ಪ್ರವಾಸ ಮತ್ತು ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ಬಳಕೆಯಿಂದ ದೂರ ನಿಲ್ಲಲು ಮುಂದಾಗುತ್ತಾರೆ. ಇದರ ಹಿಂದಿರುವ ಕಾರಣ ಅನೇಕ ಮಂದಿ ಬಳಕೆ ಮಾಡಿದ್ದು, ಅದು ಅಶುಚಿತ್ವದಿಂದ ಕೂಡಿದೆ ಎಂಬುದೇ ಆಗಿದೆ. ಅಷ್ಟೇ ಅಲ್ಲದೇ ಇದರಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂಬ ಭಯವೂ ಕಾಡುತ್ತದೆ. ಈ ಎಲ್ಲ ಕಾರಣಗಳಿಂದ ನೀರು ಕುಡಿಯದೇ ಶೌಚಾಲಯ ಬಳಕೆ ಮಾಡದೇ ಇರಲು ಸಾಧ್ಯವಿಲ್ಲ. ಆದರೆ, ಈ ರೀತಿ ಅಶುಚಿತ್ವ ಶೌಚಾಲಯಗಳು ಬಳಕೆ ಮಾಡಿ ಕೂಡ ಮೂತ್ರದ ಸೋಂಕು ಮತ್ತಿತ್ತರ ಅನಾರೋಗ್ಯವನ್ನು ತಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಶೌಚಾಲಯ ಬಳಕೆ ಮಾಡಬೇಕಾದರೆ, ಇದಕ್ಕೆ ಅಗತ್ಯವಾದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
- ಜನನಿಬಿಡ ಪ್ರದೇಶದಲ್ಲಿ ಎಷ್ಟು ಶುಚಿಯಾಗಿದ್ದರೂ ಶೌಚಾಲಯ ಸೀಟ್ಗಳು ಒದ್ದೆ ಮತ್ತು ಅಶುಚಿತ್ವದಿಂದ ಕೂಡಿರುತ್ತದೆ. ಈ ಹಿನ್ನೆಲೆ ಇದನ್ನು ನೇರವಾಗಿ ಬಳಕೆ ಮಾಡುವ ಬದಲು ಮೊದಲು ಟಾಯ್ಲೆಟ್ ಪೇಪರ್ನಿಂದ ಅದನ್ನು ಶುಚಿಗೊಳಿ, ಬಳಿಕ ಅದರ ಮೇಲೆ ಮತ್ತೊಂದು ಟಾಯ್ಲೆಟ್ ಪೇಪರ್ ಹಾಕಿ. ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಟಾಯ್ಲೆಟ್ ಸೀಟ್ ಸ್ಯಾನಿಟೈಸರ್ ಸ್ಪ್ರೇ ಬಳಕೆ ಮಾಡಬಹುದು. ಇದೇ ವೇಳೆ, ಬಳಕೆಗೆ ಮುನ್ನ ಒಮ್ಮೆ ಫ್ಲಾಶ್ ಬಳಕೆ ಮಾಡೇ ಮುಂದುವರೆಯಬೇಕು ಎಂಬುದು ಮರೆಯಬಾರದು.
- ಕೆಲವು ಮಂದಿ ಶೌಚಾಲಯಕ್ಕೆ ಮೊಬೈಲ್, ಹ್ಯಾಂಡ್ ಬ್ಯಾಗ್ ಮತ್ತಿತ್ತರ ವಸ್ತುಗಳನ್ನು ತರುತ್ತಾರೆ. ಅವುಗಳನ್ನು ಬಾಗಿಲಿಗೆ ನೇತು ಹಾಕುತ್ತಾರೆ. ಇದರಿಂದ ಅಲ್ಲಿರುವ ರೋಗಾಣು ಮತ್ತು ಬ್ಯಾಕ್ಟೀರಿಯಾಗಳು ತಗುಲಬಹುದಾಗಿದ್ದು, ಇದು ಅಪಾಯಕಾರಿಯಾಗಿದೆ.
- ಶೌಚಾಲಯದ ಸೀಟ್ ಮತ್ತು ಬಾಗಿಲಿನ ಚಿಲಕ, ಫ್ಲಶ್, ಜೆಟ್ ಸ್ಪ್ರೇನಲ್ಲಿ ಸಾವಿರಾರು ಬ್ಯಾಕ್ಟೀರಿಯಾಗಳು ಇರುತ್ತದೆ. ಅವುಗಳನ್ನು ನೇರವಾಗಿ ಸ್ಪರ್ಶಿಸುವುದಕ್ಕಿಂತ ಟಾಯ್ಲೆಟ್ ಪೇಪರ್ನಲ್ಲಿ ಮೂಲಕ ಬಳಕೆ ಮಾಡುವುದು ಉತ್ತಮ. ನಂತರ ಆ ಪೇಪರ್ ಅನ್ನು ಕಸಕ್ಕೆ ಹಾಕಬೇಕು.
- ಶೌಚಾಲಯ ಬಳಕೆ ಮಾಡಿದ ಬಳಿಕ ಕೈಯನ್ನು ಸೋಪ್ನಿಂದ ಕಡ್ಡಾಯವಾಗಿ ಸ್ವಚ್ಛ ಮಾಡಬೇಕಿದೆ. ಕೈ ಮೇಲೆ ಮಾತ್ರ ಶುಚಿ ಮಾಡಿ, ಟಿಶ್ಯೂನಿಂದ ಒರೆಸುವುದು ಅಪಾಯಕಾರಿಯಾಗಿದೆ.
- ಕೆಲವು ಮಂದಿ ಕೈತೊಳೆದಾದ ಬಳಿಕ ಹ್ಯಾಂಡ್ ಡ್ರೈಯರ್ಸ್ ಸಹಾಯದಿಂದ ಒಣಗಿಸುತ್ತಾರೆ. ಆದರೆ, ಇದು ತಪ್ಪು. ಕಾರಣ ರೋಗಾಣುಗಳು ಶೌಚಾಲಯದ ರೂಮ್ನ ಡ್ರೈಯರ್ ಒಳಗೆ ಇರುತ್ತದೆ. ಈ ಡ್ರೈಯರ್ ಅಲ್ಲಿ ಕೈ ಅನ್ನು ಒಣಗಿಸಿದರೆ ಮತ್ತೆ ಅದು ನಿಮ್ಮ ಕೈ ಸೇರುತ್ತದೆ. ಈ ಹಿನ್ನಲೆ ಟಿಶ್ಯೂನಿಂದ ಕೈ ಶುಚಿ ಮಾಡುವುದು ಉತ್ತಮ ಆಯ್ಕೆಯಾಗಿದೆ.
- ಸ್ಯಾನಿಟರಿ ನ್ಯಾಪ್ಕಿನ್ಗಳ ಬಳಕೆಗಳನ್ನು ಪೇಪರ್ನಲ್ಲಿ ಮಡಿಸಿ, ಅದನ್ನು ಕಸದ ಬುಟ್ಟಿಯಲ್ಲಿ ವಿಲೇವಾರಿ ಮಾಡಬೇಕು. ತಜ್ಞರು ಹೇಳುವಂತೆ ಇದರಿಂದ ಕೂಡ ಸೋಂಕಿನ ಅಪಾಯ ಇದೆ.
- ಈ ಮುನ್ನೆಚ್ಚರಿಕೆಗಳ ಹೊರತಾಗಿ ಅನೇಕ ಮಂದಿ ಯೋನಿಯ ಸೋಂಕು, ಬಿಳಿ ಮುಟ್ಟಿನ ಸಮಸ್ಯೆ ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ವಿಳಂಬ ಮಾಡದೆ ತಜ್ಞರ ಬಳಿಕ ಸಲಹೆ ಪಡೆಯುವುದು ಅತ್ಯವಶ್ಯ.
ಇದನ್ನೂ ಓದಿ: ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಪತ್ತೆ ಹೇಗೆ? ರೋಗ ಲಕ್ಷಣಗಳು ಗೊತ್ತೇ?