ETV Bharat / sukhibhava

ಅಧಿಕ ಸ್ಕ್ರೀನ್​ ಟೈಮ್, ಮಗುವಿನ ತಾರ್ಕಿಕ ಕೌಶಲ್ಯದ ಮೇಲೆ ಬೀರುತ್ತದೆ ಪರಿಣಾಮ! - ಕಳಪೆ ತಾರ್ಕಿಕ ಕೌಶಲ್ಯ ಮಟ್ಟ ಇರುತ್ತದೆ

ಅಧಿಕವಾಗಿ ಕಂಪ್ಯೂಟರ್​ ಸೇರಿದಂತೆ ಇನ್ನಿತರ ಸಾಧನಗಳ ವೀಕ್ಷಣೆಯಿಂದ ಮಕ್ಕಳಲ್ಲಿ ಕಳಪೆ ಮಟ್ಟದ ಯೋಚಿಸುವ, ತರ್ಕಿಸುವ ಕೌಶಲ್ಯ ಹೊಂದುತ್ತಾರೆ.

Too much screen time affects a child's reasoning skills

author img

By

Published : Aug 21, 2023, 1:12 PM IST

Updated : Aug 21, 2023, 1:24 PM IST

ಲಂಡನ್​: ಅತಿಯಾಗಿ ಕಂಪ್ಯೂಟರ್​ ಅಥವಾ ಇನ್ನಿತರ ಸಾಧನಗಳನ್ನು ಬಳಸುವ ಮಕ್ಕಳಲ್ಲಿ ಕಳಪೆ ತಾರ್ಕಿಕ ಕೌಶಲ್ಯ ಮಟ್ಟ ಇರುತ್ತದೆ. ಇದರಿಂದ ಅವರು ಕಲಿಕೆ ಸೇರಿದಂತೆ, ಶೈಕ್ಷಣಿಕ ಅಭ್ಯಾಸ ಮತ್ತು ಪ್ರತಿನಿತ್ಯದ ಸಮಸ್ಯೆಗಳ ನಿವಾರಣೆ ಮಟ್ಟದ ಮೇಲೆ ನಿರ್ಣಾಯಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಈಸ್ಟರ್​ನ್​ ಫಿನ್​ಲ್ಯಾಂಡ್​​ ಯುನಿವರ್ಸಿಟಿಯ ಈ ಅಧ್ಯಯನ ನಡೆಸಿದ್ದು, ಅಧಿಕವಾದ ಕಂಪ್ಯೂಟರ್​​ ಮತ್ತು ದೈಹಿಕ ಚಟುವಟಿಕೆ ಇಲ್ಲದೇ ಸಮಯ ವ್ಯರ್ಥ ಮಾಡುವುದು ಕಳಪೆ ತಾರ್ಕಿಕ ಕೌಶಲ್ಯ ಮಟ್ಟದೊಂದಿಗೆ ಸಂಬಂಧವನ್ನು ಹೊಂದಿದೆ. ಉತ್ತಮ ಆಹಾರ ಪದ್ದತಿ ಗುಣಮಟ್ಟ ಸುಧಾರಣೆ ಮತ್ತು ಕೆಂಪು ಮಾಂಸದ ಸೇವನೆ ಕಡಿಮೆ ಮಾಡುವುದು. ಓದುವಿಕೆ ಸಮಯ ಹೆಚ್ಚಳ ಮತ್ತು ಸಂಘಟಿತ ಕ್ರೀಡಾ ಚಟುವಟಿಕೆಗಳು ಮಕ್ಕಳ ಮೊದಲ ಎರಡು ವರ್ಷಗಳ ಶಾಲಾ ಕಲಿಕೆ ಅವಧಿಯಲ್ಲಿ ಅವರ ತಾರ್ಕಿಕ ಕೌಶಲ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂಬುದನ್ನು ಕಂಡು ಕೊಂಡಿದ್ದಾರೆ.

ಸ್ಕ್ರೀನ್​ ಟೈಮ್​, ಶಾಲಾ ಚಟುವಟಿಕೆ, ದೈಹಿಕ ಚಟುವಟಿಕೆಗಳು ತಾರ್ಕಿಕ ಕೌಶಲ್ಯದೊಂದಿಗೆ ಸಂಬಂಧ ಹೊಂದಿಲ್ಲ. ಉತ್ತಮ ಆಹಾರ ಪದ್ದತಿಯನ್ನು ಹೊಂದಿರುವ ಮಕ್ಕಳಲ್ಲಿ ಅರಿವಿನ ಅಭಿವೃದ್ಧಿ ಬೇರೆ ಮಕ್ಕಳಿಗೆ ಹೋಲಿಕೆ ಮಾಡಿದರೆ, ಉತ್ತಮವಾಗಿದೆ. ವಿಶೇಷವಾಗಿ, ಉತ್ತಮ ಆಹಾರ ಗುಣಮಟ್ಟ, ಕಡಿಮೆ ಕೆಂಪು ಮಾಂಸ ಸೇವನೆ ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳ ಸೇವನೆ ಅವರಲ್ಲಿ ಉತ್ತಮ ತಾರ್ಕಿಕ ಕೌಶಲ್ಯ ಬೆಳೆಸಲು ಸಹಾಯ ಮಾಡುತ್ತದೆ ಎಂದ ಸಂಶೋಧಕರು ತಿಳಿಸಿದ್ದಾರೆ.

ಸ್ಕ್ಯಾಡಿನವಿಯನ್​ ಜರ್ನಲ್​ ಆಫ್​ ಮೆಡಿಸಿನ್​ ಅಂಡ್​ ಸೈನ್ಸ್​ ಇನ್​ ಸ್ಪೋರ್ಟ್​ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ 397 ಮಕ್ಕಳನ್ನು ಭಾಗಿಯಾಗಿಸಿದ್ದು, ಎರಡು ವರ್ಷಗಳ ಆಹಾರ ಪದ್ದತಿಯ ಪರಿಣಾಮ ಮತ್ತು ದೈಹಿಕ ಚಟುವಟಿಕೆ ಮಧ್ಯಸ್ಥಿತಿಕೆ ಅವರ ಅರಿವಿನ ಚಟುವಟಿಕೆ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಗಮನಿಸಲಾಗಿದೆ. ಆಹಾರದ ಅಂಶಗಳು, ದೈಹಿಕ ಚಟುವಟಿಕೆಗಳು ಮತ್ತು ಜಢ ನಡುವಳಿಕೆಗಳ ಕುರಿತು ಕೂಡ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಪೋಷಕರ ಶಿಕ್ಷಣ ಮತ್ತು ಆದಾಯ ಜೊತೆಗೆ ಮಗುವಿನ ದೇಹ ಕೊಬ್ಬಿನ ಅಂಶಗಳು ಮತ್ತು ಪ್ರೌಢತೆ ಮಟ್ಟವನ್ನು ವಿಶ್ಲೇಷಿಸಲಾಗಿದೆ.

ಮಗುವಿನ ಬೆಳವಣಿಗೆ ಹಂತದಲ್ಲಿ ಆಹಾರ ಪದ್ದತಿ ಮತ್ತು ದೈಹಿಕ ಚಟುವಟಿಕೆಗಳ ಮಧ್ಯಸ್ಥಿಕೆ ಅವರ ಜೀವನಶೈಲಿ ಮತ್ತು ತಾರ್ಕಿಕ ಕೌಶಲ್ಯವದ ಮೇಲೆ ಪ್ರಭಾವ ಬೀರುತ್ತದೆ. ಈ ಅಧ್ಯಯನದ ಆಧಾರದ ಮೇಲೆ ಆರೋಗ್ಯಯುತ ಆಹಾರ ಪದ್ಧತಿ ಮತ್ತು ಮಗುವಿಗೆ ಓದಲು ಪ್ರೋತ್ಸಾಹ ನೀಡುವುದರಿಂದ ಅವರಲ್ಲಿ ತಾರ್ಕಿಕ ಕೌಶಲ್ಯ ಮಟ್ಟ ಅಭಿವೃದ್ಧಿ ಮಾಡಲು ಸಹಾಯ ಆಗುತ್ತದೆ. ಜೊತೆಗೆ ಸಂಘಟಿತ ಕ್ರೀಡಾ ಚಟುವಟಿಕೆ ಬೆಮಬಲಿಸುವುದು ಕೂಡ ಸಹಾಯ ಮಾಡುತ್ತದೆ ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.

ಇದನ್ನೂ ಓದಿ: ಹದಿಹರೆಯದವರಲ್ಲಿ ಕಾಡುವ ಖಿನ್ನತೆ; ಇದರ ಲಕ್ಷಣ ಪತ್ತೆ ಹೇಗೆ?

Last Updated : Aug 21, 2023, 1:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.