ETV Bharat / sukhibhava

ದಿನನಿತ್ಯ ಮನೆಯಲ್ಲಿ ಶುಚಿತ್ವಕ್ಕೆ ಬಳಸುವ ಉತ್ಪನ್ನದಲ್ಲಿದೆ ವಿಷಕಾರಿ ರಾಸಾಯನಿಕಗಳು; ಅಧ್ಯಯನ

author img

By ETV Bharat Karnataka Team

Published : Sep 14, 2023, 2:58 PM IST

ಶುಚಿತ್ವದ ಉತ್ಪನ್ನಗಳಲ್ಲಿರುವ ವಿಒಸಿ ಆರೋಗ್ಯ, ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ.

Toxic chemicals in everyday household cleaning products

ನವದೆಹಲಿ: ಪ್ರತಿನಿತ್ಯ ಗ್ಲಾಸ್​ ಕ್ಲೀನರ್, ಏರ್​ ಫ್ರೆಶನೆಸ್​​​​ ಸೇರಿದಂತೆ ಸ್ವಚ್ಛತೆಯಲ್ಲಿ ಬಳಕೆ ಮಾಡುವ ಅನೇಕ ಉತ್ಪನ್ನಗಳು ವಿಒಸಿ ಯಂತಹ ಅಪಾಯಕಾರಿಯಾದ ರಾಸಾನಿಕ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ವಿಒಸಿ ಎಂಬುದು ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮವನ್ನು ಹೊಂದಿದೆ. ಇದು ಕಣ್ಣು, ಮೂಗು ಮತ್ತು ಗಂಟಲಿನ ಕೆರೆತ, ತಲೆನೋವು, ತಲೆ ಸುತ್ತು, ಯಕೃತ್​, ಮೂತ್ರಪಿಂಡ ಮತ್ತು ಕೇಂದ್ರ ನರ ವ್ಯವಸ್ಥೆ ಮೇಲೆ ಪರಿಣಾಮವನ್ನು ಬೀರುತ್ತದೆ. ಕೆಲವು ರಾಸಾಯನಿಗಳು ಪ್ರಾಣಿಗಳಲ್ಲಿ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ಮತ್ತೆ ಕೆಲವು ಮನುಷ್ಯರಲ್ಲೂ ಕ್ಯಾನ್ಸರ್​ಗೆ ಕಾರಣವಾಗುತ್ತದೆ.

ಅಮೆರಿಕದ ಎನ್ವರಮೆಂಟಲ್​​ ವರ್ಕಿಂಗ್​ ಗ್ರೂಪ್​​ ಸಂಶೋಧಕರು ಅನೇಕ ಮನೆ ಬಳಕೆ ಉತ್ಪನ್ನಗಳನ್ನು ಮತ್ತು ಗ್ರೀನ್​ ಶುಚಿತ್ವ ಉತ್ಪನ್ನಗಳನ್ನು ಪರೀಕ್ಷೆ ಮಾಡಿದ್ದಾರೆ. 30 ಉತ್ಪನ್ನಗಳಲ್ಲಿ 530 ವಿಶಿಷ್ಟ ವಿಒಸಿಗಳು ಪತ್ತೆಯಾಗಿವೆ.

ಇದರಲ್ಲಿ 193 ವಿಒಸಿಗಳು ಅಪಾಯಕಾರಿಯಾಗಿದ್ದು, ಇದು ಉಸಿರಾಟ ವ್ಯವಸ್ಥೆ ಹಾನಿ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವುದು ಪತ್ತೆಯಾಗಿದೆ. ಜೊತೆಗೆ ಕ್ಯಾನ್ಸರ್​ ಅಪಾಯ ಮತ್ತು ಅಭಿವೃದ್ಧಿಗೆ ಇದು ಪರಿಣಾಮ ಬೀರುತ್ತದೆ.

ಕೆಮೊಸ್ಫೇರೆ ಎಂಬ ಜರ್ನಲ್​ನಲ್ಲಿ ಈ ಸಂಶೋಧನೆ ಪ್ರಕಟಿಸಲಾಗಿದ್ದು, ಮನೆಯ ಒಳಾಂಗಣ ಮತ್ತು ಹೊರಾಂಗಣದ ಗಾಳಿಯ ಗುಣಮಟ್ಟದ ಮೇಲೆ ಶುಚಿ ಉತ್ಪನ್ನಗಳಲ್ಲಿರುವ ವಿಒಸಿ ಪರಿಣಾಮ ಬೀರುತ್ತದೆ. ಮತ್ತೊಂದು ಅಂಶ ಎಂದರೆ, ಇವು ಹೊರಾಂಗಣ ಗಾಳಿಗಿಂತ ಮನೆಯೊಳಗಿನ ಗಾಳಿಯನ್ನು ಎರಡರಿಂದ ಐದು ಪಟ್ಟು ಕಲುಷಿತಗೊಳಿಸುತ್ತವೆ. ಕೆಲವು ಉತ್ಪನ್ನಗಳು ಕೆಲವು ದಿನ, ವಾರ ಮತ್ತು ತಿಂಗಳ ಕಾಲ ವಿಒಸಿಯನ್ನು ಬಿಡುಗಡೆ ಮಾಡುತ್ತವೆ.

ಗ್ರಾಹಕರೇ ಎಚ್ಚರ: ಈ ಅಧ್ಯಯನವೂ ಗ್ರಾಹಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಸಂಶೋಧಕರು ಮತ್ತು ನಿಯಂತ್ರಕರು, ನಮ್ಮ ಒಳಾಂಗಣ ಗಾಳಿಗೆ ಹಲವಾರು ರಾಸಾಯನಿಕಗಳು ಪ್ರವೇಶಿಸುವುದರ ಜೊತೆಗೆ ಅಪಾಯವನ್ನು ಬೀರುವ ಸಾಧ್ಯತೆ ಬಗ್ಗೆ ಎಚ್ಚರಿಕೆ ಹೊಂದಬೇಕಿದೆ ಎಂದು ಇಡಬ್ಲ್ಯೂಜಿಯ ಸೀನಿಯರ್​ ಟೊಕ್ಸಿಕೊಲೊಜಿಸ್ಟ್​​ ಅಲೆಕ್ಸಿಸ್​ ಟೆಮ್ಕಿನ್​ ತಿಳಿಸಿದ್ದಾರೆ.

ನಮ್ಮ ಸಂಶೋಧನೆ ವಿಒಸಿ ಅಪಾಯಗಳಿಗೆ ತೆರೆದುಕೊಳ್ಳುವುದನ್ನು ಕಡಿಮೆ ಮಾಡುವಲ್ಲಿ ಒತ್ತು ನೀಡುತ್ತದೆ. ಉತ್ಪನ್ನಗಳನ್ನು ಆಯ್ಕೆ ಮಾಡುವಾಗ ಹಸಿರು ವಿಶೇಷವಾಗಿ ಸುವಾಸನೆ ರಹಿತವಾದವುಗಳನ್ನು ಆಯ್ಕೆ ಮಾಡುವುದು ಪರಿಹಾರವಾಗಬಹುದು ಎಂದಿದ್ದಾರೆ.

ಗ್ರೀನ್​ ಲೇಬಲ್​ ಹೊಂದಿರುವ ಉತ್ಪನ್ನಗಳು ಸಾಂಪ್ರದಾಯಿಕ ಉತ್ಪನ್ನಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ವಿಒಸಿಗಳನ್ನು ಹೊರಸೂಸುತ್ತದೆ. ಗ್ರೀನ್​ ಉತ್ಪನ್ನಗಳನ್ನು ಸುವಾಸನೆ ಮುಕ್ತ ಉತ್ಪನ್ನ ಎಂದು ವರ್ಗೀಕರಿಸಲಾಗಿದೆ. ಇದು ಸಾಂಪ್ರದಾಯಿಕ ಉತ್ಪನ್ನಗಳಿಗಿಂತ ಎಂಟು ಪಟ್ಟು ಕಡಿಮೆ ಮಟ್ಟದಲ್ಲಿ ರಾಸಾಯನಿಕ ಬಿಡುಗಡೆ ಮಾಡುತ್ತದೆ.

ಹಸಿರು ಉತ್ಪನ್ನ ಬಳಕೆ: 22 ಸಾಂಪ್ರದಾಯಿಕ ಮತ್ತು 15 ಹಸಿರು ಉತ್ಪನ್ನಗಳನ್ನು ಹೋಲಿಕೆ ಮಾಡಿದಾಗ ಹಸಿರು ಉತ್ಪನ್ನಗಳು ಕೇವಲ ನಾಲ್ಕು ರಾಸಾಯನಿಕ ಅಪಾಯಗಳನ್ನು ವರ್ಗೀಕರಿಸಿದ್ದು, ಇದು ಸರಾಸರಿ ಮಟ್ಟದಲ್ಲಿದೆ. ಹಸಿರು ಅಥವಾ ಹಸಿರು ಮತ್ತು ಸುವಾಸನೆ ಮುಕ್ತ ಶುಚಿ ಉತ್ಪನ್ನಗಳು ಗ್ರಾಹಕರ ಕಾಳಜಿ ಮತ್ತು ಒಳಾಂಗಣ ಗಾಳಿ ಮಟ್ಟ ಮತ್ತು ಆರೋಗ್ಯದ ಅಪಾಯದ ಅಂಶದ ಮೇಲೆ ಆರಿಸಬಹುದಾಗಿದೆ.

ಶುಚಿತ್ವದ ಉದ್ಯಮದಲ್ಲಿ ಕೆಲಸ ಮಾಡುವ ಮಂದಿಯಲ್ಲಿ ಶೇ 50ರಷ್ಟು ಅಸ್ತಮ ಅಭಿವೃದ್ಧಿ ಮತ್ತು ಶೇ 43ರಷ್ಟು ದೀರ್ಘಕಾಲದ ಉಸಿರಾಟ ಸಮಸ್ಯೆ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತೋರಿಸಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರು ಶ್ವಾಸಕೋಶ ಕ್ಯಾನ್ಸರ್​ನಂತ ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ.

ಮಕ್ಕಳ ಆರೋಗ್ಯ ಕೂಡ ಅಪಾಯದಲ್ಲಿದೆ. ಕೆಲವು ಅಧ್ಯಯನಗಳು ತೋರಿಸುವಂತೆ ಒಳಾಂಗಣ ಶುಚಿತ್ವಕ್ಕೆ ಬಳಸುವ ನಿರ್ದಿಷ್ಟ ಉತ್ಪನ್ನಗಳು ಹೆಚ್ಚಿನ ಮಟ್ಟದ ಅಪಾಯವನ್ನು ಹೊಂದಿದ್ದು, ಮಕ್ಕಳಲ್ಲಿ ಅಸ್ತಮ ಮತ್ತು ವೀಜಿಂಗ್ ಸಮಸ್ಯೆಗೆ ಕಾರಣವಾಗುತ್ತದೆ. ಅಧ್ಯಯನದ ಫಲಿತಾಂಶಗಳು ಕೇವಲ ಮಾನವರ ಆರೋಗ್ಯಕ್ಕೆ ಮಾತ್ರವಲ್ಲದೇ, ಪರಿಸರ ಆರೋಗ್ಯಕ್ಕೆ ಕೂಡ ಅನ್ವಯಿಸಬಹುದಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಕೇರಳದಲ್ಲಿ ಮತ್ತೆ ನಿಫಾ ಉಲ್ಬಣ; ರಾಜ್ಯದಲ್ಲಿ ನಾಲ್ಕನೇ ಬಾರಿ ಕಾಣಿಸಿಕೊಂಡ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.