ETV Bharat / sukhibhava

ನೋವು ನಿವಾರಕ ಮಾತ್ರೆಗಳಲ್ಲಿ ಕಚ್ಚಾ ಎಣ್ಣೆ ಬದಲಾಗಿ ಪೇಪರ್​ ತ್ಯಾಜ್ಯ ಬಳಕೆ; ಅಧ್ಯಯನ

ಕಚ್ಚಾ ಎಣ್ಣೆಗಳ ಮೇಲೆ ಅವಲಂಬನೆ ಕಡಿಮೆ ಜೊತೆಗೆ ಸುಸ್ಥಿರತೆ ಹಿನ್ನೆಲೆ ಈ ಹೊಸ ಅನ್ವೇಷಣೆ ನಡೆಸಲಾಗಿದೆ.

author img

By

Published : Jul 12, 2023, 1:41 PM IST

Use of paper waste instead of crude oil in pain reliever pills

ಲಂಡನ್​: ಸಾಮಾನ್ಯ ಔಷಧಗಳಾದ ಪ್ಯಾರಾಸಿಟಮಲ್​ ಮತ್ತು ಇಬುಪ್ರೊಫೆನ್ ನಂತಹ ನೋವು ನಿವಾರಕ​ ಔಷಧಗಳ ತಯಾರಿಕೆಯಲ್ಲಿ ಕಚ್ಚಾ ತೈಲವನ್ನು ಬಳಕೆ ಮಾಡಲಾಗುತ್ತದೆ. ಆದರೆ, ಇನ್ಮುಂದೆ ಕಚ್ಚಾ ಎಣ್ಣೆ ಬಳಕೆ ಬದಲಾಗಿ ಪೈನ್​ ಮರ ಬಳಕೆ ಮಾಡಬಹುದಾಗಿದೆ. ಪೇಪರ್​ ಉದ್ಯಮದಲ್ಲಿ ವ್ಯರ್ಥವಾಗುತ್ತಿರುವ ಈ ಮರದ ವಸ್ತುಗಳನ್ನು ಔಷಧಿಗಳಲ್ಲಿ ಬಳಕೆ ಮಾಡಬಹುದಾಗಿದೆ ಎಂದು ಅಧ್ಯಯನಯೊಂದು ತಿಳಿಸಿದೆ.

ಸಾಮಾನ್ಯವಾಗಿ ಫಾರ್ಮಾ ಸಂಸ್ಥೆಗಳು, ಮಾತ್ರೆಗಳ ತಯಾರಿಕೆಯಲ್ಲಿ ಕಚ್ಚಾ ಎಣ್ಣೆಗಳಿಂದ ಲಭ್ಯವಾಗುವ ರಾಸಾಯನಿಕ ಪೂರ್ವಗಾಮಿಗಳನ್ನು ಬಳಕೆ ಮಾಡುತ್ತವೆ. ಇದಕ್ಕೆ ಪರ್ಯಾಯ ಬಳಕೆ ಕುರಿತು ಬಾತ್​ ವಿಶ್ವವಿದ್ಯಾಲಯ ರಾಸಾಯನಿಕ ವಿಭಾಗದ ತಂಡ ಈ ಅಧ್ಯಯನ ಮಾಡಿದೆ. ಸುಸ್ಥಿರತೆಯು ಜೈವಿಕ ನವೀಕರಿಸಬಹುದಾದ ಬೀಟಾ-ಪಿನೆನ್‌ನಿಂದ ಔಷಧೀಯ ಪೂರ್ವಗಾಮಿಗಳ ಶ್ರೇಣಿಯನ್ನು ರಚಿಸುವ ವಿಧಾನವನ್ನು ಅಭಿವೃದ್ಧಿಪಡಿಸಿತು. ಈ ಅಧ್ಯಯನದಲ್ಲಿ ಪೇಪರ್​ ಉದ್ಯಮದಲ್ಲಿ ವ್ಯರ್ಥವಾಗುತ್ತಿರುವ ಟರ್ಪೆಂಟೈನ್ ಅನ್ನು ಬಳಕೆ ಮಾಡಲಾಗಿದೆ. ಪೇಪರ್​ ಉದ್ಯಮದಲ್ಲಿ ವಾರ್ಷಿಕವಾಗಿ 3,50,00 ಟನ್​ಗಳಷ್ಟು ಇವುಗಳನ್ನು ಉತ್ಪಾದನೆ ಮಾಡುತ್ತದೆ.

ಬೀಟಾ ಪಿನೆನ್​ ಅನ್ನು ಯಶಸ್ವಿಯಾಗಿ ಅವರು ನೋವು ನಿವಾರಕ, ಪ್ಯಾರಾಸಿಟಮೋಲ್​ ಮತ್ತು ಇಬುಪ್ರೊಫೆನ್​ ನಲ್ಲಿ ಬಳಕೆ ಮಾಡಿದ್ದಾರೆ. ವಾರ್ಷಿಕವಾಗಿ 1,00,00 ಟನ್​ಗಳಷ್ಟು ಈ ಸಾಮಾನ್ಯ ಮಾತ್ರೆಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಹೆಚ್ಚು ಸಮರ್ಥನೀಯ ಬಯೋಫೈನರಿ ವಿಧಾನ ಉತ್ಪಾದನೆಗಳು ರಾಸಾಯನಿಕ ಉದ್ಯಮದಲ್ಲಿ ಬೇಕಾಗುವ ಕಚ್ಚಾ ಎಣ್ಣೆಗಳಿಗೆ ಪರ್ಯಾಯವಾಗಲಿದೆ ಎಂದು ಕುರಿತು ಚೆಮ್​ಸುಸ್​ಚೆಮ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಎಣ್ಣೆಗಾಗಿ ಅವಲಂಬನೆ: ಫಾರ್ಮಾಗಳು ಎಣ್ಣೆಗಳನ್ನು ಬಳಕೆ ಮಾಡುವುದು ಸಮರ್ಥನೀಯವಲ್ಲ. ಇದು ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್​ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ. ಜೊತೆಗೆ ಈ ಎಣ್ಣೆಗಳಿಗಾಗಿ ಇತರೆ ಎಣ್ಣೆ ಉತ್ಪಾದನೆ ಮಾಡುವ ದೇಶಗಳ ಮೇಲೆ ಅವಲಂಬನೆ ಆಗಬೇಕಾಗುತ್ತದೆ. ಇದರಿಂದ ಇದರ ವೆಚ್ಚ ಕೂಡ ಅಧಿಕವಾಗಿದೆ ಎಂದು ಸಂಶೋಧನಾ ಸಹಾಯಕರಾದ ಡಾ ಜೋಶ್​ ಟಿಬ್ಬೆಟ್ಟ್ಸ್​ ತಿಳಿಸಿದ್ದಾರೆ.

ಭೂ ಗರ್ಭದಿಂದ ಇದಕ್ಕಾಗಿ ಎಣ್ಣೆಯನ್ನು ತೆಗೆಯುವ ಬದಲಾಗಿ, ನಾವು ಭವಿಷ್ಯದಲ್ಲಿ ಬಯೋಫೈನರಿ ಮಾದರಿಯನ್ನು ಬಳಕೆ ಮಾಡಬಹುದು ಎಂದಿದ್ದಾರೆ.

ಟರ್ಪಂಟೈನ್​ ಬಳಕೆಯಿಂದ ಹಲವು ಪ್ರಯೋಜನ: ಇದೇ ವೇಳೆ ತಂಡವೂ ಟರ್ಪಂಟೈನ್​ ಎಂಬ ಪೂರ್ವಗಾಮಿ ರಾಸಾಯನಿಕವನ್ನು ಯಶಸ್ವಿಯಾಗಿ ಅನ್ವೇಷಿಸಿದೆ. ಈ ಟರ್ಪಂಟೈನ್​ ಅನ್ನು ಬೆಟಾ-ಬ್ಲಾಕರ್ಸ್​ ಮತ್ತು ಅಸ್ತಮಾ ಔಷಧಗಳಲ್ಲಿ ಬಳಕೆ ಮಾಡಲಾಗುವುದು. ಜೊತೆಗೆ ಸುಂಗಧ ದ್ರವ್ಯದಲ್ಲೂ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುವುದು.

ನಮ್ಮ ಟರ್ಪಂಟೈನ್​ ಆಧಾರಿತದ ಬಯೋಫೈನರಿ ಮಾದರಿ ಕೂಡ ಪೇಪರ್​​ ಉದ್ಯಮದ ತ್ಯಾಜ್ಯ ರಾಸಾಯನಿಕದಿಂದ ಉತ್ಪಾದನೆ ಮಾಡಲಾಗಿದ್ದು, ಇದನ್ನು ಸುಗಂಧ ದ್ರವ್ಯಗಳಿಂದ ಪಾರಾಸಿಟಮೋಲ್​ವರೆಗೆ ವಿವಿಧ ಸ್ತರದಲ್ಲಿ ಸಮರ್ಥನೀಯ ರಾಸಾಯನಿಕವಾಗಿ ಬಳಕೆ ಮಾಡಬಹುದಾಗಿದೆ ಎಂದಿದ್ದಾರೆ.

ಈ ಮಾತ್ರೆಗಳು ಎಣ್ಣೆ ಆಧಾರಿತ ಔಷಧಗಳಿಗೆ ಹೋಲಿಕೆ ಮಾಡಿದರೆ, ದುಬಾರಿಯಾಗಬಹುದು. ಸಸ್ಯ ಆಧಾರಿತ ಫಾರ್ಮಾಗಳು ಹೆಚ್ಚು ಸಮರ್ಥನೀಯವಾಗಿರವ ಹಿನ್ನೆಲೆ ಇದರ ಬೆಲೆ ಕೊಂಚ ಹೆಚ್ಚಿರಲಿದೆ ಎಂದು ತಂಡ ತಿಳಿಸಿದೆ.

ಇದನ್ನೂ ಓದಿ: ಅತಿಯಾದ ಆ್ಯಂಟಿಬಯೋಟಿಕ್​ ಬಳಕೆಯಿಂದ ಗಂಭೀರ ಅಡ್ಡ ಪರಿಣಾಮ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.