ದೇಹದ ದುರ್ಗಂಧ ತೊಡೆದು ಹಾಕಲು ಬಳಕೆ ಮಾಡುವ ಸೋಪ್ಗಳು ಸೊಳ್ಳೆಗಳನ್ನು ಹೆಚ್ಚು ಅಥವಾ ಕಡಿಮೆ ಆಕರ್ಷಿಸಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ಐ ಸೈನ್ಸ್ ಜರ್ನಲ್ನಲ್ಲಿ ಹೊಸ ಅಧ್ಯಯನ ಪ್ರಕಟಗೊಂಡಿದೆ. ಸೊಳ್ಳೆಗಳು ರಕ್ತ ಹೀರದೇ ಇದ್ದಾಗ ಅದಕ್ಕೆ ಪರ್ಯಾಯವಾಗಿ ಅವು ಹೂವಿನ ಮಕರಂದದ ಮೂಲಕ ಸಕ್ಕರೆಯ ಅಂಶವನ್ನು ಸೇವಿಸುತ್ತವಂತೆ. ಅದೇ ರೀತಿ ದೇಹಕ್ಕೆ ಬಳಕೆ ಮಾಡುವ ಸೋಪ್ನಿಂದಾಗಿ ಹೂವು ಮತ್ತು ಹಣ್ಣಿನ ಸುವಾಸನೆ ಪಡೆಯುತ್ತವೆ. ಇದರಿಂದಾಗಿ ಮಾನವನ ದೇಹದತ್ತ ಸೊಳ್ಳೆಗಳು ಹೆಚ್ಚು/ಕಡಿಮೆಯಾಗಿ ಆಕರ್ಷಿತವಾಗಬಹುದು.
ಸೋಪ್ ಪರಿಮಳವನ್ನು ಬದಲಾಯಿಸುವ ಮೂಲಕ ಈಗಾಗಲೇ ಸರಾಸರಿಗಿಂತ ಹೆಚ್ಚಿನ ಮಟ್ಟದಲ್ಲಿ ಸೊಳ್ಳೆಗಳನ್ನು ಆಕರ್ಷಿಸಬಹುದು ಇಲ್ಲವೇ ಕಡಿಮೆ ಮಾಡಬಹುದು ಎಂದು ವರ್ಜೀನಿಯಾ ಪಾಲಿಟೆಕ್ಸಿಕ್ ಇನ್ಸ್ಸ್ಟಿಟ್ಯೂಟ್ ಮತ್ತು ಸ್ಟೇಟ್ ಯುನಿವರ್ಸಿಟಿ ಅಸಿಸ್ಟೆಂಟ್ ಪ್ರೋಫೆಸರ್ ಕ್ಲೆಮೆಂಟ್ ವಿನೌಗರ್ ತಿಳಿಸಿದ್ದಾರೆ.
ನಾಲ್ಕು ಮಾದರಿ ಮೇಲೆ ಅಧ್ಯಯನ: ಸೋಪ್ ಮತ್ತು ಸೊಳ್ಳೆಗಳ ಆಕರ್ಷಣೆಯ ನಡುವಿನ ಸಂಪರ್ಕವನ್ನು ನಾಲ್ಕು ಸ್ವಯಂಸೇವಕರ ಮೂಲಕ ಅಧ್ಯಯನ ಮಾಡಲಾಯಿತು. ತಂಡವು ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಪರಿಮಳದ ಪ್ರೊಫೈಲ್ ಅನ್ನು ಅಧ್ಯಯನ ಮಾಡಿತು. ಈ ವೇಳೆ ಡವ್, ಸ್ಥಳೀಯ ಮತ್ತು ಸರಳ ಸೋಪ್ಗಳ ಬಳಕೆ ಮಾಡಿದೆ.
ಸ್ನಾನದ ಬಳಿಕ ದೇಹದ ವಾಸನೆಗಿಂತ ಶೇ 60ಕ್ಕಿಂತ ಹೆಚ್ಚಿನ ವಾಸನೆ ಸಾಬೂನಿನಿಂದ ಬರುತ್ತದೆ. ಇದು ದೇಹಕ್ಕೆ ಇನ್ನೊಂದು ವಾಸನೆಯನ್ನೂ ಸೇರಿಸುತ್ತದೆ. ಆದರೆ, ಇದು ರಾಸಾಯನಿಕಗಳನ್ನು ಬದಲಿಸುತ್ತದೆ. ಬಳಿಕ ಕೆಲವನ್ನು ತೊಡೆದು ಹಾಕುತ್ತದೆ. ನಮ್ಮ ನೈಸರ್ಗಿಕ ರಾಸಾಯನಿಕಗಳು ಮತ್ತು ಸೋಪ್ ರಾಸಾಯನಿಕಗಳ ನಡುವೆ ಸಾಕಷ್ಟು ರಾಸಾಯನಿಕ ಸಂವಹನವಿದೆ ಎಂದು ವಿನೌಗರ್ ಹೇಳಿದ್ದಾರೆ. ದೇಹದ ಹೊರತಾಗಿ ಸೊಳ್ಳೆಯ ಮೆಶ್ನಲ್ಲೂ ಕೂಡ ಈ ಪ್ರಯೋಗ ನಡೆಸಿದ್ದಾರೆ. ಮೆಶ್ಗೆ ಎರಡು ಕಪ್ ವಾಸನೆಯ ಸಾರ ಸಿಂಪಡಿಸಲಾಯಿತು. ಮತ್ತೊಂದನ್ನು ಹಾಗೆಯೇ ಬಿಡಲಾಯಿತು. ಪರಿಮಳಗಳ ವಿವಿಧ ಸಂಯೋಜನೆಗಳ ಪರೀಕ್ಷೆಗಳನ್ನು ಪುನರಾವರ್ತಿಸಲಾಯಿತು.
ತೆಂಗು ವಾಸನೆಗೆ ದೂರ: ಸೋಪ್ನ ಪರಿಮಳದಿಂದ ವ್ಯಕ್ತಿಯನ್ನು ಆಕರ್ಷಿಸಿದ ರೀತಿಯಲ್ಲೇ ಸೊಳ್ಳೇಗಳನ್ನು ಕೂಡ ಹೆಚ್ಚು ಆಕರ್ಷಣೆ ನಡೆಸಬಹುದು. ಅಧ್ಯಯನಕ್ಕೆ ಬಳಕೆ ಮಾಡಿದ ಈ ಸೋಪುಗಳು ಹೂವು ಮತ್ತು ಹಣ್ಣಿನ ಪರಿಮಳ ಹೊಂದಿದ್ದವು. ತೆಂಗಿನ ವಾಸನೆಯುಕ್ತ ಸಾಬೂನುಗಳಿಗೆ ಸೊಳ್ಳೆಗಳು ಕಡಿಮೆ ಆಕರ್ಷಿತವಾಗಿದ್ದು ಅಧ್ಯಯನದಲ್ಲಿ ಕಂಡು ಬಂದಿದೆ.
ತೆಂಗಿನ ಎಣ್ಣೆ ಉತ್ಪನ್ನಗಳಲ್ಲಿ ಕಂಡುಬರುವ ಕೆಲವು ಕೊಬ್ಬಿನಾಮ್ಲಗಳನ್ನು ಹೆಚ್ಚಿಸುವುದು ಸೊಳ್ಳೆಗಳು ಮತ್ತು ಇತರ ಕೀಟಗಳಿಗೆ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಂಬಂಧ ಹಿಂದಿನ ಅಧ್ಯಯನಗಳು ತಿಳಿಸಿದೆ. ಇನ್ನು ಡಿಯೋಡ್ರೆಂಟ್, ಬಟ್ಟೆ ತೊಳೆಯುವ ಸೋಪು ಮತ್ತು ಇತರೆ ವಾಸನೆಯುಕ್ತ ಉತ್ಪನ್ನಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಮುಂದಿನ ಅಧ್ಯಯನದಲ್ಲಿ ನೋಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ಡಯೇರಿಯಾ ತಡೆ ಮತ್ತ ನಿಯಂತ್ರಣಕ್ಕೆ ಕೈ ತೊಳೆಯವುದು ಅತ್ಯವಶ್ಯಕ: ತಜ್ಞರ ಸಲಹೆ