ETV Bharat / sukhibhava

ಇಂದು ವಿಶ್ವ ಹೋಮಿಯೋಪತಿ ದಿನ; ಇಲ್ಲಿದೆ ಇದರ ಇತಿಹಾಸ ಮತ್ತು ಮಹತ್ವ!

ಗಿಡಮೂಲಿಕೆ ಬಳಕೆ ಮಾಡಿಕೊಂಡು ಔಷಧ ತಯಾರಿಸುವ ವಿದ್ಯೆಯನ್ನು ಜಗತ್ತಿಗೆ ಮೊದಲು ಪರಿಚಯಿಸಿದ್ದು ಕ್ರಿಸ್ಚಿಯನ್​ ಫ್ರೈಡ್​ರಿಚ್​ ಸ್ಯಾಮುಯಲ್​ ಹನೆಮ್ಯಾನ್​

Today is World Homeopathy Day; Its history, significance!

author img

By

Published : Apr 10, 2023, 12:37 PM IST

ಹೈದರಾಬಾದ್​: ಹೋಮಿಯೋಪತಿಯ ಪಿತಾಮಹ ಕ್ರಿಸ್ಚಿಯನ್​ ಫ್ರೈಡ್​ರಿಚ್​ ಸ್ಯಾಮುಯಲ್​ ಹನೆಮ್ಯಾನ್​. ಈತ ಹೋಮಿಯಪತಿ ಚಿಕಿತ್ಸೆಯನ್ನು ಆತ ಅನ್ವೇಷಣೆ ಮಾಡಿದ. ಇದೇ ಕಾರಣದಿಂದ ಆತನ ಹುಟ್ಟುಹಬ್ಬದ ದಿನವನ್ನು ಹೋಮಿಯೋಪತಿ ದಿನವನ್ನಾಗಿ ಆಚರಿಸಲಾಗಿದೆ.

ಹೋಮಿಯೋಪತಿ ಚಿಕಿತ್ಸೆಗಳು ರೋಗಿಗಳನ್ನು ಪುನರ್ಜಿವನಗೊಳಿಸುತ್ತದೆ. ಇದೇ ಕಾರಣಕ್ಕೆ ಹೋಮಿಯೋಪತಿ ಚಿಕಿತ್ಸೆಯಿಂದ ರೋಗಿಗಳು ಸಾಕಷ್ಟು ಲಾಭ ಪಡೆಯುತ್ತಾರೆ. ಭಾರತದಲ್ಲಿ ಏಪ್ರಿಲ್​ 10ರಂದು ಹೋಮಿಯೋಪತಿ ದಿನವನ್ನಾಗಿ ಆಚರಿಸಲಾಗುವುದು. ಹೋಮಿಯೋಪತಿ ಕ್ಷೇತ್ರಕ್ಕೆ ಜರ್ಮನಿ ಮೂಲದ ವೈದ್ಯ ಕ್ರಿಸ್ಟಿಯನ್​ ಫ್ರೈಡ್​ರಿಚ್​ ಸ್ಯಾಮುಯಲ್​​ ಹನೆಮ್ಯಾನ್ ಪಾತ್ರ ದೊಡ್ಡದು 1755ರಂದು ಬಡ ಕುಟುಂಬದಲ್ಲಿ ಸ್ಯಾಮುಯೆಲ್​ ಜನಿಸಿದ್ದರು. ​ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಸ್ಯಾಮುಯೆಲ್​​, ಇದರ ಜೊತೆಗೆ ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರೈಸಿದರು. ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡುವಾಗ ಅವರು ಕಲ್ಲೆನ್​ ಮೆಟೀರಿಯಾ ಮೆಡಿಕಾ ಪುಸ್ತಕ ಅನುವಾದಿಸುವ ಕೆಲಸಕ್ಕೆ ಮುಂದಾದರು. ಈ ವೇಳೆ, ಅವರಿಗೆ ಔಷಧೀಯ ಗುಣಗಳ ಮಾಹಿತಿ ಹೊಂದಿರುವ ಪುಸ್ತಕವನ್ನು ನೀಡಲಾಯಿತು. ಇದನ್ನು ಭಾಷಾಂತರ ಮಾಡುವಾಗ ಅವರ ಸಸ್ಯದ ಕುರಿತ ಮಾಹಿತಿ ಪಡೆದರು.

ತಮ್ಮ ಮೇಲೆಯೇ ಗಿಡಮೂಲಿಕೆಗಳ ಪ್ರಯೋಗ: ಕಲ್ಲೆನ್​ ಮಟಿರಿಯಲ್​ ಮೆಡಿಕಾ ವನ್ನು ಅನುವಾದಿಸುವ ವೇಳೆ ಅವರು ಪುಸ್ತಕದಿಂದ ಔಷಧ ಸಸ್ಯಗಳ ಮಾಹಿತಿಯನ್ನು ಸಂಗ್ರಹಿಸಿದರು. ಈ ಪುಸ್ತಕದಲ್ಲಿ ಪೆರುವಿಯನ್​ ಬರ್ಕ್ ಮರದ ತೊಗಟೆ ಮಲೇರಿಯಾಗೆ ಉತ್ತಮ ಎಂಬುದಾಗಿ ತಿಳಿಸಲಾಗಿತ್ತು. ಅದರ ಅನುಸಾರ ಸ್ಯಾಮುಯೆಲ್​ ಆ ಮರದ ತೊಗಟೆಯನ್ನು ಪಡೆದು ಅದರಲ್ಲಿ ಔಷಧವನ್ನು ತಯಾರಿಸಿದರು. ಈ ವೇಳೆ, ಅವರ ನಿಜವಾದ ತೊಂದರೆ ಆರಂಭವಾಯಿತು. ಸ್ಯಾಮುಯೆಲ್​ ಹನೆಮ್ಯಾನ್​ ಹೊಂದಿದ್ದ ಲಕ್ಷಣಗಳು ಥೇಟ್​ ಮಲೇರಿಯಾ ಲಕ್ಷಣವನ್ನು ಹೊಂದಿತು. ಈ ಔಷಧ ಸೇವಿಸುವುದನ್ನು ನಿಲ್ಲಿಸಿದಾಗ ರೋಗದ ಬದಲಾವಣೆಗಳನ್ನು ಕಂಡರು. ತಮ್ಮ ಮೇಲೆ ಪ್ರಯೋಗಿಸಿಕೊಂಡ ಈ ಔಷಧ ಭಾರೀ ಪರಿಣಾಮ ಬೀರಿತು. ಈ ಹಿನ್ನೆಲೆ ಸ್ಯಾಮುಯೆಲ್​ ಹನೆಮ್ಯಾನ್​​ ಇದೇ ರೀತಿಯ ಅನೇಕ ಔಷಧಗಳನ್ನು ಅನ್ವೇಷಣೆ ಮಾಡಿದರು.

ಹೋಮಿಯೋಪತಿ ಔಷಧೀಯ ತತ್ವಶಾಸ್ತ್ರ: ಸ್ಯಾಮುಯೆಲ್​ ಹನೆಮ್ಯಾನ್​ ಅವಿಷ್ಕರಿಸಿದ ಅನೇಕ ಔಷಧಗಳನ್ನು ಪ್ರಯೋಗಿಸಿ ಇದಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ, ಬೇರೆ ಔಷಧಗಳ ಬಳಕೆಗೆ ಮುಂದಾಗುತ್ತಿದ್ದ. ಆಗ ಏನಾದ್ರೂ ವ್ಯತ್ಯಾಸ ಕಂಡು ಬಂದರೆ ಮತ್ತೊಂದು ಮೆಡಿಸಿನ್​ ಬಳಕೆ ಮಾಡಿ ಔಷಧ ತಯಾರಿಸುತ್ತಿದ್ದ. ಸ್ಯಾಮುಯೆಲ್​ ಹ್ಯಾನೆಮನ್​​, ರೋಗದ ಲಕ್ಷಣದ ಆಧಾರದ ಮೇಲೆ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದರು. ಆ ಔಷಧ ಗುಣಮುಖಕ್ಕೆ ಕಾರಣವಾಯಿತು. 1796ರಲ್ಲಿ ಈತ ಹೋಮಿಯೋಪತಿ ಚಿಕಿತ್ಸೆ ವಿಧಾನ ಮತ್ತು ತತ್ವಶಾಸ್ತ್ರದ ಸಂಶೋಧನೆ ಬಹಿರಂಗಪಡಿಸಿದ. ಇದೇ ಕಾರಣದಿಂದ ಸ್ಯಾಮುಯೆಲ್​ ಹ್ಯಾನೆಮ್ಯಾನ್​ ಅನ್ನು ಹೋಮಿಯೋಪತಿಯ ಪಿತಾಮಹ ಎಂದು ಕರೆಯಲಾಗುವುದು. ಆತನ ಕೆಲಸದ ಗೌರವರ್ಥವಾಗಿ, ವಿಶ್ವ ಆರೋಗ್ಯ ಸಂಘಟನೆ, ಏಪ್ರಿಲ್​ 10ರಂದು ವಿಶ್ವ ಹೋಮಿಯೋಪತಿ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ಮೂಲಕ ಹೋಮಿಯೋಪತಿ ಔಷಧಗಳ ಬಳಕೆ ಮತ್ತು ತಿಳಿವಳಿಕೆ ಉತ್ತೇಜಿಸಲಾಯಿತು.

ಇದನ್ನೂ ಓದಿ: ಸಿಹಿ ಸುದ್ದಿ.. ಕ್ಯಾನ್ಸರ್​ ಸೇರಿದಂತೆ ಇತರ ಕಾಯಿಲೆಗಳಿಗೆ ರೆಡಿಯಾಗುತ್ತಿದೆ ಲಸಿಕೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.