ETV Bharat / sukhibhava

ಋತುಬಂಧ ಸಮಯದಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳು.. - ಋತುಬಂಧದ ಲಕ್ಷಣಗಳು

ಋತುಬಂಧ((menopause)ಎನ್ನುವುದು ಮಹಿಳೆಯ ಜೀವನದಲ್ಲಿ ಇನ್ನು ಮುಂದೆ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದ ಸಮಯವಾಗಿದೆ. ಆಕೆಯ ಋತುಚಕ್ರವು ಕೊನೆಗೊಳ್ಳುತ್ತದೆ. ಆದರೆ, ಇದು ದೈಹಿಕ ಮತ್ತು ಮಾನಸಿಕ ಎರಡೂ ಆರೋಗ್ಯ ಸಮಸ್ಯೆಗಳನ್ನು ಜೊತೆಗೆ ತರುತ್ತದೆ. ಭಾರತದ ಪ್ರಸಿದ್ಧ ಪೌಷ್ಟಿಕಾಂಶ ತಜ್ಞ ರುಜುತಾ ದಿವೇಕರ್ ಋತುಬಂಧವನ್ನು ಜಯಿಸುವ ಕುರಿತಾದ ಕೆಲವು ಸಂಗತಿಗಳು ಮತ್ತು ಮಾರ್ಗಗಳ ಬಗ್ಗೆ ಈ ರೀತಿ ಚರ್ಚಿಸಿದ್ದಾರೆ..

menstruation
ಋತುಬಂಧ
author img

By

Published : Nov 20, 2021, 8:17 PM IST

45-55 ವರ್ಷ ವಯಸ್ಸಿನ ಮಹಿಳೆ ತನ್ನ ಕೊನೆಯ ಮುಟ್ಟಾದ ದಿನಾಂಕದಿಂದ ಒಂದು ವರ್ಷದವರೆಗೆ ಮುಟ್ಟಾಗದಿದ್ದರೆ ಅದನ್ನು ಮೆನೋಪಾಸ್(menopause) ಅಥವಾ ಋತುಬಂಧ ಎಂದು ಕರೆಯಲಾಗುತ್ತದೆ.

ಈ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಹಾರ್ಮೋನುಗಳ ಬದಲಾವಣೆ ಸಂಭವಿಸುತ್ತದೆ ಮತ್ತು ಅಂಡೋತ್ಪತ್ತಿ ನಿಲ್ಲುತ್ತದೆ. ಹೀಗಾಗಿ, ಮಹಿಳೆಯ ಮುಟ್ಟು ನಿಲ್ಲುತ್ತದೆ. ಪ್ರತಿ ತಿಂಗಳು ದೇಹದಲ್ಲಿ ಬೆಳವಣಿಗೆಯಾಗುವ ಕೋಶಕಗಳ(follicles) ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸಿದಾಗ ಋತುಬಂಧದ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.

ಕೋಶಕಗಳ ಕಾರಣದಿಂದಾಗಿ ಅಂಡಾಶಯಗಳು ಸ್ತ್ರೀಯ ದೇಹಕ್ಕೆ ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತವೆ. ಇದರೊಂದಿಗೆ ಸಂತಾನೋತ್ಪತ್ತಿ ಹಾರ್ಮೋನ್ ಈಸ್ಟ್ರೊಜೆನ್ ಮಟ್ಟಗಳು ಮತ್ತು ಅವುಗಳ ಉತ್ಪಾದನೆಯು ಕ್ಷೀಣಿಸಲು ಪ್ರಾರಂಭಿಸುತ್ತದೆ.

ಆದ್ದರಿಂದ, ಕೋಶಕಗಳು ಮತ್ತು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಉತ್ಪಾದನೆಯು ಅಂತ್ಯಗೊಂಡಾಗ, ಮುಟ್ಟಿನ ಚಕ್ರಗಳು ಹಾಗೆಯೇ ನಿಲ್ಲುತ್ತವೆ ಮತ್ತು ಈ ಹಂತವನ್ನು ಮೆನೋಪಾಸ್ ಎಂದು ಕರೆಯಲಾಗುತ್ತದೆ.

ಋತುಬಂಧ ಸಮಯದಲ್ಲಿ ಎದುರಾಗುವ ಸಮಸ್ಯೆಗಳು : ಋತುಬಂಧವು ಒಂದು ರೋಗವಲ್ಲ. ಇದು ನೈಸರ್ಗಿಕ ಪ್ರಕ್ರಿಯೆ. ಈ ಪ್ರಕ್ರಿಯೆಯ ಅವಧಿಯು ಒಬ್ಬ ಮಹಿಳೆಯಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ ಮತ್ತು ಈ ಸಮಯದಲ್ಲಿ ಆಕೆ ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಅದು ಅವಳ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಅಂತಹ ಕೆಲವು ಸಾಮಾನ್ಯ ಸಮಸ್ಯೆಗಳು ಇಂತಿವೆ:

  • ಮನಸ್ಥಿತಿ ಆಗಾಗ್ಗೆ ಬದಲಾಗುವುದು
  • ಹಸಿವು ಹೆಚ್ಚಾಗುವುದು
  • ಕೂದಲು ಉದುರುವಿಕೆ
  • ಸ್ಕಿನ್​ ಪಿಗ್ಮಿಂಟೇಶನ್​(ಕಲೆಗಳು ಅಥವಾ ರಂಧ್ರಗಳು)
  • ರಾತ್ರಿ ವೇಳೆ ಬೆವರುವುದು
  • ದೇಹದ ತೂಕದಲ್ಲಿ ಬದಲಾವಣೆ
  • ಜೀರ್ಣಕ್ರಿಯೆ ಸಮಸ್ಯೆ
  • ಕೀಲುನೋವು
  • ಒತ್ತಡ, ಆತಂಕ, ಖಿನ್ನತೆ
  • ಬಹುಬೇಗ ಕೋಪ ಮಾಡಿಕೊಳ್ಳುವುದು

ಈ ಸಮಸ್ಯೆಗಳಿಂದ ಮುಕ್ತಿ ಹೇಗೆ?: ಪೌಷ್ಟಿಕಾಂಶ ತಜ್ಞರಾದ ರುಜುತಾ ದಿವೇಕರ್ ಅವರು ಶಿಫಾರಸು ಮಾಡಿದ ಕೆಲವು ವಿಚಾರಗಳು ಇಲ್ಲಿವೆ. ಸರಿಯಾದ ಆಹಾರವನ್ನು ಸೇವಿಸಿ. ಆದರೆ, ನಿರ್ದಿಷ್ಟ ಆಹಾರಕ್ರಮಕ್ಕೆ ಅಂಟಿಕೊಳ್ಳಬೇಡಿ. ಋತುಬಂಧದ ಸಮಯದಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುವುದರಿಂದ, ನಿಮ್ಮ ಆಹಾರದ ಮೂಲಕ ನೀವು ಎಲ್ಲಾ ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯ.

ಇದಕ್ಕಾಗಿ ನಿಮ್ಮ ಆಹಾರವು ಸ್ಥಳೀಯ, ಕಾಲೋಚಿತ ಮತ್ತು ಸಾಂಪ್ರದಾಯಿಕವಾಗಿರಬೇಕು. ಸಾಂಪ್ರದಾಯಿಕ ಭಾರತೀಯ ಆಹಾರವು ನಿಮಗೆ ವೈವಿಧ್ಯಮಯ ಪೋಷಕಾಂಶಗಳನ್ನು ಒದಗಿಸುತ್ತದೆ. ಉಪವಾಸ ಮಾಡಬೇಡಿ ಅಥವಾ ತಿನ್ನುವುದರಲ್ಲಿ ರಾಜಿ ಮಾಡಿಕೊಳ್ಳಬೇಡಿ. ಉತ್ತಮವಾದದನ್ನೇ ಸೇವಿಸಿ. ಪೌಷ್ಟಿಕಾಂಶದ ಕೊರತೆಯು ರೋಗಲಕ್ಷಣಗಳನ್ನು ಹೆಚ್ಚಿಸಬಹುದು.

ನಿಯಮಿತವಾಗಿ ವ್ಯಾಯಾಮ ಮಾಡಿ. ಏಕೆಂದರೆ, ಋತುಬಂಧ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ನಿಶ್ಯಕ್ತಿ, ಆಯಾಸವನ್ನು ಅನುಭವಿಸುತ್ತಾರೆ, ಇದಕ್ಕಾಗಿ ವ್ಯಾಯಾಮವು ಬಹಳ ಮುಖ್ಯವಾಗಿದೆ. ದೇಹದ ಶಕ್ತಿ, ಸಾಮರ್ಥ್ಯ ಮತ್ತು ಸ್ಥಿರತೆಯನ್ನು ಹೆಚ್ಚಿಸುವ ವ್ಯಾಯಾಮಗಳನ್ನು ನೀವು ಅಭ್ಯಾಸ ಮಾಡಬೇಕು ಎಂದು ದಿವೇಕರ್ ಹೇಳುತ್ತಾರೆ.

ಇವೆಲ್ಲವುಗಳಲ್ಲಿ ಯೋಗವು ನಿಮಗೆ ಸಹಾಯ ಮಾಡುತ್ತದೆ. ವಾರದಲ್ಲಿ ಕನಿಷ್ಠ 3 ಗಂಟೆಗಳ ಕಾಲ ವ್ಯಾಯಾಮ ಮಾಡಿ, ಇದರಲ್ಲಿ ಶಕ್ತಿ ತರಬೇತಿ, ಕಾರ್ಡಿಯೋ ಮತ್ತು ಯೋಗ ಸಹ ಇರಬೇಕು. ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ ನೀವು ಮಧ್ಯಾಹ್ನ 20 ನಿಮಿಷ ರೆಸ್ಟ್​ ಮಾಡಿ ಮತ್ತು ರಾತ್ರಿ 9:30-11ರ ನಡುವೆ ಮಲಗಿ ನಿದ್ರಿಸುವುದು ಉತ್ತಮ. ಈ ಸಮಯ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.