ETV Bharat / sukhibhava

ಲಸಿಕೆ ಮತ್ತು ಹೋಮಿಯೋಪತಿ ನೋಸೋಡ್​ಗಳ ವ್ಯತ್ಯಾಸಗಳೇನು..? - ಹೋಮಿಯೋಪತಿ ನೋಸೋಡ್

ಕೋವಿಡ್ ಆವರಿಸಿಕೊಂಡ ಬಳಿಕ ಜಗತ್ತಿನಾದ್ಯಂತ ಲಸಿಕೆ ಕುರಿತು ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಆದರೆ, ಕೇವಲ ಲಸಿಕೆ ಮಾತ್ರವಲ್ಲದೇ ಹೋಮಿಯೋಪತಿ ಕೂಡ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದೆ. ಲಸಿಕೆ ಮತ್ತು ಹೋಮಿಯೋಪತಿ ನೋಸೋಡ್​ಗಳಿಗೆ ಸಾಮ್ಯತೆ ಇದೆ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ. ಹೋಮಿಯೋಪತಿ ನೋಸೋಡ್​ಗಳ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯದಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ.

vaccines-and-homeopathic-nosodes
vaccines-and-homeopathic-nosodes
author img

By

Published : Apr 15, 2021, 6:42 PM IST

ಭಾರತದಲ್ಲಿ, ‘ವಿಷವು ವಿಷವನ್ನು ಕೊಲ್ಲುತ್ತದೆ’ ಎಂದು ನಾವು ಹೇಳುತ್ತೇವೆ. ರೋಗಾಣುಗಳಿಂದ ರಕ್ಷಣೆ ಪಡೆಯಲು ಬಳಸುವ ಲಸಿಕೆಗಳನ್ನು ತಯಾರಿಸಲು ರೋಗ ಉತ್ಪಾದಿಸುವ ಸೂಕ್ಷ್ಮಜೀವಿಗಳನ್ನು ಬಳಸುವ ತತ್ವವನ್ನು ಅನುಸರಿಸಲಾಗುತ್ತದೆ. ಉದಾಹರಣೆಗೆ: ದಡಾರ ಮತ್ತು ಪೋಲಿಯೊ ವೈರಸ್‌ಗಳನ್ನು ದಡಾರ ಮತ್ತು ಪೋಲಿಯೊ ವಿರುದ್ಧ ರಕ್ಷಣೆ ನೀಡುವ ಲಸಿಕೆಗಳನ್ನು ತಯಾರಿಸಲು ಸಂಸ್ಕರಿಸಲಾಗುತ್ತದೆ. ಅಂತೆಯೇ, ಡಿಫ್ತಿರಿಯಾ, ವೂಪಿಂಗ್ ಕಾಫ್ ಟೆಟನಸ್ (ಡಿಪಿಟಿ), ಕ್ಷಯ (ಬಿಸಿಜಿ), ರೇಬೀಸ್ ಇತ್ಯಾದಿ ಲಸಿಕೆಗಳ ಬಗ್ಗೆ ನಿಮಗೆ ತಿಳಿದಿದೆ.

ಡಾ. ರಾಜೇಶ್ ಷಾ, ಹೋಮಿಯೋಪತಿ ಸಂಶೋಧಕ ಮತ್ತು ಶಿಕ್ಷಣ ತಜ್ಞರಾಗಿರುವ ಇವರು ಮುಂಬೈನ ಲೈಫ್ ಫೋರ್ಸ್ ಹೋಮಿಯೋಪತಿ ಮತ್ತು ಬಯೋಸಿಮಿಲಿಯಾ ಮುಖ್ಯಸ್ಥರೂ ಆಗಿದ್ದಾರೆ. ಎರಡು ದಶಕಗಳಿಂದ ಹೊಸ ನೋಸೋಡ್‌ಗಳು ಮತ್ತು ಇತರ ಹೋಮಿಯೋಪತಿ ಔಷಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಇವರು ಶ್ರಮಿಸುತ್ತಿದ್ದಾರೆ. ಇವರು ವಿಶ್ವದ ಮೊದಲ ಕೋವಿಡ್​-19 ನೋಸೋಡ್ ಅನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ್ದಾರೆ ಮತ್ತು ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಪೂರ್ವ-ಕ್ಲಿನಿಕಲ್ ಮತ್ತು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ್ದಾರೆ.

vaccines-and-homeopathic-nosodes
ಲಸಿಕೆ ಮತ್ತು ಹೋಮಿಯೋಪತಿ ನೋಸೋಡ್​ಗಳ ವ್ಯತ್ಯಾಸ

ಹೋಮಿಯೋಪತಿ ಮತ್ತು ಲಸಿಕೆಯ ನಡುವಿನ ಸಾಮ್ಯತೆ ಏನು ಗೊತ್ತಾ..? ಈ ಎರಡನ್ನೂ 1796 ರಲ್ಲಿ ಜಗತ್ತಿಗೆ ಪರಿಚಯಿಸಲಾಯಿತು. ಹೋಮಿಯೋಪತಿಯನ್ನು ಜರ್ಮನಿಯ ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಮತ್ತು ಲಸಿಕೆಯನ್ನು ಇಂಗ್ಲೆಂಡ್​ನ ಡಾ. ಎಡ್ವರ್ಡ್ ಜೆನ್ನರ್ ಪರಿಚಯಿಸಿದರು. ಹೋಮಿಯೋಪತಿ ಮತ್ತು ಲಸಿಕೆ ಎರಡೂ ಒಂದೇ ರೀತಿಯ ಮೂಲ ತತ್ತ್ವವನ್ನು ಆಧರಿಸಿವೆ.

ಹೋಮಿಯೋಪತಿಯಲ್ಲಿ, ಬ್ಯಾಕ್ಟೀರಿಯಗಳಾದ (ಕ್ಷಯ, ಗೊನೊರಿಯಾ, ಸಿಫಿಲಿಸ್, ಸ್ಟ್ರೆಪ್ಟೋಕೊಕಿ, ಸ್ಟ್ಯಾಫಿಲೋಕೊಸ್ಸಿ), ವೈರಸ್‌ಗಳಾದ (ಸಿಡುಬು, ದಡಾರ, ರೇಬೀಸ್) ಮತ್ತು ಪರಾವಲಂಬಿಗಳಾದ (ಸ್ಕೇಬೀಸ್, ಶಿಲೀಂಧ್ರ, ಮಲೇರಿಯಾ) ಇವುಗಳಿಂದ ತಯಾರಿಸಿದ 50 ಕ್ಕೂ ಹೆಚ್ಚು ಔಷಧಿಗಳಿವೆ. ಇವುಗಳನ್ನು ‘ನೋಸೋಡ್ಸ್’ ಎಂದು ಕರೆಯಲಾಗುತ್ತದೆ. ನೋಸೋಡ್‌ಗಳು ಮತ್ತು ಲಸಿಕೆಗಳು ಒಂದೇ ತತ್ತ್ವವನ್ನು ಆಧರಿಸಿವೆ. ಆದರೆ ಅವುಗಳನ್ನು ವಿಭಿನ್ನವಾಗಿ ತಯಾರಿಸಲಾಗುತ್ತದೆ. ಲಸಿಕೆಗಳನ್ನು ಅಟೆನ್ಯೂಯೇಷನ್ ಮೂಲಕ ಸೂಕ್ಷ್ಮಜೀವಿಗಳನ್ನು ದುರ್ಬಲಗೊಳಿಸಿ ತಯಾರಿಸಲಾಗುತ್ತದೆ. ಆದರೆ ನೋಸೋಡ್‌ಗಳನ್ನು ಒಂದು ವಿಶಿಷ್ಟ ವಿಧಾನದ ಮೂಲಕ ತಯಾರಿಸಲಾಗುತ್ತದೆ. ಔಷಧಗಳನ್ನು ಬಳಕೆಗೆ ಸುರಕ್ಷಿತವಾಗಿಸುವುದು ಅಟೆನ್ಯೂಯೇಷನ್ ಮತ್ತು ಪೊಟೆಂಟೈಸೇಶನ್ ಪ್ರಮುಖ ಉದ್ದೇಶ. ಇವು ಸೋಂಕುಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಪರಿಣಾಮಕಾರಿಯಾಗಿದೆ. ಇವುಗಳನ್ನು ಅವಳಿ ಔಷಧಗಳು ಎಂದು ಕರೆಯಲಾಗುತ್ತದೆ.

ಲಸಿಕೆಗಳನ್ನು ಅದೇ ಸೋಂಕಿನ ವಿರುದ್ಧ ತಡೆಗಟ್ಟುವಿಕೆಯಾಗಿ ಬಳಸಲಾಗುತ್ತದೆ. ಉದಾಹರಣೆಗೆ, ದಡಾರವನ್ನು ತಡೆಗಟ್ಟಲು ದಡಾರ ವೈರಸ್ ಲಸಿಕೆಯನ್ನು ಬಳಸಲಾಗುತ್ತದೆ. ಆದರೆ, ಹೋಮಿಯೋಪತಿಯಲ್ಲಿ ನೋಸೋಡ್‌ಗಳ ಬಳಕೆಯನ್ನು ಒಂದೇ ಸೋಂಕಿಗೆ ಸೀಮಿತಗೊಳಿಸಲಾಗಿಲ್ಲ. ಹೋಮಿಯೋಪತಿ ಹೋಲಿಕೆಯ ತತ್ತ್ವದ ಆಧಾರದ ಮೇಲೆ ಅವುಗಳನ್ನು ಅನೇಕ ರೋಗಗಳ ವಿರುದ್ಧ ಬಳಸಲಾಗುತ್ತದೆ. ಉದಾಹರಣೆಗೆ, ಮೈಗ್ರೇನ್, ಕೊಲೈಟಿಸ್ ಮತ್ತು ಸಂಧಿವಾತದ ವಿರುದ್ಧ ಟಿಬಿ ರೋಗಾಣುಗಳಿಂದ ತಯಾರಿಸಿದ ನೋಸೋಡ್ ಅನ್ನು ಬಳಸಲಾಗುತ್ತದೆ.

ಗೊನೊರಿಯಾ ರೋಗಾಣುಗಳಿಂದ ತಯಾರಿಸಿದ ನೋಸೋಡ್ ಅನ್ನು ಅಸ್ತಮಾ, ಬೆನ್ನು ನೋವು ಮತ್ತು ಇತರ ಕಾಯಿಲೆಗಳ ವಿರುದ್ಧ ಬಳಸಲಾಗುತ್ತದೆ. ಲಸಿಕೆಗಳಿಗಿಂತ ನೋಸೋಡ್‌ಗಳ ಅನ್ವಯವು ಹೆಚ್ಚು ವಿಸ್ತಾರವಾಗಿದೆ. ವಾಸ್ತವವಾಗಿ, ತಡೆಗಟ್ಟುವಿಕೆಗಿಂತ ಹೆಚ್ಚಾಗಿ ನೋಸೋಡ್‌ಗಳನ್ನು ಅನೇಕ ರೋಗಗಳಿಗೆ ಬಳಸಲಾಗುತ್ತದೆ. ಡಬ್ಲ್ಯುಹೆಚ್‌ಒ ಪ್ರಕಾರ, ಸುಮಾರು 25 ಸಾಮಾನ್ಯ ಲಸಿಕೆಗಳಿವೆ. ಹೋಮಿಯೋಪತಿ ಮೂಲಗಳ ಪ್ರಕಾರ, ಸುಮಾರು 50 ಸಾಮಾನ್ಯ ನೋಸೋಡ್‌ಗಳಿವೆ.

1775 ರ ಸುಮಾರಿಗೆ ಡಾ. ಸ್ಯಾಮ್ಯುಯೆಲ್ ಸ್ವಾನ್ ಅವರು ಟ್ಯೂಬರ್ಕ್ಯುಲಿನಮ್ ಎಂಬ ಟಿಬಿ ನೋಸೋಡ್ ಅನ್ನು ಸಿದ್ಧಪಡಿಸಿದ್ದರು ಎಂಬುವುದು ಕುತೂಹಲದ ಸಂಗತಿ. ಇದು ರಾಬರ್ಟ್ ಕೋಚ್ ಟಿಬಿ ಬ್ಯಾಕ್ಟೀರಿಯಾವನ್ನು ಕಂಡು ಹಿಡಿಯುವ ಏಳು ವರ್ಷಗಳ ಮೊದಲು!. ಹಾಗೆಯೇ ವೈರಸ್‌ನಿಂದ ರೇಬೀಸ್ ನೋಸೋಡ್ ಅನ್ನು ಡಾ. ಕಾನ್‌ಸ್ಟಾಂಟೈನ್ ಹೆರಿಂಗ್ 1834 ರ ಸುಮಾರಿಗೆ ತಯಾರಿಸಿದರು, ಅಂದರೆ ರೇಬೀಸ್ ಲಸಿಕೆ ತಯಾರಿಸಲು ಸುಮಾರು ಐವತ್ತು ವರ್ಷಗಳ ಮೊದಲು. ಆದ್ದರಿಂದ, ಹತ್ತೊಂಬತ್ತನೇ ಶತಮಾನದಲ್ಲಿ ಜೈವಿಕ ವಸ್ತುಗಳನ್ನು ಔಷಧಗಳಾಗಿ ಬಳಸುವಲ್ಲಿ ಹೋಮಿಯೋಪತಿ ಮುಂಚೂಣಿಯಲ್ಲಿದೆ.

ಸೂಕ್ಷ್ಮ ಜೀವವಿಜ್ಞಾನ ಮತ್ತು ರೋಗನಿರೋಧಕ ಶಾಸ್ತ್ರದ ಪ್ರಗತಿಯೊಂದಿಗೆ, ಲಸಿಕೆಗಳ ವಿಜ್ಞಾನವು ಒಂದು ಕ್ರಾಂತಿ ಮತ್ತು ತೀವ್ರವಾದ ಸಂಶೋಧನೆಗೆ ಒಳಗಾಯಿತು ಮತ್ತು ಅವುಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತವಾಗಿಸಿತು. ದುರಾದೃಷ್ಟವಶಾತ್, ಹೋಮಿಯೋಪತಿ ನೋಸೋಡ್ ಕ್ಷೇತ್ರದಲ್ಲಿ ಅಗತ್ಯ ಸಂಶೋಧನೆ ನಡೆಯಲಿಲ್ಲ. ಇದರ ಪರಿಣಾಮವಾಗಿ, ನೋಸೋಡ್ ಕಳೆದ ಶತಮಾನದಲ್ಲಿ ರೋಗನಿರೋಧಕ ಔಷಧಗಳಾಗಿ ವಿಕಸನಗೊಂಡಿಲ್ಲ.

ನೋಸೋಡ್ ಸಂಶೋಧಕನಾಗಿ, ಹೋಮಿಯೋಪತಿ ಕಡಿಮೆ ಮಟ್ಟದಲ್ಲಿ ವೈಜ್ಞಾನಿಕವಾಯಿತು ಎಂದು. ಇದು ಸಾಮಾನ್ಯವಾಗಿ ಹೋಮಿಯೋಪತಿ ವಿಜ್ಞಾನ ಮತ್ತು ನೋಸೋಡ್‌ಗಳಂತೆ ಕುಂಠಿತಗೊಂಡ ಬೆಳವಣಿಗೆಗೆ ಕಾರಣವಾಯಿತು ಎಂದು ಡಾ. ರಾಜೇಶ್ ಷಾ ಹೇಳುತ್ತಾರೆ.

ಕುತೂಹಲಕಾರಿಯಾಗಿ, ನೋಸೋಡ್ ಸಂಶೋಧನಾ ಕ್ಷೇತ್ರದಲ್ಲಿ ಒಂದು ಕ್ರಾಂತಿ ನಡೆಯುತ್ತಿದೆ. ವೈರಾಲಜಿಸ್ಟ್‌ಗಳು, ಸೂಕ್ಷ್ಮ ಜೀವ ವಿಜ್ಞಾನಿಗಳು, ರೋಗ ನಿರೋಧಕ ತಜ್ಞರು, ಔಷಧ ಶಾಸ್ತ್ರಜ್ಞರು ಸೇರಿದಂತೆ ವಿಜ್ಞಾನಿಗಳ ತಂಡದೊಂದಿಗೆ ನಾನು 1996 ರಿಂದ ನೋಸೋಡ್ ಸಂಶೋಧನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮಲ್ಲಿ ಬಹಳ ರೋಮಾಂಚಕಾರಿ ಮತ್ತು ಪ್ರೋತ್ಸಾಹದಾಯಕ ಫಲಿತಾಂಶಗಳಿವೆ. ಅದು ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ವಿಜ್ಞಾನಕ್ಕೆ ಸಮರ್ಥವಾಗಿ ಕೊಡುಗೆ ನೀಡುತ್ತದೆ ಎಂದು ಡಾ. ರಾಜೇಶ್ ಷಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.