ETV Bharat / sukhibhava

ಹೃದ್ರೋಗಿಗಳಿಗೆ ಲಸಿಕೆ ಮಾದರಿ ಚಿಕಿತ್ಸೆ.. ಏನಿದರ ವಿಶೇಷತೆ? - ಜನರೇಷನ್​ ಥೆರಪಿಯಲ್ಲಿ ಕಳೆದೊಂದು ದಶಕದಿಂದ

'ಬಯೋಏಷ್ಯಾ 2023'ನಲ್ಲಿ ಹೃದ್ರೋಗಿಗಳ ಚಿಕಿತ್ಸೆಯ ಕುರಿತು ನೊವಾರ್ಟಿಸ್ ಸ್ವಿಟ್ಜರ್ಲೆಂಡ್​ ಸಂಸ್ಥೆಯ ಸಿಇಒ ಡಾ ವಾಸ್​ ನರಸಿಂಹನ್ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ

http://10.10.50.85:6060/reg-lowres/25-February-2023/vaccine_2502newsroom_1677313428_955.jpg

author img

By

Published : Feb 25, 2023, 2:06 PM IST

ಹೈದರಾಬಾದ್​: ಔಷಧ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿದೆ. ವಿಶೇಷವಾಗಿ ಜೀವಕೋಶ (ಸೆಲ್​​) ಮತ್ತು ಜನರೇಷನ್​ ಥೆರಪಿಯಲ್ಲಿ ಕಳೆದೊಂದು ದಶಕದಿಂದ ಮಹತ್ವದ ಬದಲಾವಣೆಯಾಗಿದೆ ಎಂದು 'ಬಯೋಏಷ್ಯಾ 2023' ಕಾನ್ಫರೆನ್ಸ್​ನಲ್ಲಿ ನೊವಾರ್ಟಿಸ್ ಸ್ವಿಟ್ಜರ್ಲೆಂಡ್​ನ ಸಂಸ್ಥೆಯ ಸಿಇಒ ಡಾ ವಾಸ್​ ನರಸಿಂಹನ್​ ತಿಳಿಸಿದ್ದಾರೆ.

ಹೃದಯ ರೋಗಕ್ಕೆ ಚುಚ್ಚುಮದ್ದು: ಜಾಗತಿಕವಾಗಿ ಹೃದಯ ರೋಗ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದೆ. ನಂತರದಲ್ಲಿ ಕ್ಯಾನ್ಸರ್​ ಮತ್ತು ನರರೋಗ ಸಮಸ್ಯೆಯಿಂದ ಸಾವುವರ ಸಂಖ್ಯೆ ಹೆಚ್ಚಿದೆ. ಹೃದಯ ರೋಗ ಚಿಕಿತ್ಸೆಯಲ್ಲಿ ಸಿ- ಆರ್​ಎನ್​ಎ ಜ್ಞಾನವನ್ನು ಪಡೆಯಲಯ ಪ್ರಯತ್ನಿಸಲಾಗುತ್ತಿದೆ. ಲಸಿಕೆ ರೀತಿಯ ಚಿಕಿತ್ಸಾ ಮಾದರಿಗಳ ಪತ್ತೆ ಸಾಧ್ಯತೆ ನಡೆಯುತ್ತಿದೆ. ಇದರಿಂದ ಪ್ರತಿನಿತ್ಯದ ಬದಲು ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಚಿಕಿತ್ಸೆ ಪಡೆಯಬಹುದಾಗಿದೆ. ಟಿ- ಸೆಲ್​ ಥೆರಪಿ, ಇಮ್ಯೂನೊ ಆನ್ಕೊಲಾಜಿ ಮತ್ತು ಟಾರ್ಗೆಟ್​ ಥೆರಪಿ ಇದೀಗ ಕ್ಯಾನ್ಸರ್​ ಚಿಕಿತ್ಸೆಯಲ್ಲೂ ಲಭ್ಯವಾಗುತ್ತಿದೆ.

ನೊವಾರ್ಟಿಸ್​, ಕ್ಯಾನ್ಸರ್​ ಚಿಕಿತ್ಸೆಗಾಗಿ ರೆಡಿಯೋಲಿಗ್ನಡ್ ಎಂಬ ಹೊಸ ಚಿಕಿತ್ಸೆಯನ್ನು ಅವಿಷ್ಕರಿಸಿದೆ. ಟಾರ್ಗೆಟೆಡ್​ ರೇಡಿಯೇಷನ್​ ಮೂಲಕ ಕ್ಯಾನ್ಸರ್​ ಟ್ಯೂಮರ್​ಗಳ ಚಿಕಿತ್ಸೆಗೆ ಇದನ್ನು ಬಳಕೆ ಮಾಡಬಹುದು. ಆರ್​ಎನ್​ಎ ಆಧಾರಿತ ಜ್ಞಾನದೊಂದಿಗೆ ನರರೋಗದ ಸಮಸ್ಯೆ ಚಿಕಿತ್ಸೆಗೆ ಹೊಸ ಮಾದರಿ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ​.

ತಂತ್ರಜ್ಞಾನ ಬದಲಿ ಅಲ್ಲ: ಇದೇ ವೇಳೆ ಡಾಟಾ ಸೈನ್ಸ್​ ಮತ್ತು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ (ಎಐ) ಕುರಿತು ಮಾತನಾಡಿದ ಅವರು, ವೈದ್ಯಕೀಯ ಸಮಸ್ಯೆಗಳ ಕುರಿತು ಸರಿಯಾದ ಪರಿಹಾರದ ಮಾಹಿತಿಯನ್ನು ಕಂಪ್ಯೂಟರಿಗೆ (ಅಲ್ಗಾರಿದಂ) ನೀಡಲು ನಮ್ಮ ಬಳಿ ಸಾಕಷ್ಟು ಮಾಹಿತಿ ಇಲ್ಲ. ಮಾನವನ ಬುದ್ದಿಮತ್ತೆಗೆ ಬದಲಿಯಾಗಿ ತಂತ್ರಜ್ಞಾನ ಇಲ್ಲ. ಸಂಕೀರ್ಣ ವಿಚಾರಗಳ ಚಿಂತನೆ ಮತ್ತು ಸರಿಯಾದ ಪರಿಹಾರಗಳ ಕುರಿತು ಮಾನವನ ಬುದ್ದಿಶಕ್ತಿ ಮಾತ್ರ ಸರಿಯಾಗಿ ಕೆಲಸ ಮಾಡಲಿದೆ. ಮಾನವರಿಗೆ ತಂತ್ರಜ್ಞಾನ ಕೇವಲ ಸಹಾಯ ಮಾಡಬಲ್ಲದಷ್ಟೇ ಹೊರತು, ಅದೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಎಂದರು.

ಹೈದರಾಬಾದ್​ನ ಪ್ರಗತಿ ಅಂದಾಜಿಸಲಾಗದು: ನೊವಾರ್ಟಿಸ್​ನ ಮೂರು ಜಾಗತಿಕ ದೊಡ್ಡ ಕೇಂದ್ರದಲ್ಲಿ ಹೈದರಾಬಾದ್ ಕೂಡಾ​ ಒಂದಾಗಿದೆ. ಇಲ್ಲಿ ನಮ್ಮ ಕಾರ್ಯವನ್ನು ದುಪ್ಪಟ್ಟುಗೊಳಿಸಬೇಕಿದೆ. ಪ್ರಮುಖ ಔಷಧ ಅಭಿವೃದ್ಧಿ ಇಲ್ಲಿ ನಡೆಯುತ್ತಿದೆ ಎಂದರು.

ಇದೇ ವೇಳೆ ನಗರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ಜೀವ ವಿಜ್ಞಾನದಲ್ಲಿ ಹೈದರಾಬಾದ್​ ಅದ್ಬುತ ಪ್ರಗತಿ ಮಾಡುತ್ತಿದ್ದು, ನಾಯಕನಾಗಿ ಹೊರಹೊಮ್ಮುತ್ತಿದೆ. ಹೈದರಾಬಾದ್​ನಲ್ಲಿನ ಕೌಶಲ್ಯಯುತ ಮಾನವ ಸಂಪನ್ಮೂಲ, ಸೌಕರ್ಯ ಮತ್ತು ಸರ್ಕಾರದ ಬೆಂಬಲದಿಂದಾಗಿ ಈ ಬೆಳವಣಿಗೆ ಸಾಧ್ಯವಾಗಿದೆ. ಮೆಡಿಸಿನ್​ನ ಅಭಿವೃದ್ಧಿ, ದತ್ತಾಂಶ ನಿರ್ವಹಣೆಮ ರೋಗಿಗಳ ಸುರಕ್ಷತೆ, ಮೆಡಿಸಿನ್​ ತಯಾರಿ, ಕಚ್ಛಾವಸ್ತುಗಳ ಲಭ್ಯತೆ, ಮಾನವ ಸಂಪನ್ಮೂಲ ಹೀಗೆ ಹಲವು ಪ್ರಮುಖ ಚಟುವಟಿಕೆಗಳು ಹೈದರಾಬಾದ್​ನಲ್ಲಿ ನಡೆಯುತ್ತಿದೆ.

ಭಾರತ ಜೀವ ವಿಜ್ಞಾನ, ಹೂಡಿಕೆ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಈ ಸಂಬಂಧ ಅನೇಕ ದೇಶಗಳು ಬರುತ್ತಿವೆ. ಜಾಗತಿಕ ಮೂಲ ಔಷಧ ಸಂಶೋಧನೆಯನ್ನು ಆಕರ್ಷಿಸಲು ಭಾರತ ರಾಷ್ಟ್ರೀಯ ಫಾರ್ಮಾ ನೀತಿಯ ಭಾಗವಾಗಿ ನಿಯಂತ್ರಕ ದತ್ತಾಂಶ ರಕ್ಷಣೆಗಾಗಿ ವ್ಯವಸ್ಥೆಯನ್ನು ಹೊಂದಬೇಕಾಗಿದೆ ಎಂದು ಇದೇ ವೇಳೆ ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಅಮೆರಿಕದ ಶೇ 85 ಕೋವಿಡ್​ ಪ್ರಕರಣಗಳಿಗೆ ಕಾರಣವಾಗುತ್ತಿದೆ ಓಮ್ರಿಕಾನ್​ ಉಪತಳಿ​ XBB1.5

ETV Bharat Logo

Copyright © 2025 Ushodaya Enterprises Pvt. Ltd., All Rights Reserved.