ETV Bharat / sukhibhava

ಸನ್​ಸ್ಕ್ರೀನ್​ ಬಳಕೆಯ ಅಗತ್ಯವೇನು?

author img

By

Published : Jun 2, 2023, 1:21 PM IST

Updated : Jun 2, 2023, 1:51 PM IST

ತ್ವಚೆಯ ಆರೈಕೆಗೆ ಸನ್​ಸ್ಕ್ರೀನ್​ ಅತ್ಯಗತ್ಯ ವಸ್ತು. ಬೇಸಿಗೆ ಮಾತ್ರವಲ್ಲ, ಎಲ್ಲ ಋತುಮಾನಗಳಲ್ಲೂ ಇದರ ಬಳಕೆ ಮುಖ್ಯ.

use of sun screen necessary?
use of sun screen necessary?

ನವದೆಹಲಿ: ಕಳೆದೆರಡು ವರ್ಷಗಳಿಂದೀಚೆಗೆ ತ್ವಚೆಯ ಕಾಳಜಿ ವಸ್ತುಗಳಲ್ಲಿ ಸನ್​ಸ್ಕ್ರೀನ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಇದು ಹೆಚ್ಚು ಜನಪ್ರಿಯ ಕೂಡ ಆಗಿದೆ. ಸನ್​ಸ್ಕ್ರೀನ್​ಗೆ ದಿಢೀರ್​ ಜನಪ್ರಿಯತೆಯ ಜೊತೆಗೆ ಜನಸಾಮಾನ್ಯರಲ್ಲಿ ಇದರ ಅರಿವು ಹೆಚ್ಚುವುದಕ್ಕೆ ಪ್ರಮುಖ ಕಾರಣ ಸೂರ್ಯನ ಯುವಿ ಕಿರಣಗಳು. ವಿಜ್ಞಾನಿಗಳು ಯುವಿ ಕಿರಣಗಳು ತ್ವಚೆಯ ಮೇಲೆ ಹೆಚ್ಚು ಪರಿಣಾಮ ಬೀರುವ ಕುರಿತು ನಡೆಸಿದ ಸಂಶೋಧನೆಗಳು, ಇದರಿಂದಾಗಿ ಚರ್ಮದ ಕ್ಯಾನ್ಸರ್​ ಅಧ್ಯಯನಗಳು ಇದಕ್ಕೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಬೇಸಿಗೆ ಕಾಲದಲ್ಲಿ ಸೂರ್ಯ ಕಿರಣಗಳು ಪ್ರಖರವಾಗಿರುವ ಹಿನ್ನೆಲೆಯಲ್ಲಿ ಯುವಿ ಕಿರಣಗಳು ತ್ವಚೆ ಮೇಲೆ ಸನ್​ಬರ್ನ್​, ಅವಧಿ ಪೂರ್ವ ಸುಕ್ಕುಗಟ್ಟುವಿಕೆ ಮತ್ತು ಇತರೆ ಹಾನಿಯಾಗದಂತೆ ತಡೆಯುವಲ್ಲಿ ಸನ್​ಸ್ಕ್ರೀನ್​ಗಳು ಪ್ರಧಾನ ಪಾತ್ರವಹಿಸುತ್ತವೆ.

ಸನ್​ಸ್ಕ್ರೀನ್​ ಉತ್ಪನ್ನಗಳು ನಿಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಂದ ಹಾನಿಯಾಗುವುದನ್ನು ತಡೆಯುತ್ತದೆ. ಆದರೆ, ಇದು ಕಣ್ಣಿಗೆ ಸೂಕ್ತವಲ್ಲ ಎಂಬುದನ್ನು ಮರೆಯಬಾರದು. ಈ ಕುರಿತು ಮಾತನಾಡಿರುವ ಡರ್ಮಾಫಿಕ್ಯೂ ತ್ವಚೆ ತಜ್ಞೆ ಡಾ.ಅಪರ್ಣಾ ಶಾಂತನಂ, ಪ್ರತಿಯೊಬ್ಬರ ಬಳಿ ಇರಬೇಕಾದ ತ್ವಚೆ ಆರೈಕೆಯಲ್ಲಿ ಸನ್​ಸ್ಕ್ರೀನ್​ ಅತ್ಯಗತ್ಯ. ತ್ವಚೆ ಯಾವುದೇ ಬಗೆಯದೇ ಆಗಿದ್ದರೂ ಇದರ ಬಳಕೆ ಉತ್ತಮ. ಸಂಪೂರ್ಣ ಸ್ಪೆಕ್ಟ್ರಮ್​ ಸನ್​ಸ್ಕ್ರೀನ್​ ಜೊತೆ ಎಸ್​ಪಿಎಫ್​ 30 ಕ್ಕಿಂತ ಹೆಚ್ಚಿನ ಸನ್​ಸ್ಕ್ರೀನ್​ ಆಯ್ಕೆ ಮಾಡಬೇಕು. ಇವು ಯುವಿಎ, ಯುವಿಬಿ ಕಿರಣ, ನೇರಳಾತೀತ ಕಿರಣ ಮತ್ತು ಗೋಚರ ಬೆಳಕಿನಿಂದ ರಕ್ಷಣೆ ನೀಡುತ್ತದೆ. ದೈನಂದಿನ ತ್ವಚೆ ಕಾಳಜಿಯಲ್ಲಿ ಇದು ಅಗತ್ಯವಾಗಿದ್ದು, ಹೊರಗೆ ಮೋಡದ ವಾತಾವರಣ ಇದ್ದರೂ ಇದರ ಬಳಕೆ ಬೇಕಿರುತ್ತದೆ.

ಯುವಿಬಿ ಕಿರಣಗಳಿಗೆ ಹೋಲಿಸಿದರೆ ಯುವಿಎ ಕಿರಣಗಳು ತ್ವಚೆಯ ಆಳಕ್ಕೆ ಇಳಿಯುತ್ತದೆ. ಇವು ತ್ವಚೆ ಅವಧಿ ಪೂರ್ವಕವಾಗಿ ಸುಕ್ಕುಗಟ್ಟುವಂತೆ ಮಾಡುತ್ತದೆ. ಅಲ್ಲದೇ, ಯುವಿ ಕಿರಣಗಳು ಕಲೊಜನ್​ ಮತ್ತು ಎಲಸ್ಟಿನ್​ ಮೇಲೆ ದಾಳಿ ಮಾಡುತ್ತದೆ. ತ್ವಚೆಗೆ ಎಲಸ್ಟಿಸಿಟಿ ಮತ್ತು ದೃಢತೆ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಯುವಿಎ, ಯುವಿಬಿ, ಇನ್​ಫ್ರಾ ಕಿರಣಗಳು ತ್ವಚೆ ಹಾನಿ ಮಾಡುವುದನ್ನು ತಡೆಯುತ್ತದೆ.

ಯಾವಾಗ ಬಳಕೆ ಸೂಕ್ತ?: ಮನೆಯಿಂದ ಹೊರಡುವ ಮುನ್ನ ತಪ್ಪದೇ ದಿನನಿತ್ಯ ಸನ್​ ಸ್ಕ್ರೀನ್​ ಅನ್ನು ಬಳಕೆ ಮಾಡಬೇಕು ಎಂದು ಡಾ.ಅಪರ್ಣಾ ಶಾತನಂ ತಿಳಿಸಿದ್ದಾರೆ. ಅದರಲ್ಲೂ ಈಜು, ಹೈಕಿಂಗ್, ಆಟ ಮುಂತಾದ ಚಟುವಟಿಕೆಗೆ 20 ನಿಮಿಷಗಳ ಮೊದಲು ಈ ಸನ್​ಸ್ಕ್ರೀನ್​ ಹಚ್ಚಬೇಕು. ಇದನ್ನು ಪ್ರತಿ ಎರಡು ಅಥವಾ ಮೂರು ಗಂಟೆಗೆ ಒಮ್ಮೆ ಹಚ್ಚಬೇಕು.

ಸೌಂದರ್ಯ ಉದ್ಯಮದಲ್ಲಿ ಈಗಾಗಲೇ ಸನ್​ಸ್ಕ್ರೀನ್​ ಪ್ರಾಮುಖ್ಯತೆಯನ್ನು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಸೌಂದರ್ಯ ವರ್ಧಕದಲ್ಲಿ ಅಂದರೆ, ಫೌಂಡೇಷನ್​, ಬಿಬಿ ಕ್ರೀಂ ಮತ್ತು ಟಿಂಟೆಡ್​ ಮಾಶ್ಚರೈಸರ್​ಗಳಲ್ಲಿ ಇದೀಗ ಎಸ್​ಪಿಎಫ್​ ಅಂಶ ಸೇರಿಸಲಾಗುತ್ತಿದೆ. ಈ ಮೂಲಕ ಅವರಿಗೆ ಇದು ಸುಲಭವಾಗಿ ಲಭ್ಯವಾಗುವ ಜೊತೆಗೆ ಸೂರ್ಯನಿಂದ ರಕ್ಷಣೆ ಒದಗಿಸಲು ನೀಡಲಾಗುತ್ತಿದೆ.

ಆಯ್ಕೆ ಹೀಗಿರಲಿ..: ಮಾರುಕಟ್ಟೆಯಲ್ಲಿ ಹಲವು ವಿಧದ ಸನ್​ಸ್ಕ್ರೀನ್​ ಲಭ್ಯವಿದ್ದು, ಅವುಗಳ ಆಯ್ಕೆಯನ್ನು ಎಚ್ಚರದಿಂದ ಮಾಡಬೇಕು. ಇದನ್ನು ಕೊಳ್ಳುವಾಗ ಎಸ್​ಪಿಎಫ್ (ಸನ್​ ಪ್ರೊಟೆಕ್ಷನ್​ ಫಾಕ್ಟರ್​) ಎಷ್ಟಿದೆ ಎಂಬುದನ್ನು ಗಮನಿಸಬೇಕು. ಇದರ ಆಧಾರದ ಮೇಲೆ ಯುವಿಪಿ ಕಿರಣಗಳ ರಕ್ಷಣಾ ಸಾಮರ್ಥ್ಯ ಅಳೆಯಲಾಗುವುದು. ಸನ್​ಸ್ಕ್ರೀನ್​ನಲ್ಲಿ ಕನಿಷ್ಟ 30 ಬ್ಲಾಕ್​ ಇರಬೇಕು ಇದು ಶೇ 97ರಷ್ಟು ಯುವಿಬಿ ಕಿರಣವನ್ನು ಬ್ಲಾಕ್​ ಮಾಡುತ್ತದೆ. ಅದೇ ಎಫ್​ಪಿಎಫ್​ 50 ಇದ್ದರೆ ಅದು 98ರಷ್ಟಯ ಬ್ಲಾಕ್​ ಮಾಡುತ್ತದೆ. ಅಂತಿಮವಾಗಿ ಸನ್​ಸ್ಕ್ರೀನ್​ನ ವಿನ್ಯಾಸ ಮತ್ತು ಅದರ ಗುಣಮಟ್ಟ ಮುಖ್ಯ. ಪ್ರತಿಯೊಬ್ಬರ ಚರ್ಮಕ್ಕೆ ಅನುಗುಣವಾದ ಮತ್ತು ಕೆಲಸಕ್ಕೆ ಅನುಸಾರವಾಗಿ ಅನೇಕ ವಿಧದ ಎಸ್​ಪಿಎಫ್​ ಮಟ್ಟ ಲಭ್ಯವಿದೆ. ಇದನ್ನು ಆಯ್ಕೆ ಮಾಡುವುದು ಸುಲಭ. ಲೈಟ್​ವೈಟ್​ನ ಜಿಗುಟಲ್ಲದ, ಭಾರತೀಯ ಹವಾಮಾನಕ್ಕೆ ಹೊಂದಿಕೆಯಾಗುವ ಸನ್​ಸ್ಕ್ರೀನ್​ ಆಯ್ಕೆ ಇರಲಿ.

ಮರೆಯದಿರಿ..: ಪ್ರದೇಶಕ್ಕೆ ಅನುಗುಣವಾಗಿ ಡರ್ಮಾಟಾಜಿಕಲಿ ಪರೀಕ್ಷೆ ಮಾಡಿದ ಸನ್​ಸ್ಕ್ರೀನ್​ ಆಯ್ಕೆ ಮಾಡಿ. ಪ್ರದೇಶದಿಂದ ಪ್ರದೇಶಕ್ಕೆ ಹವಾಗುಣ ಬದಲಾಗುತ್ತಿದ್ದು, ಇದು ಕೂಡ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಕಡಿಮೆ ವಿಟಮಿನ್​ ಡಿ ಪ್ರಮಾಣದಿಂದ ದೀರ್ಘ ಕೋವಿಡ್​ ಅಪಾಯ: ಅಧ್ಯಯನ

Last Updated : Jun 2, 2023, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.