ಸ್ಥಿತಿಗಳನ್ನು ಫ್ರೆಗೊಲಿ ಸಿಂಡ್ರೋಮ್ ಎನ್ನಲಾಗುವುದು. ಇದನ್ನು ಬಳಿಕ ಲೆಪೊಲ್ಡೊ ಪ್ರೆಗೊಲಿ ಎಂದು ಕೂಡ ಗುರುತಿಸಲಾಗಿದೆ. ಇವರನ್ನು ಸಾಮಾನ್ಯವಾಗಿ ವೇಷಧಾರಿಗಳು ಎಂದು ಗುರುತಿಸಲಾಗುತ್ತದೆ. ಇಟಾಲಿಯನ್ ರಂಗಭೂಮಿ ಕಲಾವಿದ ಈ ಸಮಸ್ಯೆಗೆ ಹೆಸರಾಗಿದ್ದ. ಆತ ವೇದಿಕೆ ಮೇಲಿದ್ದಾಗ ತನ್ನ ವ್ಯಕ್ತಿತ್ವವನ್ನು ತಕ್ಷಣಕ್ಕೆ ಗಮನಾರ್ಹವಾಗಿ ಬದಲಾಯಿಸುತ್ತಿದ್ದನಂತೆ. ಇದು ಮಿದುಳಿನ ಗಾಯ ಅಥವಾ ಪಾರ್ಕಿನ್ಸನ್ ಸಮಸ್ಯೆಯ ಚಿಕಿತ್ಸೆಯ ಔಷಧಗಳ ದೋಷದಿಂದ ಆಗಬಹುದು. 2018 ರಲ್ಲಿ ಈ ಸಂಬಂಧಿತ 50 ಪ್ರಕರಣಗಳು ಜಗತ್ತಿನಲ್ಲಿ ವರದಿಯಾಗಿದ್ದವು.
ಕ್ಯಾಟರ್ಡ್ ಸಿಂಡ್ರೋಮ್: ಈ ಸಮಸ್ಯೆಗಳನ್ನು ವಾಂಕಿಂಗ್ ಕೊರ್ಪ್ಸೆ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಗಳು ತಾವು ಬದುಕಿಲ್ಲ ಸತ್ತಿದ್ದೇವೆ, ಜಗತ್ತಿನಲ್ಲಿ ತಾವು ಅಸ್ತಿತ್ವದಲ್ಲಿಲ್ಲ ಎಂಬ ಭ್ರಮೆಯಲ್ಲಿ ಇರುತ್ತಾರೆ. ಮತ್ತೆ ಕೆಲವರು ತಮ್ಮ ದೇಹದ ಅಂಗಗಳು ಕಣ್ಮರೆಯಾಗಿದೆ ಎಂಬ ಭ್ರಮೆಯಲ್ಲಿರುತ್ತಾರೆ. 19 ನೇ ಶತಮಾನದಲ್ಲಿ ಫ್ರೆಂಚ್ ನರವಿಜ್ಞಾನಿ ಜುಲೆಸ್ ಕೊತರ್ಡ್ ಈ ಅಸ್ವಸ್ಥೆಗೆ ಹೆಸರನ್ನು ನೀಡಿದೆ. ಈ ಸಮಸ್ಯೆ ಮೊದಲ ಬಾರಿಗೆ 1882 ರಲ್ಲಿ ವಿವರಿಸಲಾಗಿದೆ. ಕ್ಯಾಟರ್ಡ್ ಸಿಂಡ್ರೋಮ್ಗೆ ಸ್ಕಿಜೋಪ್ರಿನಿಯಾ, ಖಿನ್ನತೆ ಮತ್ತು ಪೈಪ್ಲೊರಾ ಸಮಸ್ಯೆಗಳ ಅಪಾಯವಾಗಿದೆ. ಮಿದುಳಿನ ಪ್ರದೇಶದಲ್ಲಿನ ಭಾವನಾತ್ಮಕ ಅಂಶಗಳು ಮತ್ತು ಮುಖದ ಗುರುತು ಪತ್ತೆ ಮಾಡುವ ನರಗಳ ಸಂಪರ್ಕ ಕಡಿತವೂ ಇದಕ್ಕೆ ಕಾರಣ.
ಏಲಿಯನ್ ಹ್ಯಾಂಡ್ ಸಿಂಡ್ರೋಮ್: ಇದು ಕೂಡ ಬಲವಾದ ನರ ಅಸ್ವಸ್ಥೆಯ ಸಮಸ್ಯೆ ಇದಾಗಿದೆ. ಈ ಸಮಸ್ಯೆ ಹೊಂದಿರುವ ವ್ಯಕ್ತಿಗಳು ತಮ್ಮ ಕೈ ತಮಗೆ ಸಂಬಂಧಿಸಿದಲ್ಲ ಎಂಬ ಕಲ್ಪನೆಯಲ್ಲಿ ವಾಸ ಮಾಡುತ್ತಾರೆ. ಇದನ್ನು ಮೊದಲ ಬಾರಿ 1908 ರಲ್ಲಿ ಪತ್ತೆ ಮಾಡಲಾಯಿತು. 1970 ರವರೆಗೆ ಇದರ ಬಗ್ಗೆ ಸ್ಪಷ್ಟ ವ್ಯಾಖ್ಯಾನ ನೀಡಿರಲಿಲ್ಲ. ಮಿದುಳು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಈ ರೀತಿ ನಡವಳಿಕೆ ಪತ್ತೆಯಾಗುತ್ತದೆ ಎಂದು ಅಮೆರಿಕನ್ ನ್ಯೂರೋಪಿಸಿಯಾಲಜಿಸ್ಟ್ ಜೋಸೆಫ್ ಬೊಗೆನ್ ತಿಳಿಸಿದ್ದಾರೆ. ಇವರು ಸಂವೇದನಾ ಅಸ್ವಸ್ಥೆಯನ್ನು ಹೊಂದಿರುತ್ತಾರೆ ಎಂದಿದ್ದಾರೆ.
ಎಕ್ಬೊಮ್ ಸಿಂಡ್ರೋಮ್: ಈ ಅಸ್ವಸ್ಥೆಯನ್ನು ಹೊಂದಿರುವವರು ತಮ್ಮ ಚರ್ಮದ ಕೆಳಗೆ ಕೀಟಗಳು ತೆವಳುತ್ತಿರುತ್ತದೆ ಎಂಬ ಭ್ರಮೆ ಹೊಂದಿರುತ್ತಾರೆ. ಇದನ್ನು ಕಾರ್ಲ್ ಎಕ್ಬೊನ್ ಎಂದು ಹೆಸರಿಸಲಾಗಿದೆ. 1930ರಲ್ಲಿ ಸ್ವೀಡನ್ ನ್ಯೂರಾಲಾಜಿಸ್ಟ್ ಇದನ್ನು ಪತ್ತೆ ಮಾಡಿದ್ದರು. ಈ ಸಮಸ್ಯೆ ಹೊಂದಿರುವವರ ಸಂಖ್ಯೆ ನಿಖರವಾಗಿ ಪತ್ತೆಯಾಗಿಲ್ಲ. ಆದರೆ, ವರದಿ ಅನಸಾರ ಅಮೆರಿಕದಲ್ಲಿ ಕ್ಲಿನಿಕ್ಗಳಲ್ಲಿ ವಾರ್ಷಿಕವಾಗಿ 20 ಪ್ರಕರಣಗಳು ವರದಿಯಾಗುತ್ತದೆ. ಈ ಅಸ್ವಸ್ಥತೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿದೆ. ವ್ಯಕ್ತಿಯ 40ನೇ ವಯೋಮಿತಿ ಬಳಿಕ ಈ ಸಮಸ್ಯೆಗಳ ಪತ್ತೆಯಾಗುತ್ತದೆ.
ಆಲಿಸ್ ಇನ್ ವಂಡರ್ಲ್ಯಾಂಡ್ ಸಿಂಡ್ರೋಮ್: ತೊಡ್ಡ್ ಸಿಂಡ್ರೋ ಎಂದು ಕರೆಯುವ ಈ ಮಾನಸಿಕ ಅಸ್ವಸ್ಥತೆ ಹೊಂದಿರುವವರು ದೇಹ, ದೃಷ್ಟಿ, ಶ್ರವಣ, ಸ್ಪರ್ಶ ಮತ್ತು ಸ್ಥಳ, ಸಮಯದ ಪ್ರಜ್ಞೆಯನ್ನು ವಿಕೃತಗೊಳಿಸುತ್ತದೆ. ಈ ಸಮಸ್ಯೆ ಹೊಂದಿರುವವರ ಕಾಣುವ ವಸ್ತುಗಳು ನೈಜ ಸ್ಥಿತಿಗಿಂತ ಸಣ್ಣದಾಗಿದೆ ಎಂದು ಕೆಲವರು ಭಾವಿಸಿದರೆ, ಮತ್ತೆ ಕೆಲವರು ದೊಡ್ಡದಾಗಿದೆ ಎಂದು ಭಾವಿಸುತ್ತಾರೆ. ಇದು ಮಕ್ಕಳು ಮತ್ತು ಮೈಗ್ರೆನ್ ಹೊಂದಿರುವವರಲ್ಲಿ ಹೆಚ್ಚಾಗಿ ಕಾಣುತ್ತದೆ. ವಿಶ್ರಾಂತಿ ಸೇರಿದಂತೆ ಉತ್ತಮ ಸೂಕ್ತ ಚಿಕಿತ್ಸೆ ಇದಕ್ಕೆ ಪರಿಹಾರವಾಗಬಲ್ಲದು.
ಇದನ್ನೂ ಓದಿ: ಆರೋಗ್ಯಕರ ಆಹಾರ ಯುಗ: ಪರಿಣಾಮಕಾರಿ ಊಟ ಯೋಜನೆ ರೂಪಿಸುವುದು ಹೇಗೆ?